ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಒಸಿ ಉಪನ್ಯಾಸಕರ ಕುರಿತು ಸುರೇಶ್ ಕುಮಾರ್ ಮಹತ್ವದ ತೀರ್ಮಾನ!

|
Google Oneindia Kannada News

ಬೆಂಗಳೂರು, ಜ. 23: ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣ ತರಬೇತಿ ನೀಡುವ ಹಿನ್ನೆಲೆಯಲ್ಲಿ ಸ್ಥಾಪನೆ ಮಾಡಲಾಗಿದ್ದ ಜೆಒಸಿ (ಜಾಬ್ ಓರಿಎಂಟೆಡ್ ಕೋರ್ಸ್) ವಿವಿಧ ಕಾರಣಗಳಿಂದ ಬಂದ್ ಮಾಡಲಾಗಿದೆ. ಜೆಒಸಿ ತರಬೇತಿಗೆ ನೇಮಕ ಮಾಡಿಕೊಳ್ಳಲಾಗಿದ್ದ ಉಪನ್ಯಾಸಕರ ಸ್ಥಿತಿ ಅತಂತ್ರವಾಗಿದೆ. ವಿವಿಧ ಇಲಾಖೆಗಳಿಗೆ ಅವರನ್ನು ಡೆಪ್ಯೂಟೇಶನ್ ಮೂಲಕ ವರ್ಗಾವಣೆ ಮಾಡಲಾಗಿದೆ. ಜೆಒಸಿ ಸಿಬ್ಬಂದಿ ಸಮಸ್ಯೆಗಳ ಪರಿಹಾರಕ್ಕೆ ಇದೀಗ ಕಾಲ ಕೂಡಿ ಬಂದಿದೆ.

ವಿವಿಧ ಇಲಾಖೆಗಳಲ್ಲಿ ವಿಲೀನಗೊಂಡ ಹಿಂದಿನ ವೃತ್ತಿ ಶಿಕ್ಷಣ-ಜೆಒಸಿ ಶಿಕ್ಷಕರ ಸಮಸ್ಯೆಗಳಿಗೆ ಒಂದು ಬಾರಿ ಇತಿಶ್ರೀ ಹಾಡಿ ಅವರಿಗೆ ಅನುಕೂಲ ಮಾಡಿಕೊಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಸಕಾಲ ಸಚಿವ ಎಸ್. ಸುರೇಶ್ ಕುಮಾರ್ ಅವರು ತಿಳಿಸಿದ್ದಾರೆ.

ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ಪದಾಧಿಕಾರಿಗಳು ಮತ್ತು ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಸದಸ್ಯರ ಸಭೆಯಲ್ಲಿ ವಿಲೀನಗೊಂಡ ವೃತ್ತಿಶಿಕ್ಷಕರ ಉಳಿದ ಬೇಡಿಕೆಗಳ ಕುರಿತ ಚರ್ಚೆಯ ನಂತರ ಮಾತನಾಡಿದ ಅವರು, ಕೆಲವೇ ಮಂದಿ ಜೆಒಸಿ ಶಿಕ್ಷಕರ ಕೆಲ ಬೇಡಿಕೆಗಳು ಬಹಳ ಕಾಲದಿಂದ ನೆನೆಗುದಿಗೆ ಬಿದ್ದಿದ್ದು, ಸಾಧ್ಯವಾಗಬಹುದಾದ ಬೇಡಿಕೆಗಳನ್ನು ಕಾಲಮಿತಿಯಲ್ಲಿ ಈಡೇರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮಹತ್ವದ ಭರವಸೆ ನೀಡಿದ್ದಾರೆ.

ಸಚಿವ ಸಂಪುಟದಲ್ಲಿ ಚರ್ಚೆ

ಸಚಿವ ಸಂಪುಟದಲ್ಲಿ ಚರ್ಚೆ

ವಿಲೀನಗೊಳಿಸದೇ ಬಾಕಿ ಉಳಿದಿರುವ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ 11 ಮಂದಿ ಭಾಷಾ ಉಪನ್ಯಾಸಕರ ಮತ್ತು 28 ಬೋಧಕೇತರ ಸಿಬ್ಬಂದಿಯ ಸೇವಾ ವಿಲೀನಗೊಳಿಸುವ ಸಂಬಂಧದಲ್ಲಿ ಅನುಮೋದನೆಗಾಗಿ ಕೂಡಲೇ ಕಡತ ಮಂಡಿಸಬೇಕೆಂದು ಸಚಿವರು ಪಿಯು ನಿರ್ದೇಶಕರಿಗೆ ಸೂಚನೆ ನೀಡಿದರು. ಅಗತ್ಯಬಿದ್ದರೆ ಸಂಪುಟದಲ್ಲಿ ಅನುಮೋದನೆ ಸಹ ಪಡೆಯಲಾಗುವುದು ಎಂದು ಸಚಿವರು ತಿಳಿಸಿದರು.

