ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ.5 ರಿಂದ ಮೈಸೂರು To ಪಣಜಿಗೆ ವೇಗದೂತ ಬಸ್ ಸಂಚಾರ: ಇಲ್ಲಿದೆ ಸಂಪೂರ್ಣ ವಿವರ

|
Google Oneindia Kannada News

ಮೈಸೂರು, ನವೆಂಬರ್ 4: ಗೋವಾ ಪ್ರವಾಸಕ್ಕೆ ತೆರಳಲು ಬಯಸುವ ಮೈಸೂರು ಕರ್ನಾಟಕ ಭಾಗದ ಜನರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಸಿಹಿಸುದ್ದಿ ನೀಡಿದೆ. ನವೆಂಬರ್ 5ರಂದು ಮೈಸೂರು ಮತ್ತು ಗೋವಾರ ರಾಜಧಾನಿ ಪಣಜಿ ನಡುವೆ ನೂತನ ವೇಗದೂತ ಬಸ್ ಸಂಚಾರ ಆರಂಭವಾಗಲಿದೆ. ಮೈಸೂರು ಮತ್ತು ಪಣಜಿವರೆಗೂ ಈ ವೇಗದೂತ ಬಸ್ ಯಾವ ಮಾರ್ಗದಲ್ಲಿ ಸಂಚರಿಸಲಿದೆ, ಎಷ್ಟು ಗಂಟೆಗೆ ಯಾವ ನಿಲ್ದಾಣವನ್ನು ತಲುಪಲಿದೆ, ಯಾವ ಸಮಯದಲ್ಲಿ ಯಾವ ನಿಲ್ದಾಣದಿಂದ ನಿರ್ಗಮಿಸಲಿದೆ ಎಂಬುದರ ಕುರಿತು ಒಂದು ವಿವರಣಾತ್ಮ ಮಾಹಿತಿಯನ್ನು ಕೆಎಸ್‌ಆರ್‌ಟಿಸಿ ತನ್ನ ಪ್ರಕಟಣೆಯಲ್ಲಿ ಉಲ್ಲೇಖಿಸಿದೆ.

ಮೈಸೂರು-ಪಣಜಿ ಬಸ್ ಸಂಚಾರ ಮಾರ್ಗ:

ಮೈಸೂರು ಗ್ರಾಮಾಂತರ ವಿಭಾಗ ವತಿಯಿಂದ ಈ ವೇಗದೂತ ಬಸ್ ನವೆಂಬರ್ 5ರಿಂದ ತನ್ನ ಸಂಚಾರ ಪ್ರಾರಂಭಿಸಲಿದೆ. ಮೈಸೂರಿನಿಂದ- ನಾಗಮಂಗಲ - ಹುಳಿಯಾರ್ - ಹೊಸದುರ್ಗ - ಹೊಳಲ್ಕೆರೆ - ದಾವಣಗೆರೆ - ಹುಬ್ಬಳ್ಳಿ ಮಾರ್ಗವಾಗಿ ಪಣಜಿಗೆ ಈ ನೂತನ ವೇಗದೂತ ಸಾರಿಗೆ ಸಂಚರಿಸಲಿದೆ.

ಹಂಪಿ- ತುಂಗಭದ್ರಾಕ್ಕೆ ಕೆಎಸ್‌ಆರ್‌ಟಿಸಿ ಟೂರ್ ಪ್ಯಾಕೇಜ್ಹಂಪಿ- ತುಂಗಭದ್ರಾಕ್ಕೆ ಕೆಎಸ್‌ಆರ್‌ಟಿಸಿ ಟೂರ್ ಪ್ಯಾಕೇಜ್

ನಾಗಮಂಗಲ, ಮಾಯಸಂದ್ರ, ತುರುವೇಕೆರೆ, ಚಿಕ್ಕನಾಯಕನಹಳ್ಳಿ, ಹುಳಿಯಾರ್, ಹೊಸದುರ್ಗ, ಹೊಳಲ್ಕೆರೆ ಭಾಗದ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಈ ಭಾಗದ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಮೈಸೂರಿನಿಂದ ಪಣಜಿಗೆ ನೂತನವಾಗಿ ವೇಗದೂತ ಸಾರಿಗೆಯನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪ್ರಾರಂಭಿಸಲು ನಿರ್ಧರಿಸಿದೆ.

