ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರಾಮೀಣ ವಿದ್ಯಾರ್ಥಿಗಳಿಗೆ ಟಿಸಿಎಸ್ ಐಟಿ ಕ್ವಿಜ್

By Mahesh
|
Google Oneindia Kannada News

ಬೆಂಗಳೂರು, ಸೆಪ್ಟಂಬರ್ 02: ಮಾಹಿತಿ ತಂತ್ರಜ್ಞಾನ ಸೇವೆ, ಕನ್ಸಲ್ಟಿಂಗ್, ಕಂಪನಿಗಳಿಗೆ ಪರಿಹಾರಗಳನ್ನು ಪೂರೈಕೆ ಮಾಡುವ ಪ್ರಮುಖ ಸಂಸ್ಥೆಯಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಗ್ರಾಮೀಣ ಶಾಲಾ ಮಕ್ಕಳಿಗೆ ಗ್ರಾಮೀಣ ಐಟಿ ಕ್ವಿಜ್ ಆಯೋಜಿಸಿದೆ

ಕರ್ನಾಟಕ ಸರ್ಕಾರದ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಹಯೋಗದಲ್ಲಿ ದೇಶದ 6 ರಾಜ್ಯಗಳ 8 ರಿಂದ 12 ವರ್ಷ ವಯೋಮಾನದ ಗ್ರಾಮೀಣ ಶಾಲಾ ಮಕ್ಕಳಿಗೆ ಗ್ರಾಮೀಣ ಐಟಿ ಕ್ವಿಜ್ ಆಯೋಜಿಸಲಾಗಿದೆ.

ರೂರಲ್ ಐಟಿ ಕ್ವಿಜ್ ಉದ್ದೇಶ: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಮಾಹಿತಿ ತಂತ್ರಜ್ಞಾನದ ಬಗ್ಗೆ ಅರಿವು ಮೂಡಿಸುವುದು ಮತ್ತು ಅವರಲ್ಲಿ ಈ ಕ್ಷೇತ್ರದ ಪ್ರಾಮುಖ್ಯತೆ ಏನು? ಇತ್ತೀಚಿನ ದಿನಗಳಲ್ಲಿ ಜಾಗತಿಕ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿಯ ಕುರಿತು ಮನವರಿಕೆ ಮಾಡಿಕೊಡುವುದು. [ಟಿಸಿಎಸ್ ಐಟಿ ಕ್ವಿಜ್ ಗೆದ್ದ ಪ್ರೆಸಿಡೆನ್ಸಿ ಶಾಲೆ ವಿದ್ಯಾರ್ಥಿಗಳು]

ಯಾವ ಯಾವ ರಾಜ್ಯಗಳಲ್ಲಿ :ಕರ್ನಾಟಕ, ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ ಮತ್ತು ಛತ್ತೀಸ್ ಗಢ ರಾಜ್ಯಗಳಲ್ಲಿ ಈ ಐಟಿ ಕ್ವಿಜ್ ನಡೆಯಲಿದೆ. ಸೆಪ್ಟಂಬರ್ ಮತ್ತು ನವೆಂಬರ್ ನಡುವೆ ಈ ರಾಜ್ಯಗಳಲ್ಲಿ ಪ್ರಾದೇಶಿಕ ಹಂತದ ಕ್ವಿಜ್ ನಡೆಯಲಿದೆ.

TCS Rural IT Quiz program Bengaluru

ಕರ್ನಾಟಕದಲ್ಲಿ ಸೆಪ್ಟಂಬರ್ 14 ರಂದು ರಾಜ್ಯಮಟ್ಟದ ಸ್ಪರ್ಧೆ ನಡೆಯಲಿದ್ದು, ಸೆಪ್ಟಂಬರ್ 24 ರಂದು ಜಿಲ್ಲಾ ಮಟ್ಟದ ಸ್ಪರ್ಧೆ ಇರಲಿದೆ. 3 ವಲಯವಾರು ಸ್ಪರ್ಧೆಗಳು ಇರಲಿದ್ದು, ಧಾರವಾಡ ವಲಯದಲ್ಲಿ ಅಕ್ಟೋಬರ್ 18, ಮೈಸೂರು ವಲಯದÀಲ್ಲಿ ಅಕ್ಟೋಬರ್ 20 ಮತ್ತು ತುಮಕೂರಿನಲ್ಲಿ ರಾಜ್ಯಮಟ್ಟದ ಫೈನಲ್ ಅಕ್ಟೋಬರ್ 22 ರಂದು ನಡೆಯಲಿದೆ.

ಐಟಿ, ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ನವೆಂಬರ್ 28 ರಂದು ಬೆಂಗಳೂರಿನಲ್ಲಿ ಆಯೋಜಿಸಿರುವ ಬೆಂಗಳೂರು ಐಟಿ.ಬಿಜ್ ಸಂದರ್ಭದಲ್ಲಿ ಗ್ರಾಮೀಣ ಐಟಿ ಕ್ವಿಜ್‍ನ ರಾಷ್ಟ್ರೀಯ ಫೈನಲ್ ನಡೆಯಲಿದೆ.

