ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಿಫ್ಟ್ ಕುಸಿತ: ತಂದೆಯ ಎದುರೇ ಸಾವನ್ನಪ್ಪಿದ ‌ಮಗ

ನಿರ್ಮಾಣ ಹಂತದಲ್ಲಿದ್ದ ಮನೆಯೊಂದರಲ್ಲಿ ಅಳವಡಿಸಲಾಗಿದ್ದ ತಾತ್ಕಾಲಿಕ ಲಿಫ್ಟ್ ಕುಸಿದುಬಿದ್ದು ಅದರ ಅವಶೇಷ ಗಳ ಅಡಿಯಲ್ಲಿ ಸಿಲುಕಿದ್ದ ಗದಗ ಮೂಲದ ಯುವಕ ಸಾವು.

|
Google Oneindia Kannada News

ಮಂಗಳೂರು, ಮಾರ್ಚ್ 25: ಲಿಫ್ಟ್ ಕುಸಿದು ಬಿದ್ದು ಕಾರ್ಮಿಕ ಮೃತಪಟ್ಟ ದಾರುಣ ಘಟನೆ ಕಾಸರಗೋಡುವಿನ ಪೆರ್ಲ ಬಜಕೂಡ್ಲುವಿನಲ್ಲಿ ನಡೆದಿದೆ.

ಗದಗ ಸಿಂಗಳೂರಿನ ಕನಕಪ್ಪ ( 19) ಮೃತಪಟ್ಟವರು. ಹಲವು ವರ್ಷಗಳಿಂದ ಬದಿಯಡ್ಕ ವಿದ್ಯಾಗಿರಿಯಲ್ಲಿ ವಾಸಿಸುತ್ತಿದ್ದ ಕನಕಪ್ಪ ಕುಟುಂಬ ಕೂಲಿ ಕೆಲಸ ಮಾಡಿ ಜೀವನ ನಿರ್ವಹಿಸುತ್ತಿದ್ದರು.

Temporary lift collapse kills a worker in Kasaragodu

ತಂದೆ ರಮೇಶ್ ಮತ್ತು ಕನಕಪ್ಪ ಜೊತೆಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಬಜಕೂಡ್ಲುವಿನಲ್ಲಿ ಮನೆ ನಿರ್ಮಾಣ ಕೆಲಸದ ಸಂದರ್ಭದಲ್ಲಿ ತಂದೆ ರಮೇಶ್ ರವರ ಕಣ್ಮುಂದೆಯೇ ಮಗ ಕನಕಪ್ಪ ಬಿದ್ದಿದ್ದಾರೆ.

ಕಾಂಕ್ರೀಟ್ ಕೆಲಸದ ಸಂದರ್ಭದಲ್ಲಿ ತಾತ್ಕಾಲಿಕ ಲಿಫ್ಟ್ ಮಾಡಲಾಗಿತ್ತು. ಕೆಲಸ ಮುಗಿದ ಬಳಿಕ ಇದನ್ನು ತೆರವುಗೊಳಿಸುತ್ತಿದ್ದಾಗ ಕುಸಿದುಬಿದ್ದು, ಅವಶೇಷಗಳಡಿ ಸಿಲುಕಿ ಗಂಭೀರ ಗಾಯಗೊಂಡ ಕನಕಪ್ಪರನ್ನು ಮಂಗಳೂರು ಆಸ್ಪತ್ರೆಗೆ ಕೊಂಡೊಯ್ದರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಬಿಟ್ಟುಕೊಡಲಾಗಿದೆ. ಅಂತ್ಯಕ್ರಿಯೆ ಊರಿನಲ್ಲಿ ನಡೆಯಲಿದೆ. ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
In an under construction building in Kasaragodu, a daily wage worker Kanakappa (19) died on spot when a temporary lift, which was mounted to supply concrete and other materials to upper floors inside the building, collapsed on him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X