ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಮಾರಸ್ವಾಮಿ Vs ಸುಮಲತಾ ನಡುವಿನ ಸಂಘರ್ಷ: ವೈ.ಎಸ್.ವಿ ದತ್ತ ಮನಮಿಡಿಯುವ ಪೋಸ್ಟ್

|
Google Oneindia Kannada News

ಬೆಂಗಳೂರು, ಜುಲೈ 9: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಸಂಸದೆ ಸುಮಲತಾ ನಡುವಿನ ಸಂಘರ್ಷ ಬೇರೆ ಬೇರೆ ಆಯಾಮ ಪಡೆಯುತ್ತಿರುವ ಹೊತ್ತಿನಲ್ಲಿ ಜೆಡಿಎಸ್ ಮುಖಂಡರಾದ ವೈ.ಎಸ್.ವಿ ದತ್ತ, ಪಕ್ಷದ ಕಾರ್ಯಕರ್ತರಲ್ಲಿ ಪತ್ರ ಮುಖೇನ ಮನವಿ ಮಾಡಿಕೊಂಡಿದ್ದಾರೆ. ಅದು ಹೀಗಿದೆ:

"ಈಗ ಕೆಲವು ದಿನಗಳಿಂದ ನಡೆಯುತ್ತಿರುವ ಶ್ರೀ ಕುಮಾರಸ್ವಾಮಿ ಮತ್ತು ಶ್ರೀಮತಿ ಸುಮಲತಾರವರ ನಡುವಿನ ಸಂಘರ್ಷ ಕಾರ್ಯಕರ್ತರಾದ ನಿಮಗೆ ಸಹಜವಾಗಿ ನೋವು ಮತ್ತು ಬೇಸರ ತರಿಸಿದೆ ಎಂಬುದನ್ನು ನಾನು ಬಲ್ಲೆ".

 ತಂದೆ ಮುಂದೆ ಕಣ್ಣೀರಿಟ್ಟು ರಾಜಕೀಯ ನಿವೃತ್ತಿಯ ಬಗ್ಗೆ ಮಾತನಾಡಿದ ಕುಮಾರಸ್ವಾಮಿ? ತಂದೆ ಮುಂದೆ ಕಣ್ಣೀರಿಟ್ಟು ರಾಜಕೀಯ ನಿವೃತ್ತಿಯ ಬಗ್ಗೆ ಮಾತನಾಡಿದ ಕುಮಾರಸ್ವಾಮಿ?

"ಪಕ್ಷದ ವರಿಷ್ಠ ನಾಯಕರೊಬ್ಬರ ಬಗ್ಗೆ ಪ್ರತಿಕ್ರಿಯೆಗಳು ಪ್ರಕಟವಾದಾಗ ನೀವು ಸಹಜವಾಗಿ ತಕ್ಷಣದ ಆವೇಶಕ್ಕೆ ಒಳಗಾಗುತ್ತೀರಿ. ಇದು ಸಹಜ ವೆಂದು ಭಾವಿಸಿದರೂ ಪಕ್ಷದ ಮುಂದಿನ ದೃಷ್ಟಿಯಿಂದಲೂ ನಾವು ತಣ್ಣಗೆ ಚಿಂತಿಸಬೇಕಾಗುತ್ತದೆ".

"ಜನ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಬಿಜೆಪಿ ನೇತೃತ್ವದ ಆಡಳಿತದ ವೈಫಲ್ಯಗಳ ಸರಮಾಲೆ , ಜನವಿರೋಧಿ ನಿರ್ಧಾರಗಳು ,ಅಸಹನೀಯ ಬೆಲೆಯೇರಿಕೆ ಇವುಗಳಿಂದ ತತ್ತರಿಸಿ ಹೋಗಿದ್ದಾರೆ.ಮನಸ್ಸಿನಲ್ಲಿಯೇ ಹಿಡಿಶಾಪ ಹಾಕುತ್ತಿದ್ದಾರೆ".

ಮಂಡ್ಯ ಸಂಸದೆ ಸುಮಲತಾ ಬೆಂಗಳೂರು ನಿವಾಸಕ್ಕೆ ಪೊಲೀಸರ ಬಿಗಿ ಭದ್ರತೆ ಮಂಡ್ಯ ಸಂಸದೆ ಸುಮಲತಾ ಬೆಂಗಳೂರು ನಿವಾಸಕ್ಕೆ ಪೊಲೀಸರ ಬಿಗಿ ಭದ್ರತೆ

ಪಕ್ಷದ ವತಿಯಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಕಾಲ ಪಕ್ವವಾಗಿದೆ

ಪಕ್ಷದ ವತಿಯಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಕಾಲ ಪಕ್ವವಾಗಿದೆ

"ಇಂತಹ ನೂರಾರು ಸಂಗತಿಗಳು ನಮ್ಮ ಮುಂದಿದ್ದು ಜನಪರವಾಗಿ ಪಕ್ಷದ ವತಿಯಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಕಾಲ ಪಕ್ವವಾಗಿದೆ. ಇದುವರೆಗೂ ಕೊರೊನಾ ಲಾಕ್ ಡೌನ್ ಇತ್ತು. ಕೊರೊನಾ ವಿಷಯದಲ್ಲಿ ನಾವು ಸಾಮಾಜಿಕವಾಗಿ ನಮ್ಮ ಕರ್ತವ್ಯ ನಿರ್ವಹಿಸುವ ಅವಶ್ಯಕತೆಯೂ ಇತ್ತು" ಎಂದು ದತ್ತ, ಪತ್ರದಲ್ಲಿ ಬರೆದಿದ್ದಾರೆ.

