ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಸದ ಸುರೇಶ್ ಅಂಗಡಿ ನಿಧನಕ್ಕೆ ಕಂಬನಿ ಮಿಡಿದ ಗಣ್ಯರು

|
Google Oneindia Kannada News

ಬೆಂಗಳೂರು. ಸೆ. 23: ಕೇಂದ್ರ ಸಚಿವರಾದ ಶ್ರೀ ಸುರೇಶ್ ಅಂಗಡಿ‌ ಅವರ ನಿಧನವಾರ್ತೆಯು ರಾಜಕೀಯ ವಲಯದಲ್ಲಿ ತೀವ್ರ ಶಾಂಕಿಂಗ್ ಸುದ್ದಿಯಾಗಿದ್ದು, ಅನೇಕ ರಾಜಕಾರಣಿಗಳು, ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಉಪಮುಖ್ಯಮಂತ್ರಿಗಳಾದ ಶ್ರೀ ಗೋವಿಂದ ಎಂ ಕಾರಜೋಳ ಅವರು ಸುರೇಶ್ ಅಂಗಡಿ ಸಾವಿನ ವಾರ್ತೆ ಕೇಳಿ ತೀವ್ರ ಆಘಾತ ಉಂಟಾಗಿದೆ ಎಂದಿದ್ದಾರೆ. ಈ ಸುದ್ದಿ ಅತೀವ ದುಃಖ ತಂದಿದ್ದು, ನಿಧನಕ್ಕೆ ತೀವ್ರ ನೋವುಂಟು ಮಾಡಿದೆ ಎಂದಿದ್ದಾರೆ.

ಕೇಂದ್ರ ರೈಲ್ವೆ ಖಾತೆ ಸಚಿವ ಸುರೇಶ್ ಅಂಗಡಿ ವಿಧಿವಶಕೇಂದ್ರ ರೈಲ್ವೆ ಖಾತೆ ಸಚಿವ ಸುರೇಶ್ ಅಂಗಡಿ ವಿಧಿವಶ

''ಕೇವಲ‌ ಐದು ದಿನಗಳ ಹಿಂದೆ ಇನ್ನೋರ್ವ ಸಹಕಾರಿ ಹಾಗೂ ರಾಜ್ಯಸಭಾ ಸದಸ್ಯರಾಗಿದ್ದ ಅಶೋಕ್ ಗಸ್ತಿಯವರನ್ನು ಕಳೆದುಕೊಂಡೆವು.‌ ಇದೀಗ ಮತ್ತೊಂದು ಆಘಾತವುಂಟಾಗಿದೆ. ಶ್ರೀ ಸುರೇಶ್ ಅಂಗಡಿಯವರು ಸರಳ ಸಜ್ಜನಿಕೆಯ ವ್ಯಕ್ತಿತ್ವಹೊಂದಿದ್ದರು. ಸಹೃದಯಿಯಾಗಿದ್ದರು. 4 ಬಾರಿ ಸಂಸದರಾಗಿ, ಕೇಂದ್ರ ರೈಲ್ವೆ ರಾಜ್ಯಖಾತೆ ಸಚಿವರು ಅತ್ಯುತ್ತಮ ವಾಗಿ ಕಾರ್ಯನಿರ್ವಹಿಸಿದ್ದಾರೆ. ಅಭಿವೃದ್ಧಿ ಪರವಾಗಿದ್ದರು. ಬಿಜೆಪಿ ಪಕ್ಷದ ಏಳಿಗೆಗಾಗಿ ಅಪಾರವಾಗಿ ಶ್ರಮಿಸಿದ್ದಾರೆ. ಅವರ ಅಗಲಿಕೆಯಿಂದ ರಾಜ್ಯಕ್ಕೆ ಹಾಗೂ ರಾಷ್ಟ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಅವರ ಕುಟುಂಬ ಪರಿವಾರದವರಿಗೆ ಹಾಗೂ ಅನುಯಾಯಿಗಳಿಗೆ ದುಃಖವನ್ನು ಭರಿಸುವ ಶಕ್ತಿ ನೀಡಿ, ಮೃತರ ಆತ್ಮಕ್ಕೆ ಚಿರ ಶಾಂತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ'' ಡಿಸಿಎಂ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಸುರೇಶ್ ಅಂಗಡಿ ಸಾವು ಆಘಾತವುಂಟುಮಾಡಿದೆ: ನಳೀನ್‌ಕುಮಾರ್ ಕಟೀಲ್

