ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ದಿನಕ್ಕೆ 2 ಬಾರಿ ಬಿಡುಗಡೆಯಾಗಲ್ಲ ಕೊವಿಡ್-19 ಬುಲೆಟಿನ್!

|
Google Oneindia Kannada News

ಬೆಂಗಳೂರು, ಮೇ.30: ನೊವೆಲ್ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಸಾಗಿದೆ. ಶುಕ್ರವಾರ ಒಂದೇ ದಿನ ಬರೋಬ್ಬರಿ 248 ಮಂದಿಗೆ ಸೋಂಕು ದೃಢಪಟ್ಟಿತ್ತು.

ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 2,781ಕ್ಕೆ ಏರಿಕೆಯಾಗಿದ್ದು, ಇದುವರೆಗೂ 48 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಇದುವರೆಗೂ 894 ಮಂದಿ ಕೊವಿಡ್-19 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಚ್ ಆಗಿದ್ದಾರೆ.

ಬ್ರೇಕಿಂಗ್: ಕರ್ನಾಟಕದಲ್ಲಿ ಒಂದೇ ದಿನ 248 ಮಂದಿಗೆ ಕೊರೊನಾ ವೈರಸ್!ಬ್ರೇಕಿಂಗ್: ಕರ್ನಾಟಕದಲ್ಲಿ ಒಂದೇ ದಿನ 248 ಮಂದಿಗೆ ಕೊರೊನಾ ವೈರಸ್!

ಕೊರೊನಾ ವೈರಸ್ ಸೋಂಕಿತರಿಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿಯುಳ್ಳ ಹೆಲ್ತ್ ಬುಲೆಟಿನ್ ನ್ನು ದಿನಕ್ಕೆ ಈ ಮೊದಲು ಎರಡು ಬಾರಿ ರಿಲೀಸ್ ಮಾಡಲಾಗುತ್ತಿತ್ತು. ಆದರೆ ಶನಿವಾರದಿಂದ ದಿನಕ್ಕೆ ಒಂದೇ ಬಾರಿ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡುವುದಕ್ಕೆ ತೀರ್ಮಾನಿಸಲಾಗಿದೆ.

ದಿನಕ್ಕೆರೆಡು ಬಾರಿ ಹೆಲ್ತ್ ಬುಲೆಟಿನ್ ಬಿಡುಗಡೆ

ದಿನಕ್ಕೆರೆಡು ಬಾರಿ ಹೆಲ್ತ್ ಬುಲೆಟಿನ್ ಬಿಡುಗಡೆ

ನಿನ್ನೆಯವರೆಗೂ ರಾಜ್ಯದಲ್ಲಿ ಪ್ರತಿನಿತ್ಯ ಎರಡು ಬಾರಿ ಕೊರೊನಾ ವೈರಸ್ ಸೋಂಕಿತರ ಅಂಕಿ-ಸಂಖ್ಯೆಯನ್ನು ಪ್ರಕಟಿಸಲಾಗುತ್ತಿತ್ತು. ಬೆಳಗ್ಗೆ 12 ಗಂಟೆ ಮತ್ತು ಮಧ್ಯಾಹ್ನ 6 ಗಂಟೆಯೊಳಗೆ ಹೆಲ್ತ್ ಬುಲೆಟಿನ್ ನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಬಿಡುಗಡೆ ಮಾಡುತ್ತಿತ್ತು.

ಕೊವಿಡ್-19 ಡೈಲಿ ರಿಪೋರ್ಟ್ ನಲ್ಲಿ ಏನೆಲ್ಲಾ ಇರುತ್ತೆ?

ಕೊವಿಡ್-19 ಡೈಲಿ ರಿಪೋರ್ಟ್ ನಲ್ಲಿ ಏನೆಲ್ಲಾ ಇರುತ್ತೆ?

ಕೊರೊನಾ ವೈರಸ್ ಸೋಂಕಿಗೆ ಬಲಿಯಾದವರ ಸಂಖ್ಯೆ, ಕೊರೊನಾ ವೈರಸ್ ಸೋಂಕಿತರ ಸಂಖ್ಯೆ, ಸೋಂಕಿತರ ಟ್ರಾವೆಲ್ ಹಿಸ್ಟರಿ, ಕೊರೊನಾ ವೈರಸ್ ನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆದವರ ಸಂಖ್ಯೆ ಹಾಗೂ ಸಕ್ರಿಯ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಹೊಂದಿರುತ್ತದೆ.

