ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಲ್ಲಿ ಫೆ.12ರಿಂದ ಸ್ಟೋನಾ - 2014

By Rajendra
|
Google Oneindia Kannada News

ಬೆಂಗಳೂರು, ಫೆ.8: 11ನೇ ಅಂತಾರಾಷ್ಟ್ರೀಯ ಗ್ರಾನೈಟ್ ಮತ್ತು ಸ್ಟೋನ್ ಫೇರ್ - 'ಸ್ಟೋನಾ-2014' ಫೆಬ್ರವರಿ 12ರಿಂದ 15ರವರೆಗೆ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ನಡೆಯಲಿದೆ. ಆಲ್ ಇಂಡಿಯಾ ಗ್ರಾನೈಟ್ 400 ಪ್ರದರ್ಶಕರು ಸ್ಟೋನಾ-2104ರಲ್ಲಿ ಪಾಲ್ಗೊಳ್ಳಲಿದ್ದಾರೆ.

ಇಟಲಿ, ಟರ್ಕಿ, ಚೀನಾ ದೇಶಗಳ ಪೆವಿಲಿಯನ್ ಗಳನ್ನು ತೆರೆಯಲಿದ್ದು, ಸೌದಿ ಅರೇಬಿಯಾ, ದುಬೈ, ವಿಯೆಟ್ನಾಂ, ಉಕ್ರೇನ್ ದೇಶಗಳು ಸ್ಟೋನ್ ಫೇರ್ ನಲ್ಲಿ ಪಾಲ್ಗೊಳ್ಳಲಿವೆ. ಪ್ರತಿನಿತ್ಯ 15 ಸಾವಿರಕ್ಕೂ ಹೆಚ್ಚು ಮಂದಿ ಪ್ರದರ್ಶನದಲ್ಲಿ ಪಾಲ್ಗೊಳ್ಳಲಿದ್ದಾರೆ.

ಎಐಜಿಎಸ್‍ಎ: ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಲ್ಲು ಕೈಗಾರಿಕೆಯಲ್ಲಿ ಇರುವ ಸಾಮರ್ಥ್ಯವನ್ನು ಮನಗಂಡು ಭಾರತದಲ್ಲಿ ನೈಸರ್ಗಿಕ ಕಲ್ಲುಗಳ ಉದ್ಯಮಕ್ಕೆ ಪ್ರೋತ್ಸಾಹ ನೀಡಲು 1983ರಲ್ಲಿ ಆಲ್ ಇಂಡಿಯಾ ಗ್ರಾನೈಟ್ ಅಂಡ್ ಸ್ಟೋನ್ಸ್ ಅಸೋಸಿಯೇಷನ್ (ಎಐಜಿಎಸ್‍ಎ) ಆರಂಭಿಸಲಾಯಿತು.

ಗಣಿಗಾರಿಕೆ ಉದ್ದಿಮೆಯ ಸಮಸ್ಯೆ ನಿವಾರಣೆ ಹಾಗೂ ಜಾಗತಿಕ ಮಟ್ಟದಲ್ಲಿ ಭಾರತದ ಕಲ್ಲುಗಳಿಗೆ ಪ್ರೋತ್ಸಾಹ ನೀಡಬೇಕು ಎನ್ನುವುದು ಅಸೋಸಿಯೇಷನ್‍ನ ಪ್ರಮುಖ ಉದ್ದೇಶವಾಗಿತ್ತು. ಗಣಿಗಾರಿಕೆ ಉದ್ಯಮ ಅಸಂಘಟಿತ ವಲಯದಲ್ಲಿದ್ದ ಆ ಕಾಲದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಿ ಉದ್ಯಮವನ್ನು ಬೆಳೆಸುವುದು ಅಂದಿನ ದಿನಮಾನದಲ್ಲಿ ಅಷ್ಟೊಂದು ಸುಲಭವಾಗಿರಲಿಲ್ಲ.

