ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಬಾಡಿ ಲಾಂಗ್ವೇಜ್ ನೋಡಿದ್ರೆ ಗೊತ್ತಾಗುತ್ತೆ ಯಾರು ಮೆಂಟಲ್ ಅಂತಾ'

|
Google Oneindia Kannada News

ಬೆಂಗಳೂರು, ಜೂ. 09: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಸಚಿವ ರಮೇಶ್ ಜಾರಕಿಹೊಳಿ ಮಧ್ಯೆ ಟಾಕ್ ವಾರ್ ಮುಂದುವರೆದಿದೆ.

Recommended Video

Sanju Samson talks about his and Rishab Pant Rivalry | Oneindia Kannada

ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ಮಧ್ಯದ ಭಿನ್ನಾಭಿಪ್ರಾಯ ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಮೈತ್ರಿ ಸರ್ಕಾರ ಪತನವಾಗಿ, ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಡಿಕೆಶಿ ನಿರ್ವಹಿಸುತ್ತಿದ್ದ ಜಲಸಂಪನ್ಮೂಲ ಇಲಾಖೆಯನ್ನೇ ಹಠ ಹಿಡಿದು ಸಚಿವ ರಮೇಶ್ ಜಾರಕಿಹೊಳಿ ಪಡೆದುಕೊಂಡಿದ್ದು ಗುಟ್ಟಾಗಿ ಏನು ಉಳಿದಿಲ್ಲ. ಇಷ್ಟಾದರೂ ಆ ಇಬ್ಬರೂ ನಾಯಕರು ಪರೋಕ್ಷವಾಗಿ ವಾಗ್ದಾಳಿ ಮಾಡುವುದು ಮುಂದುವರೆದಿದೆ.

ಡಿ.ಕೆ.ಶಿವಕುಮಾರ್ ಉಲ್ಲೇಖಿಸಿದ ಬಿಎಸ್ವೈ ಸರಕಾರದ 'ಮೆಂಟಲ್' ಸಚಿವರಾರು? ಡಿ.ಕೆ.ಶಿವಕುಮಾರ್ ಉಲ್ಲೇಖಿಸಿದ ಬಿಎಸ್ವೈ ಸರಕಾರದ 'ಮೆಂಟಲ್' ಸಚಿವರಾರು?

ರಾಜ್ಯಸಭೆ ಚುನಾವಣೆ ವಿಚಾರದಲ್ಲಿ ಡಿಕೆಶಿ ಹಾಗೂ ರಮೇಶ್ ಜಾರಕಿಹೊಳಿ ಮಧ್ಯ ಮತ್ತೊಂದು ಹಂತದ ಟಾಕ್‌ವಾರ್ ಶುರುವಾಗಿದೆ. ಮೊನ್ನೆಯಷ್ಟೆ ಪರೋಕ್ಷವಾಗಿ ಡಿ.ಕೆ. ಶಿವಕುಮಾರ್ ಅವರು ಯಾರೊ ಮೆಂಟಲ್‌ಗಳು ಎಂದು ಪರೋಕ್ಷವಾಗಿ ಸಚಿವ ಜಾರಕಿಹೊಳಿ ಮೇಲೆ ವಾಗ್ದಾಳಿ ನಡೆಸಿದ್ದರು. ಅದಕ್ಕೆ ಬಿಜೆಪಿ ಕಚೇರಿಯಲ್ಲಿ ರಮೇಶ್ ಜಾರಕಿಹೊಳಿ ತಿರುಗೇಟು ಕೊಟ್ಟಿದ್ದಾರೆ.

ಯಾರೊ ಒಂದಿಷ್ಟು ಮೆಂಟಲ್‌ಗಳು

ಯಾರೊ ಒಂದಿಷ್ಟು ಮೆಂಟಲ್‌ಗಳು

ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ನಾಲ್ಕೈದು ಕಾಂಗ್ರೆಸ್ ಶಾಸಕರು ಬೆಂಬಲ ಕೊಡುತ್ತಾರೆಂದು ರಮೇಶ್ ಜಾರಕಿಹೊಳಿ ಹೇಳಿಕೆ ಕೊಟ್ಟಿದ್ದರು. ಅದಕ್ಕೆ ತಿರುಗೇಟು ಕೊಟ್ಟಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು, ಯಾರೊ ಒಂದಿಷ್ಟು ಜನ ಮೆಂಟಲ್‌ಗಳು ಮಾತನಾಡುತ್ತಾರೆ ಎಂದರೆ ನಮ್ಮ ಪಕ್ಷದ ನಿರ್ಧಾರ ಬದಲಾಗಲ್ಲ.

ನಾವು ಬಿಜೆಪಿಗೆ ಬೆಂಬಲ ಕೊಡಲ್ಲ. ಯಾವ ಸಚಿವ ಯಾವ ಹೊಟೆಲ್‌ನಲ್ಲಿ ಸಭೆ ಮಾಡಿದ್ದಾರೆ ಎಂಬುದು ಗೊತ್ತಿದೆ. ಮೆಂಟಲ್‌ಗಳ ಮಾತಿಗೆ ಮನ್ನಣೆ ಕೊಡುವುದು ಬೇಡ ಎಂದಿದ್ದರು.

