ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಚ್ಚೆಚ್ಚು ಪರೀಕ್ಷೆಯಿಂದ, ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟಲು ಸಾಧ್ಯವಿಲ್ಲ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 27: ಹೆಚ್ಚೆಚ್ಚು ಕೊರೊನಾ ಪರೀಕ್ಷೆ ಮಾಡುವುದರಿಂದ ಕೊರೊನಾ ಸೋಂಕು ಹರಡುವುದನ್ನು ತಡೆಯಲು ಸಾಧ್ಯವಿಲ್ಲ. ಹಾಗೆಯೇ ಹೊಸ ಕೊರೊನಾ ಪ್ರಕರಣಗಳು ಕಡಿಮೆಯಾಗುತ್ತಿದೆ ಎಂದ ಮಾತ್ರಕ್ಕೆ ಕೊರೊನಾ ಸೋಂಕು ಯಾರಿಗೂ ಹರಡುತ್ತಿಲ್ಲ ಎಂದರ್ಥವಲ್ಲ.

ಕೊರೊನಾ ವೈರಸ್ ಪರೀಕ್ಷೆ ಪ್ರಮಾಣ ಹೆಚ್ಚಾಗುತ್ತಿದ್ದರೂ, ವೈರಸ್ ಹರಡುವಿಕೆ ತಡೆಯಲು ಸಾಕಾಗುತ್ತಿಲ್ಲ. ಬೆಂಗಳೂರು ಸೇರಿದಂತೆ ಆರು ಮೆಗಾ ನಗರಗಳಲ್ಲಿ ಸಾಪ್ತಾಹಿಕವೊಂದು ನಡೆಸಿದ ವಿಶ್ಲೇಷಣೆಯಲ್ಲಿ ಇದು ಕಂಡುಬಂದಿದೆ.

ಸಿಹಿಸುದ್ದಿ: ಭಾರತದಲ್ಲಿ ಇಳಿಮುಖವಾದ ಕೊರೊನಾವೈರಸ್ ಪ್ರಕರಣ ಸಿಹಿಸುದ್ದಿ: ಭಾರತದಲ್ಲಿ ಇಳಿಮುಖವಾದ ಕೊರೊನಾವೈರಸ್ ಪ್ರಕರಣ

ಪ್ರಾಕ್ಸಿಮಾ ಕನ್ಸಲ್ ಟಿಂಗ್ ಮತ್ತು ಪಬ್ಲಿಕ್ ಹೆಲ್ತ್ ಫೌಂಡೇಶನ್ ಆಫ್ ಇಂಡಿಯಾ ಕೈಗೊಂಡ ಕಾರ್ಯಕ್ರಮದಲ್ಲಿ ಜೀವನ್ ರಕ್ಷಾ ವಿಶ್ಲೇಷಿಸಿದೆ.ಜನಸಂಖ್ಯೆಯ ಸಂಪೂರ್ಣ ಗಾತ್ರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಪರೀಕ್ಷೆ ಅಸಮರ್ಪಕವಾಗಿದೆ. ವೈರಸ್ ನಗರದಾದ್ಯಂತ ವ್ಯಾಪಕವಾಗಿ ಮತ್ತು ವೇಗವಾಗಿ ಹರಡುತ್ತಿದೆ.

ಪರೀಕ್ಷೆಯಿಂದ ಕೊರೊನಾ ಸೋಂಕು ಹರಡುವಿಕೆ ಪ್ರಮಾಣದ ವೇಗವನ್ನು ಕಡಿಮೆ ಮಾಡಬಹುದು ಆದರೆ ಹೊಡೆದೋಡಿಸಲು ಸಾಧ್ಯವಿಲ್ಲ.

ಬೆಂಗಳೂರಿನಲ್ಲಿ ಒಟ್ಟು ಕೊರೊನಾ ಪರೀಕ್ಷೆ

ಬೆಂಗಳೂರಿನಲ್ಲಿ ಒಟ್ಟು ಕೊರೊನಾ ಪರೀಕ್ಷೆ

ಒಟ್ಟಾರೆಯಾಗಿ, ಬೆಂಗಳೂರು ನಗರದಲ್ಲಿ ಪ್ರತಿ ಮಿಲಿಯನ್ ಜನಸಂಖ್ಯೆಗೆ 2, 07, 000 ಪರೀಕ್ಷೆಗಳನ್ನು ನಡೆಸಿರುವಂತೆಯೇ ಇದು ಅಸಮಪರ್ಕವಾಗಿದ್ದು, ವೈರಸ್ ಸೋಂಕು ಹರಡುವಿಕೆಯನ್ನು ತಡೆಗಟ್ಟುವಲ್ಲಿ ಸಾಕಾಗುವುದಿಲ್ಲ ಎಂದು ಜೀವನ್ ರಕ್ಷಾ ಸಂಘಟಕ ಮೈಸೂರು ಸಂಜೀವ್ ಹೇಳಿದ್ದಾರೆ.

