• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತ ಬಚಾವಾಗಿದ್ದು ಕಂಠರೋಹಿಣಿ ಜ್ವರದಿಂದ! ಅದೇ ಈಗಿನ ಕೊರೊನಾ ವೈರಸ್?

|

ಬೆಂಗಳೂರು, ಮೇ 17: ಕೊರೊನಾ ವೈರಸ್ ಮುಂದುವರೆದ ದೇಶಗಳಲ್ಲಿ ಅಟ್ಟಹಾಸ ಮೆರೆದಿದೆ. ಆದರೆ ಭಾರತದಲ್ಲಿ ಮಾತ್ರ ಕೊರೊನಾ ವೈರಸ್ ಆಟ ನಡೆಯಲಿಲ್ಲ. ಈ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಚರ್ಚೆಗಳಾಗುತ್ತಿವೆ. 135 ಕೋಟಿ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಕೊರೊನಾ ಅಟ್ಟಹಾಸಕ್ಕೆ ಈಗಾಗಲೇ ಲಕ್ಷಾಂತರ ಜನರು ಬಲಿಯಾಗಬೇಕಿತ್ತು. ಆದರೆ ಸುದೈವವಶಾತ್ ಹಾಗಾಗಲಿಲ್ಲ. ಇದಕ್ಕೆ ಮೊದಲ ಕಾರಣ ಲಾಕ್‌ಡೌನ್‌ ಆಗಿದ್ದರೆ, ನಂತರದ ಕಾರಣ ಇಂತಹ ಜ್ವರವನ್ನು ಎದುರಿಸುವ ರೋಗ ನಿರೋಧಕ ಶಕ್ತಿ ನಮ್ಮ ದೇಹದಲ್ಲಿ ಮೊದಲೇ ಇದ್ದಿದ್ದು.

   Muthappa Rai ಅಪರೂಪದ ಚಿತ್ರಗಳು | unseen photos | Oneindia Kannada

   ಒಂದಿಷ್ಟು ತಜ್ಞರು ಹೇಳುವಂತೆ. ಕೆಲವು ಬರಹಗಾರರು ಉಲ್ಲೇಖಿಸಿದಂತೆ ಕೊರೊನಾ ವೈರಸ್ ಮಾದರಿಯ ಜ್ವರ ಮೊದಲಿನಿಂದಲೂ ಭಾರತದಲ್ಲಿ ಇತ್ತು. ನಿಖರವಾಗಿ ಕೋವಿಡ್ 19 ಸೋಂಕು ಅಲ್ಲದಿದ್ದರೂ ಅದೇ ರೂಪದ ವೈರಾಣು ಇದ್ದ ಬಗ್ಗೆ ಚರ್ಚೆಗಳು ಆಗುತ್ತಿವೆ.

   ಕೋವಿಡ್-19 ಲಸಿಕೆ: ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಿಂದ ಬಂತು ಗುಡ್ ನ್ಯೂಸ್!

   ಹೌದು, ಈ ಕೊರೊವಾ ವೈರಸ್ ಅಥವಾ ಕೋವಿಡ್ 19 ರೋಗ ಲಕ್ಷಣದ ಜ್ವರ ಹಿಂದೆಯೂ ಭಾರತದಲ್ಲಿ ಇತ್ತು. ಮತ್ತು ಅದಕ್ಕೆ 'ಕಂಠರೋಹಿಣಿ ಜ್ವರ' ಎಂದು ಕರೆಯಲಾಗುತ್ತಿತ್ತು. ಹೀಗಾಗಿಯೆ ಯೂರೋಪ್ ರಾಷ್ಟ್ರಗಳಲ್ಲಿ ಕೋವಿಡ್ 19 ದಾಂಗುಡಿ ಇಟ್ಟಂತೆ, ಭಾರತ ಸೇರಿದಂತೆ ಏಷ್ಯಾ ರಾಷ್ಟ್ರಗಳಲ್ಲಿ ಇಡಲಾಗಲಿಲ್ಲ. ಅದರಲ್ಲೂ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ ಸೇರಿದಂತೆ ಉಷ್ಣ ವಲಯ ದೇಶಗಳಲ್ಲಿ ಕೊರೊನಾ ಅಟ್ಟಹಾಸ ಮೆರೆಯಲಿಲ್ಲ.

