• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಈ ಸ್ಟುಡಿಯೋದಿಂದ 41 ಲಕ್ಷ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಪ್ರಯೋಜನ

|

ಬೆಂಗಳೂರು, ಮಾರ್ಚ್ 2: 'ಕೋವಿಡ್-19' ಪಿಡುಗಿನ ಸಂದರ್ಭದಲ್ಲಿ ಮತ್ತು ನಂತರದ ದಿನಗಳಲ್ಲಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಅಗತ್ಯವಾಗಿದ್ದ ಕಲಿಕಾ ಅವಕಾಶಗಳನ್ನು ಕಲ್ಪಿಸಲು ನೆರವಾಗುವ ರೆಕಾರ್ಡಿಂಗ್ ಸ್ಟುಡಿಯೊ ಸಲಕರಣೆಗಳು ಮತ್ತು ಪೂರಕ ಪರಿಕರಗಳನ್ನು ಒದಗಿಸಲು ಎಂಬಸಿ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ (ಇಎಸ್‍ಪಿಎಲ್), ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್‍ಇಆರ್‍ಟಿ) ಜತೆ ಪಾಲುದಾರಿಕೆ ಹೊಂದಿದೆ.

'ಕೋವಿಡ್-19'ರ ಸಕಾರಾತ್ಮಕ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಶಾಲೆಗಳು ಸಂಪೂರ್ಣವಾಗಿ ಕಾರ್ಯಾರಂಭ ಮಾಡದ ಹಿನ್ನೆಲೆಯಲ್ಲಿ ಸದ್ಯಕ್ಕೆ ಜಾರಿಯಲ್ಲಿ ಇರುವ ಆನ್‍ಲೈನ್ ಬೋಧನಾ ಕಾರ್ಯಕ್ರಮಗಳು ಮತ್ತು ಶಿಕ್ಷಕರ ಬೋಧನಾ ಸಾಮಥ್ರ್ಯ ಹೆಚ್ಚಿಸಲು ಶಿಕ್ಷಣ ಇಲಾಖೆಯು ಹಮ್ಮಿಕೊಂಡಿರುವ ಕಾರ್ಯಕ್ರಮಗಳಿಗೆ ಶಾಶ್ವತ ಪರಿಹಾರದ ಪೂರಕ ನೆರವು ಕಲ್ಪಿಸಲು 'ಇಎಸ್‍ಪಿಎಲ್' ಗುರಿ ಹಾಕಿಕೊಂಡಿದೆ.

ರಾಜ್ಯ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ, ಕಾರ್ಮಿಕ ಮತ್ತು ಸಕಾಲ ಸಚಿವ ಎಸ್. ಸುರೇಶ್ ಕುಮಾರ್ ಅವರ ಉಪಸ್ಥಿತಿಯಲ್ಲಿ ಈ ರಿಕಾರ್ಡಿಂಗ್ ಸ್ಟುಡಿಯೊ ಉದ್ಘಾಟಿಸಲಾಯಿತು.

ಸರ್ಕಾರ ಆನ್‍ಲೈನ್ ಚಾನೆಲ್‍ಗಳನ್ನು ಆರಂಭಿಸಿದೆ

ಸರ್ಕಾರ ಆನ್‍ಲೈನ್ ಚಾನೆಲ್‍ಗಳನ್ನು ಆರಂಭಿಸಿದೆ

ತಮ್ಮ ಶಿಕ್ಷಣ, ಸುರಕ್ಷತೆ, ಆರೋಗ್ಯ ಮತ್ತು ಪೌಷ್ಟಿಕಾಂಶಕ್ಕೆ ಸರ್ಕಾರಿ ಶಾಲೆಗಳನ್ನು ಅವಲಂಬಿಸಿರುವ ವಿದ್ಯಾರ್ಥಿಗಳ ಪ್ರಯೋಜನಕ್ಕಾಗಿ ಮತ್ತು ಮಕ್ಕಳು ತಮ್ಮ ಶಾಲಾ ಕಾರ್ಯಕ್ರಮಗಳಿಂದ ವಂಚಿತರಾಗಬಾರದು ಎನ್ನುವ ಉದ್ದೇಶಕ್ಕೆ ರಾಜ್ಯ ಶಿಕ್ಷಣ ಇಲಾಖೆಯು ‘ಮಕ್ಕಳ ವಾಣಿ'ಯೂ ಸೇರಿದಂತೆ ಹಲವಾರು ಆನ್‍ಲೈನ್ ಚಾನೆಲ್‍ಗಳನ್ನು ಆರಂಭಿಸಿದೆ. ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳ 41 ಲಕ್ಷ ವಿದ್ಯಾರ್ಥಿಗಳಿಗೆ ಆನ್‍ಲೈನ್ ಶಿಕ್ಷಣದ ಮೂಲಸೌಕರ್ಯ ಕಲ್ಪಿಸಲು ‘ಇಎಸ್‍ಪಿಎಲ್'ನ ಈ ಕೊಡುಗೆಗೆ ತುಂಬ ಮಹತ್ವ ಇದೆ.

