ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾರ್ಥಕತೆ ತಂದ ಸ್ವಾಮಿ ವಿವೇಕಾನಂದ ಜಯಂತಿ

By ಶಿಶಿರ ಅಂಗಡಿ
|
Google Oneindia Kannada News

ಸ್ವಂತಕ್ಕಾಗಿ ಚಿಂತಿಸದೇ ಸದಾಕಾಲವೂ ದೇಶ-ಸಮಾಜದ ಬಗ್ಗೆ ಚಿಂತಿಸುವುದು, ನಮ್ಮನ್ನು ನಾವು ಗೆಲ್ಲುವುದೇ ಸ್ವಾಮಿ ವಿವೇಕಾನಂದರ ತತ್ವ ಎಂದು ಮಂಜುಗುಣಿಯ ಶ್ರೀ ವೆಂಕಟೇಶ್ವರ ದೇವಾಲಯದ ಪ್ರಧಾನ ಅರ್ಚಕರಾದ ವಿ. ಶ್ರೀನಿವಾಸ್ ಭಟ್ ಹೇಳಿದ್ದಾರೆ. ಅವರು ನಿನ್ನೆ (ಜ 12) ಶ್ರೀ ಕ್ಷೇತ್ರ ಮಂಜುಗುಣಿಯಲ್ಲಿ ನಡೆದ ವೀರಭಾರತ್ ಸಮಾರೋಪ ಮತ್ತು ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರದಲ್ಲಿ ಉಪಸ್ಥಿತರಿದ್ದು ಉಪನ್ಯಾಸ ನೀಡುತ್ತಿದ್ದರು.

"ಸ್ವಾಮಿ ವಿವೇಕಾನಂದರು ಇಂದ್ರಿಯಗಳನ್ನು ಗೆದ್ದಿದ್ದರು. ಸ್ವಂತಕ್ಕಾಗಿ ಏನನ್ನೂ ಮಾಡಿಕೊಳ್ಳದೆ, ತಾಯಿ ಭಾರತಿಗಾಗಿ ತಮ್ಮ ಜೀವನವನ್ನು ಮುಡಿಪಾಗಿರಿಸಿದರು. ಅವರ ಜೀವನದಲ್ಲಿ ಅನೇಕಾನೇಕ ಕಷ್ಟಗಳು, ನಿಂದನೆಗಳು, ಆರೋಪಗಳನ್ನು ಎದುರಿಸಿದರೂ ಅವರು ತಮ್ಮ ಕಾರ್ಯಸಾಧನೆಯನ್ನು ಬಿಡಲಿಲ್ಲ. ಹಾಗಾಗಿಯೇ ಯಾವ ಶಸ್ತ್ರಗಳನ್ನು ಹಿಡಿಯದಿದ್ದರೂ ಅವರನ್ನು ವೀರ ಸನ್ಯಾಸಿ ಎಂದು ಕರೆಯಲಾಗಿದೆ" ಎಂದು ಭಟ್ ಹೇಳಿದರು.

ಭಾರತದ ಪರ ವಿಶ್ವಕ್ಕೆ ಶಾಂತಿ ಸಂದೇಶ ಸಾರಿದ ವಿವೇಕಾನಂದರುಭಾರತದ ಪರ ವಿಶ್ವಕ್ಕೆ ಶಾಂತಿ ಸಂದೇಶ ಸಾರಿದ ವಿವೇಕಾನಂದರು

"ಜಯಕಾರ ಹಾಕುವಾಗ ಆ ವ್ಯಕ್ತಿ ಅಥವಾ ಶಕ್ತಿಯ ತತ್ತ್ವಾದರ್ಶಗಳನ್ನು ಅರ್ಥೈಸಿಕೊಂಡು ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಆ ಜೈಕಾರಕ್ಕೆ ಅರ್ಥ ಬರುತ್ತದೆ. ನಮಗೆಲ್ಲ ಜಯವಾಗುತ್ತದೆ, ಇದರಿಂದ ದೇಶಕ್ಕೆ ಜಯವಾಗುತ್ತದೆ".

