ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಾಟಾಟ್ರಸ್ಟ್ ನಿಂದ ಕೋವಿಡ್-19ಕುರಿತು ಕರ್ನಾಟಕದಲ್ಲಿ ಆರೋಗ್ಯ ಅಭಿಯಾನ; 4.5 ಲಕ್ಷಜನರಿಗೆ ತಲುಪುವ ನಿರೀಕ್ಷೆ

|
Google Oneindia Kannada News

ಬೆಂಗಳೂರು, ಮೇ 21: ಕೋವಿಡ್-19 ಸೋಂಕು ಹರಡುವುದನ್ನು ತಡೆಯಲು ಕೇಂದ್ರ ಸರ್ಕಾರ ಪ್ರಕಟಿಸಿರುವಂತೆ ಆರೋಗ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅರಿವು ಮೂಡಿಸಲು ವಿಡಿಯೊ ಮತ್ತು ಆಡಿಯೊ ಸಂದೇಶಗಳ ಮೂಲಕ ಸಮುದಾಯಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಟಾಟಾಟ್ರಸ್ಟ್ ಹಮ್ಮಿಕೊಂಡಿದೆ.

Recommended Video

ಕರ್ನಾಟಕದಲ್ಲಿ ಒಂದೇ ದಿನಕ್ಕೆ 149 ಕೊರೊನಾ‌ ಕೇಸ್!! | Suresh Kumar

ಈ ಸಂದೇಶಗಳು ಸಾರ್ವಜನಿಕವಾಗಿ ಟಾಟಾಟ್ರಸ್ಟ್ ಸಾಮಾಜಿಕಜಾಲತಾಣ ವೇದಿಕೆಗಳಲ್ಲಿ ಲಭ್ಯವಿದೆ. ಯಾವುದೇ ಸಂಘಟನೆಗಳು ಕೂಡಾ ಇದನ್ನು ಡೌನ್‍ಲೋಡ್ ಮಾಡಿಕೊಂಡು ಬಳಸಬಹುದಾಗಿದೆ. ಮಾರ್ಚ್ 31ರಿಂದ ಆರಂಭವಾಗಿರುವ ಈ ಕಾರ್ಯಕ್ರಮ ಈಗಾಗಲೇ ರಾಜ್ಯದಲ್ಲಿ ಸುಮಾರು 4.5 ಲಕ್ಷಜನರಿಗೆತಲುಪಿದೆ.

COVID-19: ಮಕ್ಕಳ ಬಗ್ಗೆ ವಹಿಸಬೇಕಾದ ಸುರಕ್ಷತೆ ಹೇಗಿರಬೇಕು?COVID-19: ಮಕ್ಕಳ ಬಗ್ಗೆ ವಹಿಸಬೇಕಾದ ಸುರಕ್ಷತೆ ಹೇಗಿರಬೇಕು?

''5 ಹೆಜ್ಜೆ, ಕೊರೊನಾ ಮುಕ್ತ ಜೀವನ" ಹೆಸರಿನ ಈ ಅಭಿಯಾನದಲ್ಲಿ ವಿಡಿಯೊ ಸಂದೇಶಗಳು, ಅಲ್ಪಾವಧಿಯ ಅನಿಮೇಷನ್ ಆಧಾರಿತ ವಿಡಿಯೊಗಳು, ಇನ್ಫೋಗ್ರಾಫ್‍ಗಳು, ಎಸ್‍ಎಂಎಸ್ ಮತ್ತು ಆಡಿಯೊ ಸಂದೇಶಗಳು ಇವೆ.

Tata Trusts launches health campaign on COVID-19 in Karnataka

ವಿಸ್ತೃತವಾಗಿ ತಲುಪಬೇಕು ಎಂಬ ಉದ್ದೇಶದಿಂದ ಯಾವುದೇ ಸಂಘಟನೆಗಳು ಬಳಸಲು ಅನುವಾಗುವಂತೆ ಈ ಸಂದೇಶಗಳು ಸುಲಭವಾಗಿ, ಸಾರ್ವಜನಿಕವಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಲಭ್ಯವಾಗುವಂತೆ ಟ್ರಸ್ಟ್ ಕ್ರಮವಹಿಸಿದೆ. ಸುಮಾರು 300 ಇಂಥ ವಿಡಿಯೊ, ಆಡಿಯೊ ಸಂದೇಶಗಳಿವೆ. ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ಲಭ್ಯವಿದೆ. ಈ ಎಲ್ಲವೂ ಈ ಪ್ಲೇ ಲೀಸ್ಟ್ ನಲ್ಲಿ ಲಭ್ಯವಿದೆ.

