ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖಂಡಿತಾ ಈ ಎಲ್ಲಾ ವಿಚಾರಗಳಿಗೆ ಭಾರತ ಬಂದ್ ಆಗಲೇಬೇಕು : ಟಿ.ಎ.ಶರವಣ

By Gururaj
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 09 : ಇಂಧನ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಸೆ.10ರ ಸೋಮವಾರ ಭಾರತ ಬಂದ್‌ಗೆ ಕರೆ ನೀಡಿದೆ. ವಿವಿಧ ಸಂಘಟನೆಗಳು, ವಿವಿಧ ರಾಜಕೀಯ ಪಕ್ಷಗಳು ಬಂದ್‌ಗೆ ತಮ್ಮ ಬೆಂಬಲವನ್ನು ಸೂಚಿಸಿವೆ.

'ಕೇವಲ ಕಾಂಗ್ರೆಸ್ ಮಾತ್ರವಲ್ಲ ಭಾರತದ ಪ್ರತಿ ಜನತೆಗೆ ಆಗಿರುವ ಮೋಸ, ದ್ರೋಹಕ್ಕೆ ಬೀದಿಗಿಳಿಯಬೇಕು ಭಾರತ ಬಂದ್ ಆಗಲೇಬೇಕು' ಎಂದು ವಿಧಾನ ಪರಿಷತ್ ಸದಸ್ಯ, ಜೆಡಿಎಸ್ ನಾಯಕ ಟಿ.ಎ.ಶರವಣ ಹೇಳಿದ್ದಾರೆ.

ಸೆ.10 ರಂದು ಭಾರತ ಬಂದ್, ಏನಿರುತ್ತೆ? ಏನಿರೋಲ್ಲ?ಸೆ.10 ರಂದು ಭಾರತ ಬಂದ್, ಏನಿರುತ್ತೆ? ಏನಿರೋಲ್ಲ?

ತಮ್ಮ ಫೇಸ್‌ಬುಕ್ ಖಾತೆಯಲ್ಲಿ 'ಖಂಡಿತಾ ಈ ಎಲ್ಲಾ ವಿಚಾರಗಳಿಗೆ ಭಾರತ ಬಂದ್ ಆಗಲೇಬೇಕು' ಎಂದು ಶರವಣ ಅವರು ಹಲವು ಅಂಶಗಳನ್ನು ಉಲ್ಲೇಖಿಸಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್‌-ಜೆಡಿಎಸ್ ಸಮ್ಮಿಶ್ರ ಸರ್ಕಾರವಿದ್ದು, ಬಂದ್‌ಗೆ ಉತ್ತಮ ಬೆಂಬಲ ಸಿಗುವ ಸಾಧ್ಯತೆ ಇದೆ.

ಸೆ.10ರ ಕರ್ನಾಟಕ ಬಂದ್‌ಗೆ ವಾಟಾಳ್ ನಾಗರಾಜ್ ಬೆಂಬಲಸೆ.10ರ ಕರ್ನಾಟಕ ಬಂದ್‌ಗೆ ವಾಟಾಳ್ ನಾಗರಾಜ್ ಬೆಂಬಲ

ಶೂನ್ಯ ಬ್ಯಾಲೆನ್ಸ್ ಎಂದು ಹೇಳಿ ಜನಧನ್ ಖಾತೆಯನ್ನು ಮಾಡಿಸಿದರು. ಮಿನಿಮಮ್ ಬ್ಯಾಲೆನ್ಸ್ ಇಲ್ಲ ಅಂತ ಹೇಳಿ 10 ತಿಂಗಳಲ್ಲಿ 4500 ಕೋಟಿ ದಂಡದ ರೂಪದಲ್ಲಿ ಲೂಟಿ ಹೊಡೆದರು ಎಂದು ಶರವಣ ಫೇಸ್‌ ಬುಕ್ ಖಾತೆಯಲ್ಲಿ ಆರೋಪ ಮಾಡಿದ್ದಾರೆ. ಭಾರತ ಬಂದ್ ಯಾಕಾಗಬೇಕು ಇಲ್ಲಿದೆ ಮಾಹಿತಿ...

ತೈಲ ಬೆಲೆ ಏರಿಕೆಗೆ ವಿರೋಧ: ಸೆಪ್ಟೆಂಬರ್ 10ರಂದು ಭಾರತ್ ಬಂದ್‌ತೈಲ ಬೆಲೆ ಏರಿಕೆಗೆ ವಿರೋಧ: ಸೆಪ್ಟೆಂಬರ್ 10ರಂದು ಭಾರತ್ ಬಂದ್‌

ಸಾಲದ ಹೊರೆ ಹೊರಿಸಿದರು

ಸಾಲದ ಹೊರೆ ಹೊರಿಸಿದರು

* ನೀರವ್ ಮೋದಿˌವಿಜಯ್ ಮಲ್ಯ ಸಾವಿರಾರು ಕೋಟಿ ವಂಚಿಸಿ ದೇಶ ಬಿಟ್ಟು ಓಡಿಹೋದರು. ಅವರ ಸಾಲದ ಹೊರೆ ಬಡವನ ತಲೆ ಮೇಲೆ ಹೊರಿಸಿದರು.