   'ಕಂಠರೋಹಿಣಿ ಜ್ವರ' ಈಗಿನ ಕೊರೊನಾ ವೈರಸ್?

   'ಕಂಠರೋಹಿಣಿ ಜ್ವರ' ಈಗಿನ ಕೊರೊನಾ ವೈರಸ್?

   ಹೌದು, ಈ ಕೊರೊನಾ ವೈರಸ್ ಅಥವಾ ಕೋವಿಡ್ 19 ರೋಗ ಲಕ್ಷಣ ಹೊಂದಿರುವ ಕಂಠರೋಹಿಣಿ ಜ್ವರದ ಬಗ್ಗೆ ಉಲ್ಲೇಖಗಳು ಲಭ್ಯವಾಗಿವೆ. ಸುಮಾರು ಅರ್ಧ ಶತಮಾನದ ಹಿಂದೆಯೇ ಅಂದರೆ 1972ರಲ್ಲಿ ಪ್ರಕಟವಾಗಿರುವ 'ಜ್ವರ ಚಿಕಿತ್ಸೆ' ಎಂಬ ಪುಸ್ತಕದಲ್ಲಿ ಕೊರೊನಾ ವೈರಸ್ ಹೋಲಿಕೆಯ ಕಂಠರೋಹಿಣಿ ಜ್ವರದ ಲಕ್ಷಣಗಳನ್ನು ವಿವರಿಸಲಾಗಿದೆ. ಅತ್ಯಂತ ಆಶ್ಚರ್ಯಕರ ಎಂಬಂತೆ ಯುರೋಪಿನ ರಾಷ್ಟ್ರಗಳಲ್ಲಿ ರೋಗ ತೀವ್ರತೆ ಹೆಚ್ಚಾಗಿರುತ್ತದೆ ಎಂದೂ ಬರೆಯಲಾಗಿದೆ.

   1972ರಲ್ಲಿ ಡಾ. ಸ್ವಾಮಿ ಚಂದ್ರಶೇಖರ ಶಾಸ್ತ್ರಿಗಳು ಶಾಸ್ತ್ರಿಮಠ ಎಂಬ ವೈದ್ಯರು ತಮ್ಮ "ಜ್ವರ ಚಿಕಿತ್ಸೆ" ಪುಸ್ತಕದಲ್ಲಿ ವಿವರಿಸಿದ್ದಾರೆ.

   'ಕಂಠರೋಹಿಣಿ ಜ್ವರ'ದ ವಿವರಣೆ

   'ಕಂಠರೋಹಿಣಿ ಜ್ವರ'ದ ವಿವರಣೆ

   ಡಾ. ಸ್ವಾಮಿ ಚಂದ್ರಶೇಖರ ಶಾಸ್ತ್ರಿಗಳು ವಿವರಿಸಿದಂತೆ ಕಂಠರೋಹಿಣಿ ಜ್ವರದ ವಿವರಗಳು ಹೀಗಿವೆ.

   ಇದೊಂದು ಬಗೆಯ ಸಾಂಸರ್ಗಿಕ ಜ್ವರವು. ಒದರ ದೂಷಿತ ಕ್ರಿಮಿಗಳು ವಿಶೇಷವಾಗಿ ತಂಪು ಪ್ರದೇಶಗಳಲ್ಲಿ ಇರುತ್ತವೆ. ಇವು ಬಹುತೇಕ ಕಂಠದ ತ್ವಚೆಯ ಮೇಲೆ ಪರಿಣಾಮವನ್ನುಂಟು ಬೀರುವುದರಿಂದ ಇದಕ್ಕೆ ಕಂಠರೋಹಿಣಿ ಜ್ವರ ಎಂದು ಸಂಜ್ಞೆ ಕೊಟ್ಟಿದ್ದಾಗಿ ಕಾಣುತ್ತದೆ. ಈ ರೋಗವು ಈ ದೇಶದಲ್ಲಿ ಕ್ವಚಿತ್ತಾಗಿ ಸಂಭವಿಸುವುದರಿಂದ ಇದನ್ನು ಈ ದೇಶದ ವಿಧಾನಕಾರರು ಕ್ಷುದ್ರರೋಗದಲ್ಲಿ ಪರಿಗಣಿಸಿದ್ದಾರೆ.

