ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು-ಬೆಂಗಳೂರು ಮಧ್ಯೆ ಮಹಿಳೆಯರಿಗಾಗಿ ವಿಶೇಷ ರೈಲು: ಸುಮಲತಾ ಒತ್ತಾಯ

|
Google Oneindia Kannada News

ಮೈಸೂರು, ಅಕ್ಟೋಬರ್ 15: ಮೈಸೂರುನಿಂದ ಬೆಂಗಳೂರಿಗೆ ಮಹಿಳೆಯರಿಗಾಗಿಯೇ ವಿಶೇಷ ರೈಲು ಆರಂಭಿಸುವಂತೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಮನವಿ ಮಾಡಿದ್ದಾರೆ.

ರಾಜ್ಯದ ಸಂಸದರು ಮತ್ತು ಉನ್ನತ ಮಟ್ಟದ ರೈಲ್ವೆ ಅಧಿಕಾರಿಗಳ ಮಧ್ಯೆ ನಿನ್ನೆ ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅವರು ಈ ಪ್ರಸ್ತಾವನೆಯನ್ನು ಮುಂದಿಟ್ಟಿದ್ದಾರೆ.

ಶೀಘ್ರ ಬೆಂಗಳೂರಲ್ಲಿ ಸಬ್‌ಅರ್ಬನ್ ರೈಲು ಸಂಚಾರ, ಎಲ್ಲಿಗೆ ಹೆಚ್ಚು ಟ್ರಿಪ್ಶೀಘ್ರ ಬೆಂಗಳೂರಲ್ಲಿ ಸಬ್‌ಅರ್ಬನ್ ರೈಲು ಸಂಚಾರ, ಎಲ್ಲಿಗೆ ಹೆಚ್ಚು ಟ್ರಿಪ್

ಪ್ರತಿನಿತ್ಯ ಉದ್ಯೋಗಕ್ಕೆ ಹೋಗುವ ಮಹಿಳೆಯರಿಗೆ ಅನುಕೂಲವಾಗಲು ಮಹಿಳೆಯರಿಗೆ ವಿಶೇಷ ರೈಲನ್ನು ಬೆಂಗಳೂರು-ಮೈಸೂರು ಮಧ್ಯೆ ಪ್ರಾರಂಭಿಸುವಂತೆ ಮಂಡ್ಯ ಕ್ಷೇತ್ರದ ಲೋಕಸಭಾ ಸದಸ್ಯೆ ಸುಮಲತಾ ನೈರುತ್ಯ ರೈಲ್ವೆ ವಲಯದ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

Sumalatha Urges Womens Special Train Between Bengaluru And Mysuru

ಈ ಬಗ್ಗೆ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರಿಗೆ ಸಹ ಪತ್ರ ಬರೆದಿದ್ದೇನೆ ಎಂದರು.

ಮೈಸೂರು-ಬೆಂಗಳೂರು ಮಧ್ಯೆ ಪ್ರತಿನಿತ್ಯ ಸುಮಾರು 4 ಸಾವಿರದಿಂದ 5 ಸಾವಿರದವರೆಗೆ ಮಹಿಳೆಯರು ಉದ್ಯೋಗಕ್ಕೆ ಓಡಾಡುತ್ತಿರುತ್ತಾರೆ.

ಜನದಟ್ಟಣೆ ಅವಧಿಯಲ್ಲಿ ಮಹಿಳೆಯರಿಗೆ ವಿಶೇಷ ರೈಲು ಬಿಡುಗಡೆ ಮಾಡಿದರೆ ಅವರಿಗೆ ಕೆಲಸಕ್ಕೆ ಹೋಗಲು ಅನುಕೂಲವಾಗುತ್ತದೆ. ನಾನು ಚುನಾವಣಾ ಪ್ರಚಾರ ನಡೆಸುವ ವೇಳೆ ಮಂಡ್ಯ ಜಿಲ್ಲೆಯ ಮಹಿಳೆಯರು ಈ ಬೇಡಿಕೆಯನ್ನು ನನ್ನ ಮುಂದಿಟ್ಟಿದ್ದರು.

English summary
Mandya MP Sumalatha Ambareesh has appealed for the opening of a special train for women from Mysuru to Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X