• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಂತ್ರಜ್ಞಾನದ ಕರಾಳ ರೂಪ ತೆರೆದಿಡಲು ರೆಡಿಯಾಯ್ತು ಟಕ್ಕರ್ ಟೀಂ!

Google Oneindia Kannada News

ಬೆಂಗಳೂರು, ಏಪ್ರಿಲ್ 28: ಮನೋಜ್ ಕುಮಾರ್ ಅಭಿನಯದ ಟಕ್ಕರ್ ಸಿನಿಮಾ ಮೇ 6ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಅಂತು ಇಂತೂ ಮೂರು ವರ್ಷದ ಪರಿಶ್ರಮಕ್ಕೆ ಪ್ರತಿಫಲ ಸಿಗುವ ಕಾಲ ಸನಿಹವಾಗಿದೆ. ಅದರಂತೆ ಸಿನಿಮಾದ ಪ್ರಚಾರವನ್ನು ಅಷ್ಟೇ ಭರ್ಜರಿಯಾಗಿ ಶುರು ಮಾಡಿದ್ದಾರೆ ಟೀಂ ಟಕ್ಕರ್.

ಅದರ ಮೊದಲ ಭಾಗವಾಗಿ ಸಿನಿಮಾ ತಂಡ ಮಾಧ್ಯಮದವರ ಮುಂದೆ ಬಂದಿತ್ತು. ಒಂದು ಕಡೆ ಖುಷಿ, ಮತ್ತೊಂದು ಕಡೆ ಎಕ್ಸೈಟ್ ಮೆಂಟ್ ಎಲ್ಲವೂ ಮಿಕ್ಸ್ ಆಗಿತ್ತು. ಆದರೆ ಇಡೀ ಟೀಂ ತಲೆಯಲ್ಲಿದ್ದದ್ದು ಒಂದೇ ಸಿನಿಮಾ ಫೈನಲಿ ಜನಕ್ಕೆ ಇಷ್ಟವಾಗಬೇಕು ಎಂಬುದು. ಆ ಬಗ್ಗೆ ಭರವಸೆಯೂ ಇದೆ. ಅಷ್ಟು ಒಳ್ಳೆ ಕಂಟೆಂಟ್ ಹೊತ್ತು ತಂದಿದ್ದಾರೆ. ಸೈಬರ್ ಕ್ರೈಂ ಕಥಾ ಹಂದರವಿರುವ ಆಕ್ಷನ್ ಥ್ರಿಲ್ಲರ್ ಸಿನಿಮಾವಿದು. ಸಿನಿಮಾದಲ್ಲಿ ಪ್ರೀತಿ, ಪ್ರೇಮವು ಬೆರೆತಿದೆ. ಹಾಡು ಇದೆ ಫೈಟು ಇದೆ. ಈಗಿನ ಕಾಲಕ್ಕೆ ತಕ್ಕಂತೆ ಕಥೆಗೊಂದಿಷ್ಟು ಮಾಸ್ ಎಲಿಮೆಂಟ್ಸ್ ಬೆರೆಸಿ ಅಂದವಾಗಿ ಸಿನಿಮಾವನ್ನು ಹೆಣೆಯಲಾಗಿದೆ. ಈಗಾಗಲೇ ಹಾಡು, ಟೀಸರ್ ರಿಲೀಸ್ ಮಾಡಿ ಬಝ್ ಕ್ರಿಯೇಟ್ ಮಾಡಿದೆ ಚಿತ್ರತಂಡ. ಟೀಸರ್ ಸಖತ್ ಪ್ರಾಮಿಸಿಂಗ್ ಆಗಿದ್ದು. ಆನೆ ನಡೆದಿದ್ದೆ ದಾರಿ ಸಾಂಗ್ ಮಾಸ್ ಪ್ರಿಯರ ಮನಗೆದ್ದಿದೆ.

ಮನೋಜ್ ಕುಮಾರ್ ಈ ಹಿಂದೆ ಒಂದೆರಡು ಸಿನಿಮಾದಲ್ಲಿ ಸಣ್ಣ ಪುಟ್ಟ ಪಾತ್ರ ಮಾಡಿದ್ದು, ಇದೇ ಮೊದಲ ಬಾರಿಗೆ ಪರಿಪೂರ್ಣ ನಾಯಕನಾಗಿ ಎಂಟ್ರಿ ಕೊಡುತ್ತಿದ್ದಾರೆ. ಆದರೆ ಅದಕ್ಕು ಮುನ್ನ ಸಾಕಷ್ಟು ತಯಾರಿಯನ್ನು ಮಾಡಿಕೊಂಡಿದ್ದಾರೆ. ಡಾನ್ಸ್, ಫೈಟ್ ಹೀಗೆ ಸಿನಿಮಾಗೆ ಬೇಕಾದ ಎಲ್ಲವನ್ನು ಕಲಿತಿದ್ದಾರೆ. ರಾಜಹಂಸ ಏರಿ ಗಮನ ಸೆಳೆದು, ಈಗ ಕನ್ನಡತಿಯಾಗಿ ಖ್ಯಾತಿ ಪಡೆದಿರುವ ರಂಜಿನಿ ರಾಘವನ್ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಭಜರಂಗಿ ಲೋಕಿ, ಶ್ರೀಧರ್, ಜೈಜಗದೀಶ್ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ.

ಎಸ್ ಎಲ್ ಎನ್ ಕ್ರಿಯೇಷನ್ಸ್ ಬ್ಯಾನರ್ ನಡಿ ನಾಗೇಶ್ ಕೋಗಿಲು ಚಿತ್ರ ನಿರ್ಮಾಣ ಮಾಡಿದ್ದು, ರನ್ ಆಂಟನಿ ಖ್ಯಾತಿಯ ರಘು ಶಾಸ್ತ್ರಿ ಆಕ್ಷನ್ ಕಟ್ ಹೇಳಿದ್ದಾರೆ. ತಂತ್ರಜ್ಞಾನ ಮುಖ್ಯವಾಗಿ ಮೊಬೈಲ್ ಅಡಿಕ್ಷನ್ ಹೆಣ್ಣು ಮಕ್ಕಳ ಮೇಲೆ ಹೇಗೆಲ್ಲಾ ಸಮಸ್ಯೆ ಉಂಟು ಮಾಡುತ್ತದೆ ಎಂಬುದು ಸಿನಿಮಾದಲ್ಲಿದೆ. ಇದೆಲ್ಲವೂ ಮೇ6ಕ್ಕೆ ಅನಾವರಣವಾಗಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X