ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾನುವಾರವೂ ಇನ್ನು ಮುಂದೆ ಲಾಕ್ ಡೌನ್ ಇಲ್ಲ?

|
Google Oneindia Kannada News

ಬೆಂಗಳೂರು, ಜುಲೈ 27 : ಕರ್ನಾಟಕದಲ್ಲಿ ಆಗಸ್ಟ್ 2ರ ಬಳಿಕವೂ ಭಾನುವಾರದ ಲಾಕ್ ಡೌನ್ ಮುಂದುವರೆಯಲಿದೆಯೇ?. ಸರ್ಕಾರ ಲಾಕ್ ಡೌನ್ ಮುಂದುವರೆಸುವ ಕುರಿತು ಯಾವುದೇ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಕೆಲವು ಸಚಿವರು ಭಾನುವಾರದ ಲಾಕ್ ಡೌನ್ ಬೇಡ ಎಂಬ ಬೇಡಿಕೆ ಮುಂದಿಟ್ಟಿದ್ದಾರೆ.

Recommended Video

Karnataka Government ಒಂದು ವರ್ಷದ ಸಾಧನೆ ಕುರಿತ ಪುಸ್ತಕ ಬಿಡಗಡೆ | Oneindia Kannada

ಭಾನುವಾರದ ಲಾಕ್ ಡೌನ್ ಅನ್ನು 3 ವಾರಗಳ ಕಾಲ ವಿಸ್ತರಣೆ ಮಾಡಲಾಗಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಆದರೆ, ಸರ್ಕಾರ ಇನ್ನೂ ಈ ಕುರಿತು ಅಂತಿಮ ತೀರ್ಮಾನ ಮಾಡಿಲ್ಲ. ತಜ್ಞರ ಸಮಿತಿ ಶಿಫಾರಸಿನ ಅನ್ವಯ ಅಂತಿಮ ತೀರ್ಮಾನವನ್ನು ಕೈಗೊಳ್ಳಲಾಗುತ್ತದೆ.

ಬೆಂಗಳೂರು ನಗರದಲ್ಲಿ ಭಾನುವಾರದ ಕರ್ಫ್ಯೂ ಮತ್ತೆ ಜಾರಿ ಬೆಂಗಳೂರು ನಗರದಲ್ಲಿ ಭಾನುವಾರದ ಕರ್ಫ್ಯೂ ಮತ್ತೆ ಜಾರಿ

ಪ್ರಸ್ತುತ ಜಾರಿಯಲ್ಲಿರುವ ಭಾನುವಾರದ ಲಾಕ್ ಡೌನ್ ಆಗಸ್ಟ್ 2ರ ತನಕ ಜಾರಿಯಲ್ಲಿರುತ್ತದೆ. ಬಳಿಕ ಇದನ್ನು ಮುಂದುವರೆಸುವ ಕುರಿತು ತೀರ್ಮಾನ ಕೈಗೊಳ್ಳಬೇಕಿದೆ. ಕರ್ನಾಟಕದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣ ಹೆಚ್ಚುತ್ತಿರುವುದರಿಂದ ಲಾಕ್ ಡೌನ್ ವಿಸ್ತರಣೆ ಮಾಡಬಹುದು ಎಂಬ ಸುದ್ದಿ ಹಬ್ಬಿದೆ.

ಭಾನುವಾರ ಕರ್ಫ್ಯೂ: ಮದ್ಯ ಮಾರಾಟ ಇದೆಯೊ ?ಇಲ್ಲವೊ?ಭಾನುವಾರ ಕರ್ಫ್ಯೂ: ಮದ್ಯ ಮಾರಾಟ ಇದೆಯೊ ?ಇಲ್ಲವೊ?

ಬೆಂಗಳೂರು ಸೇರಿದಂತೆ ಯಾವುದೇ ಜಿಲ್ಲೆಗಳಲ್ಲಿ ಲಾಕ್ ಡೌನ್ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಎಲ್ಲಾ ಜಿಲ್ಲೆಗಳಲ್ಲಿ ಈಗ ಭಾನುವಾರದ ಲಾಕ್ ಡೌನ್ ಮಾತ್ರ ಜಾರಿಯಲ್ಲಿದೆ.

