ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷಿಕರ ಸಮಸ್ಯೆ ನಿವಾರಣೆಗೆ ಫೇಸ್ ಬುಕ್ ನಲ್ಲಿ ಸೂಪರ್ ಸಲಹೆ..

ಕೃಷಿಕರ ಸಮಸ್ಯೆಗೆ ಹೇಗೆ ಪರಿಹಾರ ಕಂಡುಕೊಳ್ಳಬಹುದು ಎಂಬ ಬಗ್ಗೆ ಶಿವಪ್ರಕಾಶ್ ರೆಡ್ಡಿ ಅವರು ವಾಸ್ತವವಾದ ಸಲಹೆಗಳನ್ನು ನೀಡಿದ್ದಾರೆ. ಇವುಗಳ ಪರಿಣಾಮಕಾರಿ ಅನುಷ್ಠಾನದಿಂದ ಬದಲಾವಣೆ ಆಗುವ ಲಕ್ಷಣಗಳು ಗೋಚರಿಸುತ್ತಿವೆ.

By ಶಿವಪ್ರಕಾಶ್ ರೆಡ್ಡಿ
|
Google Oneindia Kannada News

ಬೆಂಗಳೂರು, ಮಾರ್ಚ್ 24: ತರಕಾರಿ ಬೆಳೆಯುವ ರೈತರ ಏಳ್ಗೆಗಾಗಿ ಭಗವಂತನೇ ಭೂಮಿಗೆ ಇಳಿದು ಬರಬೇಕೇನೋ ಎಂಬಂತೆ ದಿನಕ್ಕೊಂದು ಸುದ್ದಿ ಓದುತ್ತಿದ್ದೇವೆ. ಇಂಥ ಸನ್ನಿವೇಶದಲ್ಲಿ ಶಿವಪ್ರಕಾಶ್ ರೆಡ್ಡಿ ಎಂಬುವವರು ಕೆಲವು ಸಲಹೆಗಳನ್ನು ಮುಂದಿಟ್ಟಿದ್ದಾರೆ. ಇವುಗಳನ್ನು ತುಂಬ ಪರಿಣಾಮಕಾರಿಯಾಗಿ ಜಾರಿ ಮಾಡಿದರೆ ಬದಲಾವಣೆಗಳನ್ನು ಕಾಣುವ ಸಾಧ್ಯತೆಯೂ ಗೋಚರಿಸುತ್ತಿದೆ.

ಅಂದಹಾಗೆ ಶಿವಪ್ರಕಾಶ್ ರೆಡ್ಡಿಯವರು ತಮ್ಮ ಸಲಹೆಗಳನ್ನು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಆದಕ್ಕೆ ಈಗಾಗಲೇ ಒಳ್ಳೆ ಸ್ಪಂದನೆ ಕೂಡ ಬಂದಿದೆ. ಅ ಬಗ್ಗೆ ಒನ್ ಇಂಡಿಯಾ ಕನ್ನಡ ಓದುಗರ ಗಮನಕ್ಕೂ ತರುವ ಪ್ರಯತ್ನ ಇದು. ಒಂದೆರಡು ನಿಮಿಷ ಬಿಡುವು ಮಾಡಿಕೊಂಡು ಇಲ್ಲಿರುವ ಸಲಹೆಗಳನ್ನು ಓದಿ.[ಕರ್ನಾಟಕ ಬಜೆಟ್ ನ ಪ್ರಮುಖಾಂಶಗಳು]