   ತಂಬಾಕು ಎಲೆಯಿಂದ ಕೊರೊನಾ ಲಸಿಕೆ ತಯಾರಿಸಿದ ವಿಶ್ವದ ನಂ.2 ಸಿಗರೇಟ್ ಕಂಪನಿ!

   ಹೆಚ್ಚಾಗಿ ಯೂರೋಪ್ ಖಂಡದಲ್ಲಿ ಈ ರೋಗದ ಹಾವಳಿಯು ಹೆಚ್ಚಾಗಿ ಇದ್ದುದಾಗಿದೆ. ಆದರೂ ಈ ದೇಶದಲ್ಲಿ ಮುಂಬಯಿ, ಕಲಕತ್ತಾ, ಸಿಲೋನ್ ಮುಂತಾದ ಸಮುದ್ರ ದಂಡೆಯ ಪ್ರದೇಶಗಳಲ್ಲಿ ಒಮ್ಮೊಮ್ಮೆ ಇದರ ಹಾವಳಿಯು ಎದ್ದ ಬಗ್ಗೆ ಉಲ್ಲೇಖಗಳಿವೆ ಎಂದು ಡಾ. ಸ್ವಾಮಿ ಚಂದ್ರಶೇಖರ್ ಶಾಸ್ತ್ರಿಗಳು ವಿವರಿಸಿದ್ದಾರೆ.

   ಪ್ರಾಣಿ, ಪಕ್ಷಿಗಳಿಂದ ಮನುಷ್ಯರಿಗೆ ಕಂಠರೋಹಿಣಿ ಜ್ವರ!

   ಪ್ರಾಣಿ, ಪಕ್ಷಿಗಳಿಂದ ಮನುಷ್ಯರಿಗೆ ಕಂಠರೋಹಿಣಿ ಜ್ವರ!

   ಕೊರೊನಾ ವೈರಸ್ ಬಾವಲಿಗಳಿಂದ ಮನುಷ್ಯರಿಗೆ ಹರಡಿದೆ ಎಂದು ಅಧ್ಯಯನಗಳು ಹೇಳಿವೆ. ಹಾಗೆಯೆ ಕಂಠರೋಹಿಣಿ ಜ್ವರ ಕೂಡ ಪ್ರಾಣಿ, ಪಕ್ಷಿಗಳಿಂದ ಹರಡುತ್ತಿತ್ತು ಎಂದು ವಿವರಿಸಿದ್ದಾರೆ.

