ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2 ತಿಂಗಳಲ್ಲಿ ವಜುಭಾಯ್ ನಿವೃತ್ತಿ, ಕರ್ನಾಟಕದ ಮುಂದಿನ ರಾಜ್ಯಪಾಲರು ಯಾರು?

|
Google Oneindia Kannada News

Recommended Video

ಎರಡು ತಿಂಗಳಲ್ಲಿ ವಜುಭಾಯ್ ವಾಲಾ ನಿವೃತ್ತಿ | Oneindia Kannada

ಬೆಂಗಳೂರು, ಜೂನ್ 14: ಮುಂದಿನ ಎರಡು ತಿಂಗಳಲ್ಲಿ ಕರ್ನಾಟಕದ ರಾಜ್ಯಪಾಲ ವಜುಭಾಯ್ ವಾಲಾ ನಿವೃತ್ತಿ ಪಡೆಯಲಿದ್ದು ಮುಂದಿನ ರಾಜ್ಯಪಾಲರು ಯಾರಾಗಲಿದ್ದಾರೆ ಎನ್ನುವ ಕುತೂಹಲ ಉಂಟಾಗಿದೆ.

ತೆರವಾಗಲಿರುವ ರಾಜ್ಯಪಾಲ ಹುದ್ದೆಗೆ ಕೇಂದ್ರದ ಸಚಿವರಾದ ಸುಷ್ಮಾ ಸ್ವರಾಜ್, ಉಮಾ ಭಾರತಿ ಹಾಗೂ ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್ ಅವರನ್ನು ನೇಮಕ ಮಾಡಲಾಗುತ್ತದೆ ಎಂಬ ವದಂತಿಯೂ ಇದೆ.

ಯಾರಾಗಲಿದ್ದಾರೆ ಕರ್ನಾಟಕದ ರಾಜ್ಯಪಾಲರು? ಅಚ್ಚರಿಯ ಹೆಸರುಗಳು ಯಾರಾಗಲಿದ್ದಾರೆ ಕರ್ನಾಟಕದ ರಾಜ್ಯಪಾಲರು? ಅಚ್ಚರಿಯ ಹೆಸರುಗಳು

ಈ ರಾಜ್ಯಪಾಲರನ್ನೇ ಪುನಃ ಆಯ್ಕೆ ಮಾಡುತ್ತಾರೋ ಅಥವಾ ಹೊಸಬರಿಗೆ ಅವಕಾಶ ಕೊಡುತ್ತಾರೋ ಎನ್ನುವುದು ಸದ್ಯದ ಕುತೂಹಲವಾಗಿದೆ. ವಜುಭಾಯಿ ವಾಲಾ ಅವರಿಗೆ ಈಗ 80 ವರ್ಷ, ಬರುವ ಆಗಸ್ಟ್‌ನಲ್ಲಿ ಅವರು ನಿವೃತ್ತಿಹೊಂದಲಿದ್ದಾರೆ.

Sushma Sumitra Uma are in the race for next karnataka governor post

ಹಾಲಿ ರಾಜ್ಯಪಾಲರ ಪೈಕಿ ಅತ್ಯಂತ ಹಿರಿಯರಾಗಿರುವ 87 ವರ್ಷದ ಕಲ್ಯಾಣ್ ಸಿಂಗ್(ರಾಜಸ್ಥಾನ), ಕರ್ನಾಟಕ ಮೂಲದ 87 ವರ್ಷದ ಪಿವಿ ಆಚಾರ್ಯ(ನಾಗಾಲೆಂಡ್) ಹಾಗೂ 85 ವರ್ಷದ ರಾಮ್ ನಾಯಕ್(ಉತ್ತರಪ್ರದೇಶ) ಅವರ ಅವಧಿಯನ್ನು ವಿಸ್ತರಿಸಲಾಗಿದೆಯೇ ಎಂಬ ಕುತೂಹಲವಿದೆ.

ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿರುವ ಕೇಸರಿನಾಥ ತ್ರಿಪಾಠಿ ಅವರಿ 84 ವರ್ಷ, ಅವರ ಅವಧಿ ಜುಲೈನಲ್ಲಿ ಮುಕ್ತಾಯಗೊಳ್ಳಲಿದೆ. ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿಗೆ ಈ ಎರಡೂ ರಾಜ್ಯಗಳು ಮಹತ್ವದ್ದಾಗಿವೆ.

ಹೀಗಾಗಿ ಕೇಂದ್ರ ಸರ್ಕಾರ ಯಾರನ್ನು ನೇಮಿಸಬಹುದು ಎಂಬ ಕುತೂಹಲವಿದೆ. ಕರ್ನಾಟಕ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಸೇರಿ 9 ರಾಜ್ಯಗಳ ರಾಜ್ಯಪಾಲರ ಅವಧಿ ಪೂರ್ಣಗೊಳ್ಳುತ್ತಿದೆ.

English summary
Governor Vajubhai set to retired soon, Sushma Swaraj, Sumitra Mahajan and Uma Bharati are in the race for this post in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X