ಹ್ಞಾಂ, ಒಂದ್ನಿಮಿಷ. ಓದುವುದಷ್ಟೇ ಅಲ್ಲ, ದಯವಿಟ್ಟು ಇತರರಿಗೂ ತಲುಪುವಂತೆ ಮಾಡಿ. ಅದರಲ್ಲೂ ಕೃಷಿಕ ವರ್ಗಕ್ಕೆ, ಅಧಿಕಾರಿಗಳಿಗೆ ಅದರಲ್ಲೂ ರೈತರ ಬದುಕಿನಲ್ಲಿ ಬದಲಾವಣೆ ತರಬಹುದಾದ ಆಯಕಟ್ಟಿನ ಸ್ಥಾನಗಳಲ್ಲಿ ಅಧಿಕಾರ ಹಿಡಿದವರಿಗೆ ಇದು ತಲುಪುವಂತಾದರೆ ಒಳ್ಳೆಯದು. ಇಲ್ಲಿರುವ ಸಲಹೆಗಳ ಒಳಿತು-ಕೆಡಕಿನ ಬಗ್ಗೆ ಕೂಡ ಚರ್ಚೆಯಾಗಲಿ. ಇನ್ನೊಂದಿಷ್ಟು ಸಾಧ್ಯತೆಗಳು ಇದರ ಜತೆಗೆ ಸೇರಿಕೊಳ್ಳಲಿ.[ಬಜೆಟ್ : ರೈತರ ಸಾಲ ಮನ್ನಾ ಇಲ್ಲ, ಎಣ್ಣೆ ಬೆಲೆ ಇಳಿದಿಲ್ಲ]

ಇಲ್ಲಿಂದ ಮುಂದೆ ಶಿವಪ್ರಕಾಶ್ ರೆಡ್ಡಿಯವರು ಬರೆದ ಪತ್ರದ ಪೂರ್ಣ ಪಾಠ ಓದಿ.

ವೈಜ್ಞಾನಿಕ ಬೆಲೆ

ವೈಜ್ಞಾನಿಕ ಬೆಲೆ

ಆತ್ಮೀಯ ರೈತಮಕ್ಕಳೇ, ಕೃಷಿಯಲ್ಲಿ ನಮ್ಮ ರೈತರಿಗೆ ಬಹುವಾಗಿ ಕಾಡುತ್ತಿರುವುದು ನೀರಾವರಿ ಸಮಸ್ಯೆಯ ಜೊತೆಗೆ ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಸಿಗದಿರುವುದು. ಇದಕ್ಕೆ ಪ್ರಮುಖ ಕಾರಣ ನಮ್ಮ ರೈತರು ಬಹುತೇಕ ಅಗತ್ಯಕ್ಕಿ೦ತ ಹೆಚ್ಚು ಬೆಳೆ ಬೆಳೆಯುವುದೇ ಆಗಿದೆ. ಈ ಸಮಸ್ಯೆ ನಿವಾರಣೆಗೆ ಈ ಕೆಳಕ೦ಡ ಮಾರ್ಗಗಳನ್ನು ಅನುಸರಿಸದರೆ ಪರಿಣಾಮಕಾರಿಯಾಗಿರುತ್ತದೆ,

ಯಾವ ತರಕಾರಿ, ಎಷ್ಟು ವಿಸ್ತೀರ್ಣ

ಯಾವ ತರಕಾರಿ, ಎಷ್ಟು ವಿಸ್ತೀರ್ಣ

ರೈತರು ಯಾವ ಪ್ರದೇಶದಲ್ಲಿ, ಯಾವ ತರಕಾರಿಯನ್ನು ಎಷ್ಟು ವಿಸ್ತೀರ್ಣದಲ್ಲಿ ಬೆಳೆಯುತ್ತಿದ್ದಾರೆ ಎ೦ಬ ಮಾಹಿತಿ ಪ್ರತಿಯೊಬ್ಬರಿಗೂ ಸಿಗುವ೦ತಾಗಬೇಕು.

ತಂತ್ರಾಂಶ ಅಭಿವೃದ್ಧಿಪಡಿಸಲಿ

ತಂತ್ರಾಂಶ ಅಭಿವೃದ್ಧಿಪಡಿಸಲಿ

ಈ ಉದ್ದೇಶಕ್ಕಾಗಿ ಸರಕಾರವೇ ತ೦ತ್ರಾ೦ಶವನ್ನು ಅಭಿವೃದ್ಧಿಪಡಿಸಿ, ರೈತರು ಮತ್ತು ವ್ಯಾಪಾರಸ್ಥರು ಇದನ್ನು ಉಪಯೋಗಿಸಲು ತರಬೇತಿ ನೀಡಬೇಕು.

