• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿಂಹಾವಲೋಕನ 2014 : ರಾಜ್ಯದಲ್ಲಿ ಕಾವಿಧಾರಿಗಳ ಸಂಚಲನ

|

ಸರ್ವಸಂಗ ಪರಿತ್ಯಾಗಿಯಾಗಿ ವ್ರತ, ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾ, ದಿನಚರಿಯ ಬಹುಪಾಲು ಸಮಯವನ್ನು ಪೂಜೆ ಪುನಸ್ಕಾರಗಳಲ್ಲಿ, ಭಗವನ್ನಾಮಸ್ಮರಣೆಯಲ್ಲಿ ತೊಡಗಿಸಿಕೊಳ್ಳುವವರು ಸ್ವಾಮೀಜಿಗಳು.

ನಾಡಿನಲ್ಲಿ ಎಲ್ಲಾ ಸಮುದಾಯಕ್ಕೂ ತಮ್ಮದೇ ಆದ ಮಠಗಳಿವೆ, ಪೀಠಾಧಿಪತಿಗಳಿದ್ದಾರೆ. ಜೊತೆಗೆ, ಸ್ವಾಮೀಜಿಗಳಿಗೆ ಅಸಂಖ್ಯಾತ ಭಕ್ತರು, ಅನುಯಾಯಿಗಳಿದ್ದಾರೆ. (ಐಟಂ ಗರ್ಲ್​ ಗಳನ್ನು ವೇಶ್ಯೆ ಎನ್ನಿರಿ: ಹಿಂದೂ ಮುಖಂಡ)

ನಾಡಿನ ಅದೆಷ್ಟೋ ಸಮಾಜಮುಖಿ ಮಠಗಳು ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಬಹುದೊಡ್ಡ ಕ್ರಾಂತಿಯನ್ನೇ ಮಾಡಿ, ಲೆಕ್ಕವಿಲ್ಲದಷ್ಟು ಜನರಿಗೆ ದಾರಿದೀಪವಾದ ಉದಾಹರಣೆಗಳು ಸಾಕಷ್ಟು.

ಇದಕ್ಕೆ ವಿರುದ್ದವಾಗಿ, ಕೆಲ ಸ್ವಾಮೀಜಿಗಳ ಮನಸ್ಸು ಭೋಗ, ವಿಲಾಸಿ, ವ್ಯಾಪಾರೀ ಜೀವನದ ಕಡೆ ತಿರಗುತ್ತಿರುವುದೂ ಕೂಡಾ ಅಷ್ಟೇ ನಿಜ. ಇದು ಹಿಂದೂ ಧರ್ಮದ ವಿಪರ್ಯಾಸವೋ, ದುರಂತವೋ.

ಮಠಾಧೀಶರು ಮತ್ತು ಧಾರ್ಮಿಕ ಮುಖಂಡರು ಏನು ಮಾಡಿದರೂ ಸುದ್ದಿ. ಇತ್ತೀಚಿನ ದಿನಗಳಲ್ಲಿ ಕೆಲ ಪೀಠಾಧಿಪತಿಗಳು ಬೇಡವಾದ ಕಾರಣಕ್ಕೆ ಸುದ್ದಿಯಾಗುತ್ತಿರುವುದು ವಿಷಾದನೀಯ.

2014ರ ವರ್ಷದಲ್ಲಿ ಸುದ್ದಿಯಾದ ಮಠಾಧೀಶರ ಮತ್ತು ವಿವಿಧ ಕಾರಣಗಳಿಂದ ಸುದ್ದಿ ಮಾಡಿದ ಮಠಗಳ ಬಗ್ಗೆ ಒಂದು ಕ್ವಿಕ್ ಝಲಕ್ ಓದುಗರಿಗಾಗಿ.. ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ನಾಗಾಸಾಧುಗಳು