ವೈ.ಎಸ್.ವಿ ದತ್ತ ಮನಮಿಡಿಯುವ ಪೋಸ್ಟ್

ವೈ.ಎಸ್.ವಿ ದತ್ತ ಮನಮಿಡಿಯುವ ಪೋಸ್ಟ್

"ಆದುದರಿಂದ ಆಡಳಿತ ಪಕ್ಷದ ಜನವಿರೋಧಿ ನೀತಿ ನಿರ್ಧಾರಗಳ ವಿರುದ್ಧ ಜನಾಭಿಪ್ರಾಯ ಮೂಡಿಸುವ ಕಾರ್ಯಕ್ರಮಗಳಿಗೆ ನಾವು ಮುಂದಾಗುವುದು ಸಾಧ್ಯವಾಗಲಿಲ್ಲ. ಆದುದರಿಂದ ನನ್ನ ವಿನಂತಿ ಇಷ್ಟು.

ದಯವಿಟ್ಟು ನಮ್ಮ ಪಕ್ಷದ ಕಾರ್ಯಕರ್ತರು ಪಕ್ಷದ ವರ್ಚಸ್ಸು, ಬೆಳವಣಿಗೆ ಹಾಗೂ ಭವಿಷ್ಯದ ಚುನಾವಣೆ , ಇವುಗಳನ್ನು ಮೊದಲ ಆದ್ಯತೆ ಎಂದು ಭಾವಿಸಿ ಈ ನಿಟ್ಟಿನಲ್ಲಿ ಚಿಂತಿಸಬೇಕು" - ವೈ.ಎಸ್.ವಿ ದತ್ತ.
ಸ್ವಯಂ ಸಹನೆ ಹಾಗೂ ಸಂಯಮವನ್ನು ತೋರಿಸುವುದು ಈ ಗಳಿಗೆಯ ನಮ್ಮೆಲ್ಲರ ಕರ್ತವ್ಯ

ಸ್ವಯಂ ಸಹನೆ ಹಾಗೂ ಸಂಯಮವನ್ನು ತೋರಿಸುವುದು ಈ ಗಳಿಗೆಯ ನಮ್ಮೆಲ್ಲರ ಕರ್ತವ್ಯ

"ಜೊತೆಗೆ ಕಾರ್ಯಪ್ರವೃತ್ತರಾಗಬೇಕಿದೆ. ಅನಗತ್ಯವಾಗಿ ನಮ್ಮನ್ನು ಪ್ರಚೋದಿಸಿ ಕೆರಳಿಸಿ, ನಮ್ಮಿಂದಲೇ ನಮ್ಮ ಪಕ್ಷದ ವರ್ಚಸ್ಸು ಕಡಿಮೆಯಾಗುವಂತಹ ನಮ್ಮ ಎದುರಾಳಿಗಳ ತಂತ್ರಕ್ಕೆ ನಾವು ಬಲಿಯಾಗದಂತೆ ಸ್ವಯಂ ಸಹನೆ ಹಾಗೂ ಸಂಯಮವನ್ನು ತೋರಿಸುವುದು ಈ ಗಳಿಗೆಯ ನಮ್ಮೆಲ್ಲರ ಕರ್ತವ್ಯವಾಗಿದೆ" ಎಂದು ವೈ.ಎಸ್.ವಿ ದತ್ತ ಮನವಿ ಮಾಡಿಕೊಂಡಿದ್ದಾರೆ.

ದೃಶ್ಯಗಳ ದುರ್ಬಳಕೆ ಮಾಡಿಕೊಳ್ಳಲು ಯತ್ನ: ರಾಕ್ಲೈನ್ ವೆಂಕಟೇಶ್

ದೃಶ್ಯಗಳ ದುರ್ಬಳಕೆ ಮಾಡಿಕೊಳ್ಳಲು ಯತ್ನ: ರಾಕ್ಲೈನ್ ವೆಂಕಟೇಶ್

ನಾನು ಮತ್ತು ಸುಮಲತಾ ಹೋಟೆಲ್‌ಗೆ ತೆರಳುತ್ತಿದ್ದ ದೃಶ್ಯಗಳನ್ನು ಹೋಟೆಲ್‌ನ ಸಿಸಿ ಕ್ಯಾಮರಾದಿಂದ ಪಡೆದು ಆ ದೃಶ್ಯಗಳ ದುರ್ಬಳಕೆ ಮಾಡಿಕೊಳ್ಳಲು ಯತ್ನಿಸಿದ್ದರು ಎಂದು ಚಿತ್ರ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಅವರು ಎಚ್ಡಿಕೆ ವಿರುದ್ದ ಆರೋಪ ಮಾಡಿದ್ದರು.ಇದರಿಂದ ಕುಪಿತರಾದ ಕುಮಾರಸ್ವಾಮಿ ಅಭಿಮಾನಿಗಳು ರಾಕ್​ಲೈನ್ ನಿವಾಸಕ್ಕೆ ಮುತ್ತಿಗೆ ಹಾಕಿ, ಕ್ಷಮೆ ಕೇಳುವಂತೆ ಬಿಗಿಪಟ್ಟು ಹಿಡಿದಿದ್ದಾರೆ.

Recommended Video

Sumalatha Vs HD Kumarswamy | ಅಂಬರೀಶ್ ಸ್ಮಾರಕಕ್ಕೆ ಅನುದಾನ ಕೊಟ್ಟಿದ್ದು ಯಾರು? | Oneindia Kannada

English summary
Sumalatha vs HD Kumaraswamy Verbal War: JDS Leader YSV Datta wrote letter to party workers requesting them to act wisely.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X