ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದ್ಯಾರ್ಥಿಗಳು ಫೆ.28ವರೆಗೆ ಹಳೆ ಪಾಸ್ ತೋರಿಸಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸಬಹುದು

|
Google Oneindia Kannada News

ಬೆಂಗಳೂರು,ಜನವರಿ 29: ವಿದ್ಯಾರ್ಥಿಗಳು ಫೆ.28ರವರೆಗೂ ಹಳೆ ಬಸ್‌ಪಾಸ್ ತೋರಿಸಿ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಸಬಹುದಾಗಿದೆ.

ಜನವರಿ 31ರವರೆಗೆ ಹಳೆ ಬಸ್‌ಪಾಸ್ ತೋರಿಸಿ ಪ್ರಯಾಣಿಸಲು ಅವಕಾಶ ಮಾಡಿಕೊಡಲಾಗಿತ್ತು.ಶೈಕ್ಷಣಿಕ ವರ್ಷದ ಚಟುವಟಿಕೆಗಳು ಆರಂಭವಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಯಮಗಳ ಬಸ್‍ಗಳಲ್ಲಿ ವಿದ್ಯಾರ್ಥಿಗಳು 2019-20ನೇ ಸಾಲಿನ ಪಾಸಿನ ಆಧಾರದಲ್ಲಿ ಉಚಿತವಾಗಿ ಪ್ರಯಾಣಿಸಲು ಫೆಬ್ರವರಿ 28ರವರೆಗೆ ಅನುವು ಮಾಡಿಕೊಡಲಾಗಿದೆ.

ಈ ಹಿಂದೆ ಜ.31ರವರೆಗೆ ಸಂಸ್ಥೆಯಿಂದ ಅವಕಾಶ ಕಲ್ಪಿಸಲಾಗಿತ್ತು. ಇದೀಗ ಪಾಸ್‍ಗಳನ್ನು ಪಡೆಯಲು ವಿದ್ಯಾರ್ಥಿಗಳಿಗೆ ಕಾಲವಕಾಶ ನೀಡುವ ಸಲುವಾಗಿ ಈ ಅವಧಿಯನ್ನು ಫೆ.28ರವರೆಗೆ ಮುಂದೂಡಿದೆ.

Students Can Travel In KSRTC Buses Till February 28 Showing Last Year Bus Pass

ನಿಗಮದ ನಗರ ಹೊರವಲಯ ಸಾಮಾನ್ಯ ಹಾಗೂ ವೇಗಧೂತ ಬಸ್‌ಳಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಿದ್ದು, ಇದರ ಸದುಪಯೋಗಪಡಿಸಿಕೊಳ್ಳುವಂತೆ ಕರಾರಸಾ ಮುಖ್ಯ ಸಂಚಾರ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಲ್ಲ ವರ್ಗದ ಶಾಲಾ ಕಾಲೇಜು ವಿದ್ಯಾರ್ಥಿಗಳು ಕಳೆದ ವರ್ಷದ ಬಸ್ ಪಾಸ್ ನೊಂದಿಗೆ ಪ್ರಸ್ತುತ ಸಾಲಿನಲ್ಲಿ ಶುಲ್ಕ ಪಾವತಿಸಿದ ರಶೀದಿ ಜೊತೆಗೆ ಸಂಬಂಧಪಟ್ಟ ಮಾರ್ಗಗಳಲ್ಲಿ ಪ್ರಯಾಣಿಸಬಹುದಾಗಿದೆ.

ಬಿಎಂಟಿಸಿಯು ಕೂಡ ಕೊರೊನಾ ಲಾಕ್‌ಡೌನ್ ಮುಗಿದ ಬಳಿಕ ಹಳೆಯ ಬಸ್‌ಪಾಸ್‌ ತೋರಿಸಿ ಸಂಚರಿಸಲು ಅವಕಾಶ ನೀಡಿತ್ತು. ಬಳಿಕ ಆನ್‌ಲೈನ್ ಮೂಲಕ ಬಸ್‌ಪಾಸ್ ಪಡೆದುಕೊಳ್ಳುವಂತೆ ತಿಳಿಸಿತ್ತು.

English summary
Students can travel In KSRTC buses till the 28th of February, Showing Last Year Bus Pass.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X