ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದ್ಯಾರ್ಥಿಗಳೆ, ಸಸಿ ಬೆಳೆಸಿ 10ನೇ ತರಗತಿಯಲ್ಲಿ ಹೆಚ್ಚುವರಿ ಅಂಕ ಗಳಿಸಿ!

|
Google Oneindia Kannada News

ಬೆಂಗಳೂರು, ಅಕ್ಟೋಬರ್ 16: ಹಸಿರು ಹೆಚ್ಚಿಸಲು ಅರಣ್ಯ ಇಲಾಖೆ ಅದ್ಬುತ ಐಡಿಯಾ ಒಂದನ್ನು ಪ್ರಯೋಗಿಸಲು ಮುಂದಾಗಿದೆ.
ರಾಜ್ಯದಲ್ಲಿ ಮರ-ಗಿಡಗಳ ಸಂಖ್ಯೆ ಹೆಚ್ಚು ಮಾಡಲು ಅದು ವಿದ್ಯಾರ್ಥಿಗಳನ್ನು ರಚನಾತ್ಮಕವಾಗಿ ಬಳಸಿಕೊಳ್ಳಲು ಯೋಜನೆ ರೂಪಿಸಿದೆ.

ಮೆಟ್ರೋಗೆ ಸಾವಿರ ಮರಗಳ ಆಪೋಶನ ಬದಲು ಸ್ಥಳಾಂತರಕ್ಕೆ ನಿರ್ಧಾರಮೆಟ್ರೋಗೆ ಸಾವಿರ ಮರಗಳ ಆಪೋಶನ ಬದಲು ಸ್ಥಳಾಂತರಕ್ಕೆ ನಿರ್ಧಾರ

ಎಂಟನೇ ತರಗತಿಗೆ ಶಾಲೆಗೆ ಸೇರುವ ವಿದ್ಯಾರ್ಥಿಗೆ 10 ಸಸಿಗಳನ್ನು ಅರಣ್ಯ ಇಲಾಖೆ ನೀಡಲಿದೆ. ಆ ವಿದ್ಯಾರ್ಥಿ ಅಷ್ಟೂ ಸಸಿಗಳನ್ನು ಮೂರು ವರ್ಷ ಚೆನ್ನಾಗಿ ಆರೈಕೆ ಮಾಡಿದರೆ ವಿದ್ಯಾರ್ಥಿಗೆ 10 ನೇ ತರಗತಿಯಲ್ಲಿ 10 ಅಂಕ ಹೆಚ್ಚುವರಿಯಾಗಿ ಸಿಗಲಿದೆ.

ಮೈಸೂರು ದಸರಾ - ವಿಶೇಷ ಪುರವಣಿ

ಈ ಅದ್ಬುತ ಯೋಜನೆ ಈಗಿನ್ನೂ ಪ್ರಸ್ತಾವದ ಹಂತದಲ್ಲಿದೆ. ಅರಣ್ಯ ಇಲಾಖೆಯು ಈ ಯೋಜನೆಯ ಪ್ರಸ್ತಾವವನ್ನು ಶಿಕ್ಷಣ ಇಲಾಖೆಗೆ ಕಳುಹಿಸಿಕೊಟ್ಟಿದೆ. ಈ ಬಗ್ಗೆ ಸ್ವತಃ ಅರಣ್ಯ ಸಚಿವ ಆರ್‌.ಶಂಕರ್ ಅವರು ಮಾಹಿತಿ ನೀಡಿದ್ದಾರೆ.

Students who plant trees will get 10 extra marks in SSLC

130 ಎಕರೆ ಸರ್ಕಾರಿ ಜಮೀನು ಉಳಿಸಿದ ಅರಣ್ಯ ಅಧಿಕಾರಿಗೆ ಸಿಕ್ಕಿದ್ದೇನು? 130 ಎಕರೆ ಸರ್ಕಾರಿ ಜಮೀನು ಉಳಿಸಿದ ಅರಣ್ಯ ಅಧಿಕಾರಿಗೆ ಸಿಕ್ಕಿದ್ದೇನು?

ಈ ಬಗ್ಗೆ ಉತ್ಸುಕತೆ ಹೊಂದಿರುವ ಅರಣ್ಯ ಸಚಿವ ಶಂಕರ್ ಅವರು, ವಿದ್ಯಾರ್ಥಿಗಳನ್ನು ರಚನಾತ್ಮಕವಾಗಿ ಬಳಸುವ ಮೂಲಕ ರಾಜ್ಯದಲ್ಲಿ ಅರಣ್ಯ ಹೆಚ್ಚಿಸುವ ಕಾರ್ಯ ಮಾಡಲಾಗುವುದು, ನಮ್ಮ ಯೋಜನೆಗೆ ಶಿಕ್ಷಣ ಇಲಾಖೆ ಸಕಾರಾತ್ಮಕವಾಗಿ ಸ್ಪಂದಿಸುವ ವಿಶ್ವಾಸವಿದೆ ಎಂದು ಅವರು ಹೇಳಿದ್ದಾರೆ.

English summary
Forest department of Karnataka planing to enforce unique plan to rise trees and plants. Department will give 10 saplings to every 8th class students they have to nourish it for three years and they will get extra 10 marks for that.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X