   ಆವಿರ್ಭಾವ: ಇದು ರೋಗವುಳ್ಳ ಇಲಿ, ಬೆಕ್ಕು, ಮುಂಗಲಿ, ಹೆಗ್ಗಣ ಇವು ತಿಂದ ಎಂಜಲು ಕಾಳುಗಳಿಂದಲೂ, ದೂಷಿತ ಹಣ್ಣು, ಹಂಪಲು ಹಾಗೂ ಮೇವಾ, ಮಿಠಾಯಿ ಇವುಗಳಿಂದಲೂ ಇದರ ವಿಷವು ಮಾನವನ ಗಂಟಲಲ್ಲಿ ಸೇರಿ ನಿಂತು ಆ ಭಾಗವನ್ನೆಲ್ಲ ವಿಕೃತ ಪಡಿಸುತ್ತ. ಅಲ್ಲಿ ಅನೇಕ ಮುಳ್ಳಿನಂತಹ ಗುಳ್ಳೆಗಳನ್ನು ಎಬ್ಬಿಸುವುದಾಗಿದೆ. ಈ ವಿಷ ಕೀಟಗಳಿಗೆ ಇವು ಕಿರು ನಾಲಿಗೆಯ ಒಳ ಭಾಗದ ಶ್ಲೇಷ್ಮಲ ತ್ವಚೆ ಮೇಲೆ ನಿಂತು ಆ ಭಾಗವನ್ನು ಅದರ ಸುತ್ತಲಿನ ಭಾಗವನ್ನು ಅಲ್ಲದೆ ಶ್ವಾನನಳಿ, ಅನ್ನನಳಿ ಘಾಣೇಂದ್ರಿಯ, ಶ್ರವಣೇಂದ್ರೀಯ ಇವುಗಳ ಭಾಗವನ್ನು ಹೆಚ್ಚುಹೆಚ್ಚಾಗಿ ದಾಹಗೊಳಿಸುತ್ತ ರೋಗಿಯನ್ನು ಕ್ಷೀಣಗೊಳಿಸುತ್ತದೆ ಎಂದು ಡಾ. ಸ್ವಾಮಿ ಚಂದ್ರಶೇಖರ್ ಶಾಸ್ತ್ರಿಗಳು ವಿವರಿಸಿದ್ದಾರೆ.

   ಉಗುಳಿನಿಂದ ಹರಡುತ್ತಿತ್ತು ಕಂಠರೋಹಿಣಿ

   ಉಗುಳಿನಿಂದ ಹರಡುತ್ತಿತ್ತು ಕಂಠರೋಹಿಣಿ

   ಕೊರೊನಾ ವೈರಸ್‌ ಸೋಂಕು ರೋಗಿಯ ಬಟ್ಟೆಯಿಂದ, ಅವನು ಉಗುಳುವುದರಿಂದಲೂ ಹರಡುತ್ತದೆ. ಹೀಗಾಗಿ ಭಾರತದಲ್ಲಿ ಬಹುತೇಕ ಸಾರ್ವಜನಿಕ ಸ್ಥಳಗಳಲ್ಲಿ ಉಗಿಯುವುದನ್ನು ನಿಷೇಧಿಸಲಾಗಿದೆ. ಜೊತೆಗೆ ಗುಟ್ಕಾ ಹಾಗೂ ಪಾನ್‌ ಮಸಾಲ ನಿಷೇಧಿಸಿ ಸರ್ಕಾರ ಆದೇಶ ಮಾಡಿದೆ. ಅದೇ ಕಂಠರೋಹಿಣಿ ಜ್ವರವೂ ಬಟ್ಟೆಯಿಂದ, ಹವೆಯಲ್ಲಿ ಇರುತ್ತವೆ ಎಂದು ಉಲ್ಲೇಖಿಸಲಾಗಿದೆ. ವಿವರ ಹೀಗಿದೆ.

   ಮನುಷ್ಯನನ್ನು ಕೊರೊನಾ ವೈರಸ್ ಸಾವಿನ ದವಡೆಗೆ ದೂಡುವುದು ಹೇಗೆ? ಇಲ್ಲಿದೆ ಇಂಚಿಂಚೂ ಮಾಹಿತಿ

   ಈ ರೋಗ ಕ್ರಿಮಿಗಳು ರೋಗಿಯ ಉಗುಳಿನಲ್ಲಿಯೂ, ಅವನ ಬಟ್ಟೆ ಬರೆಗಳಮೇಲೆಯೂ ಕಂಡುಬರುವವೆಂದು ಉಲ್ಲೇಖಗಳಿವೆ. ಇವು ಕೆಲ ತಿಂಗಳೂಗಳ ವರೆಗೆ ಹವೆಯಲ್ಲಿ ಸಹಜವಾಗಿ ತಿರುಗುವವೆಂದು ತಿಳಿಸಿದ್ದಾರೆ. ಇದರ ವಿಷಯುಕ್ತ ಕಾಲವು 2 ರಿಂದ 7 ದಿನಗಳ ವರೆಗೆ ಇದ್ದುದಾಗಿದೆ ಎಂದು ಬರೆದಿದ್ದಾರೆ.

