ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡದ ರಾಷ್ಟ್ರಕವಿಯನ್ನು ನೀವು ಆಯ್ಕೆ ಮಾಡಿ

|
Google Oneindia Kannada News

ಬೆಂಗಳೂರು, ಜ. 10 : ರಾಷ್ಟ್ರಕವಿಯನ್ನು ಆಯ್ಕೆ ಮಾಡಲು ಜನಾಭಿಪ್ರಾಯ ಸಂಗ್ರಹಿಸಲಾಗುವುದು ಎಂದು ರಾಷ್ಟ್ರಕವಿ ಆಯ್ಕೆ ಸಮಿತಿಯ ಅಧ್ಯಕ್ಷ ಕೊ. ಚನ್ನಬಸಪ್ಪ ತಿಳಿಸಿದ್ದಾರೆ. ಜನವರಿ 27ರೊಳಗೆ ಪತ್ರ ಮುಖೇನ ಜನರು ಅಭಿಪ್ರಾಯವನ್ನು ತಿಳಿಸಬಹುದಾಗಿದೆ ಎಂದು ಹೇಳಿದ್ದಾರೆ.

ಶುಕ್ರವಾರ ಕನ್ನಡ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕೊ.ಚನ್ನಬಸಪ್ಪ ಅವರು, ಸರ್ಕಾರವು ರಾಷ್ಟ್ರಕವಿ ಆಯ್ಕೆಗೆ ಸಮಿತಿಯನ್ನು ರಚಿಸಿದೆ. ಸಮಿತಿಯು ಈವರೆಗೆ ಮೂರು ಸಭೆಗಳನ್ನು ನಡೆಸಿದೆ.ಈಗಾಗಲೇ ರಾಜ್ಯದ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರದ ಸುಮಾರು 120 ಪ್ರಮುಖರಿಗೆ ಪತ್ರ ಬರೆದು ಈ ತಿಂಗಳಾಂತ್ಯಕ್ಕೆ ಅರ್ಹರನ್ನು ನಾಮನಿರ್ದೇಶನ ನೀಡಲು ಕೋರಲಾಗಿದೆ ಎಂದು ಹೇಳಿದರು.

Karnataka

ಜನಸಾಮಾನ್ಯರೂ ಸಹ ರಾಷ್ಟ್ರಕವಿ ಆಯ್ಕೆಗೆ ನಾಮನಿರ್ದೇಶನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಜನವರಿ 27ರೊಳಗೆ ಜನರು ತಮ್ಮ ಆಯ್ಕೆಯನ್ನು ಪತ್ರ ಮುಖೇನ ಬರೆದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಕಳಿಸಬಹುದಾಗಿದೆ ಎಂದ ಕೊ.ಚನ್ನಬಸಪ್ಪ ಅವರು ತಿಳಿಸಿದರು. [ಕನ್ನಡದ ಮುಂದಿನ ರಾಷ್ಟ್ರಕವಿಗಾಗಿ ಹುಡುಕಾಟ]

ಸರ್ಕಾರವು ರಾಷ್ಟ್ರಕವಿಯ ಆಯ್ಕೆಗಾಗಿ ಯಾವುದೇ ನಿಯಮಗಳನ್ನು ರೂಪಿಸಿಲ್ಲ. ಸಮಿತಿಯೇ ಕೆಲವು ಮಾನದಂಡಗಳನ್ನು ರಚಿಸಿಕೊಂಡಿದೆ ಎಂದು ಹೇಳಿದ ಅವರು, ಜನರು ಮತ್ತು ಪ್ರಮುಖರಿಂದ ಬಂದ ಸಲಹೆಗಳ ಬಗ್ಗೆ ಚರ್ಚಿಸಿ ಸಮಿತಿಯು ಒಟ್ಟಾರೆ ಅಭಿಪ್ರಾಯವನ್ನು ಸರ್ಕಾರಕ್ಕೆ ತಿಳಿಸಲಿದೆ ಎಂದರು. [ವೈಚಾರಿಕ ದಿನವಾಗಲಿದೆ ಕುವೆಂಪು ಜನ್ಮದಿನಾಚರಣೆ]

ಇದು ಬಹುಮತದ ಆಯ್ಕೆಯಲ್ಲ, ಹಾಗೇ ಸಮಿತಿಯು ಆಯ್ಕೆ ಬಗ್ಗೆ ಅಂತಿಮ ನಿರ್ಧಾರವನ್ನೂ ಕೈಗೊಳ್ಳುವಂತಿಲ್ಲ. ಬಂದಂತಹ ಸಲಹೆಗಳನ್ನು ಪರಾಮರ್ಶಿಸಿ ಅರ್ಹರ ಹೆಸರನ್ನು ಸಮಿತಿಯು ಸರ್ಕಾರ ಮುಂದಿಡಲಿದೆ. ಸಮಿತಿಯು ಒಬ್ಬರನ್ನು ಆಯ್ಕೆ ಮಾಡಲೇಬೇಕೆಂಬುದು ಕಡ್ಡಾಯವೇನಿಲ್ಲ, ಅರ್ಹರು ಸಿಗದಿದ್ದರೆ, ಆಯ್ಕೆ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಕೈಬಿಡಬಹುದಾಗಿದೆ ಎಂದು ತಿಳಿಸಿದರು.

ಸಾರ್ವಜನಿಕರು ಪತ್ರ ಕಳಿಸಲು ವಿಳಾಸ : ಅಧ್ಯಕ್ಷರು, ರಾಷ್ಟ್ರಕವಿ ಆಯ್ಕೆ ಸಮಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು- 560002. ಪತ್ರ ಕಳಿಸಲು ಕೊನೆಯ ದಿನಾಂಕ ಜನವರಿ 27.

ಅಂದಹಾಗೆ ಸರ್ಕಾರ ಇದುವರೆಗೂ ಮಂಜೇಶ್ವರ ಗೋವಿಂದ ಪೈ, ಕುವೆಂಪು ಮತ್ತು ಡಾ.ಜಿ.ಎಸ್‌.ಶಿವರುದ್ರಪ್ಪ ಅವರಿಗೆ ರಾಷ್ಟ್ರಪತಿ ಪುರಸ್ಕಾರ ನೀಡಿತ್ತು. ಈಗ ಪುನಃ ಪ್ರಶಸ್ತಿ ನೀಡಲು ನಿರ್ಧರಿಸಿದೆ.

English summary
The search to choose a poet for the title of Rashtrakavi has begun. Search committee president Ko. Chennabasappa said, interested public could suggest names of writers by January 27 for the title.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X