* ಶಿವಾಜಿˌವಾಜಪೇಯಿˌವಲ್ಲಭಭಾಯಿ ಪಟೇಲರ ಜೀವವಿಲ್ಲದ ಸಿಮೆಂಟ್ ಪ್ರತಿಮೆಗಳಿಗೆ ಸಾವಿರಾರು ಕೋಟಿ ಕೊಟ್ಟರು. ನನ್ನ ಕರ್ನಾಟಕದ ಕೊಡಗು ಜನ ಸಾಯುತ್ತಿದ್ದರೆ ನಯಾ ಪೈಸೆ ನೀಡಲಿಲ್ಲ.

* ದೇಶ-ವಿದೇಶ ಸುತ್ತಲು ಸಮಯವಿತ್ತು. ಚುನಾವಣೆ ಬಂದಾಗ ಸಮಾವೇಶ ಮಾಡಲು ಕರ್ನಾಟಕಕ್ಕೆ ಓಡಿ ಬಂದದ್ದೇ ಬಂದದ್ದು ನನ್ನ ಕರುನಾಡ ಕೊಡಗುˌಮಂಗಳೂರು ನೆರೆಯಿಂದ ಮುಳುಗಿದಾಗ ಅವರಿಗೆ ನನ್ನ ಕರ್ನಾಟಕ ನೆನಪಾಗಲೇ ಇಲ್ಲ

ಕಪ್ಪು ಹಣ ನಿಯಂತ್ರಿಸುವೆ ಎಂದರು

ಕಪ್ಪು ಹಣ ನಿಯಂತ್ರಿಸುವೆ ಎಂದರು

* 3 ಲಕ್ಷ ಕೋಟಿ ರೂ. ನಕಲಿ ನೋಟುˌಕಪ್ಪು ಹಣ ನಿಯಂತ್ರಿಸುವೆ ಅಂತ ಹೇಳಿ ನೋಟು ಅಮಾನ್ಯೀಕರಣ ಮಾಡಿದರು.

* ಶೇಕಡಾ 99.4% ಹಣ ಬ್ಯಾಂಕ್ ಗಳಿಗೆ ವಾಪಸ್ ಬಂತು. ಹೊಸ ನೋಟು ಪ್ರಿಂಟ್ ಮಾಡೋದಕ್ಕೆ 6000 ಕೋಟಿ ಖರ್ಚು ಮಾಡಿದರು.

* ಪ್ರಧಾನಿಯಾದಾಗ ಸ್ಮಾರ್ಟ್ ಸಿಟಿಗಳನ್ನೂ ಮಾಡಿಬಿಡ್ತೀನಿ ಸಿಂಗಾಪುರ ಮಾಡಿಬಿಡ್ತೀನಿ ಅಂತ ರೀಲು ಸುತ್ತಿ ಶಂಕುಸ್ಥಾಪನೆ ಮಾಡಿ ಹೋದ್ರು ಒಂದು ಸ್ಮಾರ್ಟ್ ಸಿಟಿ ತೋರ್ಸಿ ನೋಡೋಣ.

ಚಪ್ಪಾಳೆ ಗಿಟ್ಟಿಸೋ ನಾಟಕ ಮಾಡಿದ್ರು

ಚಪ್ಪಾಳೆ ಗಿಟ್ಟಿಸೋ ನಾಟಕ ಮಾಡಿದ್ರು

* UAE ಕೇರಳಕ್ಕೆ ನೀಡಿದ 500 ಕೋಟಿ ಕೊಡುಗೆ ನಿರಾಕರಿಸಿ ಭಾರತೀಯರ ಸ್ವಾಭಿಮಾನ ಎತ್ತಿಹಿಡಿಯೋˌಚಪ್ಪಾಳೆ ಗಿಟ್ಟಿಸೋ ನಾಟಕವನ್ನು ಮಾಡಿದರು.

* ಗಂಗಾನದಿ ಶುದ್ದೀಕರಣಕ್ಕೆ 993 ಕೋಟಿ ಜರ್ಮನ್ ನಿಂದ ಸಾಲ ತಂದು ಭಾರತೀಯರ ಸ್ವಾಭಿಮಾನ ಅಡ ಇಟ್ರು.