ಸದಸ್ಯರ ಸಹಕಾರ ಹಾಗೂ ಬೆಂಬಲದಿಂದ ಎಐಜಿಎಸ್‍ಎ ಕಳೆದ 30 ವರ್ಷಗಳಲ್ಲಿ ಪ್ರಬಲವಾಗಿ ಬೆಳೆಯಿತು. ಈ ಅವಧಿಯಲ್ಲಿ ಎಐಜಿಎಸ್‍ಎ ಹಲವು ಮೈಲಿಗಲ್ಲುಗಳನ್ನು ತಲುಪಿ ಸಾಧನೆ ಮಾಡಿತು.

ನೈಸರ್ಗಿಕ ಕಲ್ಲು ಉದ್ದಿಮೆಯ ವಿವಿಧ ಸ್ವರೂಪಗಳಲ್ಲಿರುವವರು ಅಸೋಸಿಯೇಷನ್‍ನ ಸದಸ್ಯರಾದರು. ಗ್ರಾನೈಟ್, ಮಾರ್ಬಲ್, ಸ್ಲೇಟ್, ಸ್ಯಾಂಡ್ ಸ್ಟೋನ್, ಯಂತ್ರಗಳು, ಟೂಲ್ಸ್ ಮತ್ತು ಉದ್ದಿಮೆಯಲ್ಲಿ ನೇರ ಹಾಗೂ ಪರೋಕ್ಷವಾಗಿರುವವರೆಲ್ಲರೂ ಎಐಜಿಎಸ್‍ಎಯ ಸದಸ್ಯರಾದರು.

ಆರಂಭದಲ್ಲಿ ಶೇ.70ರಿಂದ 80 ರಷ್ಟು ಒರಟು ಒರಟಾದ ಬ್ಲಾಕ್ ಗಳನ್ನು ಜಪಾನ್, ಇಟಲಿ ಹಾಗೂ ಇತರೆ ದೇಶಗಳಿಗೆ ರಫ್ತು ಮಾಡಲಾಗುತ್ತಿತ್ತು. ಭಾರತದ ಬ್ಲಾಕ್ ಗಳನ್ನು ಇಟಲಿಗೆ ರಫ್ತು ಮಾಡಿ ಅಲ್ಲಿ ಅದಕ್ಕೆ ಪೂರ್ಣ ರೂಪ ಕೊಟ್ಟು ಇಟಲಿಯಿಂದ ಉಳಿದ ದೇಶಗಳಿಗೆ ರಫ್ತು ಮಾಡುತ್ತಿದ್ದ ಕಾರಣ 1990ರವರೆಗೆ ಭಾರತದಲ್ಲಿ ಗ್ರಾನೈಟ್ ಲಭ್ಯವಿದೆ ಎಂದು ಹಲವಾರು ದೇಶಗಳಿಗೆ ತಿಳಿದಿರಲಿಲ್ಲ.

ಸದ್ಯ ಭಾರತ 'ಸ್ಟೇಟ್ ಆಫ್ ಆರ್ಟ್ ಟೆಕ್ನಾಲಜಿ'ಯನ್ನು ಈ ಉದ್ಯಮದಲ್ಲಿ ಸಂಸ್ಕರಣೆಗೆ ಬಳಸುತ್ತಿದ್ದು, ಇತರೆ ಎಲ್ಲಾ ದೇಶಗಳಿಂದ ನಮ್ಮ ತಂತ್ರಜ್ಞಾನ ಅತ್ಯುತ್ತಮವಾಗಿದೆ. ನಮ್ಮ ಉತ್ಪನ್ನಗಳಿಗೆ ವಿಶ್ವದಾದ್ಯಂತ ಭಾರೀ ಬೇಡಿಕೆಯಿದ್ದು ವಿಶ್ವದ ಪ್ರಮುಖ ಯೋಜನೆಗಳಿಗೆ ನಮ್ಮ ದೇಶದ ಉತ್ಪನ್ನಗಳನ್ನೇ ಬಳಸಲಾಗುತ್ತಿದೆ. ಸದ್ಯ ಭಾರತ ಸುಮಾರು 90ಕ್ಕಿಂತಲೂ ಹೆಚ್ಚು ರಾಷ್ಟ್ರಗಳಿಗೆ ರಫ್ತು ಮಾಡುತ್ತಿದೆ.