ನಾಗಾಸಾಧುಗಳು

ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎನ್ನುವಂತೆ ಉತ್ತರ ಭಾರತದಿಂದ ಬಂದ ನಾಗಸಾಧುಗಳ ಸಮಾವೇಶ ಬೀದರ್ ನಲ್ಲಿ ನಡೆಯಿತು. ಕಾಕತಾಳಿಯವೋ ಎನ್ನುವಂತೆ ಸಾಧುಗಳು ಪ್ರವೇಶವಾಗುತ್ತಿದ್ದಂತೆಯೇ ಮಳೆಯಾಗುವ ಮೂಲಕ ಭಕ್ತರ ನಂಬಿಕೆಗೆ ಇನ್ನಷ್ಟು ಇಂಬು ನೀಡಿತು. ಇದಾದ ನಂತರ, ಬಸವ ಕಲ್ಯಾಣದ ಐತಿಹಾಸಿಕ ಸದ್ಗುರು ಸದಾನಂದ ಸ್ವಾಮಿ ಮಠ ನಮಗೆ ಸೇರಿದ್ದು, ನಮ್ಮನ್ನು ಪೀಠಾಧಿಕಾರಿಯಾಗಿ ಮಾಡಿ ಎಂದು ಒತ್ತಾಯಿಸಿ ಮಠದಲ್ಲಿ ವಾಸ್ತವ್ಯ ಹೂಡಿದ್ದ ನಾಗಾ ಸಾಧುಗಳು ಪ್ರತಿಭಟನೆಗೆ ಮುಂದಾದಾಗ ಪೊಲೀಸರು ಸಾಧುಗಳನ್ನು ಬಲವಂತದಿಂದ ತೆರವುಗೊಳಿಸಿದ್ದರು. (ನಾಗಾ ಸಾಧುಗಳಿಂದ ಮಠಕ್ಕೆ ಬೇಡಿಕೆ)

ಬೀದರ್ ಚೌಳಿ ಮಠ

ಬೀದರ್ ಚೌಳಿ ಮಠ

ಬೀದರ್ ಜಿಲ್ಲೆಯ ಚೌಳಿ ಮಠದಲ್ಲಿ ಈ ವರ್ಷ ಮತ್ತೊಬ್ಬ ಸ್ವಾಮೀಜಿ ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ಸುಭಾಷ ಸ್ವಾಮೀಜಿ ಮೃತದೇಹ ರೈಲ್ವೆ ಹಳಿಗಳ ಮಧ್ಯೆ ಪತ್ತೆಯಾಗಿತ್ತು. ಕಳೆದ ವರ್ಷ ಚೌಳಿ ಮಠದ ಮೂವರು ಸ್ವಾಮೀಜಿಗಳು ಮಠದ ಆವರಣದಲ್ಲಿ ಬೆಂಕಿಗಾಹುತಿಯಾಗಿ ಮೃತಪಟ್ಟಿದ್ದರು.

ಶಿರಡಿ ಬಾಬಾ ದೇವರಲ್ಲ, ನಂಬಬೇಡಿ

ಶಿರಡಿ ಬಾಬಾ ದೇವರಲ್ಲ, ನಂಬಬೇಡಿ

ಸಾಯಿ ಬಾಬಾ ಒಬ್ಬ ಸಾಮಾನ್ಯ ಮನುಷ್ಯ; ಆತ ದೇವರಲ್ಲ. ಅವರನ್ನು ನಂಬಬೇಡಿ' ಎಂದು ದ್ವಾರಕಾಪೀಠದ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಹೇಳಿಕೆ ನೀಡಿ ಬಾಬಾ ಭಕ್ತರ ಸಿಟ್ಟಿಗೆ ಕಾರಣರಾಗಿದ್ದರು. (ಬಾಬಾ ಶಂಕರ ಜಟಾಪಟಿ)

ಹುಬ್ಬಳ್ಳಿ ಮೂರು ಸಾವಿರ ಮಠ

ಹುಬ್ಬಳ್ಳಿ ಮೂರು ಸಾವಿರ ಮಠ

ಇಲ್ಲಿಯ ಮೂರು ಸಾವಿರ ಮಠದಲ್ಲಿ ಉತ್ತರಾಧಿಕಾರಿ ವಿವಾದ ಹುಟ್ಟಿಕೊಂಡು, ಪೀಠಾಧ್ಯಕ್ಷರಾಗಿರುವ ಶ್ರೀ ರಾಜ ಯೋಗೀಂದ್ರ ಸ್ವಾಮೀಜಿಯವರು ಪೀಠ ತ್ಯಾಗ ಮಾಡಿದ್ದರು. ನಂತರ ನೂತನ ಪೀಠಾಧೀಶರಾಗಿ ಬಾಲೆಹೊಸೂರಿನ ದಿಂಗಾಲೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿ ಅವರನ್ನು ನೇಮಕ ಮಾಡಿದ್ದರು. ಇದು ಭಕ್ತರು ಮತ್ತು ಸ್ವಾಮೀಜಿಗಳ ವಿವಾದಕ್ಕೆ ಕಾರಣವಾಗಿತ್ತು.,