* ರಾಮ ಮಂದಿರ ಕಟ್ತೀನಿ ಅಂತ ಹೇಳಿ ಅಧಿಕಾರಕ್ಕೆ ಬಂದ್ರು ಅಧಿಕಾರ ಹಿಡಿದ ಮೇಲೆ ರಾಮನ ಹೆಸರೇ ಹೇಳಲಿಲ್ಲ.. ಲೋಕಪಾಲ್ ಬಿಲ್ ತರ್ತೀನಿˌಭ್ರಷ್ಟಾಚಾರ ಮಟ್ಟ ಹಾಕ್ತೀನಿ ಅಂತ ಬುರುಡೆ ಬಿಟ್ರು ಭ್ರಷ್ಟಾಚಾರದ ಮಹಾನ್ ಆರೋಪಿ, ಜೈಲುವಾಸ ಅನುಭವಿಸಿ ಬಂದ ಯಡಿಯೂರಪ್ಪನನ್ನ ಮುಖ್ಯಮಂತ್ರಿ ಮಾಡಿದ್ರು.

ಗೋ ಹತ್ಯೆ ನಿಷೇಧ

ಗೋ ಹತ್ಯೆ ನಿಷೇಧ

* GST,GST ಅಂತ ಲಕ್ಷಾಂತರ ಕೋಟಿ ಹಣ ಸಂಗ್ರಹಿಸಿದ್ರು, ನನ್ನ ಸೈನ್ಯಕ್ಕೆ ಇಲ್ಲಿಯ ವರೆಗೂ Life Jacket ಪೂರೈಸಲು ಸಾಧ್ಯವಾಗಿಲ್ಲ.

* ಗೋ ಹತ್ಯೆ ನಿಷೇಧಿಸ್ತೀವಿ ಅಂತ ಬೊಂಬಡಿ ಹೊಡೆದ್ರು. ನನ್ನ ಭಾರತವನ್ನು ಗೋ ಮಾಂಸ ರಫ್ತಿನಲ್ಲಿ ಜಗತ್ತಿನ ನಂ1 ದೇಶ ಮಾಡಿದ್ರು.

* ಪಕ್ಕದ ಗೋವಾದಲ್ಲೂ ಅವರದ್ದೇ ಪಕ್ಷ ಆಡಳಿತದಲ್ಲಿತ್ತು ಮಹದಾಯಿ ಸಮಸ್ಯೆ ಬಗೆಹರಿಸಲು ನಾನು ನಂಬಿದ ಪಕ್ಷದ ನಾಯಕ ಬರಲೇ ಇಲ್ಲ. ಬಡ ರೈತರ ಕಷ್ಟದಲ್ಲಿ ರಾಜಕೀಯ ಮಾಡ್ತಾ ದಿನ ದೂಡಿದ್ರುˌ ಇವರು ಆಡಳಿತ ನಡೆಸ್ತಿರೋ ಭಾರತದ ಹೃದಯ ಭಾಗದಲ್ಲಿ ಭಾರತದ ಸಂವಿಧಾನ ಸುಟ್ಟಾಗ ಕಣ್ಮುಚ್ಚಿ ಕುಳಿತಿದ್ರು.

* ಇರಾನ್ ನಿಂದ ಅಮೆರಿಕ ತೈಲ ನಿಷೇಧ ಹೇರಿಕೆ ಆರ್ಥಿಕ ದಿಗ್ಭಂಧನದ ಗಡುವು ಕೊಟ್ಟಾಗ ಬೃಹತ್ ರಾಷ್ರ್ಟದ ಪ್ರಧಾನಿಯಾಗಿ ಒಮ್ಮೆಯೂ ಸೆಡ್ಡು ಹೊಡೆಯುವ ಹೇಳಿಕೆ ಕೊಡಲಿಲ್ಲ. ಡಾಲರ್ ಎದುರು ರೂಪಾಯಿ ಮೌಲ್ಯ ಪಾತಾಳ ಕಂಡಿದೆ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳದಿಂದ ದಿನಬಳಕೆಯ ವಸ್ತುಗಳು ಬಡವರ ಕೈಗೆಟುಕದ ಸ್ಥಿತಿಯಿದೆ.

ಜಾಗೃತಿ ಮೂಡಿಸುವ ಹೊಣೆ ನಮ್ಮದು

ಜಾಗೃತಿ ಮೂಡಿಸುವ ಹೊಣೆ ನಮ್ಮದು

ಹೇಳ್ತಾ ಹೋದ್ರೆ ಇವರ ಆಡಳಿತದ ಕೆಟ್ಟ ನಿರ್ಧಾರಗಳು, ಬಡವರ ಮತ್ತು ನಮ್ಮಂತಹ ಮಧ್ಯಮ ವರ್ಗದವರ ಜೀವನ ಎಷ್ಟು ಬರ್ಬರವಾಗಿದೆ ಎಂದು ಆ ಕಷ್ಟ ತಿಳಿದವರಿಗೇ ಗೊತ್ತು. ಜಾಗೃತಿ ಮೂಡಿಸುವ ಹೊಣೆ ನಮ್ಮದುˌ ಸತತ್ಯಾಸತ್ಯತೆಯ ನಿರ್ಧಾರ ನಿಮ್ಮದು.

English summary
Congress called for Bharat Bandh on 10th September 2018 over fuel price hike. Legislative council member and JD(S) leader T.A. Sharavana extended support for Bharat Bandh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X