ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ: ಬೆಳಗಾವಿ ಅಧಿವೇಶನದಲ್ಲಿ ಮಂಡನೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 27: ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು ಎನ್ನುವುದು ಕನ್ನಡಿಗರ ಬಹುದಿನಗಳ ಬೇಡಿಕೆಯಾಗಿದೆ. ಆದರೆ ರಾಜ್ಯ ಸರ್ಕಾರವು ಅದಕ್ಕೆ ಒಪ್ಪಿಗೆ ಸೂಚಿಸಿದ್ದರೂ ಕೂಡ ಇದುವರೆಗೂ ಯಾವುದೇ ಆದೇಶ ಹೊರಬಿದ್ದಿಲ್ಲ.

ಕನ್ನಡಿಗರಿಗೆ ಉದ್ಯೋಗ ಸಿಗಲಿ, ಕರವೇ ಮೆರವಣಿಗೆಕನ್ನಡಿಗರಿಗೆ ಉದ್ಯೋಗ ಸಿಗಲಿ, ಕರವೇ ಮೆರವಣಿಗೆ

ಕರ್ನಾಟಕದಲ್ಲಿ ಬೇರೆ ರಾಜ್ಯಗಳಿಂದ ಹಾಗೂ ವಿದೇಶದಿಂದ ಬಂದು ಉದ್ಯೋಗ ಗಿಟ್ಟಿಸಿಕೊಳ್ಳುತ್ತಿದ್ದಾರೆ ಆದರೆ ಕರ್ನಾಟಕದಲ್ಲೊ ಹುಟ್ಟಿ ಇಲ್ಲೇ ವಿದ್ಯಾಭ್ಯಾಸ ಪೂರೈಸಿರುವವರಿಗೆ ಉದ್ಯೋಗ ಸಿಗುತ್ತಿಲ್ಲ ಎನ್ನುವುದು ಕನ್ನಡಿಗರ ನೋವಾಗಿತ್ತು. ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಕಲ್ಪಿಸುವ ವಿಚಾರ ಕೊನೆಗೂ ಕಾಯ್ದೆಯನ್ನು ಮಂಡಿಸಲು ಸರ್ಕಾರ ನಿರ್ಧರಿಸಿದೆ.

ಕನ್ನಡಿಗರಿಗೆ ಉದ್ಯೋಗ : ಕರವೇಯಿಂದ ಇಂದು ಬೃಹತ್ ಪ್ರತಿಭಟನೆ, 8 ಬೇಡಿಕೆಗಳುಕನ್ನಡಿಗರಿಗೆ ಉದ್ಯೋಗ : ಕರವೇಯಿಂದ ಇಂದು ಬೃಹತ್ ಪ್ರತಿಭಟನೆ, 8 ಬೇಡಿಕೆಗಳು

ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಮಂಡನೆಯಾಗುವ ನಿರೀಕ್ಷೆ ಇದೆ, ಈಗಾಗಲೇ ವಿಧೇಯಕಗಳಿಗಿದ್ದ ಕಾನೂನು ತೊಡಕು ಸಂಪೂರ್ಣವಾಗಿ ನಿವಾರಣೆಯಾಗಿದೆ. ವಿಧೇಯಕ ಮಂಡನೆ ನಂತರ ಉಭಯ ಸದನಗಳಲ್ಲಿ ಚರ್ಚೆ ನಡೆಯಲಿದೆ. ನಂತರ ವಿಧೇಯಕವನ್ನು ರಾಜ್ಯಪಾಲರಿಗೆ ಸಲ್ಲಿಸಲಾಗುತ್ತದೆ. ರಾಜ್ಯಪಾಲರಿಂದ ಅಂಕಿತಗೊಂಡ ಬಳಿಕ ವಿಧೇಯಕ ಜಾರಿಯಾಗುತ್ತದೆ.

ಬೇಕೇ ಬೇಕು ಕನ್ನಡಿಗರಿಗೆ ಕಡ್ಡಾಯ ಉದ್ಯೋಗ ಬೇಕುಬೇಕೇ ಬೇಕು ಕನ್ನಡಿಗರಿಗೆ ಕಡ್ಡಾಯ ಉದ್ಯೋಗ ಬೇಕು

State govt to table bill on reservation for Kannadigas in industry sector

ಡಾ. ಸರೋಜಿನಿ ಮಹಿಷಿ ವರದಿ ಆಧರಿಸಿ ಮಾಡಿರುವ ವಿಧೇಯಕ ಇದಾಗಿದೆ. ಎ ವೃಂದದ ನೌಕರಿಯಲ್ಲಿ ಶೇ.65, ಬಿ ವೃಂದದ ನೌಕರಿಯಲ್ಲಿ ಶೇ.80 ಹಾಗೂ ಸಿ ಮತ್ತು ಡಿ ವೃಂದದ ನೌಕರಿಯಲ್ಲಿ ಶೇ.100ರಷ್ಟು ಕನ್ನಡಿಗರಿಗೆ ಉದ್ಯೋಗ ಕಲ್ಪಿಸುವ ಕುರಿತು ವರದಿಯಲ್ಲಿ ಉಲ್ಲೇಖವಾಗಿದೆ.

English summary
State government is expected to table bill in Belgaum winter legislature session in December on reservation for Kannadigas in industry sector, sourced said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X