ಸುರೇಶ್ ಅಂಗಡಿ ಸಾವು ಆಘಾತವುಂಟುಮಾಡಿದೆ: ನಳೀನ್‌ಕುಮಾರ್ ಕಟೀಲ್

''ಕೇಂದ್ರ ಸಚಿವರಾಗಿದ್ದು, ರಾಜ್ಯದಲ್ಲಿ ಪಕ್ಷವನ್ನು ಬಲವರ್ಧಿಸಲು ಪ್ರಮುಖ ಶಕ್ತಿಯಾಗಿದ್ದ ಹಾಗೂ ನನಗೆ ಮಾರ್ಗದರ್ಶಕರಾಗಿದ್ದ ಸುರೇಶ್ ಅಂಗಡಿಯವರು ದೈವಾಧೀನರಾದ ಸುದ್ದಿ ಕೇಳಿ ತೀವ್ರ ಆಘಾತವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ'' ಎಂದು ಸಂಸದ ನಳೀನ್ ಕುಮಾರ್ ಕಟೀಲ್ ಟ್ವೀಟ್ ಮಾಡಿದ್ದಾರೆ.

ತೀವ್ರ ಸಂತಾಪ ವ್ಯಕ್ತಪಡಿಸಿದ ಸಂಸದ ಪ್ರಹ್ಲಾದ್ ಜೋಶಿ

ತೀವ್ರ ಸಂತಾಪ ವ್ಯಕ್ತಪಡಿಸಿದ ಸಂಸದ ಪ್ರಹ್ಲಾದ್ ಜೋಶಿ

''ಆತ್ಮೀಯರು, ಕೇಂದ್ರದ ರೈಲ್ವೆ ರಾಜ್ಯ ಸಚಿವರಾದ ಶ್ರೀ ಸುರೇಶ್ ಅಂಗಡಿ ಅವರ ನಿಧನ ವಾರ್ತೆ ತೀವ್ರ ಆಘಾತವನ್ನುಂಟು ಮಾಡಿದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸುತ್ತೇನೆ'' ಎಂದು ಪ್ರಹ್ಲಾದ್ ಜೋಶಿ ದುಃಖ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸಚಿವ ಸುರೇಶ್ ಅಂಗಡಿ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ ಬಿಎಸ್‌ವೈಕೇಂದ್ರ ಸಚಿವ ಸುರೇಶ್ ಅಂಗಡಿ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ ಬಿಎಸ್‌ವೈ

ಸುರೇಶ್ ಅಂಗಡಿ ಆತ್ಮಕ್ಕೆ ಶಾಂತಿ ಸಿಗಲಿ: ಡಾ. ಸುಧಾಕರ್

ಸುರೇಶ್ ಅಂಗಡಿ ಆತ್ಮಕ್ಕೆ ಶಾಂತಿ ಸಿಗಲಿ: ಡಾ. ಸುಧಾಕರ್

''ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರು ಮತ್ತು ಬೆಳಗಾವಿ ಲೋಕಸಭಾ ಕ್ಷೇತ್ರದ ಜನಪ್ರಿಯ ಸಂಸದರಾದ ಶ್ರೀ ಸುರೇಶ್ ಅಂಗಡಿ ಅವರು ದೈವಾಧೀನರಾಗಿರುವ ವಿಷಯ ತಿಳಿದು ಆಘಾತವಾಗಿದೆ. ಶ್ರೀಯುತರ ಆತ್ಮಕ್ಕೆ ಸದ್ಗತಿ ದೊರಕಲಿ ಮತ್ತು ಅವರ ಕುಟುಂಬ ಸದಸ್ಯರಿಗೆ ಈ ಅಗಲಿಕೆಯನ್ನು ಭರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ'' ಎಂದು ಸಚಿವ ಡಾ. ಸುಧಾಕರ್ ಹೇಳಿದ್ದಾರೆ.

