ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಮಲತಾ ಜೊತೆ ಕಾಂಗ್ರೆಸ್ ನಾಯಕರ ಔತಣ : ಯಾರು, ಏನು ಹೇಳಿದರು?

|
Google Oneindia Kannada News

Recommended Video

ಔತಣಕೂಟದ ಬಗ್ಗೆ ರಾಜಕೀಯ ನಾಯಕರು ಏನಂದ್ರು ಗೊತ್ತಾ?

ಬೆಂಗಳೂರು, ಮೇ 03 : ಸಮಂಡ್ಯ ಲೋಕಸಭಾ ಚುನಾವಣೆಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಜೊತೆ ಕಾಂಗ್ರೆಸ್ ನಾಯಕರು ಔತಣ ಕೂಟ ಮಾಡಿದ ಬಗ್ಗೆ ಬಾರಿ ಚರ್ಚೆ ನಡೆಯುತ್ತಿದೆ. ಹಲವು ನಾಯಕರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಏಪ್ರಿಲ್ 30ರಂದು ಮಂಡ್ಯದ ಖಾಸಗಿ ಹೋಟೆಲ್‌ನಲ್ಲಿ ನಡೆದ ಔತಣ ಕೂಟದ ಬಗ್ಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದೊಳಗೆ ಚರ್ಚೆ ನಡೆಯುತ್ತಿದೆ. ಸುಮಲತಾ ಅಂಬರೀಶ್ ಅವರ ಜೊತೆ ಔತಣ ಕೂಟ ನಡೆಸಿದ ನಾಯಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗುತ್ತಿದೆ.

ಕಾಂಗ್ರೆಸ್ ನಾಯಕರ ಜೊತೆ ಸುಮಲತಾ ಸಭೆ, ಚಲುವರಾಯಸ್ವಾಮಿ ಹೇಳಿದ್ದೇನು?ಕಾಂಗ್ರೆಸ್ ನಾಯಕರ ಜೊತೆ ಸುಮಲತಾ ಸಭೆ, ಚಲುವರಾಯಸ್ವಾಮಿ ಹೇಳಿದ್ದೇನು?

ಸುಮಲತಾ ಅಂಬರೀಶ್ ಜೊತೆಗಿನ ಔತಣಕೂಟದಲ್ಲಿ ಮಾಜಿ ಸಚಿವರಾದ ಚಲುವರಾಯಸ್ವಾಮಿ, ನರೇಂದ್ರ ಸ್ವಾಮಿ, ಮಳವಳ್ಳಿ ಶಿವಣ್ಣ, ರಘುವೀರ್ ಗೌಡ, ಮಾಗಡಿ ಬಾಲಕೃಷ್ಣ ಸೇರಿದಂತೆ ಹಲವು ನಾಯಕರು ಪಾಲ್ಗೊಂಡಿದ್ದರು.

ಸುಮಲತಾ ಜತೆ ರಹಸ್ಯ ಸಭೆ, ದೂರು ಬಂದರೆ ಕ್ರಮ: ಪರಮೇಶ್ವರ್ಸುಮಲತಾ ಜತೆ ರಹಸ್ಯ ಸಭೆ, ದೂರು ಬಂದರೆ ಕ್ರಮ: ಪರಮೇಶ್ವರ್

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 'ಸಭೆ ನಡೆಸಿದ್ದಾರೆ ಎಂದಾಕ್ಷಣ ಪಕ್ಷೇತರ ಅಭ್ಯರ್ಥಿಗೆ ಬೆಂಬಲ ನೀಡಿದ್ದಾರೆ ಎಂದು ಅಲ್ಲ. ಊಟ ಮಾಡಿದರೆ ತಪ್ಪೇನು?' ಎಂದು ಪ್ರಶ್ನೆ ಮಾಡಿದ್ದಾರೆ....

ಪಕ್ಷೇತರ ಅಭ್ಯರ್ಥಿ ಸುಮಲತಾ ಜೊತೆ ಕಾಂಗ್ರೆಸ್ ಮುಖಂಡರ ರಹಸ್ಯ ಸಭೆಪಕ್ಷೇತರ ಅಭ್ಯರ್ಥಿ ಸುಮಲತಾ ಜೊತೆ ಕಾಂಗ್ರೆಸ್ ಮುಖಂಡರ ರಹಸ್ಯ ಸಭೆ

ಬೆಂಬಲ ಕೊಟ್ಟಿದ್ದಾರೆ ಅಂತ ಅಲ್ಲ

ಬೆಂಬಲ ಕೊಟ್ಟಿದ್ದಾರೆ ಅಂತ ಅಲ್ಲ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕುರಿತು ಪ್ರತಿಕ್ರಿಯೆ ನೀಡಿದ್ದು, 'ಸಭೆ ಮಾಡಿದರೆ ಅಂದಾಕ್ಷಣ ಪಕ್ಷೇತರ ಅಭ್ಯರ್ಥಿಗೆ ಬೆಂಬಲ ಕೊಟ್ಟಿದ್ದಾರೆ ಅಂತ ಅಲ್ಲ. ಸಭೆ ಯಾಕೆ ಮಾಡಿದರು ಎಂಬುದು ಗೊತ್ತಿಲ್ಲ. ಈ ಬಗ್ಗೆ ಮಂಡ್ಯ ಮುಖಂಡರಲ್ಲಿ ವಿಚಾರಿಸುತ್ತೇನೆ. ಚಲುವರಾಯಸ್ವಾಮಿ ಹಾಗೂ ನರೇಂದ್ರ ಸ್ವಾಮಿ ಅವರ ಜೊತೆ ಮಾತನಾಡುತ್ತೇನೆ' ಎಂದು ಹೇಳಿದ್ದಾರೆ.