ಅಥಣಿ ಗಣಪತಿ ಮಠ

ಅಥಣಿ ಗಣಪತಿ ಮಠ

ಅಥಣಿ ಕೆಂಪವಾಡ ಗ್ರಾಮದ ಗಣಪತಿ ಮಠದಲ್ಲಿ ಆನಂದಸ್ವಾಮೀಜಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಮೂರು ದಿನಗಳ ನಂತರ ನಮ್ಮ ಸ್ವಾಮೀಜಿ ಮತ್ತೆ ಹುಟ್ಟಿ ಬರುತ್ತಾರೆ. ಸ್ವಾಮೀಜಿ ದೇಹವನ್ನು ಮುಟ್ಟಲು ಬಿಡುವುದಿಲ್ಲ. ಅವರ ಪವಾಡ ನಿಮಗೆ ತಿಳಿಯುವುದಿಲ್ಲ' ಎಂದು ಗಣಪತಿ ಮಠದ ಆನಂದಸ್ವಾಮೀಜಿ ಭಕ್ತರು ನಂಬಿದ್ದರು. ಆದರೆ ಅದೂ ನಡೆಯಲೇ ಇಲ್ಲ. (ಅಥಣಿ ಗಣಪತಿ ಮಠ ಸ್ವಾಮೀಜಿ ನಿಗೂಢ ಸಾವು)

ಬಸವಲಿಂಗ ಶ್ರೀ

ಬಸವಲಿಂಗ ಶ್ರೀ

ಬೆಳಗಾವಿಯ ಆಂಜನೇಯ ನಗರದಲಿರುವ ಲಿಂಗಾಯತ ಧರ್ಮಪೀಠದ ಸ್ವಾಮೀಜಿ ಬಸವಲಿಂಗ ಪ್ರಭು ಅವರನ್ನು ಅತ್ಯಾಚಾರದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದರು. ಅಡುಗೆ ಕೆಲಸದಾಕೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಲಿಂಗಾಯತ ಧರ್ಮಪೀಠದ ಸ್ವಾಮೀಜಿ ಬಸವಲಿಂಗ ಪ್ರಭು ಸ್ವಾಮೀಜಿ ಅವರು ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದರು. (ಅತ್ಯಾಚಾರ ಒಪ್ಪಿಕೊಂಡ ಬಸವಲಿಂಗ ಶ್ರೀ)

ಪೇಜಾವರ ಶ್ರೀ

ಪೇಜಾವರ ಶ್ರೀ

ಮಡೆಸ್ನಾನವಿರಲಿ, ಪಂಕ್ತಿ ಭೋಜನ, ಕುರುಬರಿಗೆ ದೀಕ್ಷೆ, ರಾಘವೇಂದ್ರ ಸ್ವಾಮೀಜಿ ದೇವರಲ್ಲ, ಬ್ರಾಹ್ಮಣರನ್ನು ದೂಷಿಸುವುದು ಒಂದು ಫ್ಯಾಷನ್, ಭಾರತ ದೇಶದ ರಾಷ್ಟ್ರೀಯ ಪ್ರಾಣಿ ಹುಲಿ, ಹಾಗಾಗಿ ನಮ್ಮ ದೇಶದಲ್ಲಿ ಅಶಾಂತಿ ಹೆಚ್ಚಿದೆ. ಹೀಗಾಗಿ ಗೋವನ್ನು ಭಾರತದ ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕೆನ್ನುವ ಹೇಳಿಕೆ. ಹೀಗೆ, ಈ ವರ್ಷವೂ ಪೇಜಾವರ ಶ್ರೀಗಳ ನಿಲುವು, ಹೇಳಿಕೆ ಸಾಕಷ್ಟು ಚರ್ಚೆಗೆ ಗುರಿಯಾಯಿತು.