ನಮ್ಮ ರಾಜ್ಯಕ್ಕೆ ತುಂಬಲಾರದ ನಷ್ಟ: ಕೆ.ಎಸ್. ಈಶ್ವರಪ್ಪ

ನಮ್ಮ ರಾಜ್ಯಕ್ಕೆ ತುಂಬಲಾರದ ನಷ್ಟ: ಕೆ.ಎಸ್. ಈಶ್ವರಪ್ಪ

''ನಾಲ್ಕು ಬಾರಿ ಬೆಳಗಾವಿಯಿಂದ ಸಂಸದರಾಗಿದ್ದ, ನನ್ನ ಆತ್ಮೀಯ ಸ್ನೇಹಿತರೂ, ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಶ್ರೀ ಸುರೇಶ್ ಅಂಗಡಿಯವರ ನಿಧನದಿಂದ ನನ್ನ ಮನಸ್ಸಿಗೆ ತುಂಬಾ ‌ನೋವುಂಟಾಗಿದೆ. ಅವರ ಅಗಲಿಕೆ ನಮ್ಮ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ .ಅವರ ಅಗಲಿಕೆಯ ನೊವನ್ನು ಭರಿಸುವ ಶಕ್ತಿ ಅವರ ಕುಟುಂಬಕ್ಕೆ ಭಗವಂತ ನೀಡಲಿ ಎಂದು ಪ್ರಾರ್ಥಿಸುವೆ'' ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಟ್ವೀಟ್ ಮಾಡಿದ್ದಾರೆ.

ಸುರೇಶ್ ಅಂಗಡಿ ನಿಧನ: ಎಚ್.ಡಿ.ಕುಮಾರಸ್ವಾಮಿ ದಿಗ್ಬ್ರಮೆಸುರೇಶ್ ಅಂಗಡಿ ನಿಧನ: ಎಚ್.ಡಿ.ಕುಮಾರಸ್ವಾಮಿ ದಿಗ್ಬ್ರಮೆ

ಸುರೇಶ್ ಅಂಗಡಿ ಸಾವು ನನಗೆ ದಿಗ್ಬ್ರಮೆ ಉಂಟುಮಾಡಿದೆ: ಮುರುಗೇಶ್ ಆರ್ ನಿರಾಣಿ

ಸುರೇಶ್ ಅಂಗಡಿ ಸಾವು ನನಗೆ ದಿಗ್ಬ್ರಮೆ ಉಂಟುಮಾಡಿದೆ: ಮುರುಗೇಶ್ ಆರ್ ನಿರಾಣಿ

ಕೇಂದ್ರ ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರ ಅಕಾಲಿಕ ಅಗಲಿಕೆ ಆಘಾತಕಾರಿಯಾಗಿದ್ದು ನನಗೆ ದಿಗ್ಬ್ರಮೆ ಉಂಟುಮಾಡಿದೆ. ಸ್ನೇಹ ಜೀವಿಯಾಗಿದ್ದ ಸುರೇಶ್ ಅಂಗಡಿ ರಾಜ್ಯದ ಅಭಿವೃದ್ಧಿ ಬಗ್ಗೆ ಅಪಾರ ಕಾಳಜಿ ಉಳ್ಳವರಾಗಿದ್ದರು. ದೀರ್ಘಕಾಲದ ನನ್ನ ಒಡನಾಡಿಯಾಗಿದ್ದ ಸುರೇಶ್ ಅಂಗಡಿ ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದರು. ಅಷ್ಟೇ ಅಲ್ಲ ಸಹೃದಯಿ ಆಗಿದ್ದರು.


ನಾಲ್ಕು ಬಾರಿ ಸಂಸದರಾಗಿ ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದು ರಾಜ್ಯ ಹಾಗೂ ರಾಷ್ಟಕ್ಕೆ ತಮ್ಮದೆ ಕೊಡುಗೆ ನೀಡಿದ್ದರು. ಅವರ ಅಗಲಿಕೆಯಿಂದ ವೈಯಕ್ತಿಕವಾಗಿ ನನಗೆ ಹಾಗೂ ರಾಜ್ಯ ಮತ್ತು ರಾಷ್ಟ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಶಾಸಕ, ಮಾಜಿ ಸಚಿವ ಮುರುಗೇಶ್ ಆರ್. ನಿರಾಣಿ ಟ್ವೀಟ್ ಮಾಡಿದ್ದಾರೆ.

