ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೇರ್‌ಕಾರ್‌ ಪ್ರಯಾಣ ಉತ್ತೇಜನಕ್ಕೆ ನೈಋತ್ಯ ರೈಲ್ವೆ ಕ್ರಮ: ದರವೂ ಕಡಿತ

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 11: ನೈಋತ್ಯ ರೈಲ್ವೆಯು ಚೇರ್‌ಕಾರ್‌ ಪ್ರಯಾಣಕ್ಕೆ ಹೆಚ್ಚು ಉತ್ತೇಜನ ನೀಡುವ ದೃಷ್ಟಿಯಿಂದ ಎಸಿ-3 ಟಯರ್‌ನಿಂದ ಎಸಿ ಚೇರ್‌ ಕಾರ್‌ಗಳಾಗಿ ಪರಿವರ್ತಿಸಿ ಪಿಆರ್‌ಎಸ್‌ ದರ ಕಡಿಮೆ ಗೊಳಿಸಲು ನಿರ್ಧರಿಸಿದೆ.

ಹೆಚ್ಚೆಚ್ಚು ಪ್ರಯಾಣಿಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ಎಸಿ-3 ಟಯರ್‌ನಿಂದ ಎಸಿ ಚೇರ್‌ ಕಾರ್‌ಗಳಾಗಿ ಪರವರ್ತಿಸಿ ಪಿಆರ್‌ಎಸ್‌ ದರ ಕಡಿತಗೊಳಿಸಲು ಇಲಾಖೆ ನಿರ್ಧರಿಸಿದೆ. ಹುಬ್ಬಳ್ಳಿ-ಯಶವಂತಪುರ ವೀಕ್ಲಿ ಎಕ್ಸ್‌ಪ್ರೆಸ್‌ ರೈಲಿನ ಸಂಖ್ಯೆ 165440 ಎರಡು ಬೋಗಿಗಳನ್ನು 3 ಎಸಿ ಯಿಂದ ಎಸಿ ಚೇರ್‌ ಕಾರ್‌ಗಳಾಗಿ ಬದಲಾಯಿಸಲಾಗಿದೆ.

ಭಿಕ್ಷೆ ಬೇಡುವ ಮಹಿಳೆಯರ ಕಂಕುಳಲ್ಲಿನ ಮಕ್ಕಳು ಏಕೆ ಸದಾ ಮಲಗಿರ್ತವೆ?ಭಿಕ್ಷೆ ಬೇಡುವ ಮಹಿಳೆಯರ ಕಂಕುಳಲ್ಲಿನ ಮಕ್ಕಳು ಏಕೆ ಸದಾ ಮಲಗಿರ್ತವೆ?

ಅಲ್ಲದೆ, ಪ್ರಯಾಣ ದರವನ್ನು ಆ.4ರಿಂದ 735 ರೂ,ನಿಂದ 590 ರೂ.ಗೆ ಇಳಿಸಿದೆ. ಅದರಂತೆ ಗದಗ-ಸೊಲ್ಲಾಪುರ ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಲ್‌ ಎಕ್ಸ್‌ಪ್ರೆಸ್‌ ರೈಲಿನ ಸಂಖ್ಯೆ 11140 ಒಂದು ಬೋಗಿಯನ್ನು ಎಸಿ ಕಾರ್‌ಚೇರ್‌ ಆಗಿ ಬದಲಿಸಿ, ಪ್ರಯಾಣದರವನ್ನು 495ರಿಂದ 435ರೂ.ಗೆ ಇಳಿಸಿದೆ. ಅದು ಆಗಸ್ಟ್ 28ರಿಂದ ಜಾರಿಗೆ ಬರಲಿದೆ.

SWR converts 3AC as chair car and cutdowns passengers fare

ಮೈಸೂರು-ಬೆಂಗಳೂರು ನಡುವಿನ ಮೈಸೂರು-ಸಾಯಿನಗರ ಶಿರಡಿ ವೀಕ್ಲಿ ಎಕ್ಸ್‌ಪ್ರೆಸ್‌ ರೈಲಿನ ಸಂಖ್ಯೆ 16217 ಒಂದು ಬೋಗಿಯನ್ನು ಎಸಿ ಚೇರ್‌ಕಾರ್‌ಗೆ ಬದಲಿಸಿ ಪ್ರಯಾಣದರವನ್ನು 495ರಿಂದ 260 ರೂಗಳಿಗೆ ಇಳಿಸಿದೆ. ಅದು ಡಿಸೆಂಬರ್‌ 3ರಿಂದ ಅನುಷ್ಠಾನಕ್ಕೆ ಬರಲಿದೆ.

ರೈಲ್ವೆ ಹಳಿ ತಪಾಸಣೆಗೆ ಇನ್ನು ಅಧಿಕಾರಿಗಳು ಬೇಕಿಲ್ಲ, ಬಂತು ವಾಹನರೈಲ್ವೆ ಹಳಿ ತಪಾಸಣೆಗೆ ಇನ್ನು ಅಧಿಕಾರಿಗಳು ಬೇಕಿಲ್ಲ, ಬಂತು ವಾಹನ

ಯಶವಂತಪುರ-ಹಬ್ಬಳ್ಳಿ ಬಿಕಾನೇರ್‌ ಎಕ್ಸ್‌ಪ್ರೆಸ್‌ನ ಸಂಖ್ಯೆ 16587 ಒಂದು ಬೋಗಿಯನ್ನು ಬದಲಾಯಿಸಿ ದರವನ್ನು 735ರಿಂದ 590ರೂ.ಗೆ ಇಳಿಸಿದೆ. ಅದು ನವೆಂಬರ್‌ 30ರಿಂದ ಪ್ರಾರಂಭಗೊಳ್ಳಲಿದೆ. ಯಶವಂತಪುರ-ಧರ್ಮಾವರಂ ಸಿಕಂದರಾಬಾದ್‌ ಎಕ್ಸ್‌ಪ್ರೆಸ್‌ನ ಸಂಖ್ಯೆ 12736 ಒಂದು ಬೋಗಿಯನ್ನು ಬದಲಿಸಿ 345ರಿಂದ 305ಕ್ಕೆ ಸರ ಇಳಿಸಲಾಗಿದ್ದು ನವೆಂಬರ್‌ 22ರಿಂದ ಚಾಲನೆಗೆ ಬರಲಿದೆ.

English summary
South Western Railway zone has converted 3AC coaches into chair car with Bangalore Yeshwantpur weekly train and many other trains and cut down passenger fare to promote AC traveling.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X