• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಧಾನ ಪರಿಷತ್ತಿನಲ್ಲಿ ತಾರಾ ಅನುರಾಧ ವಿದಾಯದ ಭಾಷಣ

By Gururaj
|
   ನಟಿ ಹಾಗು ಬಿಜೆಪಿ ನಾಯಕಿ ತಾರಾ ಅನುರಾಧ ರಾಜಕೀಯಕ್ಕೆ ವಿದಾಯ | Oneindia Kannada

   ಬೆಂಗಳೂರು, ಜುಲೈ 13 : ಬಿಜೆಪಿ ನಾಯಕಿ, ನಟಿ, ವಿಧಾನಪರಿಷತ್ ಸದಸ್ಯೆ ತಾರಾ ಅನುರಾಧ ವಿಧಾನ ಪರಿಷತ್ತಿನಲ್ಲಿ ವಿದಾಯದ ಭಾಷಣ ಮಾಡಿದರು. ಆಗಸ್ಟ್ 8ರಂದು ಅವರು ನಿವೃತ್ತರಾಗಲಿದ್ದು, ಇದೇ ಅವರ ಕೊನೆಯ ಅಧಿವೇಶನವಾಗಿದೆ.

   ಗುರುವಾರದ ವಿಧಾನ ಪರಿಷತ್ ಕಲಾಪ ಅಂತ್ಯವಾಗುವ ಹೊತ್ತಿಗೆ ತಾರಾ ಅನುರಾಧ ಕಲಾಪದಲ್ಲಿ ವಿದಾಯದ ಭಾಷಣ ಮಾಡಿದರು. ಭಾಷಣ ಮುಗಿದ ಬಳಿಕ ತಮ್ಮ ಖುರ್ಚಿಯಲ್ಲಿ ಕುಳಿತು ಭಾವುಕರಾಗಿ ಕಣ್ಣೀರು ಹಾಕಿದರು.

   ಚಿಂತಕರ ಚಾವಡಿ ಬಿಟ್ಟು ಹೊರಟ ಡಿ.ಎಚ್.ಶಂಕರಮೂರ್ತಿ!

   ತಾರಾ ಅನುರಾಧ 2008ರಲ್ಲಿ ಬಿಜೆಪಿ ಸೇರಿದ್ದರು. 2012ರಲ್ಲಿ ಪಕ್ಷ ಅವರಿಗೆ ವಿಧಾನಪರಿಷತ್ ಸದಸ್ಯರಾಗುವ ಅವಕಾಶ ನೀಡಿತ್ತು. 2018ರ ಆಗಸ್ಟ್ 8ರಂದು ಅವರು ನಿವೃತ್ತರಾಗುತ್ತಿದ್ದಾರೆ. ಆದ್ದರಿಂದ, ಗುರುವಾರದ ಬಜೆಟ್ ಅಧಿವೇಶನದಲ್ಲಿ ವಿದಾಯದ ಭಾಷಣ ಮಾಡಿ ಎಲ್ಲಾ ಸದಸ್ಯರಿಗೆ ಧನ್ಯವಾದಗಳನ್ನು ಅರ್ಪಿಸಿದರು.

   ಪರಿಷತ್ ವಿಪಕ್ಷ ನಾಯಕರಾಗಿ ಶ್ರೀನಿವಾಸ ಪೂಜಾರಿ ಆಯ್ಕೆ

   'ವಿಧಾನ ಪರಿಷತ್ ಸದಸ್ಯೆಯಾಗಿ ಕೆಲಸ ಮಾಡಲು ಅವಕಾಶ ನೀಡಿದ ಪಕ್ಷಕ್ಕೆ ಧನ್ಯವಾದಗಳನ್ನು ಅರ್ಪಿಸಿದರು. ಪಕ್ಷ ಅವಕಾಶ ನೀಡಿದರೆ ಮತ್ತೊಮ್ಮೆ ಸದನಕ್ಕೆ ಆಗಮಿಸುವೆ' ಎಂದು ಹೇಳುತ್ತಾ ಭಾವುಕರಾದರು. ಬಿಜೆಪಿಯ ಹಿರಿಯ ನಾಯಕರಾದ ಕೆ.ಬಿ.ಶಾಣಪ್ಪ ಅವರು ಸಹ ಆ.8ರಂದು ನಿವೃತ್ತರಾಗುತ್ತಿದ್ದಾರೆ.

   ತಾರಾ ಅಭಿನಯದ 'ಹೆಬ್ಬೆಟ್ ರಾಮಕ್ಕ' ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಗೌರವ

   ಸಾಕಷ್ಟು ಕಲಿತಿದ್ದೇನೆ

   ಸಾಕಷ್ಟು ಕಲಿತಿದ್ದೇನೆ

   ವಿಧಾನ ಪರಿಷತ್ತಿನಲ್ಲಿ ವಿದಾಯದ ಭಾಷಣ ಮಾಡಿದ ತಾರಾ ಅನುರಾಧ ಅವರು, '2008ರಲ್ಲಿ ಬಿಜೆಪಿಗೆ ಸೇರಿದೆ. 2012ರಲ್ಲಿ ವಿಧಾನ ಪರಿಷತ್ ಸದಸ್ಯೆಯಾದೆ. ಸಾಕಷ್ಟು ಕಲಿತಿದ್ದೇನೆ. ನಾನು ಸದನದಲ್ಲಿ ಪ್ರಸ್ತಾಪಿಸಿದ ಹಲವು ವಿಚಾರಗಳ ಬಗ್ಗೆ ಸರ್ಕಾರ ಗಮನ ಹರಿಸಿ ಕ್ರಮ ಕೈಗೊಂಡಿದೆ. ಇದು ನನಗೆ ತೃಪ್ತಿ ತಂದಿದೆ' ಎಂದು ಹೇಳಿದರು.