   ಕಂಠರೋಹಿಣಿ ಜ್ವರದ ಲಕ್ಷಣಗಳು

   ಕಂಠರೋಹಿಣಿ ಜ್ವರದ ಲಕ್ಷಣಗಳು

   ಇನ್ನು ಕಂಠರೋಹಿಣಿ ಜ್ವರದ ರೋಗಲಕ್ಷಣಗಳು ಕೂಡ ಕೊರೊನಾ ವೈರಸ್ ರೋಗಲಕ್ಷಣಗಳಂತೆಯೆ ಇವೆ. ಪುಸ್ತಕದಲ್ಲಿ ತಿಳಿಸಿರುವಂತೆ, ಆರಂಭದಲ್ಲಿ ಮೈಯು ಬಿಸಿಯಾಗುತ್ತದೆ. ದೇಹವು ಜಡವೆನಿಸುತ್ತದೆ. ಮೂರನೆ ದಿನ ಗಂಟಲು ನೋಯುತ್ತದೆ. ಕಂಠದ ಸ್ನಾಯುಗಳು ಮುದುಡುತ್ತವೆ. ಗಂಟಲದ ಒಳಗಂಟಲ ಹುಣ್ಣಾಗುತ್ತದೆ. ಬೇನೆ ಹೆಚ್ಚುತ್ತದೆ. ಅನ್ನನಳಿ, ಬಾಯಿ ಮೂಗು ಇತ್ಯಾದಿ ಸಪ್ತಪಥಗಳ ಭಾಗವೆಲ್ಲ ಹೆಚ್ಚು ಘಾಸಿಗೊಳ್ಳುತ್ತದೆ. ಬಾಯಿ ದುರ್ಗಂಧವಾಗಿ ನಾರುತ್ತದೆ. ಉಚ್ಛ್ವಾಸವು ಕಷ್ಟಕರವೆನಿಸುತ್ತದೆ. ಕಂಠದಿಂದ ಸಂಯ್ ಸಂಯ್ ಗೊರ್ ಗೊರ್ ಶಬ್ದವು ಹೊರಡುತ್ತದೆ. ಕಂಠರೋಹಿಣಿ ಜ್ವರಕ್ಕೆ ಚಿಕಿತ್ಸೆಯನ್ನೂ ವಿವರಿಸಿದ್ದು ಆ ಭಾಗವು ಲಭ್ಯವಾಗಿಲ್ಲ.

   ಬೇರೆ ದೇಶಗಳೊಂದಿಗೆ ಭಾರತದ ಹೋಲಿಕೆ

   ಬೇರೆ ದೇಶಗಳೊಂದಿಗೆ ಭಾರತದ ಹೋಲಿಕೆ

   ಕಳೆದ ಫೆಬ್ರವರಿ 3ನೇ ವಾರದಲ್ಲಿ ಭಾರತ ಸೇರಿದಂತೆ ಕೊರೊನಾ ವೈರಸ್ ಸೋಂಕು ತಗಲಿದವರ ಸಂಖ್ಯೆ ಅಮೇರಿಕ, ಇಟಲಿ, ಸ್ಪೇನ್, ಜರ್ಮನಿ, ಪ್ರಾನ್ಸ್ ಎರಡಂಕಿ ದಾಟಿರಲಿಲ್ಲ. ಮಾರ್ಚ್‌ ಅಂತ್ಯದ ವರೆಗೂ ಉಳಿದ ದೇಶಗಳಿಗೆ ಹೋಲಿಕೆ ಮಾಡಿದ್ರೆ ಭಾರತದಲ್ಲಿ ವೈರಸ್ ಹರಡಿರುವ ಪ್ರಮಾಣ ತೀರಾ ಕಡಿಮೆ ಎಂದು ವರ್ಡೋಮೀಟರ್ ಅಂಕಿ ಅಂಶಗಳಿಂದ ತಿಳಿದು ಬಂದಿತ್ತು.