 Super Fast Bus Run Starts Between Mysore To Panaji From November 5

ಬಸ್ ಸಂಚರಿಸುವ ಸಮಯ ಮತ್ತು ನಿಲ್ದಾಣ:

ಸದರಿ ಸಾರಿಗೆ ಬಸ್ ಯಾವ ಸಮಯದಲ್ಲಿ ಯಾವ ಬಸ್ ನಿಲ್ದಾಣವನ್ನು ತಲುಪಲಿದೆ. ಯಾವ ನಿಲ್ದಾಣದಿಂದ ನಿರ್ಗಮಿಸಲಿದೆ ಎಂಬ ಮಾಹಿತಿಯನ್ನು ಸಹ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ತನ್ನ ಪ್ರಕಟಣೆಯಲ್ಲಿ ವಿವರಿಸಿದೆ.

ವೇಗದೂತ ಬಸ್ ವೇಳಾಪಟ್ಟಿ ಹೀಗಿದೆ:

* ಮೈಸೂರು ಬಿಡುವ ವೇಳೆ 15:00,

* ನಾಗಮಂಗಲ ಬಿಡುವ ವೇಳೆ 16:30,

* ಮಾಯಸಂದ್ರ ಬಿಡುವ ವೇಳೆ 17:30,

* ತುರುವೇಕೆರೆ ಬಿಡುವ ವೇಳೆ 17.45,

* ಕೆ.ಬಿ.ಕ್ರಾಸ್ ಬಿಡುವ ವೇಳೆ 18:00,

* ಚಿಕ್ಕನಾಯಕನಹಳ್ಳಿ ಬಿಡುವ ಸಮಯ 18:15,

* ಹುಳಿಯಾರ್ ಬಿಡುವ ಸಮಯ 18:45,

* ಹೊಸದುರ್ಗ ಬಿಡುವ ಸಮಯ 19:45,

* ಹೊಳಲ್ಕೆರೆ ಬಿಡುವ ಸಮಯ 20:30,

* ದಾವಣಗೆರೆ ಬಿಡುವ ಸಮಯ 21:30,

* ಹುಬ್ಬಳ್ಳಿ ಬಿಡುವ ಸಮಯ 01:30,

* ಪಣಜಿ ತಲುಪುವ ಸಮಯ 06:00 ಆಗಿರುತ್ತದೆ.

ಪಣಜಿಯಿಂದ ಮೈಸೂರಿಗೆ ಪ್ರಯಾಣಿಸುವ ಸಮಯ:

* ಪಣಜಿ ಬಿಡುವ ವೇಳೆ 16:30,

* ಹುಬ್ಬಳ್ಳಿ ಬಿಡುವ ವೇಳೆ 21:15,

* ದಾವಣಗೆರೆ ಬಿಡುವ ವೇಳೆ 01:00,

* ಹೊಳಲ್ಕೆರೆ ಬಿಡುವ ವೇಳೆ 02:00,

* ಹೊಸದುರ್ಗ ಬಿಡುವ ವೇಳೆ 03:00,

* ಹುಳಿಯಾರ್ ಬಿಡುವ ವೇಳೆ 04:00,

* ಚಿಕ್ಕನಾಯಕನಹಳ್ಳಿ ಬಿಡುವ ವೇಳೆ 04:30,

* ಕೆ.ಬಿ.ಕ್ರಾಸ್ ಬಿಡುವ ಸಮಯ 04:45,

* ತುರುವೇಕೆರೆ ಬಿಡುವ ಸಮಯ 05:00,

* ಮಾಯಸಂದ್ರ ಬಿಡುವ ವೇಳೆ 05:30,

* ನಾಗಮಂಗಲ ಬಿಡುವ ವೇಳೆ 06:30,

* ಮೈಸೂರು ತಲುಪುವ ವೇಳೆ 08:00 ಆಗಿರುತ್ತದೆ.

ವೇಗದೂತ ಸಾರಿಗೆ ಸೇವೆ ಸದುಪಯೋಗಪಡಿಸಿಕೊಳ್ಳಲು ಮನವಿ:

ಸದರಿ ಈ ಭಾಗದ ಸಾರ್ವಜನಿಕ ಪ್ರಯಾಣಿಕರು ನೂತನ ವೇಗದೂತ ಸಾರಿಗೆ ಸೇವೆಯನ್ನು ಸದುಪಯೋಗ ಪಡೆದುಕೊಳ್ಳಬಹುದು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮೈಸೂರು ಗ್ರಾಮಾಂತರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

English summary
Super Fast Bus Run Starts Between Mysore To Panaji From November 5. Know More Details Here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X