Covid-19 : PCOS ತಡೆಗಟ್ಟಲು ಆರೋಗ್ಯಕರ ಜೀವನಶೈಲಿ ಸಲಹೆಗಳು Covid-19 : PCOS ತಡೆಗಟ್ಟಲು ಆರೋಗ್ಯಕರ ಜೀವನಶೈಲಿ ಸಲಹೆಗಳು

ಟ್ರಸ್ಟ್ ಒಟ್ಟು ಐವರು ಮಾಸ್ಟರ್ ಟ್ರೈನರ್ ಗಳಿಗೆ ತರಬೇತಿ ನೀಡಿದ್ದು, ಅವರು ಸುಮಾರು 320 ಸಮದಾಯ ಸಂಪನ್ಮೂಲ ವ್ಯಕ್ತಿಗಳಿಗೆ (ಗ್ರಾಮ ಸೇವಕರು) ತರಬೇತಿ ನೀಡಿದ್ದು, ಈ ಸಂದೇಶ ಸರ್ವರಿಗೂತಲುಪುವಂತೆ ಕ್ರಮವಹಿಸಲಾಗಿದೆ. ಹಾಲಿ ನೆಟ್‍ವರ್ಕ್ ಮೂಲಕ ಟ್ರಸ್ಟ್ ಕಾರ್ಯಕ್ರಮಗಳು, ಸ್ವಯಂ ಸೇವಕರು, ಟ್ರಸ್ಟ್‍ನ ಸಹ ಸಂಘಟನೆಗಳು, ಸಮುದಾಯ ರೇಡಿಯೊಗಳು, ಗ್ರಾಮ ಆಧಾರಿತ ಸಾರ್ವಜನಿಕ ವಿವರಣೆ, ವಿವಿಧ ಇಂಟರ್‍ನೆಟ್ ಮತ್ತು ಸಂವಹನ ಪರಿಕ್ರಮಗಳ ಬಳಕೆಗಳ ಮೂಲಕ ಈ ಕಾರ್ಯಕ್ರಮವು ಕರ್ನಾಟಕದಲ್ಲಿ ಈಗಾಗಲೇ ಸುಮಾರು 4.5 ಲಕ್ಷಜನರಿಗೆ ತಲುಪಿದೆ.

ಆರ್ಥಿಕ ಪರಿಸ್ಥಿತಿ ಬಗ್ಗೆ ಟಾಟಾ ಟ್ವೀಟ್, ಸತ್ಯಾಸತ್ಯತೆ ಬಹಿರಂಗ ಆರ್ಥಿಕ ಪರಿಸ್ಥಿತಿ ಬಗ್ಗೆ ಟಾಟಾ ಟ್ವೀಟ್, ಸತ್ಯಾಸತ್ಯತೆ ಬಹಿರಂಗ

ಟಾಟಾಟ್ರಸ್ಟ್ ಕುರಿತು: 1892ರಲ್ಲಿ ಸ್ಥಾಪನೆಯಾದ ಭಾರತದ ಅತಿಹಳೆಯ ಸಂಸ್ಥೆಯಾಗಿರುವ ಟಾಟಾ ಟ್ರಸ್ಟ್ ಜನರ ಜೀವನಶೈಲಿ ಉತ್ತಮಪಡಿಸುವ ಕಾರ್ಯದಲ್ಲಿ ತೊಡಗಿದೆ. ಸ್ಥಾಪಕರಾದ ಜೆಮ್‍ಸೆಟ್ಜೀ ಟಾಟಾದೂರದರ್ಶಿತ್ವದ ಚಿಂತನೆಗಳಿಗೆ ಅನುಗುಣವಾಗಿ ಆರೋಗ್ಯಕ್ಷೇತ್ರ, ನೀರು, ಒಳಚರಂಡಿ, ಇಂಧನ, ಗ್ರಾಮೀಣಾಭಿವೃದ್ಧಿ, ನಗರ ಬಡತನ ನಿರ್ಮೂಲನೆ, ಕಲೆ, ಕರಕುಶಲತೆ, ಸಂಸ್ಕೃತಿ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಟಾಟಾಟ್ರಸ್ಟ್ ಕಾರ್ಯಕ್ರಮಗಳನ್ನು ನೇರ ಅನುಷ್ಠಾನ, ಪಾಲುದಾರಿಕೆ, ಅನುದಾನ ಒದಗಿಸುವುದು ಇತ್ಯಾದಿ ಕಾರ್ಯಕ್ರಮಗಳ ಮೂಲಕ ಜಾರಿಗೊಳಿಸಲಾಗುತ್ತಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: http://tatatrusts.org

English summary
Tata Trusts has begun a state-wide community outreach through The campaign ‘5 kadam, Corona mukt jeevan’, ranges from video messages, short animation videos and infographics to audio messages, and SMS based messaging.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X