ಕರ್ನಾಟಕದಲ್ಲಿ ಆಗಸ್ಟ್ ತಿಂಗಳಲ್ಲೂ ಭಾನುವಾರದ ಲಾಕ್ ಡೌನ್ ವಿಸ್ತರಣೆ ಕರ್ನಾಟಕದಲ್ಲಿ ಆಗಸ್ಟ್ ತಿಂಗಳಲ್ಲೂ ಭಾನುವಾರದ ಲಾಕ್ ಡೌನ್ ವಿಸ್ತರಣೆ

ಶನಿವಾರ ರಾತ್ರಿಯಿಂದ ಕರ್ಫ್ಯೂ

ಶನಿವಾರ ರಾತ್ರಿಯಿಂದ ಕರ್ಫ್ಯೂ

ಭಾನುವಾರದ ಸಂಪೂರ್ಣ ಲಾಕ್ ಡೌನ್ ಎಂದರೆ ಶನಿವಾರ ರಾತ್ರಿ 9 ಗಂಟೆಯಿಂದ ಸೋಮವಾರ ಮುಂಜಾನೆ 5 ಗಂಟೆ ತನಕ ಕರ್ನಾಟಕದಲ್ಲಿ ಕರ್ಫ್ಯೂ ಜಾರಿಯಲ್ಲಿರುತ್ತದೆ. ಭಾನುವಾರ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಅಂಗಡಿ, ಹೋಟಲ್‌ಗಳು ಬಂದ್ ಆಗಿರುತ್ತವೆ.

ಬಸ್, ಆಟೋ ಸಂಚಾರವಿಲ್ಲ

ಬಸ್, ಆಟೋ ಸಂಚಾರವಿಲ್ಲ

ಭಾನುವಾರದ ಲಾಕ್ ಡೌನ್‌ನಲ್ಲಿ ಶನಿವಾರ ರಾತ್ರಿಯಿಂದಲೇ ಬಸ್‌ಗಳ ಸಂಚಾರ ಸ್ಥಗಿತಗೊಳ್ಳುತ್ತದೆ. ಬಸ್, ಆಟೋ, ಟ್ಯಾಕ್ಸಿಗಳ ಸಂಚಾರ ಇರುವುದಿಲ್ಲ. ಯಾವುದೇ ಜಿಲ್ಲೆಗೆ ಸಂಚಾರ ನಡೆಸುವುದು ಅಸಾಧ್ಯ. ಖಾಸಗಿ ವಾಹನಗಳ ಸಂಚಾರಕ್ಕೆ ಸಹ ನಿರ್ಬಂಧವಿರಲಿದೆ.

ಲಾಕ್ ಡೌನ್ ಬೇಡ

ಲಾಕ್ ಡೌನ್ ಬೇಡ

ರಾಜ್ಯದ ಆರ್ಥಿಕ ಪರಿಸ್ಥಿತಿ ದೃಷ್ಟಿಯಿಂದ ಭಾನುವಾರದ ಲಾಕ್ ಡೌನ್ ತೆರವು ಮಾಡಬೇಕು ಎಂಬುದು ಕೆಲವು ಸಚಿವರ ಅಭಿಪ್ರಾಯವಾಗಿದೆ. ಕರ್ನಾಟಕ ಸರ್ಕಾರ ಲಾಕ್ ಡೌನ್ ಮುಂದುವರೆಸುವ ಅಥವ ತೆರವುಗೊಳಿಸುವ ಕುರಿತು ಯಾವುದೇ ತೀರ್ಮಾನವನ್ನು ಇನ್ನೂ ಕೈಗೊಂಡಿಲ್ಲ.

ಹೊಸ ಮಾರ್ಗಸೂಚಿ ಪ್ರಕಟ

ಹೊಸ ಮಾರ್ಗಸೂಚಿ ಪ್ರಕಟ

ಅನ್ ಲಾಕ್ 2.0 ಜುಲೈ 30ರಂದು ಅಂತ್ಯಗೊಳ್ಳಲಿದೆ. ಬಳಿಕ ಕೇಂದ್ರ ಗೃಹ ಸಚಿವಾಲಯ ಹೊಸ ಮಾರ್ಗಸೂಚಿ ಪ್ರಕಟಿಸಲಿದೆ. ಈ ಮಾರ್ಗಸೂಚಿ ನೋಡಿಕೊಂಡು ಭಾನವಾರದ ಲಾಕ್ ಡೌನ್ ಮುಂದುವರೆಸುವ ಕುರಿತು ಕರ್ನಾಟಕ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ. ಅದಕ್ಕೂ ಮೊದಲು ತಜ್ಞರ ಜೊತೆ ಸಭೆಯನ್ನು ನಡೆಸಲಿದೆ.

English summary
Karnataka government yet to decide to extend complete lockdown on every Sunday. Expert committee will take final decision soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X