ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತರನ್ನು ಬೆಂಬಲಿಸಿ ನಟಿ ರಮ್ಯಾ ಸಾಮಾಜಿಕ ತಾಣದಲ್ಲಿ ಹಾಕಿದ ವಿಭಿನ್ನ ಪೋಸ್ಟ್

|
Google Oneindia Kannada News

ಒಂದು ಕಾಲದಲ್ಲಿ ಕಾಂಗ್ರೆಸ್ಸಿನ ಸಾಮಾಜಿಕ ಜಾಲತಾಣದ ಮುಖ್ಯಸ್ಥೆಯಾಗಿದ್ದ ರಮ್ಯಾ ಆಲಿಯಾಸ್ ದಿವ್ಯ ಸ್ಪಂದನ ಸದ್ಯ ಸಕ್ರಿಯ ರಾಜಕೀಯದಿಂದ ಅಂತರ ಕಾಯ್ದುಕೊಂಡಿದ್ದಾರೆ.

ಆದಾಗ್ಯೂ, ಬಿಜೆಪಿ ಸರಕಾರದ ವಿರುದ್ದ ಆವಾಗಾವಾಗ ಸಿಡಿದೇಳುವ ರಮ್ಯಾ, ದೆಹಲಿ ಗಡಿಭಾಗದಲ್ಲಿ ಅನ್ನದಾತರು ನಡೆಸುವ ಪ್ರತಿಭಟನೆಗೆ ಬೆಂಬಲ ಸೂಚಿಸಿ, ಸಾಮಾಜಿಕ ತಾಣದಲ್ಲಿ ಪೋಸ್ಟ್ ಹಾಕುತ್ತಿದ್ದಾರೆ.

ಟೂಲ್ ಕಿಟ್ ಸೃಷ್ಟಿಕರ್ತರ ವಿವರ ನೀಡಿ: ಗೂಗಲ್‌, ಸಾಮಾಜಿಕ ತಾಣಗಳಿಗೆ ಪೊಲೀಸರ ಪತ್ರಟೂಲ್ ಕಿಟ್ ಸೃಷ್ಟಿಕರ್ತರ ವಿವರ ನೀಡಿ: ಗೂಗಲ್‌, ಸಾಮಾಜಿಕ ತಾಣಗಳಿಗೆ ಪೊಲೀಸರ ಪತ್ರ

ಇತ್ತೀಚೆಗೆ ಪಾಪ್ ಗಾಯಕಿ ರಿಹಾನ ಹಾಕಿದ ಪೋಸ್ಟ್ ವ್ಯಾಪಕವಾಗಿ ಚರ್ಚೆಗೆ ಗುರಿಯಾದ ಬೆನ್ನಲ್ಲೇ, ರಮ್ಯಾ ಅವರು ರಿಹಾನ ಅವರನ್ನು ಸಮರ್ಥಿಸಿಕೊಂಡು ಪೋಸ್ಟ್ ಹಾಕಿದ್ದರು. ಬಾಲಿವುಡ್ ನಟ ಅಕ್ಷಯ್ ಕುಮಾರ್ ಪೋಸ್ಟ್ ಹಾಕಿದರೆ ಸರಿ, ರಿಹಾನಾ ಕಾಮೆಂಟ್ ಮಾಡಿದರೆ ತಪ್ಪೇ ಎಂದು ಟ್ವಿಟ್ಟರ್ ನಲ್ಲಿ ಪ್ರಶ್ನಿಸಿದ್ದರು.

ರಮ್ಯಾ ಅವರ ಈ ಪೋಸ್ಟಿಗೆ ಭಾರೀ ಪ್ರತಿಕ್ರಿಯೆ ವ್ಯಕ್ತವಾದ ಬೆನ್ನಲ್ಲೇ, ರೈತರ ಪರವಾಗಿ ಫೇಸ್ ಬುಕ್ ನಲ್ಲಿ ವಿಭಿನ್ನ ರೀತಿಯ ಪೋಸ್ಟ್ ಒಂದನ್ನು ಹಾಕಿದ್ದಾರೆ. ಅದು ಹೀಗಿದೆ:

ಇಂದು ಬೃಹತ್ ಪ್ರತಿಭಟನೆ: ರಾಜ್ಯದಲ್ಲಿ ಹೆದ್ದಾರಿ ತಡೆ ಎಲ್ಲೆಲ್ಲಿ?ಇಂದು ಬೃಹತ್ ಪ್ರತಿಭಟನೆ: ರಾಜ್ಯದಲ್ಲಿ ಹೆದ್ದಾರಿ ತಡೆ ಎಲ್ಲೆಲ್ಲಿ?

