• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಚಿವ ಆಂಜನೇಯ ಪತ್ನಿಯಿಂದಲೇ ಅಕ್ಕಿ ಕಮಿಷನ್ ಡೀಲ್?

|

ಬೆಂಗಳೂರು, ನವೆಂಬರ್. 05: ರಾಜ್ಯ ಸಚಿವ ಸಂಪುಟಕ್ಕೆ ಭ್ರಷ್ಟಾಚಾರದ ಕಳಂಕ ಅಂಟಿಕೊಂಡಿದೆ. ಖಾಸಗಿ ಟಿವಿ ವಾಹಿನಿ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಸಮಾಜ ಕಲ್ಯಾಣ ಸಚಿವ ಆಂಜನೇಯ ನಿವಾಸದಲ್ಲಿಯೇ ಕಮಿಷನ್ ವ್ಯವಹಾರ ನಡೆಯುತ್ತಿರುವುದು ಬಯಲಾಗಿದೆ.

ಸಚಿವ ಆಂಜನೇಯ ಅವರ ಅಧಿಕೃತ ನಿವಾಸದಲ್ಲೇ ಅವರ ಪತ್ನಿ ವಿಜಯಾ ಕಮೀಷನ್ ಪಡೆಯುತ್ತಿರುವ ದೃಶ್ಯಾವಳಿಗಳು ವಾಹಿನಿಗಳಲ್ಲಿ ಬಿತ್ತರವಾಗುತ್ತಿದ್ದು ಚರ್ಚೆ ಹುಟ್ಟುಹಾಕಿದೆ. ಎಸ್ ಸಿ, ಎಸ್ ಎಸ್ ಟಿ ವಿದ್ಯಾರ್ಥಿಗಳ ಊಟದ ಟೆಂಡರ್ ಗೆ ಸಂಬಂಧಿಸಿದಂತೆ ಸಚಿವರ ಪತ್ನಿ 7 ಲಕ್ಷ ರೂಪಾಯಿ ಕಮಿಷನ್ ಪಡೆಯುತ್ತಿರುವ ದೃಶ್ಯ ರಹಸ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. [ಹಿಂದುಳಿದ ವರ್ಗಕ್ಕೆ ಆಂಜನೇಯ ಏನು ಮಾಡಿದ್ದಾರೆ?]

ಆದರೆ ಇದನ್ನು ತಳ್ಳಿಹಾಕಿರುವ ಸಚಿವ ಆಂಜನೇಯ, ಪ್ರಕರಣದ ಹಿಂದೆ ಷಡ್ಯಂತ್ರವಿದ್ದು, ಕಾಣದ ಕೈಗಳ ಕೈವಾಡವಿದೆ ಎಂದು ಹೇಳಿಕೆ ನೀಡಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಪ್ರಭಾಕರ್ ಅವರನ್ನು ರಜೆ ಮೇಲೆ ತೆರಳಲು ಸಿಎಂ ಸಿದ್ದರಾಮಯ್ಯು ಸೂಚನೆ ನೀಡಿದ್ದಾರೆ.

ಎಸ್ ಸಿ ಎಸ್ ಟಿ ಅಕ್ಕಿ ಡೀಲ್?

ಎಸ್ ಸಿ ಎಸ್ ಟಿ ಅಕ್ಕಿ ಡೀಲ್?

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮತ್ತು ಒಬಿಸಿ ವಿದ್ಯಾರ್ಥಿ ನಿಲಯಗಳಿಗೆ ಆಹಾರ ವಿತರಿಸಲು 2 ತಿಂಗಳ ಹಿಂದೆ 30 ಜಿಲ್ಲೆಗಳಿಗೂ ಟೆಂಡರ್ ಕರೆಯಲಾಗಿತ್ತು. ಈ ಟೆಂಡರ್ ಪ್ರಕ್ರಿಯೆಯಲ್ಲಿ ಬಹಳಷ್ಟು ಸಂಖ್ಯೆಯ ಆಹಾರ ಸರಬರಾಜುದಾರರು ಭಾಗವಹಿಸಿದ್ದರು. ಈ ಟೆಂಡರ್ ಬಗ್ಗೆ ನಡೆದ ಮಾತುಕತೆ ವಿವರ ವಿಡಿಯೋದಲ್ಲಿದೆ.

ಏನಿದು ಪ್ರಕರಣ?

ಏನಿದು ಪ್ರಕರಣ?

ಸಚಿವ ಆಂಜನೇಯ ಅವರ ಬೆಂಗಳೂರಿನ ಜಯಮಹಲ್ ನಿವಾಸದಲ್ಲೇ ಆಂಜನೇಯ ಪತ್ನಿ ವಿಜಯಾ ಜೊತೆ ಸಮಾಜ ಕಲ್ಯಾಣ ಉಪ ನಿರ್ದೇಶಕ ಪ್ರಭಾಕರ್ ಡೀಲಿಂಗ್ ನಡೆಸಿದ್ದಾರೆ. 7 ಲಕ್ಷ ರೂಪಾಯಿಗೆ ಬೇಡಿಕೆ ಇಡುವುದು ಹಾಗೂ 7 ಲಕ್ಷ ರೂಪಾಯಿಯನ್ನು ಸಚಿವರ ಪತ್ನಿಗೆ ನೀಡುವುದು ಕುಟುಕು ಕಾರ್ಯಾಚರಣೆಯಲ್ಲಿ ಸೆರೆಸಿಕ್ಕಿದೆ.

ವಿಚಾರದ ಬಗ್ಗೆ ಗೊತ್ತಿಲ್ಲ ಎಂದ ಸಿಎಂ

ವಿಚಾರದ ಬಗ್ಗೆ ಗೊತ್ತಿಲ್ಲ ಎಂದ ಸಿಎಂ

ಮಾಧ್ಯಮದವರ ಪ್ರಶ್ನೆಗೆ ಉತ್ತರ ನೀಡಿದ ಸಿಎಂ ಸಿದ್ದರಾಮಯ್ಯ, ಡೀಲ್ ದಂಧೆ ಬಗ್ಗೆ ನನಗೆ ಗೊತ್ತಿಲ್ಲ, ಮಾಹಿತಿ ಕಲೆಹಾಕುತ್ತೇನೆ ಎಂದು ಹೇಳಿದರು.

 ನನ್ನ ಪತ್ನಿ ಅಮಾಯಕಿ: ಆಂಜನೇಯ

ನನ್ನ ಪತ್ನಿ ಅಮಾಯಕಿ: ಆಂಜನೇಯ

ಟೆಂಟರ್ ಕಮಿಷನ್ ಹಣ 7 ಲಕ್ಷ ರು. ಬಗ್ಗೆ ನನ್ನ ಪತ್ನಿ ಬೇಡಿಕೆಯಿಟ್ಟಿಲ್ಲ. ಇದರ ಹಿಂದೆ ಯಾರದ್ದೋ ಕೈವಾಡವಿದ್ದು ನಮ್ಮ ಯಾವುದೇ ತಪ್ಪಿಲ್ಲ ಎಂದು ಆಂಜನೇಯ ಹೇಳಿಕೆ ನೀಡಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bengaluru: State Government under trouble. Minister for Social Welfare H Anjaneya House witnessed a sting operation. The hidden camera video tells Anjaneya wife Vijaya and Social Welfare department director Prabhakar talks which is related to SC ST students food supply.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more