ನನ್ನ ಆತ್ಮೀಯ ಸ್ನೇಹಿತನ ಅಗಲಿಕೆ ನೋವು ತಂದಿದೆ: ವಿಶ್ವೇಶ್ವರ ಹೆಗಡೆ ಕಾಗೇರಿ

ನನ್ನ ಆತ್ಮೀಯ ಸ್ನೇಹಿತನ ಅಗಲಿಕೆ ನೋವು ತಂದಿದೆ: ವಿಶ್ವೇಶ್ವರ ಹೆಗಡೆ ಕಾಗೇರಿ

''ಸತತವಾಗಿ ನಾಲ್ಕು ಬಾರಿ ಸಂಸದರಾಗಿದ್ದ, ನನ್ನ ಆತ್ಮೀಯ ಸ್ನೇಹಿತರೂ, ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಶ್ರೀ ಸುರೇಶ್ ಅಂಗಡಿಯವರ ನಿಧನದಿಂದ ನನ್ನ ಮನಸ್ಸಿಗೆ ತುಂಬಾ ‌ನೋವುಂಟಾಗಿದೆ. ಕಾನೂನು ಪದವೀಧರರಾಗಿ, ರಾಜಕೀಯದಲ್ಲಿ ಪ್ರವರ್ಧಮಾನಕ್ಕೆ ಬಂದಿದ್ದ, ವಾಣಿಜ್ಯೋದ್ಯಮಿಯಾಗಿದ್ದ ಶ್ರೀಯುತರ ಅಗಲಿಕೆಯಿಂದ ರಾಜ್ಯ ಹಾಗೂ ದೇ‌ಶವು ದೂರದೃಷ್ಟಿಯುಳ್ಳ ಪ್ರಭಾವಿ ರಾಜಕಾರಣಿಯೊಬ್ಬರನ್ನು ಕಳೆದುಕೊಂಡಂತಾಗಿದೆ. ಇವರ ಆತ್ಮಕ್ಕೆ ಚಿರಶಾಂತಿ ದೊರಕಲೆಂದೂ ಹಾಗೂ ಇವರ ಕುಟುಂಬ ವರ್ಗದವರಿಗೆ ಈ ದುಃಖವನ್ನು ಭರಿಸುವ ಶಕ್ತಿ ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ'' ಎಂದು ಕರ್ನಾಟಕ ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಶೋಕ ಸಂದೇಶ ನೀಡಿದ್ದಾರೆ.

ಹಠಾತ್ ನಿಧನವು ಆಘಾತವನ್ನುಂಟು ಮಾಡಿದೆ: ವೆಂಕಯ್ಯ ನಾಯ್ದು

ಹಠಾತ್ ನಿಧನವು ಆಘಾತವನ್ನುಂಟು ಮಾಡಿದೆ: ವೆಂಕಯ್ಯ ನಾಯ್ದು

''ಕೇಂದ್ರ ಸಚಿವ ಶ್ರೀ ಸುರೇಶ್ ಅಂಗಡಿಯವರ ಹಠಾತ್ ನಿಧನದ ಬಗ್ಗೆ ತೀವ್ರ ಆಘಾತ. ಅವರು ದೀನ ದಲಿತರ ಉನ್ನತಿಗಾಗಿ ಶ್ರಮಿಸಿದ ಜನರ ನಾಯಕರಾಗಿದ್ದರು. ದುಃಖಿತ ಕುಟುಂಬ ಸದಸ್ಯರಿಗೆ ನನ್ನ ಸಂತಾಪ. ಓಂ ಶಾಂತಿ'' ಎಂದು ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ತಿಳಿಸಿದ್ದಾರೆ.

