ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ ಶುಭಶುದ್ದಿ: ಕರ್ನಾಟಕದಲ್ಲಿ ಶುರುವಾಗಲಿವೆ ಪ್ಲಾಸ್ಮಾ ಬ್ಯಾಂಕ್‌!

|
Google Oneindia Kannada News

ಬೆಂಗಳೂರು, ಜು. 21: ಇಡೀ ಜಗತ್ತನ್ನು ಸಂಕಷ್ಟಕ್ಕೆ ತಳ್ಳಿರುವ ಕೊರೊನಾ ವೈರಸ್ ಸೋಂಕಿಗೆ ಈವರೆಗೂ ನಿಖರ ಚಿಕಿತ್ಸೆ ಲಭ್ಯವಿಲ್ಲ. ಆದರೆ ಡೆಂಗ್ಯೂ ಜ್ವರ ಬಂದಾಗ ಪ್ಲೇಟಲೈಟ್ಸ್ ಕೊಟ್ಟು ರೋಗಿಯ ಜೀವ ಉಳಿಸುವಂತೆಯೆ ಕೋವಿಡ್-19 ಸೋಂಕಿಗೆ ತುತ್ತಾಗಿ ತೀವ್ರವಾಗಿ ಅಸ್ವಸ್ಥಗೊಳ್ಳುವವರಿಗೆ ಪ್ಲಾಸ್ಮಾ ಚಿಕಿತ್ಸೆ ಮೂಲಕ ಜೀವ ಉಳಿಸುವ ಪ್ರಯತ್ನವನ್ನು ಮಾಡಲಾಗುತ್ತದೆ.

Recommended Video

One Nation,One Ration Card! ಕಂಪ್ಲೀಟ್ ಮಾಹಿತಿ | Oneindia Kannada

ಈಗಾಗಲೇ ದೆಹಲಿಯಲ್ಲಿ ಪ್ಲಾಸ್ಮಾ ಚಿಕಿತ್ಸೆ ಬಹುತೇಕ ಸಫಲವಾಗಿದೆ. ಅಲ್ಲಿ ಪ್ಲಾಸ್ಮಾ ಬ್ಯಾಂಕ್‌ಗಳನ್ನು ಕೂಡ ಸ್ಥಾಪನೆ ಮಾಡಲಾಗಿದೆ. ನಮ್ಮ ರಾಜ್ಯದಲ್ಲಿಯೂ ಇದೀಗ ಪ್ಲಾಸ್ಮಾ ಬ್ಯಾಂಕ್ ಸ್ಥಾಪನೆಗೆ ಸರ್ಕಾರ ಮುಂದಾಗಿದೆ. ಪ್ಲಾಸ್ಮಾ ಥೆರಪಿಯನ್ನು ರಾಜ್ಯದಲ್ಲಿ ಮಾಡಲಾಗಿದೆ. ಆದರೆ ಪ್ಲಾಸ್ಮಾ ಬ್ಯಾಂಕ್‌ಗಳ ಸ್ಥಾಪನೆಗೆ ಇದೀಗ ಸರ್ಕಾರ ಮುಂದಾಗಿದೆ.

5 ಗಂಟೆಗೆ ರಾಜ್ಯವನ್ನು ಉದ್ದೇಶಿಸಿ ಯಡಿಯೂರಪ್ಪ ಭಾಷಣ5 ಗಂಟೆಗೆ ರಾಜ್ಯವನ್ನು ಉದ್ದೇಶಿಸಿ ಯಡಿಯೂರಪ್ಪ ಭಾಷಣ

