ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದ್ಯಾರ್ಥಿಗಳ ಆನ್‌ಲೈನ್ ಕಲಿಕಾ ಮಟ್ಟ ಅರಿಯುವ 'ವಿದ್ಯಾವಿನ್' ಯೋಜನೆಗೆ ಚಾಲನೆ

|
Google Oneindia Kannada News

ಬೆಂಗಳೂರು, ಡಿಸೆಂಬರ್ 02: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಆನ್‌ಲೈನ್ ಕಲಿಕಾಮಟ್ಟವನ್ನು ಅರಿಯುವ 'ವಿದ್ಯಾವಿನ್' ಯೋಜನೆಗೆ ಇಂದು ಚಾಲನೆ ದೊರೆಯಿತು.

ರಾಜ್ಯದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ವಿದ್ಯಾವಿನ್ ಟೋಲ್ ಫ್ರೀ ನಂಬರ್ 1800 5724 920ವನ್ನು ಸರ್ವಶಿಕ್ಷಣ ಅಭಿಯಾನ ಕಚೇರಿಯಲ್ಲಿ ಇಂದು ಲೋಕಾರ್ಪಣೆಗೊಳಿಸಲಾಯಿತು.

ಅಭಿಯಾನಕ್ಕೆ ಚಾಲನೆ ನೀಡಿ ಬಳಿಕ ಮಾತನಾಡಿದ ಸಚಿವ ಸುರೇಶ್ ಕುಮಾರ್ , ಕೊವಿಡ್ 19 ರೋಗ ಎಲ್ಲಾ ಕ್ಷೇತ್ರಗಳ ಮೇಲೂ ಕರಾಳ ಛಾಯೆ ಬೀರಿದೆ. ಶಿಕ್ಷಣ ಕ್ಷೇತ್ರ, ಶಾಲೆಗಳ ಮೇಲೆ ಇದರ ಪ್ರಭಾವ ಸ್ವಲ್ಪ ಹೆಚ್ಚಾಗಿಯೇ ಆಗಿದೆ.

Suresh Kumar Launches VidyaWin Project Which Enables To Know Students Online Learning Ability

ಮಕ್ಕಳ ಪರಿಸ್ಥಿತಿಯನ್ನು ನೋಡಿದರೆ ಬೇಸರವಾಗುತ್ತದೆ, ಶಾಲೆಗಳು ಪ್ರಾರಂಭ ಆಗದೇ ಇರುವುದರಿಂದ ಬಾಲಕಾರ್ಮಿಕ, ಬಾಲ್ಯವಿವಾಹ ಪದ್ಧತಿಗಳು ನಡೆಯುತ್ತಿವೆ ಎಂಬ ಮಾತುಗಳು ಕೂಡ ಕೇಳಿಬರುತ್ತಿದೆ ಎಂದರು.

ಒಂದು ರೀತಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ವಿದ್ಯಾವಿನ್ ಟೋಲ್ ಫ್ರೀ 1800 5724 920 ನಂಬರ್ ಮೂಲಕ ಮಕ್ಕಳಿಗೆ ಕಲಿಯಬೇಕು ಎನ್ನುವ ಇಚ್ಛೆ ಮೂಡಿಸಲು ಹೊರಟಿರುವ ವಿದ್ಯಾವಿನ್ ಯೋಜನೆ ಶ್ಲಾಘನೀಯ ಎಂದು ಹೇಳಿದರು.

ವಿದ್ಯಾವಿನ್ ಶಿಕ್ಷಣ ಕಾರ್ಯಕ್ರಮದ ಸಂಸ್ಥಾಪಕ ಕೆವಿ ಪ್ರಕಾಶ್ ಮಾತನಾಡಿ, ವಿದ್ಯಾವಿನ್ ಶಿಕ್ಷಣ ಕಾರ್ಯಕ್ರಮ ಗ್ರಾಮೀಣ ಹಾಗೂ ನಗರ ವಿದ್ಯಾರ್ಥಿಗಳ ನಡುವಿನ ಅಂತರವನ್ನು ಸರಿದೂಗಿಸುವ ಯೋಜನೆ, ಗ್ರಾಮೀಣ ಭಾಗ ಸೇರಿದಂತೆ ರಾಜ್ಯದಲ್ಲಿ ಆನ್‌ಲೈನ್ ಶಿಕ್ಷಣ ವಿದ್ಯಾರ್ಥಿಗಳಿಗೆ ತಲುಪಿದ ಮಟ್ಟವನ್ನು ತಿಳಿಯುವ ಮೊದಲ ಪ್ರಯತ್ನ ಇದಾಗಿದೆ ಎಂದು ಹೇಳಿದರು.

ಸ್ಫರ್ಧಾ ವಿಧಾನ ಹೀಗಿರಲಿದೆ: ಈ ಟೋಲ್‌ ಫ್ರೀ ನಂಬರ್ 1800 5724 920ಗೆ ರಾಜ್ಯ ಪಠ್ಯಕ್ರಮದ ಕನ್ನಡ ಮತ್ತು ಆಂಗ್ಲ ಮಾಧ್ಯಮದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಮಿಸ್ ಕಾಲ್ ಕೊಟ್ಟರೆ ಸಾಕು ಅವರ ಮೊಬೈಲ್‌ಗೆ 3 ವಿಷಯ( ಗಣಿತ, ವಿಜ್ಞಾನ, ಸಮಾಜವಿಜ್ಞಾನ)ಗಳ ತಲಾ 12 ಬಹು ಆಯ್ಕೆಯ ಪ್ರಶ್ನೆಗಳು ರವಾನೆಯಾಗುತ್ತದೆ.

ಜನವರಿ 15ರೊಳಗೆ ಇವುಗಳಿಗೆ ಉತ್ತರ ಕಳುಹಿಸಬೇಕು. ಆಯಕೆಯಾದ ಪ್ರತಿ ಜಿಲ್ಲೆಯ 3 ಮಂದಿಗೆ ಟ್ಯಾಬ್ ಸಹಿತ ಸೂಕ್ತ ಬಹುಮಾನ ಸಿಗಲಿದೆ.

English summary
Primary and Secondary Education Minister S Suresh Kumar Launches VidyaWin Project Which Enables To Know SSLC Students Online Learning Ability.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X