• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶಿಕ್ಷಕ ಹುದ್ದೆ ನೇಮಕಾತಿ ಪರೀಕ್ಷೆ: ಅಭ್ಯರ್ಥಿಗಳೇ ಇದನ್ನು ಗಮನಿಸಿ

|
Google Oneindia Kannada News

ಬೆಂಗಳೂರು, ಮೇ21: ರಾಜ್ಯದಲ್ಲಿ ಖಾಲಿ ಇರುವ ಸರ್ಕಾರಿ ಪ್ರಾಥಮಿಕ ಶಿಕ್ಷಕರ ಪರೀಕ್ಷೆ ಇಂದು (ಮೇ 21) ಶನಿವಾರ ಮತ್ತು ಮೇ 22 ಭಾನುವಾರ ನಡೆಯುತ್ತಿದೆ. 6 ರಿಂದ 8ನೇ ತರಗತಿಯ ಶಿಕ್ಷಕರಾಗಿ ಆಯ್ಕೆಯಾಗಲು 15,000 ಹುದ್ದೆಗಳಿಗೆ ಪರೀಕ್ಷೆ ನಡೆಯುತ್ತಿದೆ. ಶಿಕ್ಷಕರ ಹುದ್ದೆಗೆ 1.05 ಲಕ್ಷ ಅಭ್ಯರ್ತಗಳು ಅರ್ಜಿಯನನ್ನು ಸಲ್ಲಿಕೆ ಮಾಡಿದ್ದು 435 ಪರೀಕ್ಷಾ ಕೇಂದ್ರಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ.

ಪಿಎಸ್ಐ, ಪ್ರಾಧ್ಯಾಪಕ ಹುದ್ದೆಯ ಅಕ್ರಮ ಹಿನ್ನೆಲೆ ಪರೀಕ್ಷೆಗೆ ಭಾರಿ ಭದ್ರತೆ

ರಾಜ್ಯದಲ್ಲಿ ಪಿಎಸ್ಐ ನೇಮಕಾತಿ ಹಗರಣ ಮತ್ತು ಪ್ರಾಧ್ಯಾಪಕ ಪರೀಕ್ಷೆ ಅಕ್ರಮ ಭಾರೀ ಸದ್ದು ಮಾಡ್ತಿದೆ. ರಾಜ್ಯ ಸರ್ಕಾರದಲ್ಲಿ ಹುದ್ದೆಗಳು ಮಾರಾಟಕ್ಕಿವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಮಾನ್ಯ ಜನ ಆಡಿಕೊಳ್ಳವಷ್ಟು ಅಕ್ರಮ ನಡೆದುಹೋಗಿದೆ. ಇದರಿಂದಾಗಿ ಶಿಕ್ಷಕರ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಾವುದೇ ರೀತಿಯಲ್ಲೂ ಅಕ್ರಮ ನಡೆಯಬಾರದು. ಅಕ್ರಮಕ್ಕೆ ಅವಕಾಶವಾಗದಂತೆ 435 ಪರೀಕ್ಷಾ ಕೇಂದ್ರಗಳಲ್ಲಿಯೂ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ. ಜಿಲ್ಲೆಯ ಜಿಲ್ಲಾಧಿಕಾರಿ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಪಂಚಾಯಿತಿಯ ಸಿಇಒಗಳ ನೇತೃತ್ವದಲ್ಲಿ ತ್ರಿಸದಸ್ಯ ಸಮಿತಿಯನ್ನು ರಚಿಸಲಾಗಿದ್ದು. ಆಯಾ ಜಿಲ್ಲೆಯ ಪರೀಕ್ಷಾ ಕೇಂದ್ರಗಳನ್ನು ಉಸ್ತುವಾರಿಯನ್ನು ನೋಡಿಕೊಳ್ಳಲು ಸೂಚಿಸಲಾಗಿದೆ.

