ಬೀದರ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೀದರ್ : 10 ವರ್ಷದ ಬಳಿಕ ಸೂರ್ಯ ಕಿರಣ್ ವೈಮಾನಿಕ ಪ್ರದರ್ಶನ

By Gururaj
|
Google Oneindia Kannada News

ಬೀದರ್, ಆಗಸ್ಟ್ 09 : ಬೀದರ್‌ನಲ್ಲಿ ಈ ವರ್ಷ ನಡೆಯುವ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಬಹಳ ವಿಶೇಷವಾಗಿದೆ. ಈ ಬಾರಿ ಪ್ರತಿಷ್ಠಿತ 'ಸೂರ್ಯ ಕಿರಣ್' ತಂಡ ನಗರದಲ್ಲಿ ವೈಮಾನಿಕ ಪ್ರದರ್ಶನವನ್ನು ನೀಡಲಿದೆ.

ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಮೆರಗು ಹೆಚ್ಚಿಸಲು ವೈಮಾನಿಕ ಪ್ರದರ್ಶನವನ್ನು ಆಯೋಜಿಸಲಾಗುತ್ತಿದೆ. ವಾಯುಪಡೆ ಜೊತೆಗೆ ಈಗಾಗಲೇ ಮಾತುಕತೆ ನಡೆದಿದ್ದು, ಅಧಿಕಾರಿಗಳ ತಂಡ ಸ್ಥಳವನ್ನು ವೀಕ್ಷಣೆ ಮಾಡಿದೆ.

ಸ್ವಾತಂತ್ರ್ಯದ ಕಿಚ್ಚು ಹತ್ತಿಸಿದ ಶಿವಪುರ ಧ್ವಜ ಸತ್ಯಾಗ್ರಹಸ್ವಾತಂತ್ರ್ಯದ ಕಿಚ್ಚು ಹತ್ತಿಸಿದ ಶಿವಪುರ ಧ್ವಜ ಸತ್ಯಾಗ್ರಹ

ಬೀದರ್ ಕೋಟೆ ಆವರಣದಲ್ಲಿ ವೈಮಾನಿಕ ಪ್ರದರ್ಶನ ನಡೆಯಲಿದೆ. 10 ವರ್ಷಗಳ ಬಳಿಕ ಸೂರ್ಯ ಕಿರಣ್ ತಂಡ ತವರು ನೆಲದಲ್ಲಿ ವೈಮಾನಿಕ ಪ್ರದರ್ಶನ ನೀಡುತ್ತಿದ್ದು, ಸಾವಿರಾರು ಜನರು ಪ್ರದರ್ಶನಕ್ಕೆ ಸಾಕ್ಷಿಯಾಗುವ ನಿರೀಕ್ಷೆ ಇದೆ.

Surya Kiran team will perform in Bidar after 10 years

ಸೂರ್ಯಕಿರಣ್ ತಂಡ : ಸೂರ್ಯ ಕಿರಣ್ ತಂಡ ಬೀದರ್ ಏರ್‌ಪೋರ್ಸ್ ಸ್ಟೇಷನ್‌ನಲ್ಲಿಯೇ ಇದೆ. 1996ರಲ್ಲಿ ಕಿರಣ್ ಎಂಕೆ -11 ವಿಮಾನದ ಮೂಲಕ ತಂಡ ವೈಮಾನಿಕ ಪ್ರದರ್ಶನವನ್ನು ಆರಂಭಿಸಿತು. ಈಗ 9 ವಿಮಾನಗಳ ಮೂಲಕ ದೊಡ್ಡ ತಂಡವಾಗಿ ಬೆಳೆದಿದೆ.

ಸ್ವಾತಂತ್ರ್ಯ ದಿನಾಚರಣೆ ಭಾಷಣ : ಪ್ರಧಾನಿ ಮೋದಿಗೆ ಸಲಹೆ ಕೊಡಿಸ್ವಾತಂತ್ರ್ಯ ದಿನಾಚರಣೆ ಭಾಷಣ : ಪ್ರಧಾನಿ ಮೋದಿಗೆ ಸಲಹೆ ಕೊಡಿ

10 ವರ್ಷಗಳ ಬಳಿಕ ಬೀದರ್‌ನಲ್ಲಿ ತಂಡ ವೈಮಾನಿಕ ಪ್ರದರ್ಶನ ನೀಡಲಿದ್ದು, Hawk-Mk 132 ವಿಮಾನದ ಮೂಲಕ ಪ್ರದರ್ಶನ ನೀಡಲಿದೆ. ಎರಡು ಅಥವ ಮೂರು ಮಾದರಿ ಪ್ರದರ್ಶನವನ್ನು ನೀಡಲು ತಂಡ ಈಗಾಗಲೇ ಸಿದ್ಧತೆ ನಡೆಸಿದೆ.

English summary
After 10 years Indian Air Force Surya Kiran team will perform in Bidar on Independence Day on August 15, 2018. The site chosen for the performance is the historic Bidar fort.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X