• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೊಡ್ಡಬಳ್ಳಾಪುರದ ಗುರ್ರಮ್ಮ ಅಜ್ಜಿಯ ನಿಸ್ವಾರ್ಥ ಸೇವೆ

|

ದೊಡ್ಡಬಳ್ಳಾಪುರ, ಫೆಬ್ರವರಿ 27: ಈಗೆಲ್ಲಾ ಹೆರಿಗೆ ನೋವು ಕಾಣಿಸಿಕೊಂಡ ತಕ್ಷಣ ಗರ್ಭಿಣಿಯಿರುವ ಮನೆಯರು ಮೊದಲು ಆಸ್ಪತ್ರೆಯ ಕದ ತಟ್ಟುತ್ತಾರೆ. ಇಲ್ಲವಾದರೆ ಶೀಘ್ರವಾಗಿ 108 ಆಂಬುಲೆನ್ಸ್​ ಗೆ ಕರೆ ಮಾಡಿ ಸಹಾಯಕ್ಕೆ ಬರುವಂತೆ ಕೇಳುತ್ತಾರೆ. ಆದ್ರೆ ಇಲ್ಲೊಂದು ಗ್ರಾಮವಿದೆ ಇಲ್ಲಿ ಹೆರಿಗೆ ನೋವು ಸೇರಿದಂತೆ ಕಂದಮ್ಮಗಳಿಗೆ ಬರುವ ಸಣ್ಣಪುಟ್ಟ ಸಮಸ್ಯೆಗಳಿಗೆ ಆಸ್ಪತ್ರೆಯ ಬದಲಾಗಿ ಅಜ್ಜಿಗೆ ಕರೆ ಮಾಡ್ತಾರೆ.

ಅರೇ ಇದ್ಯಾಕೆ ಅಜ್ಜಿಗೆ ಕರೆ ಮಾಡುತ್ತಾರೆ, 90 ವರ್ಷ ವಯಸ್ಸಿನ ಅಜ್ಜಿ ಏನ್​ ಮಾಡ್ತಾರೆ ಅಂತಿರಾ? ಮಕ್ಕಳ, ಗರ್ಭಿಣಿಯರ, ಬಾಣಂತಿಯರ ಆರೋಗ್ಯ ಕಾಪಾಡುವುದೇ ಈ ಅಜ್ಜಿಯ ಧ್ಯೇಯ. ಊರೂರು ಅಲೆದು ಕಂದಮ್ಮಗಳು, ಗರ್ಭಿಣಿಯರು ಹಾಗೂ ಬಾಣಂತಿಯರನ್ನು ಸಂಪರ್ಕಿಸಿ ಯೋಗಕ್ಷೇಮ ವಿಚಾರಿಸುವ ಈ ಅಜ್ಜಿಯ ಹೆಸರು ಗುರ್ರಮ್ಮ.

ದೊಡ್ಡಬಳ್ಳಾಪುರ ತಾಲೂಕಿನ ಮೆಳೆಕೋಟೆ ನಿವಾಸಿಯಾಗಿರುವ ಅಜ್ಜಿಗೆ ಇದೀಗ 90 ವರ್ಷ ವಯಸ್ಸು. ಆದರೂ ಅಜ್ಜಿಯಲ್ಲಿ ಇಂದಿಗೂ ಸಮಾಜ ಸೇವೆ ಮಾಡವ ಹುಮ್ಮಸ್ಸು ಮಾತ್ರ ಕುಗ್ಗಿಲ್ಲ. ಇವರು ತಮ್ಮ ಜೀವನದುದ್ದಕ್ಕೂ ಹಸಿಗೂಸುಗಳ ಹಾಗೂ ಗರ್ಭಿಣಿಯರ ಸೇವೆ ಮಾಡಿಕೊಂಡು ಕಳೆಯುತ್ತಿದ್ದಾರೆ.

ಬರಲಾರೆ ಎಂದದ್ದೇ ಇಲ್ಲ

ಬರಲಾರೆ ಎಂದದ್ದೇ ಇಲ್ಲ

ಮೆಳೆಕೋಟೆಯಲ್ಲಿ ವಾಸವಾಗಿರುವ ಗುರ್ರಮ್ಮ ಹೆರಿಗೆ ನೋವು ಎಂದು ಸುತ್ತಮುತ್ತಲ ಯಾವ ಗ್ರಾಮದವರು ಕರೆ ಮಾಡಿದರೂ ಕೂಡಲೆ ಹೆರಿಗೆ ಮಾಡಿಸಲು ಸಿದ್ದರಾಗಿ ಹೊರಟು ಬಿಡ್ತಾರೆ. ಯಾವ ಹೊತ್ತಿನಲ್ಲಿ ಕರೆದರೂ ಸರಿ ಬರುವುದಿಲ್ಲ ಎಂಬ ಮಾತು ಹೇಳದೆ ನಿಸ್ವಾರ್ಥ ಸೇವೆ ಮಾಡುತ್ತಿದ್ದಾರೆ. ಮಾತ್ರವಲ್ಲ ಪ್ರತೀ ದಿನ ಒಂದೊಂದು ಹಳ್ಳಿಗೆ ಭೇಟಿ ನೀಡಿ ಹಳ್ಳಿಯಲ್ಲಿನ ಗರ್ಭಿಣಿಯರು ಸೇರಿದಂತೆ ಹಸುಗೂಸುಗಳ ಯೋಗಕ್ಷೇಮದ ಬಗ್ಗೆ ವಿಚಾರಿಸಿಕೊಂಡು ಹೋಗ್ತಾರೆ.

