ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ; ಕಾಲೇಜುಗಳಲ್ಲೇ ಕೋವಿಡ್ ಲಸಿಕಾ ಅಭಿಯಾನ

|
Google Oneindia Kannada News

ಬೆಂಗಳೂರು, ಜೂನ್ 23; ಜುಲೈ ಮೊದಲ ವಾರದಿಂದ ಕರ್ನಾಟಕದಲ್ಲಿ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ನೀಡಲಾಗುತ್ತದೆ. ಕಾಲೇಜುಗಳ ಕ್ಯಾಂಪಸ್‌ಗಳಲ್ಲೇ ಲಸಿಕೆ ನೀಡಲು ತೀರ್ಮಾನಿಸಲಾಗಿದೆ.

ಕೋವಿಡ್ ನಿರ್ವಹಣೆ ಕುರಿತ ಉನ್ನತ ಮಟ್ಟದ ತಾಂತ್ರಿಕ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಿದೆ. ಮೊದಲು ಉನ್ನತ ಶಿಕ್ಷಣ ವ್ಯಾಸಂಗ ಕೋರ್ಸ್‌ಗಳನ್ನು ಆರಂಭಿಸಲು ಸಲಹೆ ನೀಡಿದೆ.

ಕೋವಿಡ್ ಲಸಿಕೆ ಮೇಳ: ಆರೋಗ್ಯ ಸಚಿವರ ಜಿಲ್ಲೆ ಪ್ರಥಮಕೋವಿಡ್ ಲಸಿಕೆ ಮೇಳ: ಆರೋಗ್ಯ ಸಚಿವರ ಜಿಲ್ಲೆ ಪ್ರಥಮ

ಉನ್ನತ ಶಿಕ್ಷಣ ಇಲಾಖೆ ಎಲ್ಲಾ ವಿದ್ಯಾರ್ಥಿಗಳು, ಬೋಧಕ, ಬೋಧಕೇತರ ಸಿಬ್ಬಂದಿಗಳಿಗೆ ಕೋವಿಡ್ ಲಸಿಕೆಯನ್ನು ಕ್ಯಾಂಪಸ್ ಆವರಣದಲ್ಲಿಯೇ ನೀಡಲು ಮುಂದಾಗಿದೆ.

 ಡೆಲ್ಟಾ ರೂಪಾಂತರಿ ವಿರುದ್ಧ ಎರಡು ಲಸಿಕೆ ಪರಿಣಾಮಕಾರಿ ಡೆಲ್ಟಾ ರೂಪಾಂತರಿ ವಿರುದ್ಧ ಎರಡು ಲಸಿಕೆ ಪರಿಣಾಮಕಾರಿ

Students May Get Covid Vaccine From July

ಕೋವಿಡ್ ಕಾರ್ಯಪಡೆ ಅಧ್ಯಕ್ಷ, ಉಪ ಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ್ ಈ ಕುರಿತು ಮಾತನಾಡಿದ್ದಾರೆ, "ನಾವು ಲಸಿಕಾ ಅಭಿಯಾನವನ್ನು ನಡೆಸಲು ತೀರ್ಮಾನಿಸಿದ್ದೇವೆ. ಜುಲೈ ಮೊದಲ ವಾರದಲ್ಲಿ ಇದು ಆರಂಭವಾಗುವ ಸಾಧ್ಯತೆ ಇದೆ" ಎಂದು ಹೇಳಿದ್ದಾರೆ.

 ಲಸಿಕೆ ನೀಡಿದ ನಂತರ ಶಾಲಾ ಕಾಲೇಜು ಪುನರಾರಂಭ; ಯಡಿಯೂರಪ್ಪ ಲಸಿಕೆ ನೀಡಿದ ನಂತರ ಶಾಲಾ ಕಾಲೇಜು ಪುನರಾರಂಭ; ಯಡಿಯೂರಪ್ಪ

ವಿದ್ಯಾರ್ಥಿಗಳು, ಬೋಧಕರು ಮತ್ತು ಬೋಧಕೇತರ ಸಿಬ್ಬಂದಿಗಳನ್ನು ಸೇರಿಸಿ ಸುಮಾರು 20 ಜನರಿಗೆ ಲಸಿಕೆ ನೀಡಬೇಕು ಅಂದು ಅಂದಾಜಿಸಲಾಗಿದೆ. ಕೋವಿಡ್‌ ವ್ಯಾಕ್ಸಿನ್ ಲಭ್ಯತೆ ನೋಡಿಕೊಂಡು ಅಭಿಯಾನ ಆರಂಭಿಸಲಾಗುತ್ತದೆ.

ಎಲ್ಲರಿಗೂ ಮೊದಲ ಡೋಸ್ ಲಸಿಕೆ ನೀಡಿದ ಬಳಿಕ ತರಗತಿಗಳನ್ನು ಆರಂಭಿಸುವ ಕುರಿತು ಸರ್ಕಾರ ತೀರ್ಮಾನ ಕೈಗೊಳ್ಳಲಿದೆ. ಈಗಾಗಲೇ ಕೆಲವು ಶಿಕ್ಷಣ ಸಂಸ್ಥೆಗಳು ಕೋವಿಡ್ ಲಸಿಕೆ ನೀಡುವ ಅಭಿಯಾನವನ್ನು ನಡೆಸುತ್ತಿವೆ.

Recommended Video

ತಿಹಾರ್ ಜೈಲಿನಲ್ಲಿ ಸಹಾಯ ಮಾಡಿದ ಕೈದಿಗಳಿಗೆ ಹೊಸ ಜೀವನ ಕಟ್ಟಿಕೊಟ್ಟ ಡಿಕೆ ಶಿವಕುಮಾರ್ | Oneindia Kannada

English summary
Karnataka students who studying higher education courses may get vaccines from the first week of July.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X