Swami Vivekananda Jayanthi Celebration At Devanahalli And Padayatra

"ಜೀವನದಲ್ಲಿ ಗುರಿ ಹಾಕಿಕೊಳ್ಳುವುದು ಸುಲಭ, ಆದರೆ ಸೂಕ್ತ ಮಾರ್ಗದರ್ಶನ ಮಾಡುವಂತ ಗುರುವನ್ನು ಹೊಂದುವುದು ದುರ್ಲಭ, ವಿವೇಕಾನಂದರಂತಹ ವಿವೇಕಾನಂದರಿಗೆ ರಾಮಕೃಷ್ಣರಂತಹ ರಾಮಕೃಷ್ಣರು ಗುರುವಾಗಿ ಲಭಿಸಿದರು. ರಾಮಕೃಷ್ಣರು ತಮ್ಮಲ್ಲಿರುವ ಆಧ್ಯಾತ್ಮಿಕ ತೇಜಸ್ಸನ್ನು ವಿವೇಕಾನಂದರಲ್ಲಿ ತುಂಬಿದರೆ, ವಿವೇಕಾನಂದರನ್ನು ಮಾನಸಪುತ್ರನನ್ನಾಗಿ ಸ್ವೀಕರಿಸಿದ ಶಾರದಾ ಮಾತೆಯವರು ತಮ್ಮಲ್ಲಿರುವ ಚೈತನ್ಯವನ್ನೇ ವಿವೇಕಾನಂದರಿಗೆ ಎದೆಹಾಲಿನ ರೂಪದಲಿ ಉಣಿಸಿದರು".

ಆ ಕಾರಣ ವಿವೇಕಾನಂದರು ದೇಶಕ್ಕೇ ಸ್ಪೂರ್ತಿಯಾದರು. ಇದೇ ರೀತಿಯಲ್ಲಿ ಇಂದಿನ ಜನಾಂಗ ಮುಂದಿನ ಪೀಳಿಗೆಗೆ ಚೈತನ್ಯ ತುಂಬಿ ಸನ್ಮಾರ್ಗದಲ್ಲಿ ಮುನ್ನಡೆಸಬೇಕು" ಎಂದು ಶ್ರೀನಿವಾಸ ಭಟ್ ಹೇಳಿದರು. ಇದಕ್ಕೂ ಮುನ್ನ ಯುವಬ್ರಿಗೇಡ್ ಶಿರಸಿ ಕಾರ್ಯಕರ್ತರು 'ವೀರಭಾರತ್ - ಗುರಿಯತ್ತ ನಡೆ' ಕಾರ್ಯಕ್ರಮದ ಅಂಗವಾಗಿ ದೇವನಳ್ಳಿಯಿಂದ ಪ್ರಾರಂಭಿಸಿ ಮಂಜುಗುಣಿಯವರೆಗೆ ಪಾದಯಾತ್ರೆ ಮಾಡಿದರು.

Swami Vivekananda Jayanthi Celebration At Devanahalli And Padayatra

ದೇವನಹಳ್ಳಿಯ ವೀರಾಂಜನೆಯ ಸ್ವಾಮಿ ದೇವಸ್ಥಾನದಲ್ಲಿ ಅರ್ಚಕರಾದ ವೆಂಕಟೇಶ್ ದಿವೇಕರ್ ಅವರು ಆಂಜನೇಯನಿಗೆ ಹಾಗೂ ಸ್ವಾಮೀಜಿಯವರಿಗೆ ಆರತಿ ಮಾಡುವುದರ ಮೂಲಕ ಚಾಲನೆ ಪಡೆದುಕೊಂಡ ಪಾದಯಾತ್ರೆ ಚಾವಡಿಕೆರೆ, ಕಾರೆಮನೆ, ಗದ್ದೇಮನೆ, ಕಿಬ್ಬಳ್ಳಿ, ಹುಕ್ಲೆಬೈಲ್ ಗ್ರಾಮಗಳಲ್ಲಿ ಮನೆಮನೆಗೆ ಭೇಟಿಕೊಟ್ಟು ಮತ್ತೆ ದೇವನಳ್ಳಿಯನ್ನು ಪ್ರವೇಶಿಸಿತು.

ಮಧ್ಯಾಹ್ನದ ಉಪಹಾರದ ನಂತರ ಕಿರುಗಾರ, ಕಳುಗಾರ, ಹಲ್ಲೆಕೊಪ್ಪ, ಬರಸಗುಣಿ, ಕೊಡಸರ, ಗೊಡೇಗದ್ದೆ ಗ್ರಾಮಗಳಲ್ಲಿನ ಮನೆಮನೆಗೂ ಸಂಚರಿಸಿ ಮಂಜುಗುಣಿಯ ಶ್ರೀನಿವಾಸ ದೇವಸ್ಥಾನವನ್ನು ತಲುಪಲಾಯಿತು. ಅಲ್ಲಿ ದೇವಸ್ಥಾನ ಸಮಿತಿಯವರ ಪ್ರೀತಿಪೂರ್ವಕ ಒತ್ತಾಯದ ಮೇರೆಗೆ ಲಘು ಉಪಹಾರ ಸ್ವೀಕರಿಸಿ ಮೇಲಿನಕೊಪ್ಪಲು ಗ್ರಾಮ ಹಾಗೂ ಮಂಜುಗುಣಿಯ ಬೀದಿಯಲ್ಲಿರುವ ಮನೆಗಳಿಗೆ ಭೇಟಿ ಕೊಟ್ಟು ವಿವೇಕಾನಂದರ ಸಂದೇಶವನ್ನು ತಲುಪಿಸಲಾಯಿತು.