ಯಾವುದೇ ಮುಜುಗರ ಇಲ್ಲ

ಯಾವುದೇ ಮುಜುಗರ ಇಲ್ಲ

ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಈ ಕುರಿತು ಪ್ರತಿಕ್ರಿಯೆ ನೀಡಿದ್ದು, 'ಚಲುವರಾಯಸ್ವಾಮಿ ಭೇಟಿಗೆ ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲ. ಇದರಿಂದ ಪಕ್ಷ ಹಾಗೂ ಸರ್ಕಾರಕ್ಕೆ ಯಾವುದೇ ಮುಜುಗರ ಆಗಿಲ್ಲ' ಎಂದು ಹೇಳಿದ್ದಾರೆ.

ಏಕೆ ಸೇರಿದ್ದರು ಎಂಬುದು ಗೊತ್ತಿಲ್ಲ

ಏಕೆ ಸೇರಿದ್ದರು ಎಂಬುದು ಗೊತ್ತಿಲ್ಲ

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಈ ಕುರಿತು ಪ್ರತಿಕ್ರಿಯೆ ನೀಡಿದ್ದು, 'ಯಾವ ರೀತಿಯಲ್ಲಿ ವಿಚಾರಣೆ ಮಾಡಬೇಕು ಎಂಬುದನ್ನು ಆ ಮೇಲೆ ನೋಡೋಣ. ಅವರು ಯಾವಾಗ ಮತ್ತು ಏಕೆ ಸೇರಿದ್ದರು ಎಂಬುದು ಗೊತ್ತಿಲ್ಲ. ಮೊದಲು ಅದನ್ನು ತಿಳಿದುಕೊಂಡು ಆ ಮೇಲೆ ಹೇಳುತ್ತೇನೆ' ಎಂದು ಹೇಳಿದರು.

ಶಿಖಂಡಿ ರಾಜಕಾರಣ ಮಾಡಲಾಗುತ್ತಿದೆ

ಶಿಖಂಡಿ ರಾಜಕಾರಣ ಮಾಡಲಾಗುತ್ತಿದೆ

ನಾಗಮಂಗಲ ಕ್ಷೇತ್ರದ ಜೆಡಿಎಸ್ ಶಾಸಕ ಸುರೇಶ್ ಗೌಡ ಅವರು ಈ ಕುರಿತು ಪ್ರತಿಕ್ರಿಯೆ ನೀಡಿದ್ದು, 'ಕೆಲವರು ಹೆಂಗಸರನ್ನು ಮುಂದಿಟ್ಟುಕೊಂಡು ಶಿಖಂಡಿ ರಾಜಕಾರಣ ಮಾಡಿದ್ದಾರೆ. ಮೈತ್ರಿ ಅಭ್ಯರ್ಥಿ ನಿಖಿಲ್ ವಿರುದ್ಧ ಕೆಲಸ ಮಾಡಿದ್ದಾರೆ. ಮೂಲ ಕಾಂಗ್ರೆಸ್‌ನವರು ಮೈತ್ರಿ ಧರ್ಮ ಪಾಲನೆ ಮಾಡಿದ್ದಾರೆ. ಆದರೆ, ಕಾಂಗ್ರೆಸ್‌ಗೆ ವಲಸೆ ಬಂದವರು ಬ್ಲಾಕ್ ಮೇಲ್ ರಾಜಕಾರಣ ಮಾಡಿದ್ದಾರೆ' ಎಂದು ಆರೋಪಿಸಿದರು.

ನಾವೇನು ಭಯೋತ್ಪಾದಕರೇ?

ನಾವೇನು ಭಯೋತ್ಪಾದಕರೇ?

ಚಲುವರಾಯಸ್ವಾಮಿ ಅವರು ಈ ಕುರಿತು ಪ್ರತಿಕ್ರಿಯೆ ನೀಡಿದ್ದು, 'ನಮ್ಮ ಹಿಂದೆ ಗುಪ್ತಚರ ಸಿಬ್ಬಂದಿಯನ್ನು ಬಿಡಲಾಗಿದೆ. ನಾವೇನು ಭಯೋತ್ಪಾದಕರೇ. ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡಲಾಗದ ಸ್ಥಿತಿ ಇತ್ತು. ಹಾಗಾಗಿ ನಾವು ಪ್ರಚಾರವನ್ನು ಮಾಡಿಲ್ಲ' ಎಂದು ಹೇಳಿದರು.

English summary
Mandya lok sabha seat independent candidate Sumalatha Ambareesh dinner with Congress leader N.Cheluvarayaswamy and other leaders. Who said what on this issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X