ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿವೇಕಾನಂದ ಜಯಂತಿ; ಕಾಲೇಜು ವಿದ್ಯಾರ್ಥಿಗಳಿಗಾಗಿ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ; ಆಕರ್ಷಕ ಬಹುಮಾನ

|
Google Oneindia Kannada News

ಬೆಂಗಳೂರು, ಜನವರಿ 6: ಸ್ವಾಮಿ ವಿವೇಕಾನಂದರ 159ನೇ ಜಯಂತಿ ಅಂಗವಾಗಿ ಸಮರ್ಥ ಭಾರತದ ವತಿಯಿಂದ ಕಾಲೇಜು ವಿದ್ಯಾರ್ಥಿಗಳಿಗಾಗಿ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

'ಬಿ ಗುಡ್, ಡು ಗುಡ್ ಅಭಿಯಾನ- 2022' ರಾಷ್ಟ್ರೀಯ ಯುವ ದಿನದ ನಿಮಿತ್ತ ಏರ್ಪಡಿಸಿರುವ 'ಸ್ವಾತಂತ್ರ್ಯ ಸಂಗ್ರಾಮದ ಮೇಲೆ ಸ್ವಾಮಿ ವಿವೇಕಾನಂದರ ವಿಚಾರಗಳ ಪ್ರಭಾವ'ದ ವಿಷಯ ಕುರಿತು ಕಾಲೇಜು ವಿದ್ಯಾರ್ಥಿಗಳು ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಬಹುದು.

Swamy Vivekananda Jayanti 2022; A State Level Essay Competition For College Students

ಗಮನಿಸಬೇಕಾದ ಅಂಶಗಳು
* ಪದವಿ ಯಾ ತತ್ಸಮಾನ, ಸ್ನಾತಕೋತ್ತರ ವಿದ್ಯಾರ್ಥಿಗಳು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಬಹುದು.

ಬಹುಮಾನಗಳು
* ಪ್ರಥಮ ಸ್ಥಾನ: 10,000 ರೂ. ಮತ್ತು ಪ್ರಮಾಣ ಪತ್ರ
* ದ್ವಿತೀಯ ಸ್ಥಾನ: 7,500 ರೂ. ಮತ್ತು ಪ್ರಮಾಣ ಪತ್ರ
* ತೃತೀಯ ಸ್ಥಾನ: 5,000 ರೂ. ಮತ್ತು ಪ್ರಮಾಣ ಪತ್ರ

ಇದೇ ವೇಳೆ ತಲಾ 1000 ರೂ.ನಂತೆ 20 ಸಮಾಧಾನಕರ ಬಹುಮಾನಗಳನ್ನು ನೀಡಲಾಗುವುದು.

* ಮೇಲೆ ತಿಳಿಸಿದ ವಿಷಯದ ಕುರಿತು, ಕನ್ನಡ ಅಥವಾ ಇಂಗ್ಲೀಷ್ ಭಾಷೆಯಲ್ಲಿ 2500 ಪದಗಳ ಮಿತಿಯಲ್ಲಿ ಪ್ರಬಂಧವನ್ನು ಸ್ವಹಸ್ತಾಕ್ಷರದಲ್ಲಿ ಬರೆದು ಈ ಕೆಳಗಿನ ವಿಳಾಸಕ್ಕೆ ಕನವರಿ 31, 2022ರ ಒಳಗಾಗಿ ಕಳುಹಿಸಿ ಕೊಡಬೇಕು.

* ಕಾಲೇಜಿನ ಪಾಂಶುಪಾಲರಿಂದ ಅಥವಾ ವಿಭಾಗದ ಮುಖ್ಯಸ್ಥರಿಂದ ದೃಢೀಕರಿಸಲ್ಪಟ್ಟ ವ್ಯಾಸಂಗ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಪ್ರಬಂಧದ ಜೊತೆ ಕಳುಹಿಸಬೇಕು.

* ವಿಳಾಸ: ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ, ಮಿಥಿಕ್ ಸೊಸೈಟಿ ನೃಪತುಂಗ ರಸ್ತೆ, ಕೆ.ಆರ್. ವೃತ್ತ ಬಳಿ, ಬೆಂಗಳೂರು- 560001.

English summary
As a part of Swami Vivekananda's 159th birth anniversary, a State Level Essay Competition has been organized for college students by Samartha Bharata.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X