ಡಿಕೆಶಿ ಬಾಡಿ ಲಾಂಗ್ವೇಜ್

ಡಿಕೆಶಿ ಬಾಡಿ ಲಾಂಗ್ವೇಜ್

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿಯಲ್ಲಿ ತಿರುಗೇಟು ಕೊಟ್ಟಿರುವ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆದರೆ ಅವರ ಬಾಡಿ ಲಾಂಗ್ವೇಜ್ (ಆಂಗಿಕ ನಡುವಳಿಕೆ)ಯನ್ನು ನೋಡಿದ್ರೆ ಯಾರೂ ಮೆಂಟಲ್ ಆಗಿದ್ದಾರೆ ಎಂಬುದು ಅರಿವಾಗುತ್ತದೆ ಎಂದು ಡಿಕೆಶಿ ಮೇಲೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ವಾಗ್ದಾಳಿ ನಡೆಸಿದ್ದಾರೆ.


ಸಧ್ಯ ಆ ಬಗ್ಗೆ ಹೆಚ್ಚೇನೂ ಹೇಳುವುದಿಲ್ಲ. ಸೂಕ್ತ ಸಮಯದಲ್ಲಿ, ಸೂಕ್ತ ವೇದಿಕೆಯಲ್ಲಿ ಆ ಬಗ್ಗೆ ಪ್ರತಿಕ್ರಿಯೆ ಕೊಡುತ್ತೇನೆ ಎಂದು ತಿರುಗೇಟು ಕೊಟ್ಟಿದ್ದಾರೆ.

ಕತ್ತಿಗೆ ಖುಷಿಯಾಗಿದೆ

ಕತ್ತಿಗೆ ಖುಷಿಯಾಗಿದೆ

ರಾಜ್ಯಸಭಾ ಟಿಕೆಟ್ ಕುರಿತಂತೆ ಮಾಜಿನ ಸಚಿವ ರಮೇಶ್ ಕತ್ತಿ ಅವರು ಖುಷಿಯಾಗಿದ್ದಾರೆ. ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ಕೊಟ್ಟಿದ್ದು ಕತ್ತಿಯವರಿಗೂ ಖುಷಿಯಾಗಿದೆ. ಪಕ್ಷದ ತೀರ್ಮಾನದ ಬಗ್ಗೆ ಬಹಳ ಹೆಮ್ಮೆಯಿಂದ ಅವರು ಮಾತನಾಡಿದ್ದಾರೆ. ಪ್ರಭಾಕರ್ ಕೋರೆ ಅವರು ಅಸಮಾಧಾನಗೊಂಡಿಲ್ಲ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ ಬಳಿಕ ಉಮೇಶ್ ಕತ್ತಿ ಅವರನ್ನು ಭೇಟಿ ಮಾಡಿ ಚರ್ಚೆ ಮಾಡುತ್ತೇನೆ. ಊಟಕ್ಕೆ ಸೇರುವುದು ಬೆಳಗಾವಿ ಜಿಲ್ಲೆಯವರಿಗೆ ಹೊಸದೇನಲ್ಲ ಎಂದು ಮಾರ್ಮಿಕವಾಗಿ ರಮೇಶ್ ಜಾರಕಿಹೊಳಿ ಹೇಳಿಕೆ ಕೊಟ್ಟಿದ್ದಾರೆ.

ಸಂಚಲನ ಮೂಡಿಸಿದೆ

ಸಂಚಲನ ಮೂಡಿಸಿದೆ

ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಮೊದಲು ಬಿಜೆಪಿಯ ಇಬ್ಬರು ಅಭ್ಯರ್ಥಿಗಳು ಪಕ್ಷದ ಕಚೇರಿಗೆ ಭೇಟಿ ಕೊಟ್ಟಿದ್ದಾರೆ. ಆ ಸಂದರ್ಭದಲ್ಲಿ ಮಾತನಾಡಿರುವ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು, ಇಬ್ಬರು ಅಭ್ಯರ್ಥಿಗಳ ಆಯ್ಕೆ ಮೂಲಕ ಬಿಜೆಪಿ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಪಕ್ಷದ ಇಬ್ಬರು ಕಾರ್ಯಕರ್ತರ ಹೆಸರು ಘೋಷಿಸುವ ಮೂಲಕ ಕಾರ್ಯಕರ್ತರಲ್ಲಿ ವಿಶ್ವಾಸ ಮೂಡಿಸುವ ಕೆಲಸವನ್ನ ಪಕ್ಷ ಮಾಡಿದೆ.


ಅವರೇನು ಅಭ್ಯರ್ಥಿಗಾಗಿ ಅರ್ಜಿ ಹಾಕಿರಲಿಲ್ಲ. ಕೋರ್ ಕಮೀಟಿಯಲ್ಲಿಯೂ ಕೂಡ ಪಕ್ಷದ ಕಾರ್ಯಕರ್ತರ ಹೆಸರುಗಳನ್ನು ಶಿಫಾರಸ್ಸು ಮಾಡಿ ಕಳುಹಿಸಿದ್ದೇವು. ಅಂತಿಮವಾಗಿ ಹೈಕಮಾಂಡ್ ಕೂಡ ಪಕ್ಷದ ಕಾರ್ಯಕರ್ತರ ಹೆಸರನ್ನೇ ಘೊಷಣೆ ಮಾಡಿದೆ ಎಂದು ನಳೀನ್ ಕುಮಾರ್ ಕಟೀಲ್ ಅಭಿಪ್ರಾಯ ಪಟ್ಟಿದ್ದಾರೆ.

English summary
Talk war continues between KPCC President DK Shivakumar and Minister Ramesh Jarkiholi,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X