ಬೇರೆರಾಜ್ಯಗಳಲ್ಲಿ ದಿನಕ್ಕೊಮ್ಮೆ ಹೆಲ್ತ್ ಬುಲೆಟಿನ್ ಬಿಡುಗಡೆ

ಬೇರೆರಾಜ್ಯಗಳಲ್ಲಿ ದಿನಕ್ಕೊಮ್ಮೆ ಹೆಲ್ತ್ ಬುಲೆಟಿನ್ ಬಿಡುಗಡೆ

ದೇಶಾದ್ಯಂತ 1,73,921ಕ್ಕೂ ಅಧಿಕ ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದ್ದು, ಇದುವರೆಗೂ ಕೊವಿಡ್-19ಗೆ 4,981ಕ್ಕೂ ಅಧಿಕ ಮಂದಿ ಪ್ರಾಣ ಬಿಟ್ಟಿದ್ದಾರೆ. 82,673ಕ್ಕೂ ಅಧಿಕ ಸೋಂಕಿತರು ಗುಣಮುಖರಾಗಿದ್ದರೆ, 86,256ಕ್ಕೂ ಅಧಿಕ ಸೋಂಕಿತರಿಗೆ ಚಿಕಿತ್ಸೆ ಮುಂದುವರಿಸಲಾಗುತ್ತಿದೆ. ದೇಶದ ಹಲವು ರಾಜ್ಯಗಳು ಕೊರೊನಾ ವೈರಸ್ ಸೋಂಕಿತರಿಗೆ ಸಂಬಂಧಿಸಿದ ಹೆಲ್ತ್ ಬುಲೆಟಿನ್ ನ್ನು ದಿನಕ್ಕೊಂದು ಬಾರಿಯಷ್ಟೇ ಬಿಡುಗಡೆ ಮಾಡುತ್ತಿವೆ. ಇದೇ ಕ್ರಮವನ್ನು ರಾಜ್ಯದಲ್ಲಿ ಜಾರಿಗೊಳಿಸಲು ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ತೀರ್ಮಾನಿಸಿದೆ.

ಕರ್ನಾಟಕದಲ್ಲಿ ಆತಂಕ ಸೃಷ್ಟಿಸಿದ ಕೊರೊನಾ ವೈರಸ್

ಕರ್ನಾಟಕದಲ್ಲಿ ಆತಂಕ ಸೃಷ್ಟಿಸಿದ ಕೊರೊನಾ ವೈರಸ್

ಶುಕ್ರವಾರ ಬೆಳಗ್ಗಿನ ಹೆಲ್ತ್ ಬುಲೆಟಿನ್ ನಲ್ಲಿಯೇ 178 ನೊವೆಲ್ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದವು. ಈ ಪಟ್ಟಿಗೆ ಸಂಜೆ ಮತ್ತೆ 70 ಪ್ರಕರಣಗಳು ಸೇರ್ಪಡೆಯಾಗಿ ಒಂದೇ ದಿನ ಬರೋಬ್ಬರಿ 248 ಕೊವಿಡ್-19 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದವು. ಈ ಅಂಕಿ-ಸಂಖ್ಯೆಯು ರಾಜ್ಯದಲ್ಲಿ ಇದೇ ಮೊದಲಾಗಿದ್ದು, ಜನರಲ್ಲಿ ಆತಂಕವನ್ನು ಹೆಚ್ಚಿಸುವ ಅಪಾಯವಿದೆ. ಈ ಹಿನ್ನೆಲೆಯಲ್ಲಿ ದಿನಕ್ಕೆ ಒಂದು ಬಾರಿಯಷ್ಟೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಕೊರೊನಾ ವೈರಸ್ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡುವುದಕ್ಕೆ ನಿರ್ಧರಿಸಿದೆ.

English summary
Karnataka state health department cancelled the afternoon health bulletin due to increase in number of coronavirus cases in last few days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X