ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

LKG ಕಂದಗಳಿಗೂ Online ಶಿಕ್ಷಣ ಕೊಡುವ ಮನಸ್ಥಿತಿಗೆ ಏನೆನ್ನಬೇಕು? ಕಾದಿದೆ ಕ್ರಮ!

|
Google Oneindia Kannada News

ಬೆಂಗಳೂರು, ಮೇ 16: ಕೊರೊನಾ ವೈರಸ್‌ ಲಾಕ್‌ಡೌನ್‌ ಸಂದರ್ಭದಲ್ಲಿ ಬಹಳಷ್ಟು ಮಾನವೀಯ ಮುಖಗಳು ಅನಾವರಣವಾಗಿವೆ. ಆದರೆ ಖಾಸಗಿ ಶಿಕ್ಷಣ ಸಂಸ್ಥೆಗಳು ಮಾತ್ರ ದುರಾಸೆಯನ್ನೂ ಈ ಸಂದಿಗ್ದ ಕಾಲದಲ್ಲೂ ಬಿಟ್ಟಿಲ್ಲ. ಮಕ್ಕಳ ಮೇಲಾಗುವ ಪರಿಣಾಮಗಳನ್ನೂ ಮೀರಿ ಖಾಸಗಿ ಶಿಕ್ಷಣ ಸಂಸ್ಥೆಗಳು ವರ್ತನೆ ಮಾಡುತ್ತಿವೆ. ಪ್ರೌಢ, ಪ್ರಾಥಮಿಕ ಶಾಲಾ ಮಕ್ಕಳ ಬಳಿಕ ಇದೀಗ ಎಲ್‌ಕೆಜಿ, ಯುಕೆಜಿ ಮಕ್ಕಳಿಗೆ ಆನ್‌ಲೈನ್‌ ಪಾಠವನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ಆರಂಭಿಸಿವೆ.

Recommended Video

ಸರ್ಕಾರ ಹೇಳೋತನಕ ಖಾಸಗಿ ಶಾಲೆಯವರು ಫೀಸ್ ಕೇಳುವಂತಿಲ್ಲ | Suresh Kumar

ನಿಯಮದಂತೆ 6 ವರ್ಷಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಹೆಚ್ಚಿನ ಒತ್ತಡ ಹಾಕುವಂತಿಲ್ಲ. ನಲಿ ಕಲಿ ಎಂದು ಶಿಕ್ಷಣ ನೀತಿಯನ್ನು ಸರ್ಕಾರ ರೂಪಿಸಿದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಕುರಿತು ಸಭೆ ಬಳಿಕ ಸುರೇಶ್ ಕುಮಾರ್ ಮಾಹಿತಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಕುರಿತು ಸಭೆ ಬಳಿಕ ಸುರೇಶ್ ಕುಮಾರ್ ಮಾಹಿತಿ

ಆದರೂ ಚಿಕ್ಕಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಆಗುವುದನ್ನೂ ಯೋಚಿಸದೆ ಅವೈಜ್ಞಾನಿಕವಾಗಿ ಆನ್‌ಲೈನ್‌ ಪಾಠವನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ಶುರುಮಾಡಿವೆ.

ಇದನ್ನು ಗಮನಿಸಿರುವ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಖಡಕ್ ಎಚ್ಚರಿಕೆಯನ್ನು ಕೊಟ್ಟಿದ್ದಾರೆ. ಮಕ್ಕಳಿಗೆ ಚಿತ್ರ ಹಿಂಸೆ ಮಾಡಿದರೆ ಸರ್ಕಾರ ಸುಮ್ಮನೇ ಕೂಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.

LKG, UKG ಮಕ್ಕಳಿಗೂ ONLINE ಪಾಠ!

LKG, UKG ಮಕ್ಕಳಿಗೂ ONLINE ಪಾಠ!

