ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಸಲವೂ ಬೇಸಿಗೆ ರಜೆ ಘೋಷಣೆ? ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಹತ್ವದ ಆದೇಶ!

|
Google Oneindia Kannada News

ಬೆಂಗಳೂರು, ಮಾ. 14: ಕೊರೊನಾ ವೈರಸ್‌ನಿಂದಾಗಿ ಕಳೆದ ವರ್ಷದ ಶೈಕ್ಷಣಿಕ ಚಟುವಟಿಕೆಗಳು ನಿಂತಿದ್ದವು. ಇದೀಗ ಜನವರಿ 1 ರಿಂದ ಹಂತ-ಹಂತವಾಗಿ ತರಗತಿಗಳು ಆರಂಭವಾಗಿವೆ. ಈಗಲೂ ಕೂಡ ಒಂದರಿಂದ ಐದನೇ ತರಗತಿಯ ಮಕ್ಕಳಿಗೆ ಶಾಲೆ ಆರಂಭಿಸಲಾಗಿಲ್ಲ. ಇದೇ ಸಂದರ್ಭದಲ್ಲಿ ಕೊರೊನಾ ಎರಡನೇ ಅಲೆಯ ಎಚ್ಚರಿಕೆಯನ್ನು ಆರೋಗ್ಯ ಸಚಿವ ಡಾ. ಸುಧಾಕರ್ ಅವರು ಕೊಟ್ಟಿದ್ದಾರೆ. ಹೀಗಾಗಿ ಒಂದರಿಂದ ಐದನೇ ತರಗತಿ ಮಕ್ಕಳಿಗೆ ಶಾಲೆ ಆರಂಭಿಸಬಾರದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸೂಚನೆ ನೀಡಿದ್ದಾರೆ.

ಈ ಮಧ್ಯೆ ಬೇಸಿಗೆ ರಜೆಯ ಕುರಿತು ಚರ್ಚೆ ಆರಂಭವಾಗಿವೆ. ಬೆಂಗಳೂರು ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿನ ಶಾಲೆಗಳಲ್ಲಿ ಕಲಿಯುತ್ತಿರುವ ಒಂದರಿಂದ ಆರನೇ ತರಗತಿ ವಿದ್ಯಾರ್ಥಿಗಳಿಗೆ ಬೇಸಿಗೆ ರಜೆ ಘೋಷಣೆ ಜೊತೆಗೆ ಪರೀಕ್ಷೆ ಇಲ್ಲದೇ‌ ಮುಂದಿನ ತರಗತಿಗೆ ಪಾಸ್ ಎಂಬ ಸುದ್ದಿಗಳು ಹರಿದಾಡುತ್ತಿವೆ. ಈ ಎಲ್ಲ ವಿಚಾರಗಳ ಕುರಿತು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಮಹತ್ವದ ಆದೇಶ ಮಾಡಿದ್ದಾರೆ.

ಇಡೀ ವರ್ಷ ಕುಂಠಿತಗೊಂಡಿದ್ದ ಶೈಕ್ಷಣಿಕ ಚಟುವಟಿಕೆಗಳು

ಇಡೀ ವರ್ಷ ಕುಂಠಿತಗೊಂಡಿದ್ದ ಶೈಕ್ಷಣಿಕ ಚಟುವಟಿಕೆಗಳು

ಕಳೆದ ವರ್ಷದ (2020) ಮಾರ್ಚ್ ತಿಂಗಳಿನಲ್ಲಿ ಬಹುತೇಕ ಎಲ್ಲ ಶಾಲಾ ಕಾಲೇಜುಗಳು ಕೊರೊನಾ ವೈರಸ್ ಆತಂಕದ ಹಿನ್ನೆಲೆಯಲ್ಲಿ ಬಾಗಿಲು ಹಾಕಿದ್ದವು. ಆದರೂ ಕೊರೊನಾ ಆತಂಕದ ಮಧ್ಯೆ ಪಿಯುಸಿ ಇಂಗ್ಲೀಷ್ ಪೇಪರ್ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ನಡೆಸಲಾಗಿತ್ತು. ಆ ಸಂದರ್ಭದಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಮೇಲೆ ಬಹಳಷ್ಟು ಒತ್ತಡವಿತ್ತು. ಆದರೆ ಎಸ್‌ಎಸ್‌ಎಲ್‌ಸಿ ಹಾಗೂ ಪಿಯು ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಲಾಯ್ತು. ಅದಾದ ಬಳಿಕ ಎಲ್ಲ ರೀತಿಯ ಶೈಕ್ಷಣಿಕ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತವಾಗಿದ್ದವು.

