• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕನ್ನಡದ ಹೊಸ ಕಥೆಗಾರರಿಗೆ ಇಲ್ಲಿ ಸಕತ್ 'ಆಫರ್'

By Mahesh
|

ಕುಮಟಾ, ಜ.30: ಸ್ವಸ್ತಿ ಪ್ರಕಾಶನ ತನ್ನ ಎರಡನೇ ವರ್ಷದ ಸವಿನೆನಪಿಗಾಗಿ ರಾಜ್ಯ ಮಟ್ಟದ ಕಥಾ ಸ್ಪರ್ಧೆಯನ್ನು ಹಮ್ಮಿಕೊಂಡಿದೆ. ಹೊಸ ಕತೆಗಾರರನ್ನುಬೆಳಕಿಗೆ ತರುವ ಉದ್ದೇಶದಿಂದ ಈ ಕಥಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಇದುವರೆಗೂ ಒಂದೂ ಕಥಾಸಂಕಲನ ಹೊರತಂದಿರದ ಲೇಖಕರಿಗೆ ಮಾತ್ರ ಅವಕಾಶ. ಸಾಹಿತ್ಯದ ಇತರ ಪ್ರಕಾರಗಳಲ್ಲಿ ಒಂದೆರಡು ಪುಸ್ತಕಗಳು ಪ್ರಕಟವಾಗಿದ್ದರೆ ಪರವಾಗಿಲ್ಲ. ತಮಗೆ ಉತ್ತಮವೆನಿಸಿದ ಸುಮಾರು 8 ರಿಂದ 10 ಕಥೆಗಳಿರುವ 105 ರಿಂದ 110 ಪೇಜ್ (ಫಾಂಟ್ ಸೈಜ್ 12) ಪ್ರಕಟಿತ ಅಥವಾ ಅಪ್ರಕಟಿತ ಸ್ವಂತ ಕತೆಗಳನ್ನು ಡಿಟಿಪಿ ಮಾಡಿಸಿ ಕಳುಹಿಸಬೇಕು. ಹಸ್ತಪ್ರತಿಯನ್ನು ಯಾವುದೇ ಕಾರಣಕ್ಕೂ ಹಿಂತಿರುಗಿಸಲಾಗುವದಿಲ್ಲ.

ಆಯ್ಕೆಯಾದ ಕತೆಗಾರರಿಗೆ ಐದು ಸಾವಿರ ರೂಪಾಯಿ ನಗದು ಬಹುಮಾನ ಮತ್ತೆ ಪ್ರಶಸ್ತಿ ಪತ್ರ ಕೊಟ್ಟು ಅಭಿನಂದಿಸಲಾಗುವುದು ಮತ್ತು ಅವರ ಕಥಾ ಸಂಕಲನವನ್ನು ಸ್ವಸ್ತಿ ಪ್ರಕಾಶನವು ಪ್ರಕಟಿಸುತ್ತದೆ. ಪ್ರಶಸ್ತಿಯ ಮೊತ್ತದ ಜೊತೆ 25 ಪುಸ್ತಕಗಳನ್ನು ಪಡೆದುಕೊಳ್ಳಬಹುದು. ಈ ಪುಸ್ತಕವನ್ನು 2014ರ ಮೇ ತಿಂಗಳ ಕೊನೆಯಲ್ಲಿ ಕುಮಟಾದಲ್ಲಿ ನಡೆಯವ ಸುಂದರ ಸಮಾರಂಭದಲ್ಲಿ ಬಿಡುಗಡೆ ಮಾಡಲಾಗುವುದು.

ಕತೆಗಳನ್ನು ಕಳಿಸಬೇಕಾದ ವಿಳಾಸ:

ಸ್ವಸ್ತಿ ಪ್ರಕಾಶನ,

c/o ಐಸಿರಿ, ಸುಪ್ರಭಾ ಬಿಲ್ಡಿಂಗ್ 2nd ಫ್ಲ್ಲೋರ್,

ರಾಷ್ಟ್ರೀಯ ಹೆದ್ದಾರಿ 17,

ಹೊಸ ಬಸ್ ನಿಲ್ದಾಣದ ಎದುರು,

ಕುಮಟಾ.(ಉತ್ತರಕನ್ನಡ) -

ಕೊನೆಯ ದಿನಾಂಕ: ಮಾರ್ಚ್ 5, 2014

ಹೆಚ್ಚಿನ ವಿವರಗಳಿಗೆ: swastiprakashana@gmail.com & sirisobagu@gmail.com

ಈ ಕಥಾ ಸ್ಪರ್ಧೆಯ ನಿಯಮಗಳು ಇಂತಿವೆ :-

1) ಪ್ರತಿ ಕಥೆಗಾರನು ತಮಗೆ ಉತ್ತಮವೆನಿಸಿದ ಕಥೆಗಳನ್ನೂ ಕಳುಹಿಸಿ ಕೊಡಬೇಕು.

