ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ಭಾನುವಾರ ಕರ್ಫ್ಯೂ: ಯಾವುದು ಓಪನ್? ಯಾವುದು ಬಂದ್? ಇಲ್ಲಿದೆ ಲಿಸ್ಟ್

|
Google Oneindia Kannada News

ಬೆಂಗಳೂರು, ಮೇ 23: ಮಾರಣಾಂತಿಕ ಕೊರೊನಾ ವೈರಸ್ ಅನ್ನು ತಡೆಗಟ್ಟಲು ದೇಶದಾದ್ಯಂತ ಲಾಕ್ ಡೌನ್ ಜಾರಿಯಲ್ಲಿದೆ. ಮೇ 31 ರವರೆಗೆ ಲಾಕ್ ಡೌನ್ 4.0 ಚಾಲ್ತಿಯಲ್ಲಿ ಇರಲಿದ್ದು, ಕಂಟೇನ್ಮೆಂಟ್ ಝೋನ್ ಗಳನ್ನು ಹೊರತುಪಡಿಸಿ ಉಳಿದ ಕಡೆ ಕೆಲವು ನಿಯಮಗಳನ್ನು ಸಡಿಲಗೊಳಿಸಲಾಗಿದೆ.

Recommended Video

ತರಕಾರಿಯಿಂದಲು ಹಬ್ಬುತ್ತಿದೆ ಕೊರೋನಾ ಮಹಾಮಾರಿ!! ಎಚ್ಚರ!! | Oneindia Kannada

ಲಾಕ್ ಡೌನ್ 4.0 ಅನ್ವಯ ಕರ್ನಾಟಕದಲ್ಲೂ ನಿಯಮಗಳು ಸಡಿಲಗೊಂಡಿವೆ. ಆದರೆ, ಭಾನುವಾರ ಮಾತ್ರ ಕರ್ನಾಟಕದಲ್ಲಿ ಕಂಪ್ಲೀಟ್ ಲಾಕ್ ಡೌನ್ ಜಾರಿಯಲ್ಲಿರಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದರು.

ಬ್ರೇಕಿಂಗ್ ನ್ಯೂಸ್; ಬೆಂಗಳೂರಲ್ಲಿ ಮೇ 23ರ ಸಂಜೆಯಿಂದ ಕರ್ಫ್ಯೂ ಜಾರಿಬ್ರೇಕಿಂಗ್ ನ್ಯೂಸ್; ಬೆಂಗಳೂರಲ್ಲಿ ಮೇ 23ರ ಸಂಜೆಯಿಂದ ಕರ್ಫ್ಯೂ ಜಾರಿ

ರಾಜ್ಯ ಸರ್ಕಾರದ ಆದೇಶದಂತೆ ಮೇ 31 ರವರೆಗೆ ಪ್ರತಿ ಭಾನುವಾರ ಕರ್ನಾಟಕ ಸಂಪೂರ್ಣ ಲಾಕ್ ಡೌನ್ ಆಗಿರಲಿದೆ. ಇಂದು (ಶನಿವಾರ ಮೇ 23) ಸಂಜೆ 7 ಗಂಟೆಯಿಂದ ಸೋಮವಾರ ಬೆಳಗ್ಗೆ 7 ಗಂಟೆಯವರೆಗೂ ಕರ್ಫ್ಯೂ ಜಾರಿಯಲ್ಲಿರಲಿದೆ.

ಹಾಗಾದ್ರೆ, ನಾಳೆ (ಮೇ 24) ಭಾನುವಾರ ಏನೇನೆಲ್ಲಾ ಓಪನ್ ಇರುತ್ತೆ.? ಯಾವುದೆಲ್ಲಾ ಬಂದ್ ಆಗಿರುತ್ತೆ.? ಸಂಪೂರ್ಣ ಪಟ್ಟಿ ಇಲ್ಲಿದೆ, ನೋಡಿ...

ಭಾನುವಾರ ಏನೆಲ್ಲ ಇರುತ್ತೆ?

ಭಾನುವಾರ ಏನೆಲ್ಲ ಇರುತ್ತೆ?

* ಅಗತ್ಯ ವಸ್ತುಗಳ ಮಾರಾಟ ಮತ್ತು ಖರೀದಿಗೆ ಮಾತ್ರ ಅವಕಾಶ.

* ತರಕಾರಿ, ಹಣ್ಣು, ದಿನಸಿ ಅಂಗಡಿಗಳು ತೆರೆದಿರುತ್ತವೆ.