‘ಇಎಸ್‍ಪಿಎಲ್' ರೂ 16.89 ಲಕ್ಷ ವೆಚ್ಚದಲ್ಲಿ ಡಿಜಿಟಲ್ ಕ್ಯಾಮೆರಾ, ವಿಡಿಯೊ ಸ್ಟ್ರೀಮಿಂಗ್ ಸ್ಟುಡಿಯೊ, ಸಿಜಿ ಕ್ರೇಟರ್, ಎಲ್‍ಇಡಿ ಎಚ್‍ಡಿ ಟಿವಿ, ಟ್ರೈಪಾಡ್ ಕ್ಯಾಮೆರಾ, ದೀಪಗಳು, ಗ್ರೀನ್ ಬ್ಯಾಕ್‍ಡ್ರಾಪ್, ಆಡಿಯೊ ಮಾನಿಟರ್, ಆಡಿಯೊ ಡಿಸ್ಟ್ರಿಬ್ಯೂಷನ್ ಆ್ಯಂಪ್ಲಿಫ್ಲೈಯರ್ ಮತ್ತು ಆಡಿಯೊ - ವಿಡಿಯೊ ಕೇಬಲ್‍ಗಳನ್ನು ಒದಗಿಸಿದೆ.

ಎಸ್. ಸುರೇಶ್ ಕುಮಾರ್ ಮಾತನಾಡಿ

ಎಸ್. ಸುರೇಶ್ ಕುಮಾರ್ ಮಾತನಾಡಿ

ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು, ‘ನಮ್ಮ ಶಾಲಾ ಮಕ್ಕಳ ಸುರಕ್ಷತೆ ಮತ್ತು ಆರೋಗ್ಯ ರಕ್ಷಣೆಗೆ ಗರಿಷ್ಠ ಆದ್ಯತೆ ನೀಡಲಾಗುತ್ತಿದೆ. ಈ ಸಂಕಷ್ಟದ ಮತ್ತು ಬಿಕ್ಕಟ್ಟಿನ ದಿನಗಳಲ್ಲಿ ನಮ್ಮ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅಡಚಣೆ ಎದುರಾಗಬಾರದೆಂದು ಆನ್‍ಲೈನ್ ಶಿಕ್ಷಣಕ್ಕೆ ತುಂಬ ಅಗತ್ಯವಾಗಿದ್ದ ರಿಕಾರ್ಡಿಂಗ್ ಸಲಕರಣೆಗಳನ್ನು ಪೂರೈಸಿ ಅಗತ್ಯ ಬೆಂಬಲ ನೀಡಿರುವುದಕ್ಕೆ ನಾವು ಎಂಬಸಿ ಗ್ರೂಪ್‍ಗೆ ತುಂಬ ಕೃತಜ್ಞರಾಗಿದ್ದೇವೆ. ಇದಕ್ಕೆ ಪೂರಕವಾಗಿ ಈ ಸಲಕರಣೆಗಳನ್ನು ನಾವು ಶಿಕ್ಷಕರ ತರಬೇತಿ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳಿಗೂ ಬಳಸಿಕೊಳ್ಳಲಿದ್ದೇವೆ. ವರ್ಷಗಳಿಂದ ವರ್ಷಕ್ಕೆ ಗಟ್ಟಿಗೊಳ್ಳುತ್ತಲೇ ಸಾಗಿರುವ ಶಿಕ್ಷಣ ಇಲಾಖೆ ಜತೆಗಿನ ಎಂಬಸಿ ಗ್ರೂಪ್‍ನ ಪಾಲುದಾರಿಕೆಯನ್ನು ನಾವು ಮುಕ್ತಕಂಠದಿಂದ ಶ್ಲಾಘಿಸುತ್ತೇವೆ' ಎಂದು ಹೇಳಿದ್ದಾರೆ.

