ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೈಲಬೆಲೆ ಏರಿಕೆ: ಬಿಜೆಪಿಯ ಹಳೇ ಕಡತವನ್ನೆಲ್ಲಾ ತಿರುವಿ ತಿರುವಿ ಹಾಕುತ್ತಿರುವ ಕಾಂಗ್ರೆಸ್

|
Google Oneindia Kannada News

ಬೆಂಗಳೂರು, ಫೆ 19: ಪೆಟ್ರೋಲ್, ಡೀಸೆಲ್ ಮತ್ತು ಎಲ್ಪಿಜಿ ಬೆಲೆ ಒಂದೇ ಸಮನೆ ಏರುತ್ತಿದೆ. ಪೆಟ್ರೋಲ್ ಬೆಲೆ ದೇಶದಲ್ಲಿ ಸತತವಾಗಿ ಏಳನೇ ದಿನವೂ ಏರಿಕೆ ಕಂಡಿದೆ. ದೇಶದ ಕೆಲವು ರಾಜ್ಯಗಳಲ್ಲಿ ಬೆಲೆ ಸೆಂಚುರಿ ದಾಟಿದೆ.

ಇದೇ, ಯುಪಿಎ ಸರಕಾರದ ಅವಧಿಯಲ್ಲಿ, ತೈಲ ಬೆಲೆ ಏರಿಕೆಯ ವಿರುದ್ದ ಬಿಜೆಪಿ ಮುಖಂಡರು ಕಾಂಗ್ರೆಸ್ ವಿರುದ್ದ ತಿರುಗಿ ಬಿದ್ದಿದ್ದ ಫೋಟೋ, ವಿಡಿಯೋಗಳನ್ನು ಕಾಂಗ್ರೆಸ್ಸಿನವರು ಈಗ ತಿರುವಿ ಹಾಕಿ, ಈಗ ಏನು ಹೇಳುತ್ತೀರಿ ಎಂದು ಲೇವಡಿ ಮಾಡುತ್ತಿದ್ದಾರೆ. ಅದರ ಕೆಲವೊಂದು ಸ್ಯಾಂಪಲ್ ಹೀಗಿದೆ:

ತೈಲ ಬೆಲೆ ಏರಿಕೆ: ಪೆಟ್ರೋಲ್ ಬಂಕ್ ನಲ್ಲಿ ವಿಶಿಷ್ಟ ಫೋಸ್ ಕೊಟ್ಟು ವ್ಯಕ್ತಿಯ ಪ್ರತಿಭಟನೆತೈಲ ಬೆಲೆ ಏರಿಕೆ: ಪೆಟ್ರೋಲ್ ಬಂಕ್ ನಲ್ಲಿ ವಿಶಿಷ್ಟ ಫೋಸ್ ಕೊಟ್ಟು ವ್ಯಕ್ತಿಯ ಪ್ರತಿಭಟನೆ

"ಇಂಧನತೈಲಗಳ ಬೆಲೆ 70₹ ಇದ್ದಾಗ ಪ್ರಜಾಪ್ರಭುತ್ವದಲ್ಲಿ #Andolanjivi ಆಗಿ ಪ್ರತಿಭಟಿಸುವುದು ನಿಮ್ಮ ಹಕ್ಕಾಗಿತ್ತು. ಈಗ ಪ್ರತಿಭಟಿಸುವುದು ದೇಶದ್ರೋಹವಾಗುತ್ತದೆ ಅಲ್ಲವೇ @rsprasad ಅವರೇ? ಪೆಟ್ರೋಲ್ ಒಂದರಿಂದ ಎಷ್ಟೆಲ್ಲ ಬೆಲೆ ಏರಿಕೆಯಾಗುತ್ತದೆಂದು ಚೆನ್ನಾಗಿ ಜ್ಞಾನವಿದೆ ನಿಮಗೆ, ಆ ಕಾಳಜಿ ಈಗ ತೋರಿಸಿ".

"@RAshokaBJP ಅವರೇ, ಈಗೆಲ್ಲಿದೆ ನಿಮ್ಮ ಈ ಸೈಕಲ್!? #petrol100 ಆಗಿದೆ, ನಿಮ್ಮ @BJP4India ಸರ್ಕಾರ ಇಂಧನ ತೈಲಗಳ ಮೇಲಿನ ತೆರಿಗೆಯನ್ನು ₹32 ರಷ್ಟು ಏರಿಸಿ ಜನಸಾಮಾನ್ಯರ ಲೂಟಿಗೆ ಇಳಿದಿದೆ, ಬನ್ನಿ ಸೈಕಲ್ ಏರಿ ಪ್ರತಿಭಟಿಸೋಣ! ಹಿಂದಿನಂತೆ ಮತ್ತೆ #Andolanjivi ಆಗಿ!".

