ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್‌ಎಸ್‌ಎಸ್‌ ಕಾರ್ಯಕರ್ತ ಅಂಗಾರಗೆ ಒಲಿದು ಬಂದ ಮಂತ್ರಿ ಪದವಿ!

|
Google Oneindia Kannada News

ಬೆಂಗಳೂರು, ಜ. 13: ಕಟ್ಟಾ ಆರ್‌ಎಸ್‌ಎಸ್‌ ಕಾರ್ಯಕರ್ತ, ದಲಿತ ನಾಯಕ ಎಸ್. ಅಂಗಾರ ಅವರಿಗೆ ಕೊನೆಗೂ ಮಂತ್ರಿ ಪದವಿ ದೊರಕಿದೆ. ಸತತ 6 ಬಾರಿ ಬಿಜೆಪಿಯಿಂದ ಶಾಸಕರಾಗಿ ಆಯ್ಕೆಯಾಗಿರುವ ಎಸ್. ಅಂಗಾರ ಅವರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಮೊದಲ ಬಾರಿ 1989ರಲ್ಲಿ ಕನಿಷ್ಠ ಮತಗಳ ಅಂತರದಲ್ಲಿ ಸೋಲುಂಡಿದ್ದರು. ನಂತರ ನಡೆದ ಎಲ್ಲ ಚುನಾವಣೆಗಳಲ್ಲಿ ಅಭೂತಪೂರ್ವವಾಗಿ ಜಯಗಳಿಸುತ್ತಲೇ ಬಂದಿದ್ದಾರೆ.

ಮಂತ್ರಿಸ್ಥಾನಕ್ಕಾಗಿ ಲಾಬಿ ಮಾಡದೇ, ಅದೇ ತಮ್ಮನ್ನು ಹುಡುಕಿಕೊಂಡು ಬರುವಂತೆ ಮಾಡಿರುವುದು ಅಂಗಾರ ಅವರ ರಾಜಕೀಯ ವೈಶಿಷ್ಟ್ಯ. ಖುದ್ದಾಗಿ ಹೈಕಮಾಂಡ್ ಸೂಚನೆಯಂತೆ ಅಂಗಾರ ಅವರನ್ನು ಸಿಎಂ ಯಡಿಯೂರಪ್ಪ ಅವರು ಸೇರಿಸಿಕೊಂಡಿದ್ದಾರೆ. ನೂತನ ಸಚಿವ, ಸುಳ್ಯ ಕ್ಷೇತ್ರದ ಬಿಜೆಪಿ ಶಾಸಕ ಎಸ್. ಅಂಗಾರ ಅವರು ನಡೆದು ಬಂದ ದಾರಿ ಹೀಗಿದೆ.

* 1989ರಲ್ಲಿ ಮೊದಲ ಬಾರಿಗೆ ಸುಳ್ಯ ಕ್ಷೇತ್ರದಿಂದ ಶಾಸಕ ಸ್ಥಾನ ಕ್ಕೆ ಸ್ಪರ್ಧೆ

* ಮೊದಲ ಬಾರಿ 5 ಸಾವಿರ ಮತಗಳ ಅಂತರದ ಸೋಲು

* 1994 ರಲ್ಲಿ ಎರಡನೇ ಬಾರಿ ಸ್ಪರ್ಧೆ,ಬಿಜೆಪಿ ಯಿಂದ ಗೆಲುವು

Sullia MLA S Angara Biography

* 1994,1999,2004,2008,2013,2018 ಸತತ ಆರು ಬಾರಿ ಗೆಲುವು

* ಸತತ ಆರು ಬಾರಿ ಜಯಗಳಿಸಿದ ಕರಾವಳಿಯ ಏಕೈಕ ಶಾಸಕ

* ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿನ್ನಲೆಯುಳ್ಳ ಅಂಗಾರ

* ರಾಜಕೀಯ ಪ್ರವೇಶ ಮುನ್ನ ಕೂಲಿ ಕೆಲಸ ಮಾಡುತ್ತಿದ್ದ ಅಂಗಾರ

* ಮಿತ ಭಾಷಿ,ಶಿಸ್ತಿನಿಂದಲೇ ಬಿಜೆಪಿ ವರಿಷ್ಠ ರ ಗಮನಸೆಳೆದಿರುವ ಅಂಗಾರ

* ಸಂಘಟನೆಯಲ್ಲಿ ಸುಳ್ಯ ಕ್ಷೇತ್ರ ದೇಶಕ್ಕೆ ಮಾದರಿ ಎಂದಿದ್ದ ಅಡ್ವಾಣಿ

* 1994 ರ ಬಳಿಕ ಗ್ರಾಮ ಪಂಚಾಯತ್, ಜಿಲ್ಲಾ ಪಂಚಾಯತ್,ತಾಲೂಕು ಪಂಚಾಯತ್ ಎಲ್ಲಾ ಸ್ಥಳೀಯ ಆಡಳಿತದಲ್ಲೂ ಬಿಜೆಪಿ ಯೇ ಮೇಲುಗೈ

* ಆರು ಬಾರಿ ಶಾಸಕನಾದರೂ ಒಮ್ಮೆಯೂ ಸಚಿವ ಸ್ಥಾನಕ್ಕಾಗಿ ಲಾಭಿ ಮಾಡದ ಎಸ್ ಅಂಗಾರ

Recommended Video

Munirathna ಮತ್ತು Nagesh ಇಬ್ಬರ ನಡುವೆ ಜಟಾಪಟಿ!! | Oneindia Kannada

* ಆರು ಬಾರಿ ಗೆದ್ದರೂ ಸರಳ ಜೀವನ ನಡೆಸುತ್ತಿರುವ ಎಸ್ ಅಂಗಾರ

English summary
Karnataka Cabinet Expansion: Sullia MLA S Anagar Biography. He won six times in a row from 1994 onwards.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X