ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಜೂನ್ 18ರಿಂದ ಆರಂಭ

By Nayana
|
Google Oneindia Kannada News

ಬೆಂಗಳೂರು, ಜೂನ್ 16: ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಶಿಕ್ಷಣ ಇಲಾಖೆ ಚಾಲನೆ ನೀಡಿದ್ದು, ಜೂ.18ರಿಂದ ವರ್ಗಾವಣೆ ಕೌನ್ಸೆಲಿಂಗ್ ನಡೆಯಲಿದೆ.

ವಿಧಾನಸಭೆ ಹಾಗೂ ವಿಧಾನ ಪಡಿಷತ್ ಚುನಾವಣೆಯ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಮತ್ತೆ ಜೀವ ಬಂದಿದೆ. ಪರಿಷ್ಕೃತ ವೇಳಾಪಟ್ಟಿಯಂತೆ ಶಿಕ್ಷಕರು ಹಾಗೂ ಉಪನ್ಯಾಸಕರ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸಲು ತಕ್ಷಣ ಕ್ರಮ ವಹಿಸುವಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್. ಮಹೇಶ್‌ ಸೂಚಿಸಿದ್ದಾರೆ.

ಶಿಕ್ಷಕರ ಹಾಜರಿ ಮೇಲೆ ನಿಗಾ: ಶಾಲೆಗಳಲ್ಲಿ ಬಯೊಮೆಟ್ರಿಕ್ ಜಾರಿಶಿಕ್ಷಕರ ಹಾಜರಿ ಮೇಲೆ ನಿಗಾ: ಶಾಲೆಗಳಲ್ಲಿ ಬಯೊಮೆಟ್ರಿಕ್ ಜಾರಿ

ಸಾರ್ವಜನಿಕ ಶಿಕ್ಷಣ ಇಲಾಖೆಯು ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರು ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರ ವರ್ಗಾವಣೆ ನಡೆಸಲು ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿ ವೇಳಾಪಟ್ಟಿಯಂತೆ ಮೇ ತಿಂಗಳಲ್ಲೇ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಲು ಸಿದ್ಧತೆ ಮಾಡಿಕೊಂಡಿತ್ತು. ಆದರೆ, ನೀತಿ ಸಂಹಿತೆಯಿಂದ ಪ್ರಕ್ರಿಯೆ ಸ್ಥಗಿತಗೊಂಡಿತ್ತು.

Teachers transfer counseling from June 18

ಈಗಾಗಲೇ ವರ್ಗಾವಣೆಗೆ ಶಿಕ್ಷಕರು ಅನ್‌ಲೈನ್‌ನಲ್ಲಿ ಅಜಿ ಸಲ್ಲಿಸಿದ್ದಾರೆ. ಆಯಾ ಡಿಡಿಪಿಐಗಳ ಹಂತದಲ್ಲಿ ವರ್ಗಾವಣೆ ನಡೆಯಲಿರುವುದರಿಂದ 20 ರಿಂದ 30 ದಿನಗಳಲ್ಲಿ ಎಲ್ಲ ಪ್ರಕ್ರಿಯೆ ಮುಗಿಯಲಿದೆ ಎಂದು ಸಚಿವ ಎನ್. ಮಹೇಶ್‌ ಹೇಳಿದ್ದಾರೆ.

English summary
Primary and secondary education minister N. Mahesh has said counseling process of government school teachers will resume from June 18. Earlier this process was due for a year in previous government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X