1ರಿಂದ 5ನೇ ತರಗತಿ ಪ್ರಾರಂಭದ ಬಗ್ಗೆ ಸಚಿವ ಸುರೇಶ್ ಕುಮಾರ್ ಹೇಳಿದ್ದೇನು?1ರಿಂದ 5ನೇ ತರಗತಿ ಪ್ರಾರಂಭದ ಬಗ್ಗೆ ಸಚಿವ ಸುರೇಶ್ ಕುಮಾರ್ ಹೇಳಿದ್ದೇನು?

ಇನ್ನೂ ಆರಂಭವಾಗಿಲ್ಲ ಎಲ್ಲ ತರಗತಿಗಳು!

ಇನ್ನೂ ಆರಂಭವಾಗಿಲ್ಲ ಎಲ್ಲ ತರಗತಿಗಳು!

ಬಳಿಕ ಜನವರಿ 1, 2021ರಿಂದ ಹಂತ-ಹಂತವಾಗಿ ದ್ವಿತೀಯ ಪಿಯುಸಿಯಿಂದ ಆರನೇ ಇಯತ್ತೇ ವರೆಗೆ ತಗರಗತಿಗಳನ್ನು ಆರಂಭಿಸಲಾಗಿದೆ. ಆದರೆ ಈಗಲೂ ಕೂಡ ಕೊರೊನಾವೈರಸ್ ಎರಡನೇ ಅಲೆ ಹಿನ್ನೆಲೆಯಲ್ಲಿ ಎಲ್‌ಕೆಜಿ, ಯುಕೆಜಿ ಸೇರಿದಂತೆ ಐದನೇ ತರಗತಿ ವರೆಗೆ ತರಗತಿಗಳು ಆರಂಭವಾಗಿಲ್ಲ. ಇದೇ ಸಂದರ್ಭದಲ್ಲಿ ಬೇಸಿಗೆ ರಜಹೆ ಘೋಷಣೆ ಮಾಡಲಾಗಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಬೇಸಿಗೆ ರಜೆ ಹಾಗೂ ಪರೀಕ್ಷೆಯಿಲ್ಲದೆ ತೇರ್ಗಡೆ ವಿಚಾರಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಸ್ಪಷ್ಟನೆ ಕೊಟ್ಟಿದ್ದಾರೆ.

ಈ ಸಲವೂ ಬೇಸಿಗೆ ರಜೆ ಘೋಷಣೆ?

ಈ ಸಲವೂ ಬೇಸಿಗೆ ರಜೆ ಘೋಷಣೆ?

ಬೇಸಿಗೆ ರಜೆ ಘೋಷಣೆ ವಿಚಾರ ಸತ್ಯಕ್ಕೆ ದೂರವಾದ ವಿಚಾರವ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಬೆಂಗಳೂರು ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿನ ಶಾಲೆಗಳಲ್ಲಿ ಕಲಿಯುತ್ತಿರುವ ಒಂದರಿಂದ ಆರನೇ ತರಗತಿ ವಿದ್ಯಾರ್ಥಿಗಳಿಗೆ ಇಂದಿನಿಂದ‌ ಬೇಸಿಗೆ ರಜೆ ಘೋಷಣೆ, ಪರೀಕ್ಷೆ ಇಲ್ಲದೇ‌ ಮುಂದಿನ ತರಗತಿಗೆ ಪಾಸ್ ಎಂಬ ಸುದ್ದಿ ದೃಶ್ಯ‌ ಮಾಧ್ಯಮದ ಚಾನೆಲ್ ಒಂದರಲ್ಲಿ ಬಿತ್ತರವಾಗಿದ್ದು ಇದು ಸತ್ಯಕ್ಕೆ‌ ದೂರವಾದ ಸಂಗತಿ‌ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳಿಗೆ ಸಿಹಿ ಸುದ್ದಿ ಕೊಟ್ಟ ಶಿಕ್ಷಣ ಸಚಿವ ಸುರೇಶ್ ಕುಮಾರ್!ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳಿಗೆ ಸಿಹಿ ಸುದ್ದಿ ಕೊಟ್ಟ ಶಿಕ್ಷಣ ಸಚಿವ ಸುರೇಶ್ ಕುಮಾರ್!