ಖಾಸಗಿ ಶಿಕ್ಷಣ ಸಂಸ್ಥೆಗಳು ಎಲ್.ಕೆ.ಜಿ., ಯು.ಕೆ.ಜಿ. ಮಕ್ಕಳಿಗೆ ಆನ್‌ಲೈನ್ ಪಾಠ ಮಾಡುತ್ತಿರುವ ವಿಚಾರಕ್ಕೆ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಪುಟ್ಟ ಪುಟ್ಟ ಮಕ್ಕಳ ವಯಸ್ಸಿನ ಬಗ್ಗೆ ಯೋಚನೆ ಮಾಡದೇ ಅವೈಜ್ಞಾನಿಕವಾಗಿ ಆನ್‌ಲೈನ್ ಪಾಠ ಮಾಡ್ತೀನಿ ಅನ್ನೋದು ಎಷ್ಟು ಸರಿ?. ಆಟ ಆಡಿಕೊಂಡು ಬೆಳೆಯೋ ವಯಸ್ಸು. ಮಕ್ಕಳಿಗೆ ಈಗ ಬೇಕಾಗಿರೋದು ಪ್ರೀತಿ. ಅದನ್ನು ಬಿಟ್ಟು ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್ ಮುಂದೆ ಕೂಡಿಸಿ ಆನ್‌ಲೈನ್‌ ಪಾಠ ಕೇಳಿ ಎನ್ನುವುದು ಅಪರಾಧವಾಗುತ್ತದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

ಲ್ಯಾಪ್‌ಟಾಪ್ ಖರೀದಿಸಿ; ಶಿಕ್ಷಣ ಸಂಸ್ಥೆಗಳ ಬಲವಂತ‌

ಲ್ಯಾಪ್‌ಟಾಪ್ ಖರೀದಿಸಿ; ಶಿಕ್ಷಣ ಸಂಸ್ಥೆಗಳ ಬಲವಂತ‌

ಇದಷ್ಟೆ ಅಲ್ಲದೇ ಆನ್‌ಲೈನ್ ಪಾಠಕ್ಕೆ ಲ್ಯಾಪ್‌ಟಾಪ್ ಖರೀದಿಸಿ ಎಂದು ಪೋಷಕರಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ಬಲವಂತ‌ ಮಾಡುತ್ತಿದ್ದಾರೆ. ಈ ರೀತಿ ಮಾಡೋದು ಎಷ್ಟು ಸರಿ? ಮಕ್ಕಳಿಗೆ ಹಿಂಸೆ ಆಗುವ ಯಾವುದೇ ಕೆಲಸ ಆಗಬಾರದು, ಮಾಡಬಾರದು. ಇದೊಂದು ಆಘಾತಕಾರಿ ಸುದ್ದಿಯಾಗಿದ್ದು, ಇದು ಸರಿಯಲ್ಲ. ಈಗಾಗಲೇ ಶಿಕ್ಷಣ ಇಲಾಖೆ ಆಯುಕ್ತರಿಗೆ ಗಮನ ಹರಿಸುವಂತೆ ಸೂಚಿಸಿದ್ದೇನೆ. ಮಕ್ಕಳ ಪಾಲಕರಿಗೆ ಲ್ಯಾಪ್‌ಟಾಪ್‌ ಖರೀದಿಸಲು ಒತ್ತಾಯ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಈ ಎಲ್ಲದರ ಕುರಿತು ಸರ್ಕಾರ ಕಠಿಣಕ್ರಮ ಕೈಗೊಳ್ಳಲಿದೆ ಎಂದು ಸುರೇಶ್ ಕುಮಾರ್ ಎಚ್ಚರಿಸಿದ್ದಾರೆ.