ನಿತ್ಯಾನಂದನಿಗೆ ಪುರುಷತ್ವ ಪರೀಕ್ಷೆ

ನಿತ್ಯಾನಂದನಿಗೆ ಪುರುಷತ್ವ ಪರೀಕ್ಷೆ

ಬಿಡದಿ ಆಶ್ರಮದ ನಿತ್ಯಾನಂದ ಸ್ವಾಮಿ ಸುರ್ಪ್ರೀಂಕೋರ್ಟ್ ಆದೇಶದಂತೆ ಪುರುಷತ್ವ ಪರೀಕ್ಷೆಗೊಳಗಾದರು. ಅತ್ಯಾಚಾರ ಹಾಗೂ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿತ್ಯಾ ವಿರುದ್ದ ಕೇಸು ದಾಖಲಾಗಿತ್ತು. ನಂತರ ನಿತ್ಯಾ ಮತ್ತು ಆತನ ಐವರು ಶಿಷ್ಯರಿಗೆ ಜಾಮೀನು ಮಂಜೂರಾಯಿತು. ಪುರುಷತ್ವ ಪರೀಕ್ಷೆಯ ಸಮಯದಲ್ಲಿ ಕರ್ನಾಟಕ ತೊರೆಯುತ್ತೇನೆ ಎನ್ನುತ್ತಿದ್ದ ನಿತ್ಯಾ ನಂತರದ ದಿನಗಳಲ್ಲಿ ಬೆಂಗಳೂರಲ್ಲೇ ತನ್ನ ಹೆಸರಿನಲ್ಲಿ ದೇವಾಲಯ ನಿರ್ಮಿಸುವುದಾಗಿ ಹೇಳಿಕೆ ನೀಡಿದ್ದರು.

(ನಿತ್ಯಾ ಪುರುಷತ್ವ ಪರೀಕ್ಷೆ)

ನಿಡುಮಾಮಿಡಿ ಶ್ರೀಗಳು

ನಿಡುಮಾಮಿಡಿ ಶ್ರೀಗಳು

ಕುಕ್ಕೆ ಸುಬ್ರಮಣ್ಯ ದೇವಾಲಯದ ಆಡಳಿತ ಮಂಡಳಿ ಮತ್ತು ಅರ್ಚಕ ವರ್ಗ ಮಡೆಮಡೆಸ್ನಾನ ನಡೆಸಬೇಕು ಎಂಬ ಹಠದಿಂದ ಹಣ ಕೊಟ್ಟು ಜನರನ್ನು ಕರೆಸಿ ಉರುಳು ಸೇವೆ ನಡೆಸುತ್ತಿದ್ದಾರೆ. ಅಲ್ಲಿಗೆ ಜನರು ಸ್ವಯಂ ಪ್ರೇರಿತವಾಗಿ ಬರುತ್ತಿಲ್ಲ. ಇಂತಹ ಪದ್ಧತಿಯನ್ನು ಮುಂದುವರೆಸಲೇಬೇಕು ಎನ್ನುವ ಹಠದಿಂದ ವಾಮಮಾರ್ಗದ ಮೂಲಕ ಜನರನ್ನು ಕರೆತರಲಾಗುತ್ತಿದೆ ಎನ್ನುವ ಹೇಳಿಕೆ ನೀಡಿ ನಿಡುಮಾಮಿಡಿ ಶ್ರೀಗಳ ಹೇಳಿಕೆ ಚರ್ಚೆಗೆ ಗ್ರಾಸವಾಗಿತ್ತು. (ನಿಡುಮಾಮಿಡಿ ಸಂದರ್ಶನ)

ರಾಘವೇಶ್ವರ

ರಾಘವೇಶ್ವರ

ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿಗಳು ಲೈಂಗಿಕ ದೌರ್ಜನ್ಯ ಮತ್ತು ಕೊಲೆ ಬೆದರಿಕೆ ಪ್ರಕರಣದ ಆರೋಪ ಎದುರಿಸುತ್ತಿದ್ದಾರೆ. ಶ್ರೀಗಳ ವಿರುದ್ದ ಅತ್ಯಾಚಾರದ ಕೇಸು ದಾಖಲಿಸಿದ್ದ ಪ್ರೇಮಲತಾ ಅವರು ಸಿಐಡಿ ಅಧಿಕಾರಿಗಳಿಗೆ ನೀಡಿರುವ ಬಟ್ಟೆಯ ಮೇಲೆ ವೀರ್ಯಾಣುವಿನ ಅಂಶ ಪತ್ತೆಯಾಗಿತ್ತು. (ರಾಘವೇಶ್ವರ ಶ್ರೀಗಳಿಗೆ ವೈದ್ಯಕೀಯ ಪರೀಕ್ಷೆ)

English summary
In passing - Ten controversial statements issued by Heads of Ten Mutts in Karnataka during the year 2014.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more