Recommended Video

ಸದ್ಯಕ್ಕೆ ಶಾಲೆ ಓಪನ್ ಮಾಡಲ್ಲಾ!! | Oneindia Kannada
ಬೇಸಿಗೆ ರಜೆಯನ್ನು ಘೋಷಿಸುವ ಪ್ರಸ್ತಾಪ

ಬೇಸಿಗೆ ರಜೆಯನ್ನು ಘೋಷಿಸುವ ಪ್ರಸ್ತಾಪ

ಶಿಕ್ಷಣ ಇಲಾಖೆಯು ವಿದ್ಯಾರ್ಥಿಗಳ‌ ಪರ್ಯಾಯ ಕಲಿಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಬಗ್ಗೆ ಮುಕ್ತ ನಿಲುವನ್ನು ಹೊಂದಿದೆ. ಖಾಸಗಿ ಶಾಲೆಗಳು ಆನ್‌ಲೈನ್ ಮೂಲಕ ಕಲಿಕೆಗೆ ಮುಂದಾಗಿವೆ. ಒಂದರಿಂದ ಐದನೇ ತರಗತಿಯ ಸರ್ಕಾರಿ ಶಾಲಾ ಮಕ್ಕಳಿಗೆ ಆಕಾಶವಾಣಿಯಲ್ಲಿ 'ಕಲಿಯೋಣ ನಲಿಯೋಣ' ಕಾರ್ಯಕ್ರಮ ಬಿತ್ತರ ಮಾಡಲಾಗುತ್ತಿದೆ. ದೂರದರ್ಶನದಲ್ಲಿ ಸಂವೇದಾ ಕಾರ್ಯಕ್ರಮ‌ ಪ್ರಸಾರಗೊಂಡಿದೆ.

ಶಿಕ್ಷಕರು ವಿದ್ಯಾರ್ಥಿಗಳ‌ ಕಲಿಕೆಯ ಪ್ರಗತಿಯನ್ನು ತಮ್ಮದೇ ಸ್ಥಳೀಯ‌ ಸಂಪನ್ಮೂಲಗಳ ನೆರವಿನಲ್ಲಿ‌ ಪರಾಮರ್ಶೆ ಮಾಡುತ್ತಿದ್ದಾರೆ. ಇದು ರಾಜ್ಯಾದ್ಯಂತ ಜಾರಿಯಲ್ಲಿದ್ದು, ಈ ಹಂತದಲ್ಲಿ ಬೇಸಿಗೆ ರಜೆಯನ್ನು ಘೋಷಿಸುವ ಪ್ರಸ್ತಾಪ ಇಲಾಖೆಯ ಮುಂದಿಲ್ಲ. ಇಂತಹ ಸುಳ್ಳು ಸುದ್ದಿಗಳನ್ನು ಹರಡುವ ಮೂಲಕ ಜನರ ದಾರಿ ತಪ್ಪಿಸುವ ಕೆಲಸವನ್ನು ಯಾರೂ ಮಾಡಬಾರದೆಂದು ಸುರೇಶ್ ಕುಮಾರ್ ಅವರು ಆಗ್ರಹಿಸಿದ್ದಾರೆ.

English summary
Education Minister Suresh Kumar has made it clear that summer vacation for schools and Colleges will not be declared this year. Read more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X