Recommended Video

ನಾಳೆ ನಡೆಯಲಿರುವ ಪ್ರತಿಭಟನೆಯಲ್ಲಿ ಕೋಡಿಹಳ್ಳಿ ಚಂದ್ರಶೇಖರ್‌ ನೇತೃತ್ವದ 4ಸಾವಿರ ರೈತರು ಭಾಗಿ | Oneindia Kannada

ಅನ್ನದಾತೋ ಸುಖೀಃಭವ

ಅನ್ನದಾತೋ ಸುಖೀಃಭವ

'ನಮ್ಮ ನಾಡಿನಲ್ಲಿ ಅನ್ನದಾತೋ ಸುಖೀಃಭವ ಅಥವಾ ಅನ್ನದಾತೋ ಸುಖಿನೋ ಭವಂತು ಎಂದು ಸಂಸ್ಕೃತದಲ್ಲಿ ಹೇಳುತ್ತೇವೆ. ಆದರೆ, ಇಂದು ನಮ್ಮ ದೇಶದ ರೈತರು ಸಂಕಷ್ಟದಲ್ಲಿದ್ದಾರೆ. ಅವರೆಲ್ಲರೂ ಹೊಸ ಕೃಷಿ ಕಾನೂನಿನ ವಿರುದ್ದ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಸಮಯದಲ್ಲಿ ಅವರ ಪರವಾಗಿ ನಿಲ್ಲುವುದು ನಮ್ಮ ಕರ್ತವ್ಯ'ಎಂದು ರಮ್ಯಾ ಫೇಸ್ ಬುಕ್ ನಲ್ಲಿ ಬರೆಯುತ್ತಾ..

ರಮ್ಯಾ ಚಿತ್ರಾನ್ನದ ಪೋಸ್ಟ್ ಅನ್ನು ಹಾಕಿದ್ದಾರೆ

ರಮ್ಯಾ ಚಿತ್ರಾನ್ನದ ಪೋಸ್ಟ್ ಅನ್ನು ಹಾಕಿದ್ದಾರೆ

'ಒಂಬತ್ತು ಪ್ರಭಾವೀ ಮಹಿಳೆಯರನ್ನು ಟ್ಯಾಗ್ ಮಾಡಿ ಈ ಪೋಸ್ಟ್ ಹಾಕುತ್ತಿದ್ದೇನೆ. ಎಲ್ಲರಿಗೂ ರುಚಿಸುವ ತಿಂಡಿಯ ರಿಸಿಪಿಯನ್ನು ಹಾಕುತ್ತಿದ್ದೇನೆ. ಭತ್ತ ನಾಟಿ ಮಾಡಿ, ಕಠಾವು ಮಾಡಿ ಅದು ಅಕ್ಕಿಯಾಗಲು ರೈತ ನಾಲ್ಕು ತಿಂಗಳು ಕಾಯಬೇಕು. ಅಂತಹ ಅಕ್ಕಿಯಿಂದ ಮಾಡಿದ ಚಿತ್ರಾನ್ನದ ರೆಸಿಪಿಯನ್ನು ಹಾಕುತ್ತಿದ್ದೇನೆ'ಎಂದು ರಮ್ಯಾ ಚಿತ್ರಾನ್ನದ ಪೋಸ್ಟ್ ಅನ್ನು ಹಾಕಿದ್ದಾರೆ.

ವಾಕ್ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಿರುವ ಈ ಸಮಯ

ವಾಕ್ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಿರುವ ಈ ಸಮಯ

ರಮ್ಯಾ ಅವರ ಈ ಪೋಸ್ಟಿಗೆ ಎಂದಿನಂತೆ ಪರವಿರೋಧ ಪ್ರತಿಕ್ರಿಯೆಗಳು ಬಂದಿವೆ. 'ವಾಕ್ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಿರುವ ಈ ಸಮಯದಲ್ಲಿ ನಿಮ್ಮ ಈ ಪೋಸ್ಟ್ ಸಮಯೋಚಿತವಾಗಿದೆ'. 'ರೈತರ ಪ್ರತಿಭಟನೆಗೆ ನಿಮ್ಮ ಸಹಾಯ ಬೇಕಿದೆ' ಈ ರೀತಿಯ ಪ್ರತಿಕ್ರಿಯೆಗಳು ರಮ್ಯಾ ಅವರ ಪೋಸ್ಟಿಗೆ ಬಂದಿವೆ.

ರೈತರನ್ನು ಪ್ರಚೋದಿಸಬೇಡಿ

ರೈತರನ್ನು ಪ್ರಚೋದಿಸಬೇಡಿ

'ಇಂತಹ ಸಮಯದಲ್ಲಿ ಈ ರೀತಿಯ ಪೋಸ್ಟ್ ಅನ್ನು ಹಾಕಿ ರೈತರನ್ನು ಪ್ರಚೋದಿಸಬೇಡಿ'. 'ಎಪಿಎಂಸಿಯಲ್ಲಿ ಒಂದು ಕ್ವಿಂಟಾಲ್ ಭತ್ತ ಕೊಟ್ಟರೆ ಎಷ್ಟು ಕೆಜಿಯನ್ನು ವಾಪಸ್ ಕೊಡುತ್ತಾರೆ. ರಾಗಿ ಕೊಟ್ಟರೆ ಇದನ್ನೆಲ್ಲಾ ಬರೀರಿ' ಎನ್ನುವ ಪ್ರತಿಕ್ರಿಯೆಯೂ ರಮ್ಯಾ ಅವರ ಪೋಸ್ಟಿಗೆ ಬಂದಿದೆ.

English summary
Supporting Farmers Protest Actress Ramya Facebook Post With Recipe,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X