* ಮೆಡಿಕಲ್ ಶಾಪ್, ಫಾರ್ಮಸಿ ಎಂದಿನಂತೆ ತೆರೆಯಲಿದೆ.

* ಆಸ್ಪತ್ರೆ, ನರ್ಸಿಂಗ್ ಹೋಮ್, ವೆಟರ್ನರಿ ಕ್ಲಿನಿಕ್ ಓಪನ್ ಇರಲಿವೆ.

ಭಾನುವಾರ ಯಾರು ಓಡಾಡಬಹುದು.?

ಭಾನುವಾರ ಯಾರು ಓಡಾಡಬಹುದು.?

* ಡಯಾಲಿಸಿಸ್ ಸೇರಿದಂತೆ ಇನ್ನಿತರ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಬಹುದು.

* ವೈದ್ಯಕೀಯ ತಪಾಸಣೆಗಾಗಿ ಗರ್ಭಿಣಿ ಸ್ತ್ರೀಯರು ಆಸ್ಪತ್ರೆಗೆ ತೆರಳಲು ಅವಕಾಶ.

* ಆಂಬ್ಯುಲೆನ್ಸ್ ಸೇವೆ ಇರಲಿದೆ.

* ಆರೋಗ್ಯ/ತುರ್ತು ಸಂದರ್ಭಗಳಿಗೆ ಓಡಾಡಲು ಅವಕಾಶ.

 ಭಾನುವಾರ ಸಂಪೂರ್ಣ ಲಾಕ್ ಡೌನ್; ಮದುವೆ ಮಾಡಬಹುದೇ? ಭಾನುವಾರ ಸಂಪೂರ್ಣ ಲಾಕ್ ಡೌನ್; ಮದುವೆ ಮಾಡಬಹುದೇ?

ಭಾನುವಾರ ಏನೆಲ್ಲ ಬಂದ್.?

ಭಾನುವಾರ ಏನೆಲ್ಲ ಬಂದ್.?

* ಸಾರ್ವಜನಿಕ ಸಂಚಾರ ಸಂಪೂರ್ಣ ಬಂದ್.

* ಬಿ.ಎಂ.ಟಿ.ಸಿ ಮತ್ತು ಕೆ.ಎಸ್.ಆರ್.ಟಿ.ಸಿ ಬಸ್ ಇರಲ್ಲ.

* ಆಟೋ, ಕ್ಯಾಬ್ ರಸ್ತೆಗಿಳಿಯಲ್ಲ.

* ಬ್ಯೂಟಿ ಪಾರ್ಲರ್, ಸಲೂನ್, ಸ್ಪಾ ಕ್ಲೋಸ್

* ಬಟ್ಟೆ ಅಂಗಡಿ, ಚಪ್ಪಲಿ ಅಂಗಡಿ ಸೇರಿದಂತೆ ಎಲ್ಲಾ ರೀತಿಯ ಅಂಗಡಿಗಳು ಬಂದ್.

* ಎಲ್ಲಾ ಫ್ಯಾಕ್ಟರಿಗಳು, ಕಂಪನಿಗಳು ಲಾಕ್.

* ಚಿನ್ನ-ಬೆಳ್ಳಿ ಅಂಗಡಿಗಳು ತೆರೆಯುವಂತಿಲ್ಲ.

* ಪಾರ್ಕ್ ಗಳಿಗೂ ಬೀಗ.

* ಖಾಸಗಿ ವಾಹನಗಳಲ್ಲಿ ಯಾರೂ ಓಡಾಡುವಂತಿಲ್ಲ.

* ಇತರೆ ಜಿಲ್ಲೆಗಳಿಗೆ ಪ್ರಯಾಣ ಮಾಡುವಂತಿಲ್ಲ.

ಭಾನುವಾರ ಮದುವೆ ನಡೆಯಬಹುದಾ.?

ಭಾನುವಾರ ಮದುವೆ ನಡೆಯಬಹುದಾ.?

* ಈಗಾಗಲೇ ನಿಗದಿಯಾಗಿರುವ ಮದುವೆ ನಡೆಸಲು ಅವಕಾಶ ಇದೆ.

* ಮದುವೆ ಸಮಾರಂಭದಲ್ಲಿ ಸಾರ್ವಜನಿಕ ಅಂತರ ಕಡ್ಡಾಯ.

* ಮದುವೆ ಸಮಾರಂಭದಲ್ಲಿ 50 ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ.

* ಸರಳ ವಿವಾಹ ನಡೆಸಲು ಅನುಮತಿ

English summary
Sunday Lockdown in Karnataka: What Is Available And What Is Not Available On Sunday In Karnataka. Here is the complete list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X