ಶಿಕ್ಷಕ ಹುದ್ದೆಯ ಅಭ್ಯರ್ಥಿಗಳೇ ಗಮನಿಸಿ

ಶಿಕ್ಷಕ ಹುದ್ದೆಗೆ ಈಗಾಗಲೇ ಅರ್ಜಿಯನ್ನು ಸಲ್ಲಿಸಿರುವ 1.05 ಲಕ್ಷ ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ಡೌನ್ ಲೋಡ್ ಮಾಡಿಕೊಂಡಿದ್ದಾರೆ. ಪರೀಕ್ಷೆಯ ಕೊಠಡಿಗೆ ಹೋಗುವ ಮುನ್ನ ಯಾವುದೇ ರೀತಿಯಾದ ಎಲೆಕ್ಟಿಕಲ್ ಉಪಕರಣಗಳನ್ನು ತೆಗೆದುಕೊಂಡು ಹೋಗುವಂತಿಲ್ಲ ಎಂದು ಈಗಾಗಲೇ ಶಿಕ್ಷಣ ಇಲಾಖೆ ಸೂಚಿಸಿದೆ.

*ಪರೀಕ್ಷೆ ಪ್ರಾರಂಭಕ್ಕೂ ಒಂದು ಗಂಟೆ ಮೂನ್ನವೇ ಪರೀಕ್ಷಾ ಕೇಂದ್ರಕ್ಕೆ ಅಭ್ಯರ್ಥಿಗಳು ತಲುಪಬೇಕು.

* ಪರೀಕ್ಷ ಕೇಂದ್ರಕ್ಕೆ ಮೊಬೈಲ್ ನಿಷೇಧ

*ವಾಚ್‌ಗಳನ್ನು ಧರಿಸಿ ಹೋಗುವಂತಿಲ್ಲ.

*ಬ್ಲೂಟೂತ್ ತೆಗೆದುಕೊಂಡು ಹೋಗುವಂತಿಲ್ಲ.

*ಕ್ಯಾಲುಕ್ಯೂಲೇಟರ್ ಅನ್ನು ತೆಗೆದುಕೊಂಡು ಹೋಗುವಂತಿಲ್ಲ

ಒಟ್ಟಾರೆಯಾಗಿ ಪರೀಕ್ಷೆಯ ಅಕ್ರಮಕ್ಕೆ ಸಹಕಾರಿಯಾಗುವಂತಹ ಯಾವುದೇ ಎಲೆಕ್ಟ್ರಿಕಲ್ ಉಪಕರಣಗಳನ್ನು ತೆಗೆದುಕೊಂಡು ಹೋಗುವಂತಿಲ್ಲ ಎಂದು ಶಿಕ್ಷಣ ಇಲಾಖೆ ಸ್ಪಷ್ಟವಾಗಿ ತಿಳಿಸಿದೆ. ಅಭ್ಯರ್ಥಿಗಳನ್ನು ಪರಿಶೀಲಿಸುವ ಸಲುವಾಗಿವೇ ಪರೀಕ್ಷ ಕೇಂದ್ರಕ್ಕೆ ಒಂದು ಗಂಟೆ ಮುಂಚಿತವಾಗಿಯೇ ಬರಬೇಕೆಂದು ಸೂಚಿಸಲಾಗಿದೆ. ಅಭ್ಯರ್ಥಿಗಳನ್ನು ಪರೀಕ್ಷ ಕೇಂದ್ರಗಳಲ್ಲಿ ಎರಡು ಹಂತಗಳಲ್ಲಿ ಪರೀಕ್ಷೆ ಮಾಡಲಾಗುವುದು.

