ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್‌ಡೌನ್: ನೀವು ಮನೆಯಲ್ಲೇ ಇರುವಂತೆ ನೋಡಿಕೊಳ್ಳುತ್ತಿರುವವರು ಯಾರು?

|
Google Oneindia Kannada News

ಬೆಂಗಳೂರು, ಏಪ್ರಿಲ್ 25: ಕೊರೊನಾ ಮಹಾಮಾರಿ ವಿರುದ್ಧದ ಹೋರಾಟದಲ್ಲಿ ವೈದ್ಯರು, ಪೊಲೀಸರು, ಆರೋಗ್ಯ ಸಿಬ್ಬಂದಿ ಮತ್ತು ಅಧಿಕಾರಿ ವರ್ಗ ಮುಂಚೂಣಿಯಲ್ಲಿದರೆ ಲಾಕ್‌ಡೌನ್ ಪರಿಣಾಮ ಮನೆಯಲ್ಲಿರುವ ಸಾರ್ವಜನಿಕರಿಗೆ ನಿರಂತರ ವಿದ್ಯುತ್ ಪೂರೈಸುವ ಮೂಲಕ ರಾಜ್ಯದ ವಿದ್ಯುತ್ ಸರಬರಾಜು ಸಂಸ್ಥೆಗಳ ಸಿಬ್ಬಂದಿ ಜನ ಹೊರಗೆ ಬರದಂತೆ ನೋಡಿಕೊಳ್ಳುತ್ತಿದ್ದಾರೆ.

ರಾಜ್ಯದ ವಿದ್ಯುತ್ ಸರಬರಾಜು ಸಂಸ್ಥೆಗಳಾದ ಬೆಂಗಳೂರಿನ ಬೆಸ್ಕಾಂ, ಮೈಸೂರಿನ ಮೆಸ್ಕಾಂ, ಹುಬ್ಬಳ್ಳಿಯ ಹೆಸ್ಕಾಂ ಹಾಗೂ ಕಲಬುರಗಿಯ ಜೆಸ್ಕಾಂ ಕಂಪೆನಿಗಳು ತನ್ನ ಗ್ರಾಹಕರಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಆಗದಂತೆ ನೋಡಿಕೊಳ್ಳುತ್ತಿವೆ. ಇದರಲ್ಲಿ ಕೆಳಹಂತದ ಸಿಬ್ಬಂದಿ ಶ್ರಮ ಹೆಚ್ಚು ಕಂಡು ಬರುತ್ತಿದೆ. ಹಾಗಾಗಿ ಲಾಕ್‌ಡೌನ್‌ನಿಂದ ಮನೆಯಲ್ಲಿ ಲಾಕ್‌ ಆಗಿರುವ ಮಂದಿ ವಿದ್ಯುತ್ ಸಮಸ್ಯೆ ಇಲ್ಲದೇ ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ.

ಹೈಡ್ರಾಕ್ಸಿಕ್ಲೋರೋಕ್ವಿನ್ ಕೊರೊನಾ ವಿರುದ್ಧ ನಿಜಕ್ಕೂ ಕೆಲಸ ಮಾಡುತ್ತಾ?ಹೈಡ್ರಾಕ್ಸಿಕ್ಲೋರೋಕ್ವಿನ್ ಕೊರೊನಾ ವಿರುದ್ಧ ನಿಜಕ್ಕೂ ಕೆಲಸ ಮಾಡುತ್ತಾ?