ರಾಜ್ಯ ಮತ್ತು ಕೇಂದ್ರ ಸರ್ಕಾರದ ಮಧ್ಯೆ ಸಂಪರ್ಕ ಸೇತುವಾಗಿ ಎಐಜಿಎಸ್‍ಎ ಕಾರ್ಯನಿರ್ವಹಿಸುತ್ತಿದೆ. ಎಐಜಿಎಸ್‍ಎ ಸರ್ಕಾರದಿಂದಲೂ ಅಂಗೀಕೃತವಾಗಿದ್ದು, ಕೇಂದ್ರ ಸರ್ಕಾರದ ಹಲವು ಸಮಿತಿಗಳಲ್ಲಿ ನಾಮನಿರ್ದೇಶನ ಮಾಡಲ್ಪಟ್ಟಿದೆ. ಎಐಜಿಎಸ್‍ಎ ಗ್ರಾನೈಟ್ ಅಭಿವೃದ್ಧಿ ಸಮಿತಿ (ಜಿಡಿಸಿ), ಯೋಜನಾ ಆಯೋಗ ಮತ್ತು ಎಂಎಸ್‍ಎಂಇ ರಾಷ್ಟ್ರೀಯ ಮಂಡಳಿ ಇತ್ಯಾದಿಗಳಲ್ಲಿ ಗುರುತಿಸಲ್ಪಟ್ಟಿದೆ.

ಎಐಜಿಎಸ್‍ಎಯ ನಿರಂತರ ಶ್ರಮದಿಂದಾಗಿ ಇಂದು ಕಲ್ಲು ಗಣಿಗಾರಿಕೆ ಹಾಗೂ ಸಂಸ್ಕರಣಾ ವಲಯದಲ್ಲಿ ಭಾರೀ ಅಭಿವೃದ್ಧಿ ಕಾರ್ಯಗಳು ನಡೆದವು. ಇಂದು, ನಾವು ಶೇ.70 ರಿಂದ 80ರಷ್ಟು ಅಂತಿಮ ಉತ್ಪನ್ನವನ್ನು ಮೌಲ್ಯವರ್ಧನೆಗೊಳಿಸಿ ರಫ್ತು ಮಾಡುತ್ತಿದ್ದೇವೆ.

STONA 2014, Granites and Stone fair
ದೇಶದಲ್ಲಿ ಗ್ರಾನೈಟ್ ಉದ್ಯಮದ ಪ್ರೋತ್ಸಾಹಕ್ಕಾಗಿ ಕೇಂದ್ರ ಗಣಿ ಇಲಾಖೆ ಜಾರಿಗೆ ತಂದ ಗ್ರಾನೈಟ್ ಸಂರಕ್ಷಣೆ ಹಾಗೂ ಅಭಿವೃದ್ಧಿ ನಿಯಮ (ಜಿಸಿಡಿಆರ್-1999) ರಚನೆಯಲ್ಲಿ ಎಐಜಿಎಸ್‍ಎ ಪ್ರಮುಖ ಪಾತ್ರ ವಹಿಸಿತು. ಈ ನಿಯಮ ಜಾರಿಗೆ ಬರುವರೆಗೆ ಪ್ರತಿ ರಾಜ್ಯದಲ್ಲಿ ಪ್ರತ್ಯೇಕ ನಿಯಮಾವಳಿಗಳಿದ್ದವು. ಆದರೆ ಎಐಜಿಎಸ್‍ಎ ದೇಶದಾದ್ಯಂತ ಒಂದೇ ಕಾನೂನು ಅಗತ್ಯ ಎಂದು ಮನಗಂಡು 1999ರಲ್ಲಿ ಜಿಸಿಡಿಆರ್ ರೂಪಿಸಲಾಯಿತು.