   ಫೆಬ್ರುವರಿ 3ನೇ ವಾರದಲ್ಲಿ ಅಮೇರಿಕದಲ್ಲಿ 35, ಇಟಲಿಯಲ್ಲಿ 79, ಸ್ಪೇನ್‌ನಲ್ಲಿ 2, ಜರ್ಮನಿಯಲ್ಲಿ 16, ಫ್ರಾನ್ಸ್‌ನಲ್ಲಿ 12 ಕೊರೊನಾ ವೈರಸ್ ದೃಢಪಟ್ಟಿದ್ದವು. ಅದೇ ಸಂದರ್ಭದಲ್ಲಿ ಭಾರತದಲ್ಲಿ 3 ಪ್ರಕರಣಗಳು ಪತ್ತೆಯಾಗಿದ್ದವು. ಆದರೆ ಒಂದು ತಿಂಗಳ ಬಳಿಕ ಮಾರ್ಚ್‌ ಅಂತ್ಯಕ್ಕೆ ಮುಂದುವರೆದ ದೇಶಗಳಲ್ಲಿ ಇಡೀ ಚಿತ್ರಣವೇ ಬದಲಾಗಿತ್ತು.

   ಮಾರ್ಚ್‌ ಕೊನೆಯ ವಾರದಲ್ಲಿ ಅಮೇರಿಕದಲ್ಲಿ 1,23,587, ಇಟಲಿಯಲ್ಲಿ 92,472, ಸ್ಪೇನ್‌ನಲ್ಲಿ 73,235, ಜರ್ಮನಿಯಲ್ಲಿ 57,695, ಫ್ರಾನ್ಸ್‌ನಲ್ಲಿ 37575 ಕೊರೊನಾ ವೈರಸ್ ದೃಢಪಟ್ಟಿದ್ದವು. ಆದರೆ ಭಾರತದಲ್ಲಿ ಮಾರ್ಚ್ ಅಂತ್ಯಕ್ಕೆ 987 ಮಾತ್ರ ದೃಢಪಟ್ಟ ಪ್ರಕರಣಗಳು ವರದಿಯಾಗಿದ್ದವು. ಭಾರತದ ಜನಸಂಖ್ಯೆ ಹಾಗೂ ಜನಸಾಂದ್ರತೆಗೆ ಹೋಲಿಕೆ ಮಾಡಿದ್ರೆ ಅತಿ ಕಡಿಮೆ ಎಂದು ವಿಶ್ಲೇಷಣೆ ಮಾಡಲಾಗಿತ್ತು.

   ಅಂತಾರಾಷ್ಟ್ರೀಯ ಪರಿಸ್ಥಿತಿ

   ಅಂತಾರಾಷ್ಟ್ರೀಯ ಪರಿಸ್ಥಿತಿ

   ಚೀನಾದಿಂದ ಬೇರೆ ದೇಶಗಳಿಗೆ ಕೋವಿಡ್ 19 ಸೋಂಕು ಹರಡಿ ನಾಲ್ಕು ತಿಂಗಳುಗಳಾಗುತ್ತ ಬಂದಿವೆ. ಸಧ್ಯದ ಪರಿಸ್ಥಿತಿಯನ್ನು ಅವಲೋಕಸಿದರೂ ಕೊರೊನಾ ವೈರಸ್‌ ಪರಿಣಾಮ ಭಾರತ ಸೇರಿದಂತೆ ಪಾಕಿಸ್ತಾನ, ಬಾಂಗ್ಲಾ, ಶ್ರೀಲಂಕಾ ದೇಶಗಳಲ್ಲಿಯೂ ಕಡಿಮೆ. ಇದಕ್ಕೆ ಕಾರಣ ಇದೇ ರೀತಿಯ ಜ್ವರವನ್ನು ಹಿಂದೆ ಎದುರಿಸಿದ್ದರಿಂದ ನಮ್ಮ ದೇಹದಲ್ಲಿರುವ ರೋಗನಿರೋಧ ಶಕ್ತಿ.

