ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವೇಗೌಡರನ್ನು ಭೇಟಿ ಆಗುತ್ತಾರಂತೆ ಸುಬ್ರಮಣಿಯನ್ ಸ್ವಾಮಿ, ಕಹಾನಿ ಮೇ ಟ್ವಿಸ್ಟ್‌?

|
Google Oneindia Kannada News

ಯಡಿಯೂರಪ್ಪ ಅವರು ರಾಜಿನಾಮೆ ನೀಡಿ ಹೊರನಡೆಯುತ್ತಿದ್ದಂತೆ ಬಿಜೆಪಿಯ ಮುಖಂಡರು ಟ್ವಿಟ್ಟರ್‌ ಮೂಲಕ ತಮ್ಮ ಪ್ರತಿಕ್ರಿಯೆಗಳನ್ನು ಹೊರ ಹಾಕಿದರು, ಬಹುತೇಕರು ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಯನ್ನು ಟೀಕಿಸಿದರೆ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರ ಟ್ವೀಟ್‌ ಮಾತ್ರ ಕುತೂಹಲಕ್ಕೆ ಕಾರಣವಾಯಿತು.

ಯಡಿಯೂರಪ್ಪ ಅವರು ರಾಜಿನಾಮೆ ನೀಡುತ್ತಿದ್ದಂತೆ ಟ್ವೀಟ್‌ ಮಾಡಿರುವ ಸುಬ್ರಹ್ಮಣ್ಯ ಸ್ವಾಮಿ ಅವರು, ದೇವೇಗೌಡರನ್ನು ನೆನೆಸಿಕೊಂಡಿದ್ದಾರೆ. ಟ್ವೀಟ್‌ ಮೂಲಕವೇ ದೇವೇಗೌಡರಿಗೆ ಹಳೆಯ ಘಟನೆಯನ್ನೂ ನೆನಪು ಮಾಡಿಸಿಕೊಟ್ಟಿದ್ದಾರೆ.

Subramanian Swamy to meet JDS president Deve Gowda

ದೇವೇಗೌಡರ ಜೊತೆ ಕೆಲಸ ಮಾಡಿದ ದಿನಗಳನ್ನು ನೆನೆಸಿಕೊಂಡಿರುವ ಸುಬ್ರಮಣಿಯನ್ ಸ್ವಾಮಿ ಅವರು 'ನಾನು ದೇವೇಗೌಡ ಅವರು 1980ರ ಸಮಯದಲ್ಲಿ ಒಟ್ಟಿಗೆ ಕಾರ್ಯ ಮಾಡಿದ್ದೆವು, ಅವರು ಕರ್ನಾಟಕ ಜನತಾ ಪಕ್ಷದ ಅಧ್ಯಕ್ಷರಾಗಿದ್ದರೆ ನಾನು ರಾಷ್ಟ್ರ ಜನತಾ ಪಕ್ಷದ ಅಧ್ಯಕ್ಷನಾಗಿದ್ದೆ' ಎಂದು ಬರೆದುಕೊಂಡಿದ್ದಾರೆ.

ಸರ್ಕಾರ ರಚನೆಗೆ ಕುಮಾರಸ್ವಾಮಿಯನ್ನು ಆಹ್ವಾನಿಸಿದ ರಾಜ್ಯಪಾಲ ವಾಲಾಸರ್ಕಾರ ರಚನೆಗೆ ಕುಮಾರಸ್ವಾಮಿಯನ್ನು ಆಹ್ವಾನಿಸಿದ ರಾಜ್ಯಪಾಲ ವಾಲಾ

ಮುಂದುವರೆದು, 'ಆಗ ನಾನು ಅವರನ್ನು ರಾಮಕೃಷ್ಣ ಹೆಗಡೆ ಅವರಿಂದ ತಪ್ಪಿಸಿ ಅವರು ಮುನ್ನೆಲೆಗೆ ಬರಲು ಸಹಾಯ ಮಾಡಿದ್ದೆ, ಎಂದು ಹಳೆಯ ಘಟನೆಯನ್ನು ನೆನಪು ಮಾಡಿಕೊಟ್ಟಿದ್ದಾರೆ. ಅಷ್ಟಕ್ಕೆ ನಿಲ್ಲದೆ 'ಕ್ಯಾಲಿಫೋರ್ನಿಯಾದಿಂದ ಬಂದ ಕೂಡಲೇ ನಾನು ದೇವೇಗೌಡ ಅವರನ್ನು ಭೇಟಿ ಆಗುತ್ತೇನೆ' ಎಂದು ಕೂಡ ಅವರು ಹೇಳಿದ್ದಾರೆ.

ಸಿಕ್ಕ ಅವಕಾಶ ಬಳಸಿಕೊಳ್ಳಲು ವಿಫಲರಾದ ಯಡಿಯೂರಪ್ಪ ಎಡವಿದ್ದು ಎಲ್ಲಿ?ಸಿಕ್ಕ ಅವಕಾಶ ಬಳಸಿಕೊಳ್ಳಲು ವಿಫಲರಾದ ಯಡಿಯೂರಪ್ಪ ಎಡವಿದ್ದು ಎಲ್ಲಿ?

ಸುಬ್ರಮಣಿಯನ್ ಸ್ವಾಮಿ ಅವರು ದೇವೇಗೌಡ ಅವರನ್ನು ಭೇಟಿ ಆಗುತ್ತಿರುವುದು ಕುತೂಹಲ ಮೂಡಿಸಿದೆ, ಬಿಜೆಪಿ ವಕ್ತಾರರಂತೆ ಗುರುತಿಸಿಕೊಂಡಿರುವ ಸುಬ್ರಮಣಿಯನ್ ಸ್ವಾಮಿ ಅವರು ಬಿಜೆಪಿ ಪರವಾಗಿ ದೇವೇಗೌಡ ಅವರ ಬಳಿ ಲಾಭಿ ಮಾಡಲಿದ್ದಾರೆ ಎನ್ನಲಾಗಿದೆ.

English summary
BJP Party person Subramanian Swamy said he will meet JDS president Deve Gowda. He tweeted about this. This meeting is created curiosity in state politics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X