ಸುರೇಶ್ ಅಂಗಡಿ ಸಾವು ಕೇಳಿ ದುಃಖವಾಗಿದೆ: ಡಿಕೆಶಿ

ಸುರೇಶ್ ಅಂಗಡಿ ಸಾವು ಕೇಳಿ ದುಃಖವಾಗಿದೆ: ಡಿಕೆಶಿ

'' ಕೇಂದ್ರ ರಾಜ್ಯ ಸಚಿವ, ಕರ್ನಾಟಕ ಸಂಸದ ಶ್ರೀ ಅವರ ಹಠಾತ್ ನಿಧನದ ಬಗ್ಗೆ ಕೇಳಿದಾಗ ತೀವ್ರ ದುಃಖವಾಯಿತು. ದುಃಖದ ಈ ಸಮಯದಲ್ಲಿ ಅವರ ದುಃಖಿತ ಕುಟುಂಬ ಮತ್ತು ಸ್ನೇಹಿತರಿಗೆ ಹೃತ್ಪೂರ್ವಕ ಸಂತಾಪ ಎಂದು ಕರ್ನಾಟಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಂತಾಪ ವ್ಯಕ್ತಪಡಿಸಿದ್ದಾರೆ.

ಸುರೇಶ್ ಅಂಗಡಿ ನಿಧನದ ಸುದ್ದಿ ಕೇಳಿ ತೀವ್ರ ನೋವಾಗಿದೆ: ಅಮಿತ್ ಶಾ

ಸುರೇಶ್ ಅಂಗಡಿ ನಿಧನದ ಸುದ್ದಿ ಕೇಳಿ ತೀವ್ರ ನೋವಾಗಿದೆ: ಅಮಿತ್ ಶಾ

''ರೈಲ್ವೆ ಖಾತೆ ರಾಜ್ಯ ಸಚಿವರು ಮತ್ತು ಕರ್ನಾಟಕದ ಹಿರಿಯ ಬಿಜೆಪಿ ಮುಖಂಡರಾದ ಶ್ರೀ ಸುರೇಶ್ ಅಂಗಡಿ ಅವರ ನಿಧನದ ಬಗ್ಗೆ ತಿಳಿದು ತೀವ್ರ ನೋವಾಗಿದೆ. ರಾಷ್ಟ್ರ ಮತ್ತು ಪಕ್ಷಕ್ಕೆ ಅವರು ಮಾಡಿದ ನಿಸ್ವಾರ್ಥ ಸೇವೆಗಾಗಿ ಅವರನ್ನು ಎಂದೆಂದಿಗೂ ಸ್ಮರಿಸಲಾಗುವುದು. ಅವರ ಕುಟುಂಬ ವರ್ಗಕ್ಕೆ ನನ್ನ ಸಂತಾಪಗಳು. ಓಂ ಶಾಂತಿ ಶಾಂತಿ ಶಾಂತಿ'' ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಟ್ವೀಟ್ ಮಾಡಿದ್ದಾರೆ.

Recommended Video

ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಕೊಡ್ಲಿ | Oneindia Kannada
ಈ ಸುದ್ದಿಯು ತೀವ್ರ ದುಃಖ ತಂದಿದೆ: ಪಿಯೂಷ್ ಗೋಯಲ್

ಈ ಸುದ್ದಿಯು ತೀವ್ರ ದುಃಖ ತಂದಿದೆ: ಪಿಯೂಷ್ ಗೋಯಲ್

''ಸುರೇಶ್ ಅಂಗಡಿಯವರ ಅಕಾಲಿಕ ನಿಧನದ ಬಗ್ಗೆ ತಿಳಿದು ತೀವ್ರ ದುಃಖವಾಗಿದೆ. ಅವರು ನನ್ನ ಸಹೋದರರಂತಿದ್ದರು. ಜನರ ಬಗೆಗಿನ ಅವರ ಬದ್ಧತೆ ಮತ್ತು ಸಮರ್ಪಣಾ ಮನೋಭಾವವನ್ನು ಪದಗಳಲ್ಲಿ ವಿವರಿಸಲಾಗುವುದಿಲ್ಲ. ಅವರ ದುಃಖತಪ್ತ ಕುಟುಂಬ ಮತ್ತು ಸ್ನೇಹಿತ ವರ್ಗಕ್ಕೆ ನನ್ನ ಸಂತಾಪಗಳು. ಓಂ ಶಾಂತಿ'' ಎಂದು ಕೇಂದ್ರ ರೈಲ್ವೇ ಮತ್ತು ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ವಿಷಾದ ವ್ಯಕ್ತಪಡಿಸಿದ್ದಾರೆ.

English summary
The death of Union Minister Shri Suresh Angadi has been a shamming news in the political arena, with many politicians and dignitaries expressing deep sorrow.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X