ಯಾವುದೇ ಪ್ರವೇಶ ಶುಲ್ಕ ಇಲ್ಲ:ಈ ಕ್ವಿಜ್ ನಲ್ಲಿ ಪಾಲ್ಗೊಳ್ಳಲು ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. 8 ರಿಂದ 12 ನೇ ತರಗತಿವರೆಗಿನ ವಿದ್ಯಾರ್ಥಿಗಳು ಈ ಕ್ವಿಜ್ ನಲ್ಲಿ ಪಾಲ್ಗೊಳ್ಳಬಹುದಾಗಿದೆ. ಆದರೆ, ಬೆಂಗಳೂರು, ಮೈಸೂರು, ಮಂಗಳೂರು, ಬಳ್ಳಾರಿ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮತ್ತು ಕಲಬುರಗಿ ನಗರ ಪ್ರದೇಶಗಳು ಮತ್ತು ಪಾಲಿಕೆಗಳ ವ್ಯಾಪ್ತಿಯ ವಿದ್ಯಾರ್ಥಿಗಳು ಈ ಕ್ವಿಜ್‍ನಲ್ಲಿ ಪಾಲ್ಗೊಳ್ಳುವಂತಿಲ್ಲ. ಹೆಚ್ಚಿನ ಮಾಹಿತಿಗಾಗಿ www.bangaloreitbt.in ಸಂಪರ್ಕಿಸಬಹುದು.

ಪ್ರಾದೇಶಿಕ ವಲಯದಲ್ಲಿ ವಿಜೇತರಾದವರಿಗೆ 10,000 ರೂಪಾಯಿ ಮತ್ತು ರನ್ನರ್‍ ಅಪ್ ಗಳಿಗೆ 7,000 ರೂಪಾಯಿಗಳ ಶೈಕ್ಷಣಿಕ ವೇತನ ಸಿಗಲಿದೆ. ರಾಷ್ಟ್ರೀಯ ಮಟ್ಟದಲ್ಲಿ ಗೆದ್ದವರಿಗೆ 1,00,000 ರೂಪಾಯಿ ಮತ್ತು ರನ್ನರ್ ಅಪ್ ಗೆ 50,000 ರೂಪಾಯಿ ನಗದು ಬಹುಮಾನವನ್ನು ಟಿಸಿಎಸ್ ನೀಡಲಿದ್ದು, ಇದರೊಂದಿಗೆ ಇನ್ನೂ ಕೆಲವು ಆಕರ್ಷಕ ಬಹುಮಾನಗಳನ್ನು ವಿತರಿಸಲಿದೆ.

ಕ್ವಿಜ್ ನ ವಿಷಯ: ತಂತ್ರಜ್ಞಾನ ವಾತಾವರಣ, ವ್ಯವಹಾರ, ತಂತ್ರಜ್ಞಾನ ಕ್ಷೇತ್ರದ ತಜ್ಞರು, ಈ ಕ್ಷೇತ್ರದಲ್ಲಿನ ಟ್ರೆಂಡ್ ಗಳು, ವಿವಿಧ ಕ್ಷೇತ್ರಗಳಲ್ಲಿ ತಂತ್ರಜ್ಞಾನ ಅಳವಡಿಕೆ ಸೇರಿದಂತೆ ಒಟ್ಟಾರೆ ತಂತ್ರಜ್ಞಾನದ ಬೆಳವಣಿಗೆ, ಅಭಿವೃದ್ಧಿ ಮೇಲೆ ಬೆಳಕು ಚೆಲ್ಲುತ್ತದೆ ಈ ಗ್ರಾಮೀಣ ಐಟಿ ಕ್ವಿಜ್. ಇಂಟರ್ನೆಟ್ ಜಗತ್ತು, ವಿನೂತನವಾದ ವೆಬ್‍ಸೈಟ್ ಗಳು, ಐಟಿ ಬಜ್ ವರ್ಡ್ಸ್, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ವ್ಯಕ್ತಿಗಳು, ದೂರ ಸಂಪರ್ಕ ಕಂಪನಿಗಳು, ಸಾಫ್ಟ್‍ವೇರ್ ಉತ್ಪನ್ನಗಳು ಮತ್ತು ಮಾಹಿತಿ ತಂತ್ರಜ್ಞಾನದ ಇತಿಹಾಸದ ಕುರಿತು ಕ್ವಿಜ್ ನಲ್ಲಿ ಪ್ರಶ್ನಾವಳಿಗಳಿರುತ್ತವೆ.

ಶಿಕ್ಷಣ, ಮನೋರಂಜನೆ, ಪುಸ್ತಕ, ಮಲ್ಟಿಮೀಡಿಯಾ, ಸಂಗೀತ, ಸಿನೆಮಾ, ಇಂಟರ್ನೆಟ್, ಬ್ಯಾಂಕಿಂಗ್, ಜಾಹೀರಾತು, ಕ್ರೀಡೆ, ಗೇಮಿಂಗ್, ಸಾಮಾಜಿಕ ಜಾಲ ಮತ್ತು ಮೊಬೈಲ್ ಕ್ಷೇತ್ರದಲ್ಲಿ ಐಟಿಯ ಬಳಕೆ ಕುರಿತಾದ ವಿಚಾರಗಳೂ ಕ್ವಿಜ್ ನಲ್ಲಿ ಅಡಕವಾಗಿರುತ್ತವೆ. ವಿದ್ಯಾರ್ಥಿಗಳು ಐಟಿ ಕಂಪನಿಗಳ ಬಗ್ಗೆ ವೆಬ್‍ಸೈಟ್ ನಲ್ಲಿ ತಿಳಿದುಕೊಳ್ಳಬಹುದು.

English summary
Tata Consultancy Services (TCS), a leading IT services, consulting and business solutions firm and the Department of IT, BT, Science & Technology, Government of Karnataka is organizing the Rural IT Quiz program across six States in India for school students from class 8 to 12.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X