2) 8 ರಿಂದ 10 ಕಥೆಗಳಿರುವ 100 ರಿಂದ 105 ಪೇಜ್(ಫಾಂಟ್ ಸೈಜ್ 12) ಪ್ರಕಟಿತ ಅಥವಾ ಅಪ್ರಕಟಿತ

ಸ್ವಂತ ಕತೆಗಳನ್ನು ಡಿಟಿಪಿ ಮಾಡಿಸಿ ಕಳುಹಿಸಬೇಕು. ಹಸ್ತಪ್ರತಿಯನ್ನು ಯಾವುದೇ ಕಾರಣಕ್ಕೂ ಹಿಂತಿರುಗಿಸಲಾಗುವದಿಲ್ಲ. ಕಥೆಗಳು ನುಡಿ ಅಥವಾ ಬರಹದಲ್ಲಿರಲಿ. ಕತೆಯ ತಂತ್ರ, ವಸ್ತು, ನಿರೂಪಣೆಗೆ ಕೊಟ್ಟಷ್ಟೇ ಮಹತ್ವವನ್ನು ಭಾಷೆಯ ವ್ಯಾಕರಣಕ್ಕೂ ಕೊಡಬೇಕಾದ್ದು ಕತೆಗಾರನ ಜವಾಬ್ದಾರಿಯಾಗಿದೆ )

3) ಸ್ಪರ್ಧೆಗೆ ಕಳುಹಿಸಿ ಕೊಡುವ ಕಥೆಗಳು ಮೊದಲು ಪುಸ್ತಕರೂಪದಲ್ಲಿ ಪ್ರಕಟಣೆ ಯಾಗಿರಬಾರದು (ನ್ಯೂಸ್ ಪೇಪರ್ ಅಥವಾ ಬ್ಲಾಗ್ ನಲ್ಲಿ ಪ್ರಕಟವಾಗಿದ್ದರೆ ತೊಂದರೆಯಿಲ್ಲ )

4) ಆಯ್ಕೆಯಾದ ಕಥೆಗಾರನು ಪುಸ್ತಕ ಪ್ರಕಟಿಸುವಾಗ ಕಥೆಗಳು ಸ್ವರಚನೆಯ ಬಗ್ಗೆ ಮುಚ್ಚಳಿಕೆಯನ್ನು ಬರೆದು ಕೊಡಬೇಕು

5) ಕಥೆಗಳನ್ನು ಮೇಲ್ ಮಾಡಬಹುದು. (ಹಾರ್ಡ ಕಾಪಿ ಕಡ್ಡಾಯ)ಕಥೆಗಳು ಕೊನೆಯ ದಿನಾಂಕಕ್ಕೂ ಮೊದಲು ಪ್ರಕಾಶನ ವಿಳಾಸಕ್ಕೆ (ಹಾರ್ಡ ಕಾಪಿ)ತಲುಪಬೇಕು. ಅವಧಿಯ ನಂತರ ಬಂದ ಕಥೆಗಳನ್ನು ಪರಿಗಣಿಸಲಾಗುವುದಿಲ್ಲ. (ಎಲ್ಲಾ ಕಥೆ ಗಳನ್ನೂ ಒಮ್ಮೆಲೇ ಕಳಿಸಿಕೊಡಬೇಕು )

6) ಕಥಾಸಂಕಲನದ ಆಯ್ಕೆ ನಾಡಿನ ಪ್ರಸಿದ್ಧ ಕಥೆಗಾರರಿಂದ ಮಾಡಿಸಲಾಗುವುದು. ಪುಸ್ತಕದ ಆಯ್ಕೆ ಮತ್ತು ಪ್ರಕಟಣೆಯಲ್ಲಿ ಪ್ರಕಾಶಕರದೇ ಅಂತಿಮ ನಿರ್ಧಾರ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Swasti Publishers, Kumta announced State level Kannada Story Competition interested writers can send their un published short stories to the Swasti Publishers. Selected Stories will be published with a cash prize to the author.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more