   ಸಧ್ಯ ಜಾಗತಿಕವಾಗಿ 4,722,233 ಜನರು ಸೋಂಕಿಗೆ ತುತ್ತಾಗಿದ್ದಾರೆ. ಅವರಲ್ಲಿ 3,13,166 ಮೃತಪಟ್ಟಿದ್ದು 18,13,020 ಸೋಂಕಿತರು ಗುಣಮುಖರಾಗಿದ್ದಾರೆ. 33 ಕೋಟಿ ಜನಸಂಖ್ಯೆ ಹೊಂದಿರುವ ಅಮೇರಿಕದಲ್ಲಿ ಈಗಾಗಲೇ 15 ಲಕ್ಷಕ್ಕೂ ಅಧಿಕ ಜನರು ಸೋಂಕಿಗೆ ತುತ್ತಾಗಿದ್ದು, 90 ಸಾವಿರಕ್ಕೂ ಅಧಿಕ ಜನರು ವೈರಸ್‌ಗೆ ಬಲಿಯಾಗಿದ್ದಾರೆ. ಸ್ಪೇನ್, ರಷ್ಯಾ, ಇಂಗ್ಲೆಂಡ್, ಬ್ರೇಜಿಲ್, ಇಟಲಿ, ಫ್ರಾನ್ಸ್‌, ಜರ್ಮನಿ ದೇಶಗಳು ಸ್ಥಿತಿಯೂ ಭಿನ್ನವಾಗಿಲ್ಲ.

   ಸಧ್ಯ ಭಾರತದ ಸ್ಥಿತಿ

   ಸಧ್ಯ ಭಾರತದ ಸ್ಥಿತಿ

   ಭಾರತದಲ್ಲಿ ಈವರೆಗೆ ಕೊರೊನಾ ವೈರಸ್‌ ಸೋಂಕಿಗೆ ತುತ್ತಾದವರ ಸಂಖ್ಯೆ 90,927. ಸೋಂಕಿತರಲ್ಲಿ 34,224 ಸೋಂಕಿತರು ಗುಣಮುಖರಾಗಿದ್ದು, 2,872 ಸೋಂಕಿತರು ಕೊರೊನಾ ವೈರಸ್‌ಗೆ ಬಲಿಯಾಗಿದ್ದಾರೆ. ಮುಂದುವರೆದ ದೇಶಗಳಿಗೆ ಹೋಲಿಕೆ ಮಾಡಿದ್ರೆ ನಮ್ಮಲ್ಲಿ ಕೊರೊನಾ ವೈರಸ್‌ ಸೋಂಕು ಪರಿಣಾಮ ಬೀರಿದ್ದು ಕಡಿಮೆಯೆ. ಜೊತೆಗೆ ಪತ್ತೆಯಾಗುತ್ತಿರುವ ಬಹುತೇಕರು ರೋಗಲಕ್ಷಣಗಳಿಲ್ಲದ (asymptomatic) ಸೋಂಕಿತರು. ಹೀಗಾಗಿ ಸಧ್ಯದ ಪರಿಸ್ಥಿತಿಯಲ್ಲಿ ಕೊರೊನಾ ವೈರಸ್‌ನ್ನು ಭಾರತ ತಕ್ಕಮಟ್ಟಿಗೆ ಹಿಮ್ಮೆಟ್ಟಿಸಿದೆ ಎನ್ನಬಹುದು. ಅದಕ್ಕೆ ಕಾರಣ ನಾವು ಈ ಹಿಂದೆಯೆ 'ಕಂಠರೋಹಿಣಿ' ಜ್ವರವನ್ನು ಎದುರಿಸಿದ್ದಾ? ಗೊತ್ತಿಲ್ಲ!

   ಅಂಕಿ ಅಂಶಗಳ ಆಧಾರ: https://www.worldometers.info/coronavirus/

   English summary
   The symptoms of coronavirus fever were described half a century ago in the book Fever Therapy published in 1972. Most surprisingly, European countries are also known to have a higher incidence of disease than India.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more