ಕೆಪಿಸಿಸಿ ಉಸ್ತುವಾರಿ ವಿವರಿಸಿದ VST ಅಂದ್ರೆ ವಿಜಯೇಂದ್ರ ಸರ್ವೀಸ್ ಟ್ಯಾಕ್ಸ್ಕೆಪಿಸಿಸಿ ಉಸ್ತುವಾರಿ ವಿವರಿಸಿದ VST ಅಂದ್ರೆ ವಿಜಯೇಂದ್ರ ಸರ್ವೀಸ್ ಟ್ಯಾಕ್ಸ್

ಬಿಜೆಪಿಯ ಅನಧಿಕೃತ ಅಂಬಾಸಿಡರ್ ಸೀನಿಯರ್ ಬಚ್ಚನ್

ಬಿಜೆಪಿಯ ಅನಧಿಕೃತ ಅಂಬಾಸಿಡರ್ ಸೀನಿಯರ್ ಬಚ್ಚನ್

"@BJP4India ಪಕ್ಷದ ಅನಧಿಕೃತ ಬ್ರಾಂಡ್ ಅಂಬಾಸಿಡರ್ @SrBachchan ಅವರೇ, ಪೆಟ್ರೋಲ್ 70₹ ಇದ್ದಾಗ #Andolanjivi ಆಗಿ ಕಾರಿಗೆ ಪೆಟ್ರೋಲ್ ಸ್ಪ್ರೇ ಮಾಡುತ್ತಿದ್ದೀರಿ! ಈಗ 100₹ ದಾಟಿದೆ, ಪೆಟ್ರೋಲ್ ವಾಸನೆ ಕೂಡ ದುಬಾರಿಯಾಗಿದೆ,ಎಲ್ಲಿದ್ದೀರಿ? ಬನ್ನಿ ಟ್ವೀಟ್ ಮಾಡಿ, @narendramodi ಅವರ ಕಿವಿ ಹಿಂಡಿ!

ಕಿರಣ್ ಖೇರ್, ಬಿಜೆಪಿಯ ಎಂಪಿ

ಕಿರಣ್ ಖೇರ್, ಬಿಜೆಪಿಯ ಎಂಪಿ

ಹಿಂದೆ #Andolanjivi ಆಗಿದ್ದ ಬಿಜೆಪಿಯ #Toolkit @AnupamPKher ಅವರೆ, ಈಗ #petrol100 ಆಗಿದೆ, ನಿಮ್ಮ ಡ್ರೈವರ್ ಸೈಕಲ್ ತರುತ್ತಿದ್ದಾನೋ ಅಥವಾ ನಡೆದು ಬರುತ್ತಿದ್ದಾನೋ?! ನಿಮ್ಮ ಪತ್ನಿ @KirronKherBJP ಲೋಕಸಭಾ ಸದಸ್ಯೆ. ಬೆಲೆ ಏರಿಕೆಯಿಂದ ಜನರ ಜೇಬು ಸೋರಿಕೆಯಾಗುತ್ತಿದೆ ಈಗೇಕೆ ಧ್ವನಿ ಎತ್ತುತ್ತಿಲ್ಲ?

ಮೋದಿಯ ಆಗ್ರಹ

#Andolanjivi ಮೋದಿ vs #Ambanijivi ಮೋದಿ "ದೇಶದ ಸ್ಥಿತಿ ಗಂಭೀರವಾಗಿ ಪರಿಗಣಿಸಿ, ಪೆಟ್ರೋಲ್ ಬೆಲೆ ಇಳಿಸಿ" CM ಮೋದಿಯ ಆಗ್ರಹ! ಹೀಗೆಲ್ಲ ಮಾತನಾಡಿದ್ದ ನೀವು ಈಗ 32₹ ತೆರಿಗೆ ವಿಧಿಸಿ ಜನರ ಲೂಟಿಗಿಳಿದಿದ್ದೀರಲ್ಲ ಸ್ವಾಮಿ ನಿಮ್ಮದೇ ಮಾತನ್ನ ಒಮ್ಮೆ ನೆನಪಿಸಿಕೊಳ್ಳಿ, ದೇಶವಾಸಿಗಳ ಸ್ಥಿತಿ ಗಮನಿಸಿ.

ಪ್ರಧಾನಿ ನರೇಂದ್ರ ಮೋದಿಯವರೇ

ಪ್ರಧಾನಿ ನರೇಂದ್ರ ಮೋದಿಯವರೇ

PM @narendramodi ಅವರೇ, CM ಮೋದಿಯವರ ಪ್ರಶ್ನೆಗಳಿಗೆ ಉತ್ತರಿವಿದೆಯಾ? ಪಿಎಂ ಮೋದಿಯವರಿಗಿಂತ ಸಿಎಂ ಮೋದಿಯವರಿಗೆ ಬೆಲೆ ಏರಿಕೆಯ ಬಗ್ಗೆ ಕಾಳಜಿ ಇದ್ದಂಗಿದೆ, ಏಕೆಂದರೆ ಆಗ ಅವರೂ #Andolanjivi ಆಗಿದ್ದರು! ಈಗ #Ambanijivi ಆಗಿರುವ ಕಾರಣ #petrol100 ತಲುಪಿಸಿದ್ದಾರೆ, ಜನರನ್ನ ಮರೆತಿದ್ದಾರೆ.

English summary
Steep Hike In Petroleum Products: KPCC Bringing Back BJPs Old Protest During UPA Government,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X