ಅಧುನಿಕ ಜೀವನದಲ್ಲಿ ವಿದ್ಯುತ್ ಇಲ್ಲ್ಲದ ಜಗತ್ತು ಕಷ್ಟ

ಅಧುನಿಕ ಜೀವನದಲ್ಲಿ ವಿದ್ಯುತ್ ಇಲ್ಲ್ಲದ ಜಗತ್ತು ಕಷ್ಟ

ಅಧುನಿಕ ಜೀವನದಲ್ಲಿ ವಿದ್ಯುತ್ ಇಲ್ಲ್ಲದ ಜಗತ್ತು ಮತ್ತು ಜನಜೀವನ ಊಹಿಸಲು ಅಸಾಧ್ಯ. ಸ್ಮಾರ್ಟ್‍ಫೋನ್, ಟೆಲಿವಿಷನ್, ಕಂಪ್ಯೂಟರ್, ಎ.ಸಿ., ಏರ್ ಕೂಲರ್, ಲ್ಯಾಪಟಾಪ್, ಫ್ಯಾನ್, ಫ್ರೀಜರ್ ಹೀಗೆ ವಿದ್ಯುತ್ ಚಾಲಿತ ಮುಂತಾದ ವಸ್ತುಗಳು ಮಾನವನ ದೈನಂದಿನ ಜೀವನದ ಅಗತ್ಯತೆ ತಿಳಿಸುತ್ತದೆ. ಇವುಗಳು ಇಲ್ಲದಿದ್ದರೆ ಒಂದು ನಿಮಿಷ ಕಳೆಯುವದು ತುಂಬಾ ಕಷ್ಠ. ಈ ಕಷ್ಠ ನಿವಾರಣೆಗೆ ಮೂಲ ವಿದ್ಯುತ್ ಪೂರೈಕೆ ಎಂಬುದನ್ನು ಯಾರು ಮರೆಯುವಂತಿಲ್ಲ.

ಲೈನ್‍ಮೆನ್‍ಗಳ ಕಾರ್ಯ ಪ್ರಶಂಸನೀಯ

ಲೈನ್‍ಮೆನ್‍ಗಳ ಕಾರ್ಯ ಪ್ರಶಂಸನೀಯ

ಕೋವಿಡ್-19 ಹೋರಾಟದಲ್ಲಿ ಜಿಲ್ಲಾಡಳಿತ, ಆರೋಗ್ಯ, ಪೊಲೀಸ್, ಕಂದಾಯ, ಗ್ರಾಮೀಣಾಭಿವೃದ್ಧಿ, ಸ್ಥಳೀಯ ಸಂಸ್ಥೆಗಳು ಹೀಗೆ ಅನೇಕ ಅವಶ್ಯಕ ಸೇವೆಗಳನ್ನು ಪೂರೈಸುವ ಇಲಾಖೆಗಳ ನೌಕರರ ವರ್ಗ ದಿನದ 24 ಗಂಟೆಗಳು ಕಾರ್ಯನಿರ್ವಹಿಸುವ ಮೂಲಕ ಮಾನವ ಸಂಕುಲಕ್ಕೆ ಕುತ್ತಾಗಿ ಪರಿಣಮಿಸಿರುವ ಕೊರೊನಾ ಮಹಾಮಾರಿ ಹೊಡೆದೋಡಿಸಲು ಹಗಲಿರುಳು ಶ್ರಮಿಸುತ್ತಿದ್ದು, ಇಂಧನ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳ ವೃಂದ ಆಸ್ಪತ್ರೆ ಮತ್ತು ಗೃಹಪಯೋಗಿ ಬಳಕೆಗೆ ನಿರಂತರ ವಿದ್ಯುತ್ ಪೂರೈಸುವಲ್ಲಿ ನಿರತವಾಗಿದೆ. ವಿಶೇಷವಾಗಿ ಲೈನ್‍ಮೆನ್‍ಗಳ ಕಾರ್ಯ ಪ್ರಶಂಸನೀಯವಾಗಿದೆ.

ವಿವಾದಾತ್ಮಕ ಹೇಳಿಕೆ: ನಟಿ ಕಂಗನಾ ಮೇಲೆ ಬಿತ್ತು ಕೇಸ್ವಿವಾದಾತ್ಮಕ ಹೇಳಿಕೆ: ನಟಿ ಕಂಗನಾ ಮೇಲೆ ಬಿತ್ತು ಕೇಸ್

ಮನೆಯಲ್ಲೇ ಉಳಿಯಬೇಕಾದ ಪರಿಸ್ಥಿತಿ

ಮನೆಯಲ್ಲೇ ಉಳಿಯಬೇಕಾದ ಪರಿಸ್ಥಿತಿ

ಲಾಕ್‌ಡೌನ್‌ನಿಂದ ಜನರು ಮನೆಯಲ್ಲೇ ಉಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಯಾವುದೇ ಕೆಲಸ ಕಾರ್ಯಗಳಿಲ್ಲ್ಲದೇ ಮನೆಯಲ್ಲಿ ಕಾಲ ಕಳೆಯುತ್ತಿರುವ ಜನರಿಗೆ ನಿರಂತರ ವಿದ್ಯುತ್ ಪೂರೈಸಿ ಸಾರ್ವಜನಿಕರ ದೈನಂದಿನ ಜೀವನಕ್ಕೆ ಧಕ್ಕೆಯಾಗದಂತೆ ವಿದ್ಯುತ್ ಇಲಾಖೆ ಅವಿರತವಾಗಿ ಕಾರ್ಯನಿರ್ವಹಿಸುತ್ತಿದೆ.

ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ

ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ

ಎರಡು ನಿಮಿಷ ವಿದ್ಯುತ್ ಇಲ್ಲ್ಲದಿದ್ದರೂ ಜೆಸ್ಕಾಂಗೆ ಶಾಪ ಹಾಕುವ ಜನತೆಗೆ ನಿರಂತರ ವಿದ್ಯುತ್ ಪೂರೈಸಲು ವಿದ್ಯುತ್ ನೌಕರರು ತಮ್ಮ ಕುಟುಂಬವನ್ನು ಲೆಕ್ಕಿಸದೇ ಪ್ರತಿದಿನ ಮನೆಯಿಂದ ಹೊರಟು ಎಲ್ಲೆಡೆ ಮಾಸ್ಕ್ ಸೇರಿದಂತೆ ಸುರಕ್ಷತಾ ಸಾಮಾಗ್ರಿಗಳನ್ನು ಧರಿಸಿ ವಿದ್ಯುತ್ ಒದಗಿಸಲು ಶ್ರಮಿಸುತ್ತಿದ್ದಾರೆ. ಮಳೆ, ಬಿಸಿಲೆನ್ನದೇ ಕಾರ್ಯನಿರ್ವಹಿಸುವ ವಿದ್ಯುತ್ ನೌಕರರಿಗೆ ಕೊರೊನಾ ಸಂದರ್ಭದಲ್ಲಿನ ಕೆಲಸ ಸವಾಲಾಗಿ ಪರಿಣಮಿಸಿದ್ದು, ಇದನ್ನು ವಿದ್ಯುತ್ ಸಿಬ್ಬಂದಿ ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ.

ರೈತರಿಗೂ ತೊಂದರೆ ಆಗುತ್ತಿಲ್ಲ

ರೈತರಿಗೂ ತೊಂದರೆ ಆಗುತ್ತಿಲ್ಲ

ಸರ್ಕಾರವು ಕೃಷಿ ಚಟುವಟಿಕೆ ಜರುಗಲು ಲಾಕ್‌ಡೌನ್‌ನಿಂದ ಸಡಿಲಿಕೆ ನೀಡಿದ್ದರಿಂದ ಜಮೀನುಗಳಲ್ಲಿ ಕೃಷಿ ಮತ್ತು ವಾಣಿಜ್ಯ ಬೆಳೆಗಳನ್ನು ಬೆಳೆಯಲು ನೀರೆತ್ತುವ ಯಂತ್ರಗಳಿಗೆ ವಿದ್ಯುತ್ ಪೂರೈಸದ್ದರೆ ಅನ್ನದಾತನ ಹಿಡಿಶಾಪ ಲಾಕ್‌ಡೌನ್‌ ಮೇಲೆ. ಇದನ್ನರಿತ ಸಿಬ್ಬಂದಿಗಳು 24 ಗಂಟೆಗಳ ಸೇವೆಗೆ ಯಾವಾಗಲು ಅಣಿಯಾಗಿರುತ್ತಾರೆ.

ತ್ವರಿತವಾಗಿ ಸ್ಪಂದನೆ

ತ್ವರಿತವಾಗಿ ಸ್ಪಂದನೆ

ಜೋರಾಗಿ ಗಾಳಿ, ಮಳೆ, ಗುಡುಗು, ಸಿಡಿಲು ಮಿಂಚಿನಿಂದ ಹಲವು ಕಡೆ ಗಿಡ, ಮರ, ಕಂಬಗಳು ಉರುಳಿ ಬಿದ್ದು ವಿದ್ಯುತ್ ಅಡಚಣೆ ಉಂಟಾದಾಗ ತ್ವರಿತವಾಗಿ ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿ ಸಾರ್ವಜನಿಕರಿಗೆ ವಿದ್ಯುತ್ ಒದಗಿಸಲು ಇವರು ಪಡುವ ಕಷ್ಠ ಹೇಳತೀರದಾಗಿದೆ. ಲಾಕ್ ಡೌನ್ ಸಂದರ್ಭದಲ್ಲಿಯೂ ತಮ್ಮೆ ಸೇವಾ ಮನೋಭಾವ ಹಾಗೇ ಉಳಿಸಿಕೊಂಡಿರವ ಲೈನ್‍ಮೆನ್‍ಗಳನ್ನು ಕಂಡರೆ ಜನ ತುಂಬಾ ಗೌರವದಿಂದ ನೋಡುತ್ತಿರುವುದು ಇವರ ಜನಸೇವೆಗೆ ಸಾಕ್ಷಿಯಾಗಿದೆ.

English summary
State Power Supply Department Staff Work Hard At Lockdown Time. Many peoples apriciate hescom, bescom, gescom and mescom staff work.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X