ಶುಲ್ಕ ವಸೂಲಿ ಉದ್ದೇಶ

ಶುಲ್ಕ ವಸೂಲಿ ಉದ್ದೇಶ

ಎಲ್‌ಕೆಜಿ ಮಕ್ಕಳಿಗೆ ಆನ್‌ಲೈನ್‌ ಪಾಟ ಎನ್ನುವುದು ಹಾಸ್ಯಾಸ್ಪದ ಸಂಗತಿ. ಆ ಮಕ್ಕಳು ಆಟ, ಆಟಿಕೆಗಳೊಂದಿಗೆ, ವಸ್ತುಗಳೊಂದಿಗೆ ಅವರು ಬೆಳೆಯಬೇಕು. ಅವರಿಗೆ ನಾವು ಆನ್‌ಲೈನ್‌ ಪಾಠ ಮಾಡುತ್ತೇವೆ ಎನ್ನುವುದು, ಶಿಕ್ಷಣ ಸಂಸ್ಥೆಗಳ ಉದ್ದೇಶ ಬಹುಶಃ ಮತ್ತೆ ಶುಲ್ಕ ವಸೂಲಿ ಮಾಡಬೇಕು ಎಂಬುದು ಇರುತ್ತದೆ. ಆನ್‌ಲೈನ್‌ ಪಾಠ ಎಂಬುದು ಮಕ್ಕಳಿಗೆ ಹಿಂಸೆ. ಅದಕ್ಕೆ ಸಂಪೂರ್ಣ ಕಡಿವಾಣ ಹಾಕಬೇಕು ಎಂಬುದು ನಮ್ಮ ಶಿಕ್ಷಣ ಇಲಾಖೆಯ ಉದ್ದೇಶ. ಅದನ್ನು ಮಾಡುತ್ತೇವೆ ಎಂದಿದ್ದಾರೆ.

ಆನ್‌ಲೈನ್ ಪಾಠದ ಬಗ್ಗೆ ಅಧ್ಯಯನ

ಆನ್‌ಲೈನ್ ಪಾಠದ ಬಗ್ಗೆ ಅಧ್ಯಯನ

ಒಟ್ಟಾರೆ ಆನ್‌ಲೈನ್‌ ಪಾಠಗಳಿಂದ ಮಕ್ಕಳ ಮೇಲೆ ಏನೂ ಪ್ರಭಾವ ಆಗಲಿದೆ ಎಂಬುದರ ಕುರಿತು ಶಿಕ್ಷಣ ಸಂಸ್ಥೆಗಳು, ಅಥವಾ ಬೇರೆ ತಜ್ಞರು ವೈಜ್ಞಾನಿಕವಾಗಿ ಅಧ್ಯಯನ ಮಾಡಿದ್ದಾರಾ? ಆನ್‌ಲೈನ್‌ ಪಾಠಗಳಿಂದ ಮಕ್ಕಳ ಮೇಲೆ ಏನು ಪ್ರಭಾವ ಬೀರುತ್ತದೆ. ಈ ಎಲ್ಲ ವಿಚಾರಗಳ ಕುರಿತು ವೈಜ್ಞಾನಿಕ ತಳಹದಿಯ ಮೇಲೆ ವರದಿ ಕೊಡುವಂತೆ ಶಿಕ್ಷಣ ಇಲಾಖೆ ಆಯುಕ್ತರಿಗೆ ಒಂದು ವಾರದ ಹಿಂದೆಯೆ ಸೂಚಿಸಿದ್ದೇನೆ. ಸೋಮವಾರ (ಮೇ 18) ನಡೆಯುವ ಸಭೆಯಲ್ಲಿ ಈ ಬಗ್ಗೆಯೂ ಸಮಗ್ರವಾಗಿ ಚರ್ಚೆ ಮಾಡುತ್ತೇವೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.

ಜೊತೆಗೆ ನನಗೆ ಇರುವ ಮಾಹಿತಿಯ ಪ್ರಕಾರ ಎಲ್‌ಕೆಜಿ, ಯುಕೆಜಿಗೆ ಆನ್‌ಲೈನ್‌ ಪಾಠ ಎಂಬುದು ಸರಿಯಲ್ಲ. ಇದೊಂದು ಮಕ್ಕಳ ಮೇಲೆ ಪರಿಣಾಮ ಬೀರುವ ಕ್ರೂರ ವ್ಯವಸ್ಥೆ. ಆಯುಕ್ತರು ಕೊಡುವ ವರದಿಯನ್ನು ಆಧರಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಎಚ್ಚರಿಕೆ ಕೊಟ್ಟಿದ್ದಾರೆ.

English summary
Education Minister Suresh Kumar has warned that he would take strict action against institutions that insisting online education for LKG children.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X