ತ೦ತ್ರಾ೦ಶಕ್ಕೆ ಅಪ್ ಡೇಟ್ ಅಗಲಿ

ತ೦ತ್ರಾ೦ಶಕ್ಕೆ ಅಪ್ ಡೇಟ್ ಅಗಲಿ

ರೈತರು ಬೀಜವನ್ನು ಕೊಳ್ಳುವ ಸಹಕಾರಿ ಸ೦ಘಗಳು ಮತ್ತು ಖಾಸಗಿ ಮಳಿಗೆಗಳು ಕಡ್ಡಾಯವಾಗಿ ವ್ಯಾಪಾರವಾದ ಬೀಜದ ಪ್ರಮಾಣ, ಬಗೆ, ಪ್ರದೇಶ, ಸಮಯ ಮತ್ತು ವಿಸ್ತೀರ್ಣವನ್ನು ತ೦ತ್ರಾ೦ಶಕ್ಕೆ ಅಪ್ ಡೇಟ್ ಮಾಡಬೇಕು

ಸರಕಾರ ಬೆಳೆಯ ಅವಶ್ಯಕತೆ ತಿಳಿಸಲಿ

ಸರಕಾರ ಬೆಳೆಯ ಅವಶ್ಯಕತೆ ತಿಳಿಸಲಿ

ಸರಕಾರ ಕೂಡ ಒ೦ದು ಬೆಳೆಯ ಅವಶ್ಯಕತೆಯನ್ನು, ಈಗಾಗಲೇ ನಾಟಿ ಮಾಡಿರುವ ಪ್ರಮಾಣದಿ೦ದ ಅ೦ದಾಜಿಸಿ, ಕಾಲಕಾಲಕ್ಕೆ ಈ ತ೦ತ್ರಾ೦ಶದ ಮೂಲಕ ತಿಳಿಸುವ೦ತಾಗಬೇಕು.

ಬೆಳೆ ನಿರ್ಧಾರಕ್ಕೆ ಸಹಕಾರಿ

ಬೆಳೆ ನಿರ್ಧಾರಕ್ಕೆ ಸಹಕಾರಿ

ತ೦ತ್ರಾ೦ಶವನ್ನು ಬಳಸಿ ರೈತರು ಕುಳಿತಲ್ಲಿಯೇ ತಮ್ಮ ಸುತ್ತಲಿನ ಪ್ರದೇಶದಲ್ಲಿ ಈಗಾಗಲೇ ಯಾವ ಬೆಳೆಯನ್ನು, ಎಷ್ಟು ಪ್ರಮಾಣದಲ್ಲಿ ಬೆಳೆಯುತ್ತಿದ್ದಾರೆ, ಮು೦ದಿನ ಅವಶ್ಯಕತೆ ಎಷ್ಟು ಎ೦ದು ತಿಳಿದು, ಆ ನ೦ತರ ತಾನು ಯಾವ ಬೆಳೆಯನ್ನು ಬೆಳೆದರೆ ಸೂಕ್ತ ಎ೦ದು ನಿರ್ಧರಿಸಬಹುದು.

ಸರಕಾರಕ್ಕೆ ಮನವಿ

ಸರಕಾರಕ್ಕೆ ಮನವಿ

ಈ ಮೇಲಿನ ಉಪಾಯದ ಬಗ್ಗೆ ನಿಮ್ಮ ಅಭಿಪ್ರಾಯ ಮತ್ತು ಸಲಹೆಗಳನ್ನು ತಿಳಿಸಿ. ಮು೦ದೆ ಈ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ನಮ್ಮ ಭಾಗದಲ್ಲಿ ಅನುಸರಿಸಿ ನೋಡಲು ಸರಕಾರಕ್ಕೆ ಮನವಿ ಮಾಡಬಹುದು.
ಶಿವಪ್ರಕಾಶ್ ರೆಡ್ಡಿ ಮೊ : 9900900114
ಫೇಸ್ ಬುಕ್ ಪೇಜ್ ವಿಳಾಸಕ್ಕೆ ಇಲ್ಲಿ ಕ್ಲಿಕ್ ಮಾಡಿ

English summary
Shivaprakash Reddy has given suggestions in Facebbok to solve agri problems.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X