ಹೆರಿಗೆ ತರಬೇತಿ ಪಡೆದಿರುವ ಅಜ್ಜಿ

ಹೆರಿಗೆ ತರಬೇತಿ ಪಡೆದಿರುವ ಅಜ್ಜಿ

ಹತ್ತಾರು ಹಳ್ಳಿಗಳಿಗೆ ಪ್ರೀತಿಯ ಅಜ್ಜಿ ಎಂದೇ ಖ್ಯಾತಿ ಹೊಂದಿರುವ ಗುರ್ರಮ್ಮ ತಮ್ಮ ಜೀವಿತಾವಧಿಯಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ಹೆರಿಗೆಗಳನ್ನು ಮಾಡಿಸಿದ್ದಾರೆ. ಈ ಅಜ್ಜಿಗೆ ತಮ್ಮ 17 ನೇ ವಯಸ್ಸಿನಲ್ಲಿಯೇ ಮದುವೆ ಮಾಡಲಾಗಿತ್ತು. ಮದುವೆಯಾದ ಕೆಲವು ವರ್ಷಗಳ ನಂತರ ಗಂಡ ಅಕಾಲಿಕ ಮರಣ ಹೊಂದಿದರು. ಈ ವೇಳೆ ಏನು ವಿದ್ಯಾಭ್ಯಾಸ ಮಾಡದ ಅಜ್ಜಿ ದೊಡ್ಡಬಳ್ಳಾಪುರದ ಸರಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸುವುದರ ಬಗ್ಗೆ ತರಭೇತಿ ಪಡೆದರು.

ಸೇವೆಯೇ ಜೀವನ

ಸೇವೆಯೇ ಜೀವನ

ಹೆರಿಗೆ ಮಾಡಿಸುವುದನ್ನು ಕರಗತ ಮಾಡಿಕೊಂಡ ಅಜ್ಜಿ ಇದನ್ನು ತಮ್ಮ ಕಸುಭನ್ನಾಗಿಸಿಕೊಂಡರು. ಸುಮಾರು ತಮ್ಮ 30 ನೇ ವಯಸ್ಸಿನಲ್ಲಿ ಗರ್ಭಿಣಿಯರಿಗೆ ಹೆರಿಗೆ ಮಾಡಿಸುವುದನ್ನು ಆರಂಭ ಮಾಡಿದ ಅಜ್ಜಿ ತಮ್ಮ 90 ವರ್ಷದ ಇಳಿವಯಸ್ಸಿನಲ್ಲೂ ಸೇವೆಯನ್ನು ನಾನ್​ಸ್ಟಾಪ್​ ಆಗಿ ಮುಂದುವರೆಸುತ್ತಿದ್ದಾರೆ. ಇವರ ನಿಸ್ವಾರ್ಥ ಸೇವೆಯನ್ನು ಮೆಚ್ಚಿದ ಹಲವರು ಇವರ ಬಗ್ಗೆ ಗುಣಗಾನ ಮಾಡುತ್ತಿದ್ದಾರೆ. ಮಾತ್ರವಲ್ಲ ಇವರ ಸೇವೆಯ ಕುರಿತ ಹಾಡುಗಳನ್ನು ಸಹ ರಚಿಸಿದ್ದಾರೆ.

ಸರ್ಕಾರಗಳು ಗೌರವಿಸಲಿ

ಸರ್ಕಾರಗಳು ಗೌರವಿಸಲಿ

ಸಣ್ಣ ಕೆಲಸಕ್ಕೂ ಸಾಕು ಪ್ರತಿಫಲ ಭಯಸುವಂತಹ ಇಂದಿನ ಕಾಲದಲ್ಲಿ ತಮ್ಮ ಇಳಿ ವಯಸ್ಸಿನಲ್ಲೂ ಊರೂರು ಸುತ್ತಿ ಸಮಾಜ ಸೇವೆ ಮಾಡುತ್ತಿರುವ ಅಜ್ಜಿಯ ಕಾರ್ಯ ಮೆಚ್ಚುವಂತದ್ದಾಗಿದೆ. ಇಂತಹ ಸಮಾಜ ಸೇವಕಿಯನ್ನು ಸರಕಾರಗಳು ಗುರುತಿಸಿ ಗೌರವಿಸಲಿ ಹಾಗೂ ಗುರ್ರಮ್ಮ ಅಜ್ಜಿ 100 ವರ್ಷಕ್ಕೂ ಹೆಚ್ಚು ಬದುಕಲಿ ಇವರ ಕೈಯಲ್ಲಿ ಇನ್ನಷ್ಟು ಕಂದಮ್ಮಗಳಿಗೆ ಜನ್ಮ ಕೊಡಿಸುವಂತಾಗಲಿ ಎಂಬುದು ಎಲ್ಲರ ಆಶಯ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Doddaballapur's old lady Gurramma has helped to deliver more than 2000 children till now. She is very famous in this job in Doddaballapura.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more