ಬಿಇಡಿ ವಿನಾಯಿತಿ, ಪ್ರೊಬೇಷನರಿ ಕಡ್ಡಾಯ

ಬಿಇಡಿ ವಿನಾಯಿತಿ, ಪ್ರೊಬೇಷನರಿ ಕಡ್ಡಾಯ

ಪದವಿ ಪೂರ್ವ ಶಿಕ್ಷಣ ಇಲಾಖೆಗಳಲ್ಲಿ ವಿಲೀನಗೊಂಡ ನಿವೃತ್ತಿ ಅಂಚಿನಲ್ಲಿರುವ 95 ಜೆಒಸಿ ಉಪನ್ಯಾಸಕರಿಗೆ ಒಂದು ಬಾರಿ ವಿಶೇಷ ಪ್ರಕರಣವಾಗಿ ಬಿಇಡಿ ವಿನಾಯಿತಿ ನೀಡಿ ಪ್ರೊಬೇಷನರಿ ಅವಧಿ ಘೋಷಿಸಲೂ ಸಹ ಅಗತ್ಯ ಕ್ರಮ ಕೈಗೊಳ್ಳಲು ಅಗತ್ಯ ಪ್ರಸ್ತಾವನೆ ಸಲ್ಲಿಸಬೇಕೆಂದು ಸೂಚನೆ ನೀಡಲಾಗಿದೆ ಎಂದರು.


ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿರುವ ಸಿಬ್ಬಂದಿಯ ಖಾಯಂ ಪೂರ್ವ ಸೇವೆ ಪರಿಗಣಿಸಿ ನಿಶ್ಚಿತ ಪಿಂಚಣಿ ಸಂಬಂಧದಲ್ಲಿ ವಿಧೇಯಕ ತಿದ್ದುಪಡಿ ತರಲು ಅಗತ್ಯ ಪ್ರಸ್ತಾವನೆ ಸಲ್ಲಿಸಲು ಸಚಿವ ಎಸ್. ಸುರೇಶ್ ಕುಮಾರ್ ಸೂಚಿಸಿದ್ದಾರೆ.

ವೇತನ ತಾರತಮ್ಯ ನಿವಾರಣೆ

ವೇತನ ತಾರತಮ್ಯ ನಿವಾರಣೆ

ಜೆಒಸಿಯಿಂದ ವಿಲೀನಗೊಂಡು ಇತರೆಡೆ ಸೇವೆ ಸಲ್ಲಿಸುತ್ತಿರುವ ವೃತ್ತಿ ಶಿಕ್ಷಕರು (ಕ್ರಾಫ್ಟ್ ಟೀಚರ್) ವೇತನ ತಾರತಮ್ಯ ನಿವಾರಣೆ ಮತ್ತು ವಿಲೀನ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ವೃತ್ತಿಶಿಕ್ಷಣ ಇಲಾಖೆಯಿಂದ ನೀಡಬೇಕಾಗಿದ್ದ ಬಾಕಿ ವೇತನ ಮಂಜೂರು ಮಾಡುವ ಸಂಬಂಧದಲ್ಲಿ ಅಗತ್ಯ ಪ್ರಸ್ತಾವನೆಯೊಂದಿಗೆ ಅನುಮೋದನೆಗೆ ಕಡತ ಮಂಡಿಸಬೇಕೆಂದು ಸೂಚಿಸಲಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.

Recommended Video

ಇನ್ನೂ ಮುಂದೆ BJP ಗೆ ಕಾದಿದೆ ಸಂಕಷ್ಟ !! | Oneindia Kannada
ಒಂದೇ ಬಾರಿಗೆ ಸಮಸ್ಯೆ ನಿವಾರಣೆ

ಒಂದೇ ಬಾರಿಗೆ ಸಮಸ್ಯೆ ನಿವಾರಣೆ

ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ವೃತ್ತಿ ಶಿಕ್ಷಕರ ಸಮಸ್ಯೆಗಳನ್ನು ಒಂದೇ ಬಾರಿಗೆ ಪರಿಹರಿಸುವ ಸಂಬಂಧದಲ್ಲಿ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚಿಸಿದರು. ಸಭೆಯಲ್ಲಿ ವಿಧಾನಪರಿಷತ್ ಸದಸ್ಯರಾದ ಅರುಣ ಶಹಾಪುರ, ಎಸ್.ವಿ. ಸಂಕನೂರು, ಶಶೀಲ್ ನಮೋಶಿ, ಮರಿತಿಬ್ಬೇಗೌಡ, ಕೆ.ಟಿ. ಶ್ರೀಕಂಠೇಗೌಡ, ಹನುಮಂತ ನಿರಾಣಿ, ಅ. ದೇವೇಗೌಡ, ಡಾ. ವೈ.ಎ. ನಾರಾಯಣಸ್ವಾಮಿ, ಪ್ರೊ. ಪುಟ್ಟಣ್ಣ, ಮಾಜಿ ಎಂಎಲ್‍ಸಿ ಹಾಗೂ ಮಾಧ್ಯಮಿಕ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಗಣೇಶ ಕಾರ್ಣಿಕ್, ಪಿಯು ಇಲಾಖೆ ನಿರ್ದೇಶಕರಿ ಸ್ನೇಹಲ್, ಮಾಧ್ಯಮಿಕ ಶಿಕ್ಷಕರ ಸಂಘದ ಪ್ರದಾನ ಕಾರ್ಯದರ್ಶಿ ಹಾಗೂ ಜೆಒಸಿ ಶಿಕ್ಷಕರ ಸಂಘದ ಅಧ್ಯಕ್ಷ ಎ. ಗಂಗಾಧರ ಆಚಾರ್ ಸೇರಿದಂತೆ ವೃತ್ತಿ ಶಿಕ್ಷಣ ಶಿಕ್ಷಕರ ಸಂಘದ ಪದಾಧಿಕಾರಿಗಳು, ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಜರಿದ್ದರು.

English summary
Primary and Secondary Education Minister S. Suresh Kumar said that the necessary steps will be taken to solve the problems of former JOC Lectures who have merged with the various departments. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X