ಪರೀಕ್ಷೆ ಪ್ರಮಾಣ

ಪರೀಕ್ಷೆ ಪ್ರಮಾಣ

ಈ ಉದ್ದೇಶಕ್ಕಾಗಿ ಬೆಂಗಳೂರಿನಲ್ಲಿ ಜೂನ್ ತಿಂಗಳಲ್ಲಿ ಪರೀಕ್ಷೆ ಪ್ರಮಾಣವನ್ನು 234ಕ್ಕೆ ಹೆಚ್ಚಿಸಲಾಯಿತು. ಜುಲೈನಲ್ಲಿ ಅದು 187ಕ್ಕೆ, ಆಗಸ್ಟ್ ನಲ್ಲಿ 169ಕ್ಕೆ ಇಳಿಕೆಯಾಯಿತು. ಸೆಪ್ಟೆಂಬರ್ ನಲ್ಲಿ ಶೇ. 94 ಮತ್ತು ಅಕ್ಟೋಬರ್ ನಲ್ಲಿ ಶೇ. 87 ರಷ್ಟಿದೆ.
ಸಕಾರಾತ್ಮಕ ದೃಷ್ಟಿಯಿಂದ, ಬೆಂಗಳೂರಿನಲ್ಲಿ ಸಕ್ರಿಯ ಪ್ರಕರಣಗಳು 65,000 ದಿಂದ 51,000 ಕ್ಕೆ ಇಳಿದಿವೆ, ಪರೀಕ್ಷೆ ಪ್ರಮಾಣ ಶೇ.14 ರಿಂದ ಶೇ. 12.6 ಕ್ಕೆ ಇಳಿದಿದೆ, ಸರಾಸರಿ ದೈನಂದಿನ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ ಮತ್ತು ಸಾವಿನ ಸಂಖ್ಯೆ ಅಕ್ಟೋಬರ್‌ ತಿಂಗಳ ಶುಕ್ರವಾರದವರೆಗೆ ಕಡಿಮೆಯಾಗಿದೆ.

ಕೊರೊನಾ ಬೆಳವಣಿಗೆ

ಕೊರೊನಾ ಬೆಳವಣಿಗೆ

ಬೆಂಗಳೂರಿನಲ್ಲಿ ಸೆಪ್ಟೆಂಬರ್ 12 ರಿಂದ ಸೆಪ್ಟೆಂಬರ್ 19ರವರೆಗೂ ನಡೆಸಿದ ಕೊರೊನಾ ಬೆಳವಣಿಗೆ ದರ ಶೇ. 15 ರಷ್ಟಿತ್ತು. ಆದಾಗ್ಯೂ ಅಕ್ಟೋಬರ್ 17 ರಿಂದ ಅಕ್ಟೋಬರ್ 24ರ ನಡುವಣ ಬೆಳವಣಿಗೆ ದರ ಶೇ.8ಕ್ಕೆ ಇಳಿದಿದೆ. ಏಳು ದಿನಗಳಲ್ಲಿ ಕೊರೋನಾ ಬೆಳವಣಿಗೆ ದರ ಏರಿಕೆ ಹಾಗೂ ಇಳಿಕೆ ಕಂಡುಬಂದಿದೆ.

Recommended Video

ಇನ್ನೂ ಜಾಸ್ತಿ ಆಗತ್ತೆ ಈರುಳ್ಳಿ ಬೆಲೆ | Indian Onion is stronger than American Dollar | Oneindia Kannada
ಬೇರೆ ನಗರಗಳ ಪರಿಸ್ಥಿತಿ

ಬೇರೆ ನಗರಗಳ ಪರಿಸ್ಥಿತಿ

ಬೆಂಗಳೂರಿನಲ್ಲಿ ಕೊರೊನಾವೈರಸ್ ಹೆಚ್ಚಾಗುತ್ತಿರುವುದನ್ನು ಪಾಸಿಟಿವ್ ದರದಲ್ಲಿ ಗೊತ್ತಾಗುತ್ತಿದೆ. ಸೆಪ್ಟೆಂಬರ್ 19ರಲ್ಲಿ ನಗರದಲ್ಲಿ ಶೇ. 1.6 ರಷ್ಟು ಜನಸಂಖ್ಯೆ ಸೋಂಕಿತರಿದ್ದರು.
ಅದು ಅಕ್ಟೋಬರ್ 24ರ ವೇಳೆಗೆ ಶೇ.2.6ಕ್ಕೆ ಏರಿಕೆಯಾಯಿತು. ಭಾರತದ ಆರು ಮೆಗಾ ನಗರದಲ್ಲಿ ಇದು ಹೆಚ್ಚಾಗಿದೆ. ಬೆಂಗಳೂರು, ದೆಹಲಿ, ಚೆನ್ನೈ, ಮುಂಬೈ, ಅಹಮದಾಬಾದ್ ಮತ್ತು ಕೊಲ್ಕತ್ತಾ ಲ್ಲಿ ಒಟ್ಟಾರೇ, ಶೇ. 8.45 ಕೋಟಿ ಜನಸಂಖ್ಯೆಯಲ್ಲಿ ಶೇ. 1.5 ರಷ್ಟು ಪಾಸಿಟಿವ್ ಹೊಂದಿದ್ದಾರೆ.

English summary
Even while the number of tests is increasing, the speed or rate at which this is happening is less and is not sufficient to block the spread of the virus, a weekly analysis of six mega cities, including Bengaluru, has found.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X