ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನವರಿ 1ರಿಂದ ವಿದ್ಯಾರ್ಥಿಗಳಿಗೆ ಸಮವಸ್ತ್ರ ಲಭ್ಯ

|
Google Oneindia Kannada News

ನವದೆಹಲಿ, ಡಿಸೆಂಬರ್ 22: ರಾಜ್ಯದಾದ್ಯಂತ ಜನವರಿ 1ರಿಂದ ಶಾಲೆಗಳನ್ನು ಪುನರಾರಂಭಿಸಲು ಸರ್ಕಾರ ನಿರ್ಧರಿಸಿದೆ. ಅಂದಿನಿಂದಲೇ ವಿದ್ಯಾರ್ಥಿಗಳು ತಮ್ಮ ಸಮವಸ್ತ್ರ ಮತ್ತು ಶೂಗಳನ್ನು ಪಡೆದುಕೊಳ್ಳಲಿದ್ದಾರೆ. ಆದರೆ ಎಂಟನೇ ತರಗತಿ ಮಕ್ಕಳಿಗೆ ಪ್ರತಿ ವರ್ಷದಂತೆ ನೀಡುವ ಬೈಸಿಕಲ್‌ಗಳನ್ನು ಈ ವರ್ಷ ವಿತರಿಸುತ್ತಿಲ್ಲ. ಅನುದಾನದ ಕೊರತೆಯಿಂದ ಈ ಬಾರಿ ವಿದ್ಯಾರ್ಥಿಗಳಿಗೆ ಸೈಕಲ್ ನೀಡುವ ಯೋಜನೆಯನ್ನು ಸ್ಥಗಿತಗೊಳಿಸಲಾಗಿದೆ.

ಈಗಾಗಲೇ ಅಗತ್ಯ ಪ್ರಮಾಣದಲ್ಲಿ ಸಮವಸ್ತ್ರ, ಶೂ ಮತ್ತು ಸಾಕ್ಸ್‌ಗಳನ್ನು ಖರೀದಿಸಿದ್ದು, ಅವುಗಳನ್ನು ವಿತರಿಸಲು ಶಾಲೆಯ ಆವರಣಕ್ಕೆ ಮಕ್ಕಳು ಆಗಮಿಸುವ ಸಂದರ್ಭಕ್ಕಾಗಿ ಕಾದಿರುವುದಾಗಿ ಶಿಕ್ಷಣ ಇಲಾಖೆ ತಿಳಿಸಿದೆ. ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗಳಲ್ಲಿ ಸಮವಸ್ತ್ರಗಳನ್ನು ಇರಿಸಲಾಗಿದೆ. ಜ. 1ರಿಂದ ಹತ್ತನೇ ತರಗತಿಗಳು ಆರಂಭವಾಗಲಿದೆ. ಜ. 15ರ ವೇಳೆಗೆ 1 ರಿಂದ 9ನೇ ತರಗತಿವರೆಗೆ ವಿದ್ಯಾಗಮ ಕಾರ್ಯಕ್ರಮ ನಡೆಯಲಿದೆ. ಹೀಗಾಗಿ ಜನವರಿ ಮೊದಲ ವಾರದಿಂದ ಪೋಷಕರು ಶಾಲೆಗೆ ಕರೆಯಿಸಿ ಸಮವಸ್ತ್ರ,ಸ ಶೂಗಳನ್ನು ವಿತರಿಸಲಾಗುತ್ತದೆ.

ಖಾಸಗಿ ಶಾಲೆಗಳ ಶುಲ್ಕದ ವಿಚಾರವಾಗಿ ಸುರೇಶ್ ಕುಮಾರ್ ಹೇಳಿಕೆ!ಖಾಸಗಿ ಶಾಲೆಗಳ ಶುಲ್ಕದ ವಿಚಾರವಾಗಿ ಸುರೇಶ್ ಕುಮಾರ್ ಹೇಳಿಕೆ!

'ವಿದ್ಯಾರ್ಥಿಗಳು ಶಾಲೆಯಿಂದ ಸಮವಸ್ತ್ರ ಮತ್ತು ಶೂಗಳನ್ನು ಪಡೆದು ಮನೆಗೆ ಕೊಂಡೊಯ್ಯಬಹುದು. ಶಾಲೆಗಳು ಆರಂಭವಾದ ಬಳಿಕ ಅವುಗಳನ್ನು ಧರಿಸಬಹುದಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ವಿ. ಅನ್ಬುಕುಮಾರ್ ತಿಳಿಸಿದ್ದಾರೆ.

Students To Get Uniforms And Shoes From January 1

ಕರ್ನಾಟಕದಲ್ಲಿ ಶಾಲೆಗಳ ಆರಂಭದ ದಿನಾಂಕ ಘೋಷಿಸಿದ ಸರ್ಕಾರ ಕರ್ನಾಟಕದಲ್ಲಿ ಶಾಲೆಗಳ ಆರಂಭದ ದಿನಾಂಕ ಘೋಷಿಸಿದ ಸರ್ಕಾರ

2008ರಲ್ಲಿ ಯಡಿಯೂರಪ್ಪ ಅವರು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಬೈಸಿಕಲ್ ಒದಗಿಸುವ ಯೋಜನೆ ಜಾರಿಗೆ ತಂದಿದ್ದರು. ಈ 12 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಬೈಸಿಕಲ್ ವಿತರಣೆ ನಡೆಯುತ್ತಿಲ್ಲ. ಪ್ರಸಕ್ತ ಸಾಲಿನಲ್ಲಿ ಸುಮಾರು ಐದು ಲಕ್ಷ ಮಕ್ಕಳಿಗೆ ಸೈಕಲ್ ವಿತರಿಸಬೇಕಿತ್ತು.

Recommended Video

Bangalore: ಗ್ರಾಮ.ಪಂಚಾಯತ್‌ ಚುನಾವಣೆಯಲ್ಲಿ ಮತದಾನ ಮಾಡಿದ ನಟಿ Lilavati, Vinod Raj | Oneindia Kannada

English summary
Students to get uniforms and shoes from January 1, however class 8 students will not get bicycles for this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X