ಎಐಜಿಎಸ್‍ಎಯ ಇಷ್ಟೆಲ್ಲಾ ಪ್ರಯತ್ನಗಳ ಹೊರತಾಗಿಯೂ ಇನ್ನೂ ಹಲವಾರು ರಾಜ್ಯಗಳಲ್ಲಿ ಜಿಸಿಡಿಆರ್ ನಿಯಮಗಳು ಪಾಲನೆಯಾಗುತ್ತಿಲ್ಲ. ಇದರಿಂದಾಗಿ ಗ್ರಾನೈಟ್ ಉದ್ಯಮದ ಬೆಳವಣಿಗೆ ನಿಧಾನಗತಿಯಲ್ಲಿ ಸಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಸರಿಯಾದ ಬೆಂಬಲ ಸಿಕ್ಕಿದ್ದರೆ ಕಲ್ಲು ಉದ್ಯಮವನ್ನು ಇಂದು ಬದಲಾಯಿಸಬಹುದಿತ್ತು.

ದೇಶದಲ್ಲಿ ಕಲ್ಲು ಉದ್ಯಮದ ಅಭಿವೃದ್ಧಿಗಾಗಿ ಎಐಜಿಎಸ್‍ಎ ಹಲವು ಕಾರ್ಯಕ್ರಮಗಳನ್ನು ರೂಪಿಸುತ್ತಿದೆ.
1. ತರಬೇತಿ ಸಂಸ್ಥೆಗಳ ಸ್ಥಾಪನೆ
2. ಶಿಲ್ಪಿಗಳ ಪಾರ್ಕ್ ಮತ್ತು ಶಿಲ್ಪಕಲೆ ತರಬೇತಿ ಕಾರ್ಯಕ್ರಮ
3. ಟೆಸ್ಟಿಂಗ್ ಲ್ಯಾಬೋರೇಟರಿ
4. ಸಂಶೋಧನಾ ಕೇಂದ್ರ
5. ಪ್ರದರ್ಶನ ಹಾಗೂ ವಾಣಿಜ್ಯ ಕೇಂದ್ರ

ಈ ಎಲ್ಲಾ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಎಐಜಿಎಸ್‍ಎ ಸದಸ್ಯರು ಅಸೋಸಿಯೇಷನ್ ಹೆಸರನ್ನು ಫೆಡರೇಷನ್ ಎಂದು ಬದಲಾಯಿಸುವಂತೆ ಕೋರಿದ್ದಾರೆ. ಇದರಿಂದ ದೇಶದ ಕಲ್ಲು ಉದ್ಯಮಕ್ಕೆ ರಾಷ್ಟ್ರ ಹಾಗೂ ಜಾಗತಿಕ ಮಟ್ಟದಲ್ಲಿ ಗುರುತು ಹಚ್ಚಲು ಮತ್ತು ದೇಶದ ಸ್ಥಳೀಯ ಅಸೋಸಿಯೇಷನ್ ಗಳ ಸಹಕಾರ ಪಡೆಯಲು ಸಹಕಾರಿಯಾಗಲಿದೆ. ಈ ಹಿನ್ನೆಲೆಯಲ್ಲಿ ಎಐಜಿಎಸ್‍ಎ 2014 ಏಪ್ರಿಲ್ 1ರಿಂದ ಫೆಡರೇಷನ್ ಆಫ್ ಇಂಡಿಯನ್ ಗ್ರಾನೈಟ್ ಆ್ಯಂಡ್ ಸ್ಟೋನ್ ಇಂಡಸ್ಟ್ರಿ' ಎಂದು ಬದಲಾಗಲಿದೆ.

English summary
STONA 2014 – the 11th International Granites and Stone fair aims to project the Indian Stone Industry before the entire world. STONA 2014 is a B2 B international Exhibition held in the Bangalore International exhibition Centre, Bangalore from 12th to 15th February 2014.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X