   ಎಲ್ಲರಿಗೂ ಧನ್ಯವಾದಗಳು

   ಎಲ್ಲರಿಗೂ ಧನ್ಯವಾದಗಳು

   ಆರು ವರ್ಷಗಳ ಕಾಲ ಪರಿಷತ್ ಸದಸ್ಯೆಯಾಗಿದ್ದ ತಾರಾ ಅನುರಾಧ ಅವರು ಎಲ್ಲಾ ಸದಸ್ಯರಿಗೂ ಧನ್ಯವಾದಗಳನ್ನು ಅರ್ಪಿಸಿದರು. 'ಅನನುಭವಿಯಾಗಿದ್ದ ತನ್ನನ್ನು ತಿದ್ದಿ ತೀಡಿದ್ದೀರಿ. ಸಿನಿಮಾಕ್ಕಿಂತ ಹೆಚ್ಚಿನ ಅನುಭವವನ್ನು ನಾನಿಲ್ಲಿ ಕಲಿತೆ. ಜೀವನದಲ್ಲಿ ಸಾಕಷ್ಟು ಬೆಳವಣಿಗೆ ಹೊಂದಲು ಇದರಿಂದ ಸಾಧ್ಯವಾಯಿತು' ಎಂದು ಸಂತಸ ಹಂಚಿಕೊಂಡರು.

   ಮಗನ ಜೊತೆ ಕಲಾಪಕ್ಕೆ ಹಾಜರು

   ಮಗನ ಜೊತೆ ಕಲಾಪಕ್ಕೆ ಹಾಜರು

   'ವಿಧಾನ ಪರಿಷತ್ ಸದಸ್ಯೆಯಾಗಿ ಆಯ್ಕೆಯಾಗಿದ್ದಾಗ ಗರ್ಭಿಣಿಯಾಗಿದ್ದೆ. ಹೆರಿಗೆ ನಂತರ ಸಭಾಪತಿಯಾಗಿದ್ದ ಡಿ.ಎಚ್.ಶಂಕರಮೂರ್ತಿ ಅವರ ಕೊಠಡಿಯೇ ತಾಯಿ ಮನೆ ಆಗಿತ್ತು' ಎಂದು ಹೇಳಿದ ತಾರಾ ಅನುರಾಧ ಅವರು ಪುತ್ರನ ಜೊತೆ ಕಲಾಪಕ್ಕೆ ಬಂದ ಅನುಭವಗಳನ್ನು ನೆನಪು ಮಾಡಿಕೊಂಡರು.

   ಸಮಿತಿ ರಚನೆ ಆಯಿತು

   ಸಮಿತಿ ರಚನೆ ಆಯಿತು

   'ಕಲಾಪದಲ್ಲಿ ಮಂಗಳ ಮುಖಿಯರ ಕುರಿತು ವಿಷಯ ಪ್ರಸ್ತಾಪಿಸಿದ್ದರಿಂದ ಸರ್ಕಾರ ಜಯಮಾಲಾ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿತು. ಅತ್ಯಾಚಾರ ಪ್ರಕರಣಗಳ ಬಗ್ಗೆ ಮಾತನಾಡಿದ್ದೆ. ಮಹಿಳೆಯ ಮೇಲಿನ ದೌರ್ಜನ್ಯ ಸಮಿತಿ ತಡೆ ಸಮಿತ ರಚನೆಯಾಯಿತು' ಎಂದು ತಾರಾ ಅನುರಾಧ ಹೇಳಿದರು.

   ನಟನೆ ನಿಲ್ಲಿಸಲಿಲ್ಲ

   ನಟನೆ ನಿಲ್ಲಿಸಲಿಲ್ಲ

   ವಿಧಾನ ಪರಿಷತ್ ಸದಸ್ಯೆಯಾದರೂ ತಾರಾ ಅವರು ನಟನೆಯನ್ನು ನಿಲ್ಲಿಸಲಿಲ್ಲ. 2017ನೇ ಸಾಲಿನ ಪ್ರತಿಷ್ಠಿತ 65ನೇ ರಾಷ್ಟ್ರೀಯ ಪ್ರಶಸ್ತಿ ಕೆಲವು ದಿನಗಳ ಹಿಂದೆ ಪ್ರಕಟವಾಗಿದೆ. ತಾರಾ ಅವರು ಅಭಿನಯಿಸಿರುವ 'ಹೆಬ್ಬೆಟ್ ರಾಮಕ್ಕ' ಚಿತ್ರಕ್ಕೆ ಪ್ರಾದೇಶಿಕ ಭಾಷೆಗಳ ವಿಭಾಗದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ ಸಿಕ್ಕಿದೆ.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   BJP MLC Tara Anuradha will retired on August 2018. On July 12 in Legislative Council she made final speech and thanked to all the members and BJP party to give opportunity.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more