ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದು ತಡರಾತ್ರಿಯಿಂದಲೇ ಟ್ಯಾಕ್ಸಿ ಪ್ರಯಾಣ ದುಬಾರಿ

|
Google Oneindia Kannada News

ಬೆಂಗಳೂರು,ಫೆಬ್ರವರಿ 01: ಇಂದು ತಡರಾತ್ರಿಯಿಂದಲೇ ಟ್ಯಾಕ್ಸಿ ಪ್ರಯಾಣ ದುಬಾರಿಯಾಗಲಿದೆ.

ಟ್ಯಾಕ್ಸಿಗಳ ವಿವಿಧ ದರಗಳನ್ನು ಪರಿಷ್ಕರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದರಿಂದಾಗಿ ಟ್ಯಾಕ್ಸಿಗಳ ಲಗೇಜ್, ಕಾಯುವಿಕೆ ಹಾಗೂ ಇನ್ನಿತರೆ ದರಗಳನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ.

ಪ್ರವಾಸಿಗರ ಸೋಗಿನಲ್ಲಿ ಕಾರು ಚಾಲಕನನ್ನು ದೋಚಿದ ದುಷ್ಕರ್ಮಿಗಳುಪ್ರವಾಸಿಗರ ಸೋಗಿನಲ್ಲಿ ಕಾರು ಚಾಲಕನನ್ನು ದೋಚಿದ ದುಷ್ಕರ್ಮಿಗಳು

ಟ್ಯಾಕ್ಸಿ ದರ ಪರಿಷ್ಕರಣೆ ಮಾಡುವಂತೆ ಟ್ಯಾಕ್ಸಿ ಚಾಲಕರು ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದ್ದರು. ತೈಲ ದರ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಹಳೆಯ ದರದಲ್ಲಿ ಜೀವನ ನಡೆಸುವುದು ಕಷ್ಟವಾಗಿದೆ. ದರ ಪರಿಷ್ಕರಣೆ ಮಾಡಲೇಬೇಕೆಂದು ಹಠ ಹಿಡಿದಿದ್ದರು.

Taxi Travel Is Expensive In Karnataka From February 1 Late Night

ರಾಜ್ಯ ಸರ್ಕಾರ ಟ್ಯಾಕ್ಸಿ ಚಾಲಕರ ಬೇಡಿಕೆಗೆ ಸ್ಪಂದಿಸಿದ್ದು, ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಪರಿಷ್ಕರಿಸಿದೆ.

ಹವಾನಿಯಂತ್ರಿತ ಟ್ಯಾಕ್ಸಿಗಳಿಗೆ ಕನಿಷ್ಠ 4 ಕಿ.ಮೀವರೆಗೆ 100 ರೂ. ಮತ್ತು ನಂತರ ಪ್ರತಿ ಕಿ.ಮೀಗೆ 24 ರೂ. ನಿಗದಿ ಮಾಡಲಾಗಿದೆ. ಹಾಗೆಯೇ ಹವಾನಯಂತ್ರಣ ರಹಿತ ಟ್ಯಾಕ್ಸಿಗಳಿಗೆ ಕನಿಷ್ಠ 4 ಕಿ.ಮೀ ವರೆಗೆ 75 ರೂ. ನಂತರ ಪ್ರತಿ ಕಿ.ಮೀ 18 ರೂ. ನಿಗದಿಪಡಿಸಲಾಗಿದೆ.

Recommended Video

Budget 2021 : ಮೋದಿ ಸರ್ಕಾರ ಕೊಟ್ಟ ದೊಡ್ಡ ಶಾಕ್ ಇದೆ | Oneindia Kannada

ಎಲ್ಲಾ ಶ್ರೇಣಿಯ ಟ್ಯಾಕ್ಸಿಗಳ ಕಾಯುವಿಕೆ ದರ, ಲಗೇಜ್ ಮತ್ತು ರಾತ್ರಿ ದರಗಳನ್ನು ಕೂಡ ನಿಗದಿಪಡಿಸಲಾಗಿದೆ. ಇಂದಿನಿಂದಲೇ ನೂತನ ಪರಿಷ್ಕರಣೆ ದರ ಜಾರಿಯಾಗಲಿದೆ.

English summary
The Karnataka Government Has Revised All Category Taxi Fares. Taxi Travel Is Expensive From February 1 Late Night.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X