Karnataka Teachers Recruitment 2022 Exam: Guidelines for Candidates


ಪರೀಕ್ಷ ಕೇಂದ್ರಕ್ಕೆ ಅನಧಿಕೃತ ಪ್ರವೇಶ ನಿಷಿದ್ಧ

ಪರೀಕ್ಷ ಕೇಂದ್ರಕ್ಕೆ ಅನಧಕೃತವಾಗಿ ಯಾರೇ ಪ್ರವೇಶವನ್ನು ಮಾಡಿದರೂ ಅವರಿಗೆೆ ಕಾನೂನಾತ್ಮಕ ಶಿಕ್ಷೆಯನ್ನು ನೀಡಲಾಗುತ್ತದೆ ಎಂದು ಶಿಕ್ಷಣ ಇಲಾಖೆ ಸೂಚನೆಯನ್ನು ನೀಡಿದೆ.

ಪರೀಕ್ಷೆ ಕುಂಟು ನೆಪ ಹೇಳುವಂತಿಲ್ಲ

ಶಿಕ್ಷಕರ ಹುದ್ದೆ ಪರೀಕ್ಷೆಯ ದಿನಾಂಕವನ್ನು ನಿಗಧಿ ಮಾಡಿಯಾಗಿದೆ. ರಾಜ್ಯದಲ್ಲಿ ಭಾರಿ ವರ್ಷಧಾರೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆಲವು ಅಭ್ಯರ್ಥಿಗಳು ಪರೀಕ್ಷೆಯನ್ನು ಮುಂದೂಡುವಂತೆ ಶಿಕ್ಷಣ ಮಂತ್ರಿಗಳಿಗೆ ಮನವಿಯನ್ನು ಮಾಡಿದ್ದರು. ಶಿಕ್ಷಣ ಸಚಿವ ಬಿ ಸಿ ನಾಗೇಶ್ ರವರಿಗೆ ಟ್ವಿಟ್ಟರ್ ನಲ್ಲಿ ಕೇಳಿಕೊಂಡಿದ್ದರು. ಆದರೆ ಪರೀಕ್ಷೆಯನ್ನು ಈ ಹಂತದಲ್ಲಿ ಮುಂದೂಡಲು ಸಾಧ್ಯವಿಲ್ಲದ ಕಾರಣ ಅಭ್ಯರ್ಥಿಗಳ ಮನವಿ ತಿರಸ್ಕೃತಗೊಂಡತೆಯೇ ಸರಿ. ಇದರಿಂದಾಗಿ ಅಭ್ಯರ್ಥಿಗಳು ಯಾವುದೇ ನೆಪವನ್ನು ಹೇಳದ ಪರೀಕ್ಷ ಸಮಯಕ್ಕೂ ಒಂದು ಗಂಟೆ ಮೊದಲೇ ಪರೀಕ್ಷಾ ಕೇಂದ್ರವನ್ನು ತಲುಪಬೇಕಿದೆ.

   ನಮ್ಮ ಲೆಕ್ಕಾಚಾರವನ್ನು ಮ್ಯಾಕ್ಸ್ವೆಲ್ ಹೇಗೆ ಉಲ್ಟಾ ಮಾಡಿದ್ರು ಅಂತ ಹೇಳಿದ ಹಾರ್ದಿಕ್ | OneIndia Kannada

   ಇನ್ನು ಶಿಕ್ಷಣ ಸಚಿವ ಬಿಸಿ ನಾಗೇಶ್ ರವರು ಶಿಕ್ಷಕರ ನೇಮಕಾತಿ ಪರೀಕ್ಷೆಯ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಪಿಎಸ್ಐ ಪರೀಕ್ಷೆ ಅಕ್ರಮ, ಪ್ರಾಧ್ಯಾಪಕ ಪರೀಕ್ಷೆ ಅಕ್ರಮಗಳು ನಡೆದಿದ್ದು ಶಿಕ್ಷಕರ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಾವುದೇ ಅಕ್ರಮ ನಡೆಯದಂತೆ ಕ್ರಮ ಕೈಗೊಂಡಿದ್ದಾರೆ. ಮೂಲಕ

   English summary
   Karnataka Teachers Recruitment 2022 Exam: Education dept keen to check 435 examination centers due to various scams other recruitments. Know more.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X