‘ಡಿಎಸ್‍ಇಆರ್‍ಟಿ’ ನಿರ್ದೇಶಕ ಎಂ. ಆರ್. ಮಾರುತಿ

‘ಡಿಎಸ್‍ಇಆರ್‍ಟಿ’ ನಿರ್ದೇಶಕ ಎಂ. ಆರ್. ಮಾರುತಿ

ಈ ಕಾರ್ಯಕ್ರಮದಲ್ಲಿ ಮಾತನಾಡಿದ ‘ಡಿಎಸ್‍ಇಆರ್‍ಟಿ' ನಿರ್ದೇಶಕ ಎಂ. ಆರ್. ಮಾರುತಿ ಅವರು, ‘ಈ ಸವಾಲಿನ ಸಂದರ್ಭಗಳಲ್ಲಿ ಯಾವುದೇ ಮಗು ಶಿಕ್ಷಣದಲ್ಲಿ ಹಿಂದೆ ಬೀಳಬಾರದು ಎನ್ನುವುದನ್ನು ಖಾತರಿಪಡಿಸುವ ಎಂಬಸಿ ಜತೆಗಿನ ಈ ಪಾಲುದಾರಿಕೆ ಬಗ್ಗೆ ನಾವು ತುಂಬ ಕೃತಜ್ಞರಾಗಿದ್ದೇವೆ. ಕೋವಿಡ್-19ರ ಕಾರಣಕ್ಕೆ ಶಾಲಾ ವಿದ್ಯಾರ್ಥಿಗಳು ಕಲಿಕೆಯಿಂದ ವಂಚಿತರಾಗುವುದನ್ನು ತಪ್ಪಿಸಲು ನೆರವಾಗುವ ಮಹತ್ವದ ಶೈಕ್ಷಣಿಕ ಮಾಹಿತಿಯನ್ನು ದಾಖಲಿಸಿಕೊಂಡು ಆನ್‍ಲೈನ್ ಕಲಿಕೆಗೆ ಬಳಸಲು ನಾವು ಈ ಸ್ಟುಡಿಯೊವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತೇವೆ. ಶಾಲೆಗಳು ಭಾಗಶಃ ಮುಚ್ಚಿರುವಾಗ, ಸರ್ಕಾರದ ಜತೆ ಕೈಜೋಡಿಸುವ ಕಾರ್ಪೊರೇಟ್‍ಗಳ ಇಂತಹ ಕಾರ್ಯಕ್ರಮಗಳು ನಿಜಕ್ಕೂ ಅರ್ಥಪೂರ್ಣವಾಗಿರುತ್ತವೆ. ಎಂಬಸಿ ಗ್ರೂಪ್‍ನ ಈ ನೆರವು ಮತ್ತು ಪಾಲುದಾರಿಕೆಯು ಇತರ ಕಾರ್ಪೊರೇಟ್‍ಗಳಿಗೆ ಪ್ರೇರಣೆಯಾಗಲಿಯೆಂದು ನಾವು ಆಶಿಸುತ್ತೇವೆ' ಎಂದು ಹೇಳಿದ್ದಾರೆ.

  ರಾಹುಲ್ ಕಾಲಿಟ್ಟ ಕಡೆ ಸೋಲು ಖಂಡಿತ !! | Shobha Karandlaje | Rahul Gandhi | Oneindia Kannada
  ಸರ್ಕಾರಿ ಶಾಲೆಗಳನ್ನು ದತ್ತು ಪಡೆದಿರುವ ಎಂಬಸಿ ಗ್ರೂಪ್

  ಸರ್ಕಾರಿ ಶಾಲೆಗಳನ್ನು ದತ್ತು ಪಡೆದಿರುವ ಎಂಬಸಿ ಗ್ರೂಪ್

  ‘ಕೋವಿಡ್-19' ಪಿಡುಗಿನ ಸಂದರ್ಭದಲ್ಲಿ ಎಂಬಸಿ ಗ್ರೂಪ್ ದತ್ತು ಪಡೆದುಕೊಂಡಿರುವ ಸರ್ಕಾರಿ ಶಾಲೆಗಳಲ್ಲಿ ಸರಣಿಯೋಪಾದಿಯಲ್ಲಿ ಈ ಕೆಳಕಂಡ ಪರಿಹಾರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು.