Swami Vivekananda Jayanthi Celebration At Devanahalli And Padayatra

ಪಾದಯಾತ್ರೆಯುದ್ದಕ್ಕೂ ಗ್ರಾಮಸ್ಥರು ಸ್ವಾಮೀಜಿಯವರನ್ನು ಬರಮಾಡಿಕೊಂಡು ಗೌರವಿಸಿದ ರೀತಿ ನಿಜಕ್ಕೂ ಅದ್ಭುತ. ಕಾರ್ಯಕರ್ತರಿಗೆ ಹಲವು ಕಡೆ ತಂಪು ಪಾನಿಯ, ಹಣ್ಣು ಇವುಗಳನ್ನು ಪ್ರೀತಿಯಿಂದ ಕೊಟ್ಟರು.

ಬದುಕಿಗೆ ಗಟ್ಟಿತನ ಕೊಡುವ ವಿವೇಕಾನಂದರ ಸ್ವಾನುಭವದ ಪುಟ್ಟ ಕಥೆಗಳು ಬದುಕಿಗೆ ಗಟ್ಟಿತನ ಕೊಡುವ ವಿವೇಕಾನಂದರ ಸ್ವಾನುಭವದ ಪುಟ್ಟ ಕಥೆಗಳು

ಹಳ್ಳಿಗರು ತಾವು ಎಷ್ಟೇ ಕಷ್ಟದಲ್ಲಿದ್ದರೂ ದೇಶದ ವಿಷಯ, ಸ್ವಾಮಿ ವಿವೇಕಾನಂದರಂತಹ ವಿಷಯಗಳನ್ನು ತೆಗೆಸಿಕೊಂಡು ಹೋದಾಗ ಮುರುಕಲು ಗುಡಿಸಿಲಿನಲ್ಲಿದ್ದರೂ ತಮ್ಮ ಕೈಲಾದ ಸಹಾಯ ಮಾಡುವ ಮನಸ್ಥಿತಿಗಳು, ಭಾವುಕರಾಗಿ ಆಶೀರ್ವದಿಸಿದ ಮಹಿಳೆಯರು, ಇಂತಹ ಕಾರ್ಯಕರ್ತರುಗಳೆಲ್ಲ ಚೆನ್ನಾಗಿ ಇರಬೇಕು ಎಂದು ಆಶಿಸುವ ಮಹನೀಯರು.. ಭಾರತದ ನಿಜವಾದ‌ ಅಂತಃಸತ್ವ ಎಲ್ಲಿ ಅಡಗಿದೆ, ಭಾರತದ ಸಂಸ್ಕೃತಿ ಪರಂಪರೆ ಯಾಕೆ ಇನ್ನೂ ಅಜೇಯವಾಗಿದೆ ಎಂಬುದರ ಅರಿವಾಯಿತು.
ಅಷ್ಟೇ ಅಲ್ಲದೇ, ನಾವು ಕೇವಲ ಒಂದು ದಿನ 20-22 ಕಿಮೀ ಪಾದಯಾತ್ರೆ ಮಾಡುವಾಗ ಅನುಭವಿಸಿದ ಕಷ್ಟ ನೋಡಿದಾಗ ಗೊತ್ತಾಯಿತು ಸ್ವಾಮಿ ವಿವೇಕಾನಂದರು ಇಡಿಯ ಭಾರತವನ್ನು, ವಿದೇಶಗಳನ್ನು ಸುತ್ತಿದರಲ್ಲ ಅವರಿಗೆಷ್ಟು ಕಷ್ಟ ಆಗಿರಬಹುದು, ಅವರಲ್ಲಿ ಅದೆಂತಹ ಶಕ್ತಿ ಅಡಗಿದೆ ಎಂಬುದರ ಅರಿವಾಯಿತು‌.

ಹಾಗೆಯೇ ಹಳ್ಳಿವಾಸಿಗಳ ಕೆಲವೊಂದು ಪರಿಸ್ಥಿತಿ ನೋಡಿದ ಮೇಲೆ ಗೊತ್ತಾಯ್ತು ಯಾಕೆ ವಿವೇಕಾನಂದರು ಭಾರತವನ್ನು ಸುತ್ತಿಬಂದಮೇಲೆ ಬಂಡೆಯ ಮೇಲೆ ಕುಳಿತು ಗಳಗಳನೆ ಅತ್ತಿರಬಹುದು ಎಂದು. ಒಟ್ಟಿನಲ್ಲಿ ನಮ್ಮೊಳಗನ್ನು ಕೊಂಚಮಟ್ಟಿಗೆ ಅರಿಯುವ ಕಾರ್ಯಕ್ರಮವಾಗಿ ಈ ಪಾದಯಾತ್ರೆ ನಮ್ಮೆಲ್ಲರಲ್ಲಿ ಶಕ್ತಿ ತುಂಬಿದೆ.

English summary
Swami Vivekananda Jayanthi Celebration At Devanahalli And Padayatra On January 12.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X