ಖಾಸಗಿ ಸಹಭಾಗಿತ್ವ

ಖಾಸಗಿ ಸಹಭಾಗಿತ್ವ

ಖಾಸಗಿ ಸಹಭಾಗಿತ್ವದಲ್ಲಿ ರಾಜ್ಯದಲ್ಲಿಯೂ ಪ್ಲಾಸ್ಮಾ ಬ್ಯಾಂಕ್ ಸ್ಥಾಪನೆಗೆ ಸರ್ಕಾರ ಮುಂದಾಗಿದೆ. ಇಂದು ಸಂಜೆ ಡಿಸಿಎಂ ಡಾ. ಅಶ್ವಥ್ ನಾರಾಯಣ ಅವರು ಪ್ಲಾಸ್ಮಾ ಬ್ಯಾಂಕ್‌ಗೆ ಚಾಲನೆ ನೀಡಲಿದ್ದಾರೆ. ಸರ್ಕಾರದ ಜೊತೆ ಬೆಂಗಳೂರಿನ HCG ಆಸ್ಪತ್ರೆ ಸಹಭಾಗಿತ್ವದಲ್ಲಿ ರಾಜ್ಯದ ಮೊದಲ ಪ್ಲಾಸ್ಮಾ ಬ್ಯಾಂಕ್ ಸ್ಥಾಪನೆ ಮಾಡಲಾಗುತ್ತಿದೆ.

ಇಂದು ಸಂಜೆ ಉದ್ಘಾಟನೆ ಆಗಲಿರುವ ಪ್ಲಾಸ್ಮಾ ಬ್ಯಾಂಕ್, ಬ್ಲಡ್ ಬ್ಯಾಂಕ್ ಮಾದರಿಯಲ್ಲೇ ಇರಲಿದೆ. ಸರ್ಕಾರದ ಸೂಚನೆಯಂತೆ ಪ್ಲಾಸ್ಮಾ ಬ್ಯಾಂಕ್ ಆರಂಭವಾಗಲಿದೆ. ಆ ಮೂಲಕ ಕೋವಿಡ್ ಸೋಂಕಿನಿಂದ ಆರೋಗ್ಯ ಸ್ಥಿತಿ ಗಂಭೀರವಾಗಿರುವ ರೋಗಿಗಳಿಗೆ ಪ್ಲಸ್ಮಾ ಚಿಕಿತ್ಸೆ ಕೊಡಲು ಈ ಬ್ಯಾಂಕ್ ಬಳಸಿಕೊಳ್ಳಬಹುದಾಗಿದೆ.

ಪ್ರೋತ್ಸಾಹ ಧನ

ಪ್ರೋತ್ಸಾಹ ಧನ

ಪ್ಲಾಸ್ಮಾ ದಾನಕ್ಕೆ ಉತ್ತೇಜನ ಕೊಡುವ ನಿಟ್ಟಿನಲ್ಲಿ ಪ್ಲಾಸ್ಮಾ ದಾನ ಮಾಡುವವರಿಗೆ 5000 ಸಾವಿರ ರೂಪಾಯಿಗಳ ಪ್ರೋತ್ಸಾಹ ಧನ ನೀಡುವುದಾಗಿ ಸರ್ಕಾರ ಈ ಹಿಂದೆಯೆ ಘೋಷಣೆ ಮಾಡಿದೆ.

ಪ್ಲಾಸ್ಮಾ ಚಿಕಿತ್ಸೆಯಿಂದ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳ ಜೀವ ಉಳಿಸಬಹುದು. ಹೀಗಾಗಿ ಈಗಾಗಲೇ ಕೋವಿಡ್ ಸೋಂಕಿಗೆ ತುತ್ತಾಗಿ ಗುಣಮುಖರಾಗಿರುವ ಆರೋಗ್ಯವಂತರು ಪ್ಲಾಸ್ಮಾ ದಾನ ಮಾಡಬಹುದು. ಬೆಂಗಳೂರಿನಲ್ಲಿ ಈ ವರೆಗೆ 9 ಮಂದಿ ಮಾತ್ರ ಪ್ಲಾಸ್ಮಾ ದಾನ ಮಾಡಿದ್ದಾರೆ. ಈಗಾಗಲೇ ದಾನ ಮಾಡಿರುವ ಪ್ಲಾಸ್ಮಾ ಬಳಕೆ ಮಾಡಲಾಗಿದೆ. ಹೀಗಾಗಿ ಪ್ಲಾಸ್ಮಾ ದಾನ ಮಾಡಲು ಗುಣಮುಖ ರೋಗಿಗಳಿಗೆ ಸರ್ಕಾರ ಮನವಿ ಮಾಡಿಕೊಂಡಿದೆ.