  • ಭಾರತದಾದ್ಯಂತ ಸರ್ಕಾರಿ ಶಾಲೆಗಳ 30,000 ವಿದ್ಯಾರ್ಥಿಗಳಿಗೆ ಎಂಬಸಿ ಗ್ರೂಪ್ ಮತ್ತು ಅದರ ಪಾಲುದಾರರು ಮರು ಬಳಕೆಯ ಮುಖಗವಸು ಮತ್ತು ಆರೋಗ್ಯ ಉತ್ಪನ್ನಗಳನ್ನು ಒಳಗೊಂಡಿದ್ದ ಆರೋಗ್ಯ ಕಿಟ್‍ಗಳ ವಿತರಣೆಯನ್ನು ಪೂರ್ಣಗೊಳಿಸಿತ್ತು.

  • ‘ ಕೋವಿಡ್-19' ಹರಡುವಿಕೆ ತಡೆಗಟ್ಟಲು ನೆರವಾಗುವ ಸಲಹೆಗಳು ಮತ್ತು ಆರೋಗ್ಯಕರ ಪ್ರವೃತ್ತಿಗಳನ್ನು ರೂಢಿಸಿಕೊಳ್ಳಲು ವ್ಯಾಪಕ ಬಗೆಯಲ್ಲಿ ತಿಳಿವಳಿಕೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

  • ಪಿಡುಗಿನ ಸಂದರ್ಭದ ಉದ್ದಕ್ಕೂ, ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳಿಗೆ 3.77 ಲಕ್ಷ ಊಟದಷ್ಟು ಪಡಿತರ ಧಾನ್ಯಗಳನ್ನು ವಿತರಿಸಲಾಗಿತ್ತು.

  • 2020ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಪಾಳ್ಗೊಂಡಿದ್ದ 9.2 ಲಕ್ಷ ವಿದ್ಯಾರ್ಥಿಗಳು, ಪರೀಕ್ಷಾ ಮೇಲ್ವಿಚಾರಕರು ಮತ್ತು ಮೌಲ್ಯಮಾಪಕರಿಗೆ ಸ್ವಚ್ಛತಾ ದ್ರಾವಣ (ಸ್ಯಾನಿಟೈಸರ್) ಖರೀದಿಸಲು ಶಿಕ್ಷಣ ಇಲಾಖೆಗೂ ಎಂಬಸಿ ಗ್ರೂಪ್ ಬೆಂಬಲ ನೀಡಿತ್ತು.

  • ಕರ್ನಾಟಕದಾದ್ಯಂತ 4,724 ಮಾಧ್ಯಮಿಕ ಶಾಲೆಗಳಿಗೆ ಎಂಬಸಿ ಗ್ರೂಪ್, 38,820 ಮುಖ ಕವಚಗಳನ್ನು ಒದಗಿಸಿತ್ತು. ಸ್ವಿಸ್ ರೆ ಗ್ಲೋಬಲ್ ಜತೆಗಿನ ಎಂಬಸಿ ಸಹಭಾಗಿತ್ವದ ಕಾರಣಕ್ಕೆ 2,174 ಶಾಲೆಗಳು ಟೆಂಪರೇಚರ್ ಮಾನಿಟರ್‍ಗಳನ್ನು ಪಡೆದುಕೊಂಡಿದ್ದವು.

  • ವಿದ್ಯಾರ್ಥಿಗಳು ತಮ್ಮ ಶಾಲೆಗಳಿಗೆ ಮರಳುವ ಮುಂಚೆ ಎಂಬಸಿ ದತ್ತು ಪಡೆದುಕೊಂಡಿದ್ದ ಸರ್ಕಾರಿ ಶಾಲೆಗಳಲ್ಲಿ ಡಿಸೆಂಬರ್ ತಿಂಗಳು ಪೂರ್ತಿ ಸ್ವಚ್ಛತೆ ಮತ್ತು ನೈರ್ಮಲ್ಯ ಕಾರ್ಯಕ್ರಮ ಹಮ್ಮಿಕೊಂಡಿತ್ತು.

  English summary
  Minister for Primary and Secondary Education, Labour & Sakala Suresh Kumar today (Mar 2) inaugurates DSERT Recording Studio Donated by Embassy.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X