ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾನುವಾರ ಸಂಪೂರ್ಣ ಲಾಕ್ ಡೌನ್; ಮದುವೆ ಮಾಡಬಹುದೇ?

|
Google Oneindia Kannada News

ಬೆಂಗಳೂರು, ಮೇ 21 : ಕರ್ನಾಟಕ ಸರ್ಕಾರ ಮೇ 31ರ ತನಕ ಲಾಕ್ ಡೌನ್ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ನಿಯಮದಲ್ಲಿ ಸಡಿಲಿಕೆ ಇದ್ದರೂ ಭಾನುವಾರ ಸಂಪೂರ್ಣ ಲಾಕ್ ಡೌನ್ ಜಾರಿಯಲ್ಲಿರುತ್ತದೆ ಎಂದು ಹೇಳಿದೆ.

Recommended Video

ಶಿವಮೊಗ್ಗದ ಸಾಗರದಲ್ಲಿ ಸೋನಿಯಾ ಗಾಂಧಿ ವಿರುದ್ಧ ದಾಖಲಾಯ್ತು FIR | Sonia Gandhi | Oneindia Kannada

ಸರ್ಕಾರದ ಆದೇಶದಂತೆ ಪ್ರತಿದಿನ ಸಂಜೆ 7 ರಿಂದ ಬೆಳಗ್ಗೆ 7ರ ತನಕ ಎಲ್ಲಾ ಅವಶ್ಯಕವಲ್ಲದ ಚಟುವಟಿಕೆ, ವ್ಯಕ್ತಿಗಳ ಸಂಚಾರವನ್ನು ಕಟ್ಟುನಿಟ್ಟಾಗಿ ನಿಷೇಧಿಸಬೇಕು.

 ಅಪ್ರಾಪ್ತೆ ಮದುವೆ ತಡೆಯಲು ಹೋದ ಶಿವಮೊಗ್ಗ ಪೊಲೀಸರಿಗೀಗ ಕ್ವಾರಂಟೈನ್ ಅಪ್ರಾಪ್ತೆ ಮದುವೆ ತಡೆಯಲು ಹೋದ ಶಿವಮೊಗ್ಗ ಪೊಲೀಸರಿಗೀಗ ಕ್ವಾರಂಟೈನ್

ಭಾನುವಾರದಂದು ಹೆಚ್ಚುವರಿಯಾಗಿ ಬೆಳಗ್ಗೆ 7ರಿಂದ ಸಂಜೆ 7 ಗಂಟೆಯ ತನಕ ಸಹ ಎಲ್ಲಾ ಅವಶ್ಯಕವಲ್ಲದ ಚಟುವಟಿಕೆ, ವ್ಯಕ್ತಿಗಳ ಸಂಚಾರವನ್ನು ನಿಷೇಧಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಮದುವೆ ಸಮಾರಂಭಕ್ಕೆ ಸರಕಾರ ಹೊರಡಿಸಿದ 17 ನಿಯಮಗಳ ಪಟ್ಟಿ ಮದುವೆ ಸಮಾರಂಭಕ್ಕೆ ಸರಕಾರ ಹೊರಡಿಸಿದ 17 ನಿಯಮಗಳ ಪಟ್ಟಿ

Sunday Lock Down People Can Conduct Marriage

ಭಾನುವಾರದ ಲಾಕ್ ಡೌನ್ ಕುರಿತು ಜನರಲ್ಲಿ ಗೊಂದಲ ಉಂಟಾಗಿದೆ. ಭಾನುವಾರ ಪೂರ್ಣದಿನದ ಲಾಕ್ ಡೌನ್ ಜಾರಿಯಲ್ಲಿ ಇರುತ್ತದೆ. ಈ ಹಿನ್ನಲೆಯಲ್ಲಿ ಈಗಾಗಲೇ ನಿಗದಿಪಡಿಸಿರುವ ಮದುವೆ ಸಮಾರಂಭಗಳನ್ನು ನಡೆಸುವ ಕುರಿತು ಗೊಂದಲ ಆಗಿತ್ತು.

 ಕೊರೊನಾ ಭೀತಿ: ಭಾರತದಲ್ಲಿ ಜೂಮ್ ವಿಡಿಯೋ ಕಾಲ್ ಮೂಲಕ ಮದುವೆ ಕೊರೊನಾ ಭೀತಿ: ಭಾರತದಲ್ಲಿ ಜೂಮ್ ವಿಡಿಯೋ ಕಾಲ್ ಮೂಲಕ ಮದುವೆ

ಈಗ ಸರ್ಕಾರ ಹೊಸ ಆದೇಶದ ಮೂಲಕ ಈ ಗೊಂದಲದ ಬಗ್ಗೆ ಸ್ಪಷ್ಟೀಕರಣ ನೀಡಿದೆ. ಭಾನುವಾರ ಸಂಪೂರ್ಣ ಲಾಕ್ ಡೌನ್ ಇದ್ದರೂ ಈಗಾಗಲೇ ನಿಗದಿಯಾಗಿರುವ ವಿವಾಹಗಳನ್ನು ನಡೆಸಬಹುದಾಗಿದೆ.

ವಿವಾಹಗಳನ್ನು ನಡೆಸುವ ಸಂದರ್ಭದಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಗರಿಷ್ಠ ಅತಿಥಿಗಳ ಸಂಖ್ಯೆಯನ್ನು 50ಕ್ಕೆ ಮಿತಿಗೊಳಿಸಬೇಕು. ಸರಳವಾಗಿ ವಿವಾಹ ನಡೆಸಲು ಅನುಮತಿ ನೀಡಬೇಕು ಎಂದು ಸ್ಪಷ್ಟೀಕರಣ ನೀಡಲಾಗಿದೆ.

ಎಲ್ಲಾ ಜಿಲ್ಲಾಧಿಕಾರಿಗಳಿಗೂ ಈ ಆದೇಶವನ್ನು ಕಳುಹಿಸಲಾಗಿದೆ. ಸಂಪೂರ್ಣ ಲಾಕ್ ಡೌನ್ ಇರುವ ಭಾನುವಾರವೂ ಅವಶ್ಯ ಚಟುವಟಿಕೆಗಳಿಗೂ ಅವಕಾಶ ಇರುವುದನ್ನು ಗಮನಿಸಬೇಕು ಎಂದು ಸರ್ಕಾರ ತನ್ನ ಆದೇಶದಲ್ಲಿ ಹೇಳಿದೆ.

English summary
Karnataka extended lock down till May 31, 2020 with some relaxations. But every Sunday no relaxation in lock down from morning 7 to evening 7. Govt allowed to conduct marriage on Sunday with limited guests.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X