ಪ್ಲಾಸ್ಮಾ ಸಂರಕ್ಷಣೆ

ಪ್ಲಾಸ್ಮಾ ಸಂರಕ್ಷಣೆ

ದಾನಿಗಳಿಂದ ಪಡೆಯುವ ಪ್ಲಾಸ್ಮಾವನ್ನು ಒಂದು ವರ್ಷದವರಗೆ ಪ್ಲಾಸ್ಮಾ ಬ್ಯಾಂಕ್‌ನಲ್ಲಿ ರಕ್ಷಣೆ ಮಾಡಿ ಇಡಬಹುದು. ಮೈನಸ್ ಎಪ್ಪತ್ತು (-70) ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲಿ ಪ್ಲಾಸ್ಮಾ ಸಂರಕ್ಷಿಸಿ ಇಡಲಾಗುತ್ತದೆ.

ಹೀಗಾಗಿ ಹೆಚ್ಚೆಚ್ಚು ಪ್ಲಾಸ್ಮಾ ದಾನ ಮಾಡುವುದನ್ನು ಪ್ರೋತ್ಸಾಹಿಸಲು ಸರ್ಕಾರದಿಂದ ಪ್ಲಾಸ್ಮಾ ಬ್ಯಾಂಕ್‌ಗೆ ಇಂದು ಚಾಲನೆ ಸಿಗಲಿದೆ.

ಬೆಂಗಳೂರು ನಗರದಲ್ಲಿ ಭಾನುವಾರದ ಕರ್ಫ್ಯೂ ಮತ್ತೆ ಜಾರಿಬೆಂಗಳೂರು ನಗರದಲ್ಲಿ ಭಾನುವಾರದ ಕರ್ಫ್ಯೂ ಮತ್ತೆ ಜಾರಿ

ಎಲ್ಲೆಲ್ಲಿ ಪ್ಲಾಸ್ಮಾ ಥೆರಪಿ?

ಎಲ್ಲೆಲ್ಲಿ ಪ್ಲಾಸ್ಮಾ ಥೆರಪಿ?

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ, ಬೆಂಗಳೂರಿನ ಕಾಳಿಂಗರಾವ್ ರಸ್ತೆಯ HCG ಆಸ್ಪತ್ರೆ ಹಾಗೂ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಸದ್ಯಕ್ಕೆ ಪ್ಲಾಸ್ಮಾ ದಾನ ಮಾಡಬಹುದು. ರಾಜ್ಯದಲ್ಲಿ ಇನ್ನೂ ಕೆಲವು ಸ್ಥಳಗಳನ್ನ ಗುರುತಿಸಿ ಪ್ಲಾಸ್ಮಾ ದಾನ ಮಾಡಲು ವ್ಯವಸ್ಥೆ ಮಾಡಲಾಗುತ್ತಿದೆ. ಆದರೆ ಆರೋಗ್ಯವಂತ ದಾನಿಯಿಂದ ತೆಗೆದ ಪ್ಲಾಸ್ಮಾವನ್ನು ಕಾಯ್ದಿಸಲು ಪ್ಲಾಸ್ಮಾ ಬ್ಯಾಂಕ್ ಅಗತ್ಯವಿದೆ.

ಈಗಾಗಲೇ 15 ಮಂದಿ ಪ್ಲಾಸ್ಮಾ ದಾನ ಮಾಡಲು ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಪ್ಲಾಸ್ಮಾ ಬ್ಯಾಂಕ್‌ನ‌ ಉದ್ದೇಶ ಸಾವಿನ ಪ್ರಮಾಣ ಕಡಿಮೆ ಮಾಡುವುದು. ಹೀಗಾಗಿ ಮೊದಲ ಪ್ಲಾಸ್ಮಾ ಬ್ಯಾಂಕ್ ಬೆಂಗಳೂರಿನಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪನೆ ಆಗಲಿದೆ.

English summary
The government is setting up a plasma bank in the state in private partnerships. This evening, DCM Dr. Ashwath Narayana will inaugurate Plasma Bank. Establishment of the state's first plasma bank in partnership with HCG Hospital, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X