ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈಷ್ಣೋದೇವಿ ದರ್ಶನಕ್ಕೆ ಒಂದೇ ರೈಲು

|
Google Oneindia Kannada News

ಬೆಂಗಳೂರು, ಜ. 30: ರಾಜ್ಯದ ಪ್ರವಾಸಿಗರು ಇನ್ನು ನೇರವಾಗಿ ಜಮ್ಮುವಿನ ವೈಷ್ಣೋದೇವಿ ದರ್ಶನಕ್ಕೆ ರೈಲಿನಲ್ಲಿ ತೆರಳಬಹುದು. ವೈಷ್ಣೋದೇವಿ ಕ್ಷೇತ್ರದ ಸಮೀಪದಲ್ಲಿರುವ ಕಟ್ರಾ ರೈಲ್ವೆ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಯಶವಂತಪುರ-ಕಟ್ರಾ ರೈಲು ಸೇವೆಗೆ ಚಾಲನೆ ದೊರೆತಿದ್ದು ಅಧಿಕೃತವಾಗಿ ಫೆಬ್ರವರಿ 7 ರಿಂದ ಸಂಚಾರ ಆರಂಭವಾಗಲಿದೆ.

ಬೆಂಗಳೂರಿನಲ್ಲಿ ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ವಿವಿಧ ರೈಲು ಸೇವೆಗೆ ಚಾಲನೆ ನೀಡಿದರು. ಯಶವಂತಪುರ - ಕಟ್ರಾ ಸೂಪರ್‌ಫಾಸ್ಟ್‌ ಪ್ರಿಮಿಯಂ ಸಾಪ್ತಾಹಿಕ ಎಕ್ಸ್‌ಪ್ರೆಸ್‌ ರೈಲು ಪ್ರತಿ ಶನಿವಾರ ಬೆಳಿಗ್ಗೆ 11.30ಕ್ಕೆ ಯಶವಂತಪುರದಿಂದ ಹೊರಟು ಸೋಮವಾರ ಸಂಜೆ 7.45ಕ್ಕೆ ಕಟ್ರಾ ತಲುಪಲಿದೆ. ಅದೇ ರೀತಿ ಪ್ರತಿ ಮಂಗಳವಾರ ಬೆಳಿಗ್ಗೆ 6.30ಕ್ಕೆ ಹೊರಡುವ ರೈಲು ಗುರುವಾರ ಮಧ್ಯಾಹ್ನ 3 ಗಂಟೆಗೆ ಯಶವಂತಪುರ ತಲುಪಲಿದೆ.[ಬೆಂಗಳೂರು : 4 ನೂತನ ರೈಲುಗಳ ವೇಳಾಪಟ್ಟಿ]

india

ಬಳ್ಳಾರಿ, ಸಿಕಂದರಬಾದ್, ನಾಗಪುರ, ಝಾನ್ಸಿ ಮತ್ತು ನವದೆಹಲಿಯಲ್ಲಿ ಮಾತ್ರ ನಿಲುಗಡೆ ಕಲ್ಪಿಸಲಾಗಿದೆ. ಒಟ್ಟು 3,241 ಕಿ.ಮೀ ದೂರವನ್ನು 56 ಗಂಟೆಗಳಲ್ಲಿ ಕ್ರಮಿಸುವ ರೈಲು ರಾಜ್ಯಕ್ಕೆ ಸಂಬಂಧಿಸಿ ಹೇಳುವುದಾದರೆ 2 ನೇ ದೂರ ಅಂತರದ ರೈಲಾಗಿದೆ.

ವೇಳಾಪಟ್ಟಿ

* ಪ್ರತಿ ಶನಿವಾರ ಬೆಳಿಗ್ಗೆ 11.30ಕ್ಕೆ ಯಶವಂತಪುರದಿಂದ ನಿರ್ಗಮನ
* ಸೋಮವಾರ ಸಂಜೆ 7.45ಕ್ಕೆ ಕಟ್ರಾ ರೈಲು ನಿಲ್ದಾಣ
* ಪ್ರತಿ ಮಂಗಳವಾರ ಬೆಳಿಗ್ಗೆ 6.30ಕ್ಕೆ ಕಟ್ರಾದಿಂದ ನಿರ್ಗಮನ
* ಪ್ರತಿ ಗುರುವಾರ ಮಧ್ಯಾಹ್ನ 3 ಗಂಟೆಗೆ ಯಶವಂತಪುರಕ್ಕೆ ಆಗಮನ
* ಬಳ್ಳಾರಿ, ಸಿಕಂದರಬಾದ್, ನಾಗಪುರ, ಝಾನ್ಸಿ ಮತ್ತು ನವದೆಹಲಿಯಲ್ಲಿ ಮಾತ್ರ ನಿಲುಗಡೆ
* ಫೆಬ್ರವರಿ 7 ರಿಂದ ರೈಲು ಸಂಚಾರ ಆರಂಭ[30 ಸೆಕೆಂಡ್ ನಲ್ಲಿ ತತ್ಕಾಲ್ ಟಿಕೆಟ್ ಬುಕ್ಕಿಂಗ್ ಹೇಗೆ?]

ಟಿಕೆಟ್ ದರ ಪಟ್ಟಿ
* 2 ಟೈರ್ ಎಸಿ - 4,990 ರೂ.
* 3 ಟೈರ್ ಎಸಿ - 3,775 ರೂ.
* ಸ್ಲೀಪರ್ ಕ್ಲಾಸ್ - 1,705 ರೂ.
ಐಆರ್ ಸಿಟಿಸಿಯಲ್ಲಿ ಜನವರಿ 31 ರಿಂದ ಟಿಕೆಟ್ ಬುಕಿಂಗ್ ಆರಂಭವಾಗಲಿದೆ.

English summary
Indian Railways introduce a weekly superfast premium express to Vaishno Devi Katra from February 7. The new train 22679/22680 Yesvantpur-Mata Vaishno Devi Katra weekly will depart from Yesvantpur on every Saturday from February 7 at 11.30am to reach Vaishno Devi Katra at 07.45pm the third day (Monday).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X